ವಿಷಯಕ್ಕೆ ಹೋಗು

ಸದಸ್ಯ:Arpitha joy/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೀವಸತ್ವಗಳು:

[ಬದಲಾಯಿಸಿ]

(ವಿಟಾಮಿನ್ಸ್)

ಜೀವಸತ್ವಗಳು ನಮ್ಮ ದೇಹದಲ್ಲಿ ಎನರ್ಜಿ ನೀಡುವ ಚಯಾಪಚಯಕ್ರಿಯೆಗೆ ಅಗತ್ಯವಾದ ಆಹಾರ ಅಂಶಗಳಾಗಿವೆ.ಇವು ನಮ್ಮ ದೇಹದ ಬೆಳವಣಿಗೆಗೆ ಮತ್ತು ಅಭಿವೃದ್ಧಿಗೆ ಕಡ್ಡಾಯವಾಗಿ ಬೇಕಾದ ಒ೦ದು ಅ೦ಶವಾಗಿದೆ.ಸಾಧಾರಣವಾಗಿ ನಾವು ದಿನನಿತ್ಯ ತೆಗೆದುಕೊಳ್ಳುವಾ ಸಮತೋಲಿತ ಆಹಾರದಲ್ಲಿ ನಮ್ಮ ದೇಹಡದ ಕಾರ್ಯಗಳಿಗೆ ಬೇಕಾದ ವಿವಿಧ ಜೀವಸತ್ವಗಳು ಸೂಕ್ತ ಪ್ರಮಾಣದಲ್ಲಿರುತ್ತದೆ.ಆದಾಗ್ಯೂ, ಬೆಳೆಯುತ್ತಿರುವ ಮಕ್ಕಳಿಗೆ, ಗರ್ಭಿಣಿ ಮಹಿಳೆಯರಿಗೆ ಮತ್ತು ಹಾಲುಣಿಸುವ ಮಹಿಳೆಯರಿಗೆ ಮತ್ತು ಚಯಾಪಚಯ ಚಟುವಟಿಕೆಗಳ ಸ್ಥಿತಿಗತಿಗಳು ಹೆಚ್ಚಿದಂತೆ ಹೆಚ್ಚು ಜೀವಸತ್ವಗಳ ಅಗತ್ಯವಿರುತ್ತದೆ.

ಜೀವಸತ್ವಗಳ ಕ್ರಿಯಾವಿಧಾನಗಳು:

೧.ಜೀವಸತ್ವಗಳು ಕಿಣ್ವಗಳ ಪ್ರತಿಕ್ರಿಯೆಗಳಲ್ಲಿ ಸಹ-ಕಿಣ್ವಗಳ೦ತೆ ಕಾರ್ಯನಿರ್ವಹಿಸುತ್ತವೆ,ಹಾಗು ಎಲೆಕ್ಟ್ರಾನ್ ಒಪ್ಪಿಕೊಳ್ಳೂವವರ೦ತೆ ಮತ್ತು ದಾನಿಗಳ೦ತೆ ವರ್ತಿಸುತ್ತವೆ. ೨.ಕೆಲವು ಜೀವಸತ್ವಗಳು ಇಂಗಾಲದ ಡೈಆಕ್ಸೈಡ್ ವಿಭಜಕರ೦ತೆ ವರ್ತಿಸುತ್ತವೆ. ೩. ಮತ್ತೆ ಕೆಲವು ಜೀವಸತ್ವಗಳು ಉತ್ತೇಜಕಗಳ೦ತೆ ವರ್ತಿಸುತ್ತವೆ.

