ಸದಸ್ಯ:Arundathi.g.jamadagni/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೇಯು ಮಂದಾರ- ಇದು ಕೇಯು ಮಂದಾರ. ವೈಜ್ಞಾನಿಕವಾಗಿ ಬೌಹಿನಿಯವಾಗಿ ಎಂದು ಕರೆಯಲ್ಪಡುತ್ತದೆ. ೧೬ನೇಯ ಶತಮಾನದ ಸ್ವಿಸ್ ಸಸ್ಯಶಾಸ್ತ್ರ ತಜ್ಞರಾದ ಬೌಹಿನಿ ಸಹೋದರರ ಸ್ಮರಣಾತ್ಮಕ ಸಸ್ಯಕ್ಕೆ ಈ ಹೆಸರು ಇಡಲಾಗಿದೆ. ಇದಕ್ಕೆ

ಕಂಚವಾಳ, ಪೀತ ಕಾಂಚನ. ದೇವಕಾಂಚನ, ಕಂಚನಾರ, ಕಂಚನ,ಸಿಗಪ್ಪು ಮಂದಾರ ಹೀಗೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಹೆಸರುಗಳಿವೆ. ಸುಮಾರು ೧೦ ಅಡಿ ಎತ್ತರದವರೆಗೆ ಬೆಳೆದು ವಿಶಾಲವಾಘಿ ಹರಡುವ ಗಿಡ ಅನೇಕ ಬಾಗಿದ

ಕೊಂಬೆಗಳಿಂದ ಕೂಡಿದ್ದು ಸುಮಾರು ೨ ವರ್ಷಗಳ ನಂತರ ಹೂಗಳನ್ನು ಬಿಡಲಾರಂಬಿಸುತ್ತದೆ. ಗಂಟೆಯಾಕಾರದ ಪಂಚದಳಗಳ ಈ ಪುಷ್ಫ ತಿಳಿ ಹಳದಿ ಬಣ್ಣ ಹೊಂದಿದ್ದು, ಸಾಮಾನ್ಯವಾಗಿ ೧ ದಳದ ಕೆಳಬಾಗದಲ್ಲಿ ಕಡು ಕೆಂಗಂದು ಬಣ್ಣದಲ್ಲಿ

ಹಚ್ಚೆಯಂತಹ ಚಿತ್ತಾರವಿರುತ್ತದೆ.ಉಷ್ಣ ಹಾಗೂ ಶೀತ ವಲಯಗಳಲ್ಲಿ ಬೆಳೆಯು ಈ ಸಸ್ಯವು ಭಾರತದ ದಕ್ಷಿಣ ರಾಜ್ಯಗಳಲ್ಲಿ ಮತ್ತು ಬಿಹಾರ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ಸಸ್ಯದ ಬೇರು ಕಾಂಡ, ಎಲೆ, ಮೊಗ್ಗು, ಹೂವು ಎಲ್ಲದರಲ್ಲೂ

ರೋಗ ನಿವಾರಕ ಗುಣಗಳಿವೆ. ಹಾಗಾಗಿ ಕೆಮ್ಮು ಮಲೇರಿಯ, ಆಮಶಂಕೆ, ರಕ್ತಸ್ರಾವ, ಚರ್ಮರೋಗ ಇತ್ಯಾದಿಗಳ ನಿವಾರಣೆಗೆ ಆಯುರ್ವೇದ ಔಷಧಗಳಲ್ಲಿ ಇವುಗಳನ್ನು ಬಳಸಲಾಗುತ್ತದೆ.