ಸದಸ್ಯ:Ashik kr/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                          ಹಣದ ಅಪಮೌಲಿಕರಣ 

ಹಣದ ರೂಪ ಮತು ಮಹತ್ವ ಕಾಲಕಳೆದಂತೆ ಬದಲಾಗುತ್ತಾ ಬಂದಿರುತ್ತದೆ. ಅದನ್ನು ಅಧ್ಯಯನ ಮಾಡುವ ಮೊದಲು ಪ್ರಾಚೀನ ಕಾಲದಲ್ಲಿ ಅಸ್ತಿತ್ವದಲಿದ್ದ್ದ ವಿನಿಮಯದ ವಿಧಾನವನ್ನು ತಿಳಿದುಕೊಳ್ಳುವುದು ಅಗತ್ಯವಿದೆ. ವಸ್ತು ವಿನಿಮಯ ಪದ್ಧತಿಯಲ್ಲಿ ವಸ್ತುಗಳ ವಿನಿಮಯ ಮೌಲ್ಯವನ್ನು ಅಳೆಯುವುದು ಸಾಧನವಿರಲಿಲ್ಲ. ಪ್ರತಿಸಾರಿ ವಿನಿಮಯ ಮಾಡುವ ವಸ್ತುಗಳ ಬೆಲೆಯನ್ನು ನಿರ್ಧರಿಸ ಬೆಕಾಗುತ್ತಿತ್ತು.

ಭಾರತದಲ್ಲಿನ ಉದ್ಯಮದಲ್ಲಿನ ಕುಸಿತ ಚಿನ್ನದ ಬೆಲೆ ಯಲ್ಲಿ ಏರಿಕೆ, ತೈಲೋತ್ಪನ್ನಗಳ ಬೆಲೆ ಏರಿಕೆ, ದೈನಂದಿನ ವಸ್ತುಗಳ ಗಗನಚುಂಬಿ ಬೆಲೆ ಏರಿಕೆ ಇತ್ಯಾದಿ ಸಮಸ್ಯೆಗಳು ಉಂಟಾಗಿ  ಭಾರತದ ಆರ್ಥಿಕ ವ್ಯವಸ್ಥೆ ಹಿಂಜರಿತಕ್ಕೆ ಕಾರಣವಾಗಿದೆ.
 ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಭಾರತದಲ್ಲಿ ಸ್ವದೇಶಿ ಉದ್ಯಮ ಬೆಳೆಯಬೇಕು. ಸ್ವದೇಶಿ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಬೇಕು. 
ಹಣದ ಮೌಲ್ಯವು ಆ ದೇಶದ ಆರ್ಥಿಕತೆಗೆ ಹಿಡಿದ ಕೈಗನ್ನಡಿಯಂತೆ. ಅದು ದೇಶದ ಆರ್ಥಿಕ ಆಡಳಿತದ ಪರಿಣಾಮಗಳನ್ನು ಯಥಾವ ತ್ತಾಗಿ ಬಿಂಬಿಸುತ್ತದೆ. ಈ ಹಿಂದೆ ವಿದೇಶಗಳ ವಿಮಾನ ನಿಲ್ದಾಣಗಳಲ್ಲಿ ಮತ್ತು ಇತರ ವಿದೇಶಿ ವಿನಿಮಯ ಕೇಂದ್ರಗಳಲ್ಲಿ ಭಾರತದ ಕರೆನ್ಸಿಯಾದ ರೂಪಾಯಿ ಕಾಣಸಿಗುತ್ತಲೇ ಇರಲಿಲ್ಲ. ಕಳೆದ ಕೆಲವು ವರ್ಷಗಳಿಂದ, ಕೊಡು-ಕೊಳ್ಳುವಿಕೆಯಲ್ಲಿ ಅತ್ಯಂತ ಹೆಚ್ಚು ವ್ಯತ್ಯಾಸದೊಂದಿಗೆ (ಇಂಡೋನೇಶ್ಯದ ಕರೆನ್ಸಿಯೊಂದಿಗೆ) ಏಷ್ಯಾದ ಐದಾರು ದೇಶಗಳೊಂದಿಗೆ ಇದು ಕಾಣಸಿಗುತ್ತಿದೆ ಎಂಬುದೇ ಒಂದು ವಿಶೇಷ. ಆರ್ಥಿಕತೆಯಲ್ಲಿ ಅಳಿಯುತ್ತಿರುವ ರಷ್ಯಾವನ್ನು ಬಿಟ್ಟರೆ, ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿರುವ ಚೀನದೊಂದಿಗೆ ಇಂದು ಭಾರತದ ಕರೆನ್ಸಿ ಪೈಪೋಟಿಗೆ ಮೊದಲಿಟ್ಟಿದೆ ಎಂಬುದು ಇನ್ನೊಂದು ಸಮಾಧಾನಕರ ವಿಷಯ. ಇಂತಹ ಪರಿಸ್ಥಿತಿಯಲ್ಲಿ, ಚೀನದ ಯುವಾನ್‌ ಅಪಮೌಲ್ಯದೊಂದಿಗೆ ಭಾರತವೂ ತನ್ನ ಕರೆನ್ಸಿಯನ್ನು ಅಪಮೌಲ್ಯಗೊಳಿಸಬೇಕಿತ್ತೇ ಎಂಬುದು ಚರ್ಚೆಯ ವಿಷಯ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ 500 ಮತ್ತು 1000 ರೂ. ಮುಖಬೆಲೆಯ ಕರೆನ್ಸಿ ನೋಟುಗಳ ಅನಾಣ್ಯೀಕರಣದ ಘೊಷಣೆಯಾಗಿ ಇಂದಿಗೆ ಸರಿಯಾಗಿ 50 ದಿನಗಳು. ಮೊದಲ ಒಂದು ವಾರದಲ್ಲಿ ಎಲ್ಲೆಲ್ಲೂ ಗೊಂದಲ, ಸಣ್ಣ ಮೌಲ್ಯದ ನೋಟುಗಳಿಗಾಗಿ ಹಾಹಾಕಾರ; ಎಟಿಎಂಗಳ ಮುಂದೆ, ಬ್ಯಾಂಕುಗಳಲ್ಲಿ ಉದ್ದೋಉದ್ದದ ಸಾಲುಗಳು. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಬಿಎಸ್​ಪಿ ಮತ್ತು ಕಮ್ಯೂನಿಸ್ಟ್ ಪಕ್ಷಗಳು ಮೋದಿಯವರ ಯಾವ ಮಾತನ್ನೂ ಕೇಳಲು ತಯಾರಿಲ್ಲ. ಅನಾಣ್ಯೀಕರಣದ ವಿರುದ್ಧ ಅವು ಯುದ್ಧವನ್ನೇ ಸಾರಿವೆ, ತಮ್ಮ ಕೂಗಾಟಕ್ಕೆ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಇಡಿಯಾಗಿ ಬಲಿಗೊಟ್ಟಿವೆ. ಇದಕ್ಕೆ ಪ್ರತಿಯಾಗಿ ಜೆಡಿ(ಯು), ಬಿಜು ಜನತಾದಳ ಮುಂತಾದ ಕೆಲ ಪಕ್ಷಗಳು ಪ್ರಧಾನಮಂತ್ರಿಯವರ ಕಾರ್ಯಯೋಜನೆಗಳಿಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿವೆ. ಸಮಾಜವಾದಿ ಪಕ್ಷದಂತಹ ಮತ್ತೆ ಕೆಲವು, ಅಡ್ಡಗೋಡೆಯನ್ನೇರಿ ಕೂತಿವೆ. ಒಟ್ಟಿನಲ್ಲಿ ದೇಶದ ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಗೊಂದಲವೋ ಗೊಂದಲ. ಆದರೆ ಈ ಗೊಂದಲದ ಅಬ್ಬರದ ಹಿಂದೆಯೇ ತೆರೆಮರೆಯಲ್ಲಿ ಹಲವಾರು ಕರಾಳಸತ್ಯಗಳು ಬೆತ್ತಲಾಗಿಹೋಗಿವೆ.