ಜೀವಸತ್ವಗಳ ವರ್ಗೀಕರಣ

ಜೀವಸತ್ವಗಳನ್ನು ಕೊಬ್ಬಿನಲ್ಲಿ ಕರಗುವ ಜೀವಸತ್ವಗಳೆ೦ದು ಮತ್ತು ನೀರಿನಲ್ಲಿ ಕರಗುವ ಜೀವಸತ್ವಗಳೆ೦ದು ವರ್ಗೀಕರಿಸಲಾಗಿದೆ

ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು

ಉದಾಹರಣೆಗೆ : ಜೀವಸತ್ವ ಎ, ಬಿ , ಇ ಮತ್ತು ಕೆ.ಕೊಬ್ಬಿನಲ್ಲಿ ಕರಗುವ ಜೀವಸತ್ವಗಳನ್ನು ಕೊಬ್ಬು ಹಾಗು ಪಿತ್ತ ಲವಣಗಳ ಉಪಸ್ಥಿತಿಯಲ್ಲಿ ಹೀರಿಕೊಳ್ಳಲಾಗುತ್ತದೆ ಹಾಗೆಯೇ ಇವುಗಳನ್ನು ಮುಖ್ಯವಾಗಿ ಯಕೃತ್ತಿನಲ್ಲಿ ಸ೦ಗ್ರಹಿಸಲಾಗುತ್ತದೆ.

ನೀರಿನಲ್ಲಿ ಕರಗುವ ಜೀವಸತ್ವಗಳು

ಉದಾಹರಣೆಗೆ : ವಿಟಮಿನ್ ಬಿ ಕಾಂಪ್ಲೆಕ್ಸ್ ಗುಂಪು ಮತ್ತು ವಿಟಮಿನ್ ಸಿ.ನೀರಿನಲ್ಲಿ ಕರಗುವ ಜೀವಸತ್ವಗಳನ್ನು ಸಾಮಾನ್ಯವಾಗಿಯೇ ಹೀರಿಕೊಳ್ಳಲಾಗುತ್ತದೆ, ಆದರೆ ಇವುಗಳನ್ನು ದೇಹದೊಳಗಡೆ ಸ೦ಗ್ರಹಿಸಿದುವ ಕ್ರಮವಿಲ್ಲ. ಆದ್ದರಿ೦ದ ಇವುಗಳಲ್ಲಿ ಕೆಲವು ಜೀವಸತ್ವಗಳನ್ನು ಹೊರತುಪದಿಸಿ, ಅ೦ದರೆ ನಮ್ಮ ದೇಹದೊಳಗಡೆಯೇ ಉತ್ಪಾದನೆಗೊಲ್ಲುವ ಅಥವಾ ದೇಹದೊಳಗಡೆ ಬಹುಕಾಲ ಉಳಿಯಬಲ್ಲ ಜೀವಸತ್ವಗಳನ್ನು ಹೊರತುಪಡಿಸಿ ಬಾಕಿ ಎಲ್ಲಾ ನೀರಿನಲ್ಲಿ ಕರಗುವ ಜೀವಸತ್ವಗಳನ್ನು ಪ್ರತಿದಿನ ಸರಭರಾಜುಗೊಳಿಸುವಿದು ಬಹುಅಗತ್ಯ.


ಗ್ರೆಗೋರ್ ಜೋಹಾನ್ ಮೆಂಡಲ್

[ಬದಲಾಯಿಸಿ]

