ವಿಷಯಕ್ಕೆ ಹೋಗು

ಸದಸ್ಯ:Arundhathi.agni/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                        ಇಲಾಯಿತಿ ಮಲ್ಲಿಗೆ

ಕಣ್ಣನ್ನು ಸೆಳೆಯುವ, ನೋಡುಗರನ್ನು ಆಕರ್ಷಿಸುವ ಈ ಮಲ್ಲಿಗೆಯ ಜಾತಿಗೆ ಸೇರಿದ ಪುಷ್ಪವನ್ನಿ ಇಲಾಯಿತಿ ಮಲ್ಲಿಗೆ ಎಂದು ಕರೆಯುತ್ತಾರೆ. ಒಂದೇ ಗಿಡದಲ್ಲಿ ಎರಡು ಬಣ್ಣಗಳ ಹೋವು ಬಿಡುವುದು ಇದರ ವೈಶಿಷ್ಟ್ಯ. ನಸುಗೆಂಪು ಮತ್ತು ಬೀಳಿ ಬಣ್ಣದ ಮಿಶ್ರಣ ಹಾಗೂ ಕಡುಗೆಂಪು ಬಣ್ಣದ ಒಂದೇ ಗಿಡದಲ್ಲಿ ಬಿಡುವ ಈ ಹೂವುಗಳು ಮನೆಯಂಗಳದಲ್ಲಿ ಇದ್ದರೆ ಚಿತ್ತಾಕರ್ಷಕ.

ವರ್ಷವಿಡೀ ಇಲಾಯಿತಿ ಗಿಡದಲ್ಲಿ ಈ ಹೂವು ಬಿಡುತ್ತದೆ. ಹೂ ಬಿಡಲು ಪ್ರತ್ಯೇಕ ಸಮಯವೆಂದಿಲ್ಲ. ನೀಳವಾದ ಬಾಗಿದ ಗಿಣಿಹಸಿರು ತೊಟ್ಟನ್ನು ಹೊಂದಿರುವ ಇಲಾಯಿತಿ ಮಲ್ಲಿಗೆ ನುಸು ಪರಿಮಳದಿಂದ ಕೂಡಿದ್ದು ಅಲಂಕಾರಗಳಿಗೆ ಉಪಯುಕ್ತವಾಗಿದೆ. ಪೂಜಾ ಕಾರ್ಯಗಳಿಗೆ ಇಲಾಯಿತಿ ಮಲ್ಲಿಗೆ ಬಳಸಲಾಗುತ್ತದೆ. ಇದು ನಾರಿಮಣಿಯರಿಗೆ ಅಚ್ಚುಮೆಚ್ಚು.

ಬೆಳಗ್ಗಿನ ಜಾವದಲ್ಲಿ ಅರಳುವ ಇದು ಸಂಜೆಯ ವೇಳೆಗೆ ಬಾಡಿ ಹೋಗುತ್ತದೆ. ಆದ್ದರಿಂದ ಬೆಳಗ್ಗಿನ ವೇಳೆಯಲ್ಲಿ ನಡೆಯುವ ಪೂಜೆಗಳಲ್ಲಿ ವಿಶೇಷವಾಗಿ ಇಲಾಯಿತಿ ಮಲ್ಲಿಗೆಯನ್ನು ಬಳಸುತ್ತಾರೆ. ಬಹುತೇಕ ಮನೆಗಳಲ್ಲಿ ಅಲಂಕಾಕ್ಕಾಗಿ ಇದನ್ನು ಬೆಳೆಸುತ್ತಾರೆ. ನೂಡಲು ಬಹಳ ಅಂದವಾಗಿರುವ ಈ ಇಲಾಯಿತಿ ಮಲ್ಲಿಗೆ ತನ್ನ ವರ್ಣ ವೈವಿಧ್ಯದಿಂದ ಎಲ್ಲಾ ವಯಸ್ಸಿನವರನ್ನು ಸೆಳೆಯುತ್ತದೆ.