ಅನಾಣ್ಯೀಕರಣದ ಇತಿಹಾಸ: ಹಾಗೆ ನೋಡಿದರೆ, ಉನ್ನತ ಮೌಲ್ಯದ ಕರೆನ್ಸಿ ನೋಟುಗಳ ಅನಾಣ್ಯೀಕರಣ ಮಾಡಿದ್ದರಲ್ಲಿ ಭಾರತ ಮೊದಲಿನದೇನೂ ಅಲ್ಲ, ಭಾರತದಲ್ಲೇ ನರೇಂದ್ರ ಮೋದಿ ಸರ್ಕಾರ ಮೊದಲಿನದೂ ಅಲ್ಲ. ಎರಡನೆಯ ಮಹಾಯುದ್ಧದಿಂದ ತತ್ತರಿಸಿಹೋಗಿದ್ದ ಬ್ರಿಟನ್, ಫ್ರಾನ್ಸ್, ಬೆಲ್ಜಿಯಂನಂತಹ ದೇಶಗಳು ಈ ಕ್ರಮಕ್ಕೆ ಮುಂದಾಗಿ, ಅದರ ಬಿಸಿ ಭಾರತಕ್ಕೂ ತಟ್ಟಿ, ಜನವರಿ 1946ರಲ್ಲಿ 500, 1000, 5000 ಹಾಗೂ 10000 ರೂ. ಮುಖಬೆಲೆಯ ನೋಟುಗಳು ಅನಾಣ್ಯೀಕರಣಗೊಂಡವು. 1954ರಲ್ಲಿ ಮತ್ತೆ ಚಲಾವಣೆಗೆ ಬಂದ 5000 ಹಾಗೂ 10000 ರೂ. ಮುಖಬೆಲೆಯ ನೋಟುಗಳು ಜನವರಿ 1978ರಲ್ಲಿ ಅನಾಣ್ಯೀಕರಣಗೊಂಡವು.