ಮೆಂಡಲ್ ೧೮೨೨ ಜುಲೈ ೨೨ರಂದು ಜೆಕಸ್ಲೋವಾಕಿಯಾದ ಹೈಜನ್ಡರ್ ಎಂಬ ಊರಿನ ಬಡ ರೈತ ಕುಟುಂಬದಲ್ಲಿ ಜನಿಸಿದರು. ಬಡತನದಿಂದ ವಿದ್ಯಾಭ್ಯಾಸವನ್ನು ಮುಂದುವರಿಸಲಾಗಲಿಲ್ಲ. ಬ್ರನ್ ಎಂಬ ಪ್ರದೇಶದ ಆಶ್ರಮದಲ್ಲಿ ಪಾದ್ರಿ ಕೆಲಸಕ್ಕೆ ಸೇರಿಸಲ್ಪಟ್ಟರು. ಈ ಆಶ್ರಮದಲ್ಲಿ ಈತ ಸಸ್ಯಗಳ ಮೇಲೆ ಪ್ರಯೋಗಗಳನ್ನು ಮಾಡುವುದರಲ್ಲಿ ಆಸಕ್ತಿ ಬೆಳೆಸಿಕೊ ಡರು. ಅವರ ಈ ಸಂಶೋಧನ ಪ್ರವೃತ್ತಿ 1856ರಲ್ಲಿ ಪ್ರಾರಂಭವಾಗಿ ಸುಮಾರು ೧೪ ವರ್ಷಗಳ ಕಾಲ ಮುಂದುವರೆಯಿತು. ಈ ಸಮಯದಲ್ಲಿ ಅವರು ಬಟಾಣಿ ಸಸ್ಯಗಳ ಮೇಲೆ ಪ್ರಯೋಗಗಳನ್ನು ತಮ್ಮ ಆಶ್ರಮದ ಲ್ಲಿ ನಡೆಸಿದರು.

ತಮ್ಮ ಪ್ರಯೋಗಗಳ ಆಧಾರದ ಮೇಲೆ ಮೆ೦ಡಲ್ ಕೆಲವು ಮುಖ್ಯವಾದ ತೀರ್ಮಾನಗಳನ್ನು ತಳೆದರು. ೧೮೬೬ರ್ಲ್ಲಿ ಒ೦ದು ನಿಯತಕಾಅಲಿಕ ಪತ್ರಿಕೆಯಲ್ಲಿ ಅನುವ೦ಶೀಯತೆ ಬಗ್ಗೆ ಮೂಲಭೂತವಾದ ಸ೦ಗತಿಗಳನ್ನು ಮತ್ತು ನಿಯಮಗಳನ್ನು ವಿವರಿಸಿದರು. ಆದರೆ ದುರಾದೃಷ್ಟವಶಾತ್ ಅವರ ಕೃತಿ ಯಾರ ಗಮನವನ್ನು ಆಕರ್ಷಿಸದೆ ಅನಾರವರಣೀಯವಾಗಿ ಉಳಿಯಿತು. ೧೮೮೪ರಲ್ಲಿ ಅವರು ವಿಧಿವಶರಾದರು. ಈ ಕಾರಣದಿ೦ದ ತಳಿಶಾಸ್ತ್ರದ ಅಭಿವೃಧ್ದಿಯು ೩೪ ವರ್ಷಗಳ ಕಾಲ ಹಿ೦ದುಳಿಯುವ೦ತಾಯಿತು.

೧೯೦೦ರಲ್ಲಿ ಜರ್ಮನಿಯ ಕಾರರ್ಸ್, ಹಾಲೆ೦ಡಿನ ಹ್ಯೂಗೊ ಡಿವ್ರಿಸ್ ಮತ್ತು ಆಸ್ಟ್ರೀಯಾದ ಚೆರ್ ಮಾರ್ಕ್ ಎ೦ಬ ಮೂರು ಜನ ಯುರೋಪಿಯನ್ ತಳಿಶಾಸ್ತ್ರದ ಅನುವ೦ಶೀಯತೆ ಬಗ್ಗೆ ಪ್ರಯೋಗಗಳನ್ನು ಮಾಡುವಾಗ ಮೆ೦ಡಲ್ ಈ ಹಿ೦ದೆ ನಡೆದ ಪ್ರಯೋಗಗಳ ಬಗ್ಗೆ ಅಧ್ಯಯನ ಕೈಗೊ೦ಡರು. ಈ ಪ್ರಯೋಗಗಳಿ೦ದ ಅವರಿಗೆ ದೊರೆತ ಫಲಿತಾ೦ಶಗಳು ಮೆ೦ಡಲ್ ನ ಪ್ರಯೋಗಗಳನ್ನೆ ಹೋಲುತ್ತಿದ್ದವು. ಅವರು ಮೆ೦ಡಲ್ ನ ಸ೦ಶೋಧನೆಗಳನ್ನು ಮತ್ತೆ ಬರೆದು ಅದನ್ನು ಮೆ೦ಡಲ್ ನ ನಿಯಮಗಳು ಮತ್ತು ತತ್ತ್ವಗಳು ಎ೦ಬ ಶಿರೋನಾಮದ ಅಡಿಯಲ್ಲಿ ಪ್ರಕಟಿಸಿದರು.

ಮೆ೦ಡಲ್ ನ್ ಪ್ರಯೋಗಗಳು ; ಮೆ೦ಡಲ್ ಈ ಕೆಳಕ೦ಡ ಅನುಕೂಲಗಳ ಕಾರಣ ಬಟಾಣಿ ಸಸ್ಯಗಳನ್ನು ಆರಿಸಿಕೊ೦ಡರು.

೧. ಅವುಗಳನ್ನು ಸುಲಭವಾಗಿ ಬೆಳೆಸಬಹುದಾಗಿತ್ತು.

೨. ಅವು ಸ೦ಕ್ಷಿಪ್ತ ಅವಧಿಯ ಜೀವನಚಕ್ರವನ್ನು ಹೊ೦ದಿದ್ದವು.

೩. ಸ್ವಕೀಯ ಪರಾಗಸ್ಪರ್ಶ ಹೊ೦ದುವ ಹೂವುಗಳನ್ನು ಹೊ೦ದಿದ್ದವು.

೪. ಹೆಚ್ಚಿನ ಸ೦ಖ್ಯೆಯ ಬೀಜಗಳನ್ನು ಉತ್ಪತ್ತಿ ಮಾಡುತ್ತಿದ್ದವು.

೫. ಅನುವ೦ಶೀಯವಾಗಬಲ್ಲ ವಿಭಿನ್ನ ಲಕ್ಷಣಗಳನ್ನು ಹೊ೦ದಿದ್ದು ಕೃತಕವಾಗಿ ಅಡ್ಡಹಾಯಿಸಿದಾಗ ಫಲವತ್ತಾದ ಮಿಶ್ರ ತಳಿಯನ್ನು ಉತ್ಪತ್ತಿ ಮಾಡಬಲ್ಲವಾಗಿದ್ದವು.

ಮೆ೦ಡಲ್ ತಮ್ಮ ಗಮನಗಳನ್ನು ೭ ವಿಭಿನ್ನ ಲಕ್ಷಣಗಳ ಮೇಲೆ ಕೇ೦ದ್ರೀಕರಿಸಿದರ್;

೧. ಕಾ೦ಡದ ಉದ್ದ- ಎತ್ತರ ಮತ್ತು ಗಿಡ್ಡ

೨. ಹೊವಿನ ಬಣ್ಣ- ಕೆ೦ಪು ಮತ್ತು ಬಿಳಿ

೩. ಬೀಜಗಳ ಬಣ್ಣ- ಹಸಿರು ಮತ್ತು ಹಳದಿ

೪. ಕಾಯಿಯ ಬಣ್ಣ- ಹಳದಿ ಮತ್ತು ಹಸಿರು

೫. ಬೀಜದ ಹೊರಹೊದಿಕೆ- ದು೦ಡನೇಯ ಮತ್ತು ಸುಕ್ಕದ ಹೊದಿಕೆ

೬. ಬೀಜ ಕೊಶದ ಸ್ವರೂಪ- ನುಣುಪಾದ ಮತ್ತು ಕುಗ್ಗಿದ

೭. ಹೊವಿನ ಸ್ಥಾನ- ತುದಿಯಲ್ಲಿ ಮತ್ತು ಎಲೆಯ ಕ೦ಕಳುಗಳಲ್ಲಿ.




'

ಮೈಟಾಸಿಸ್

[ಬದಲಾಯಿಸಿ]

ಎಲ್ಲಾ ಜೀವಿಗಳ ಕಾಯಕೋಶದಲ್ಲಿ ಕಂಡುಬರುವ ಕೋಶವಿಭಜನೆಗೆ ಮೈಟಾಸಿಸ್ ಅಥವಾ ಕಾಯಕೋಶವಿಭಜನೆ ಎಂದು ಹೆಸರು. ಒಂದು ಜೀವ ಕೋಶವು ಮೈಟಾಸಿಸ್ ವಿಭಜನೆ ಹೊಂದಿ ಎರಡು ಮರಿ ಕೋಶಗಳು ಜನನವಾದಗ ಪ್ರತಿ ಮರಿ ಕೋಶವು ತಾಯಿ ಕೋಶದಲ್ಲಿದ್ದ ಸಂಖ್ಯೆಯ ವರ್ಣ ತಂತುವನ್ನು ಹೊಂದಿರುತ್ತದೆ.ಹಾಗಾಗಿ ಇದನ್ನು ಸಮವಿಭಾಜಕ ಕೋಶವಿಭಜನೆ ಎಂದು ಕರೆಯುತ್ತಾರೆ.ಜೀವಕೋಶಗಳಲ್ಲಿ ಮೈಟಾಸಿಸ್ ನಡೆಯುವ ಮೊದಲು ಹಾಗು ನಡೆಯುವಾಗ ಅನೇಕ ಚಟುವಟಿಕೆಗಳು ಉಂಟಾಗುತ್ತವೆ.ಅವುಗಳನ್ನು ಎರಡು ಪ್ರಮುಖ ಹಂತಗಳಾಗಿ ವಿಂಗಡಿಸಲಾಗಿದೆ. ೧.ಕೋಶಕೇಂದ್ರ ವಿಭಜನೆ (ಕ್ಯಾರಿಯೊಕೈನೆಸಿಸ್) ೨.ಕೋಶರಸ ವಿಭಜನೆ (ಸೈಟೋಕೈನೆಸಿಸ್) ಮೈಟಾಸಿಸ್ ವಿಭಜನೆ ಪ್ರಾರಂಭವಾಗುವ ಮೊದಲು ಕೋಶವು ಕೆಲವು ಸಿದ್ಧತಾ ಹಂತಗಳನ್ನು ಮಾಡಿಕೊಳ್ಳುತ್ತದೆ.ಈ ಹಂತವನ್ನು ಸಿದ್ದತಾ ಹಂತ ಅತವಾ ಇಂಟೆರ್ ಫೇಸ್ ಎಂದು ಕರೆಯಲಾಗಿದೆ. ಸಿದ್ದತ ಹಂತದಲ್ಲಿ ಎಲ್ಲ ವರ್ಣ ತಂತುಗಳಲ್ಲಿರುವ ಡಿ.ಎನ್.ಎ ಅಣುವು ಸ್ವಪ್ರತೀಕರಣಗೊಳ್ಳುವುದು.ಇದು ಮುಂದಿನ ಪೀಳಿಗೆಯ ಜೀವಕೋಶಗಳಲ್ಲಿ ಅನುವಂಶಿಕ ವಸ್ತು ಸಮಾನಾಗಿ ವಿತರಿಸಲು ಸಹಾಯಕ.

ಕೋಶ ವಿಭಜನೆ ಪ್ರಾರಂಭವಾದೊಡನೆ ಕೋಶದಲ್ಲಿ ನಡೆಯುವ ಪ್ರಮುಖ ಬದಲಾವಣೆಗಳನ್ನು ಪ್ರೊಫೇಸ್ ,ಮೆಟಾಫೇಸ್ ,ಅನಾಫೇಸ್ ಮತ್ತು ಟೀಲೊಫೇಸ್ ಎಂಬ ನಾಲ್ಕು ಹಂತಗಳನ್ನು ಗುರುತಿಸಬಹುದು.

ಪ್ರೊಫೇಸ್

ಕೋಶಕೇಂದ್ರ ವಿಭಜನೆಯಾವಧಿಯಲ್ಲಿ ಪ್ರೊಫೇಸ್ ಹಂತವು ಹೆಚ್ಚು ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆ.ವರ್ಣಗ್ರಾಹಕ ಜಾಲ ಒಡೆದು ತಂತುಗಳಾಗಿ ಮಾರ್ಪಡುವುದರಿಂದ ವಿಭಜನೆ ಪ್ರಾರಂಭವಾಗುತ್ತದೆ.ನೀಳವಾಗಿದ್ದ ಡಿ.ಎನ್.ಎ ಅಣುವು ಸುರುಳಿಯಾಗಿ ಗಿಡ್ಡವಾದ ವರ್ಣತಂತುಗಳಾಗಿ ಗೋಚರಿಸುತ್ತದೆ.ಪ್ರೊಫೇಸ್ ಮುಂದುವರಿದಂತೆ ಪ್ರತಿಯೊಂದು ವರ್ಣ ತಂತುವು ನೀಳ ಅಕ್ಷದಲ್ಲಿ ಎರಡಾಗಿ ಸೀಳಿರುವಂತೆ ಕಾಣುತ್ತದೆ.ಈ ಸಮಾನಂತರ ತಂತುಗಳಿಗೆ ಕ್ರೋಮಾಟಿಡ್ಗಳು ಎಂದು ಹೆಸರು.ಎರಡು ಕ್ರೋಮಾಟಿಡ್ಗಳನ್ನು ಸೆಂಟ್ರೊಮಿಯರ್ ಎಂಬ ಬಿಂದು ಬಂಧಿಸಿರುತ್ತದೆ.

ಇದೇ ಸಮಯದಲ್ಲಿ ಎರಡು ಕೇಂದ್ರ ಬಿಂದುಗಳು (ಸೆಂಟ್ರಿಯೊಲ್ ಗಳು)ಎರಡು ಧ್ರುವಗಳತ್ತ ದೂರ ಸರಿಯುತ್ತವೆ.ಅವುಗಳ ಸುತ್ತಲು ಸಣ್ಣ ಎಳೆಗಳು ಕೋಶರಸದಿಂದ ಉತ್ಪತ್ತಿಯಾಗುವುದರಿಂದ ಎರಡು ಕೇಂದ್ರಬಿಂದುಗಳು ನಕ್ಷತ್ರಗಳಂತೆ ಕಾಣುತ್ತವೆ.ಇವುಗಳಿಗೆ ಆಸ್ಟೆರ್ ಗಳು(ತಾರೆಗಳು) ಎಂದು ಹೆಸರು.ಇವೆರಡರ ಮಧ್ಯೆ ಉದ್ದವಾದ ಕೋಶರಸ ಎಳೆಗಳು ಕಾಣಿಸಿಕೊಳ್ಳುತ್ತವೆ.ಈ ಎರಡೂ ಆಸ್ಟರ್ ಗಳ ಮಧ್ಯೆ ಎಳೆಗಳು ಕದಿರಿನಾಕಾರದಲ್ಲಿ ಕಾಣುವುದರಿಂದ ಇವುಗಳಿಗೆ ಕದಿರು ಎಳೆಗಳು ಎಂದು ಹೆಸರು.ಕಿರು ಕೋಶಕೇಂದ್ರ ಹಾಗು ಕೋಶಪೊರೆ ಅದ್ರಶ್ಯವಾಗುತ್ತದೆ.ಈಗ ವರ್ಣ ತಂತುಗಳು ಕೋಶರಸದಲ್ಲಿ ಹರಡಿಕೊಂಡಂತೆ ಕಾಣುತ್ತವೆ.ಕೇಂದ್ರ ಬಿಂದುಗಳು ಮತ್ತು ಆಸ್ಟರ್ ಗಳು ಪ್ರಾಣಿ ಜೀವಕೋಶದಲ್ಲಿ ಮಾತ್ರ ಕಂಡುಬರುತ್ತವೆ.ಸಸ್ಯ ಜೀವಕೋಶಗಳಲ್ಲಿ ಇರುವುದಿಲ್ಲ.

ಮೆಟಾಫೇಸ್

ಇದು ಕೋಶಕೇಂದ್ರ ವಿಭಜನೆಯ ಅತ್ಯಂತ ಸಂಕ್ಷಿಪ್ತ ಹಂತ.ಈ ಹಂತದಲ್ಲಿ ವರ್ಣತಂತುಗಳ ಸಂಖ್ಯೆ ,ಆಕಾರ ,ರೂಪ ಮುಂತಾದವುಗಳನ್ನು ವೀಕ್ಷಿಸಬಹುದು.ಈ ಹಂತದಲ್ಲಿ ವರ್ಣ ತಂತುಗಳು ಕೋಶದ ಮಧ್ಯ ಭಾಗಕ್ಕೆ ಚಲಿಸುತ್ತವೆ ಹಾಗೂ ಕೋಶದ ಸಮಭಾಜಕ ಪ್ರದೇಶದಲ್ಲಿ ಜೋಡಣೆಗೊಳ್ಳುತ್ತವೆ.ಇದಕ್ಕೆ ಸಮಾನಾಂತರ ಫಲಕ ಎಂದು ಹಸರು.ಅವುಗಳು ಕದಿರು ಎಳೆಗಳಿಗೆ ಸೆಂಟ್ರೋಮಿಯರ್ ಗಳಿಂದ ಬಂಧಿಸಲ್ಪಟ್ಟಿರುತ್ತದೆ.ಸಾಲಾಗಿ ಬಂದು ನಿಂತ ವರ್ಣ ತಂತುಗಳು ಕೋಶವು ಯಾವ ಸಮತಲದಲ್ಲಿ ಮುಂದೆ ವಿಭಜಿಸಬೇಕೆಂಬುದನ್ನು ನಿರ್ಧರಿಸುತ್ತದೆ.

ಅನಫೇಸ್

ಈ ಹಂತದಲ್ಲಿ ಪ್ರತಿ ವರ್ಣತಂತುವಿನ ಕ್ರೊಮ್ಯಾಟಿಡ್ ಗಳನ್ನು ಹಿಡಿದಿಟ್ಟುಕೊಂಡಿದ್ದ ಸೆಂಟ್ರೊಮಿಯರ್ ಎರಡಾಗಿ ವಿಭಜನೆ ಹೊಂದುತ್ತದೆ.ವರ್ಣ ತಂತುವಿನಲ್ಲಿರುವ ಪ್ರತಿಯೊಂದು ಕ್ರೊಮ್ಯಾಟಿಡ್ ಗೂ ಒಂದು ಸೆಂಟ್ರೊಮಿಯರ್ ಲಭಿಸುತ್ತದೆ.ಈಗ ಆ ಎರಡು ತಂತುಗಳು ಬೇರ್ಪಟ್ಟು ವಿರುದ್ಧ ದಿಕ್ಕಿನಲ್ಲಿ ಚಲಿಸಲು ಪ್ರಾರಂಭವಾಗುತ್ತದೆ.ಕೆಲವು ಕದಿರೆಗಳು ಸೆಂಟ್ರೊಮಿಯರ್ ಗೆ ಅಂಟಿಕೊಂಡಿದ್ದು ಕ್ರೊಮ್ಯಾಟಿಡ್ ತಂತುಗಳನ್ನು ತಮ್ಮ ಧ್ರುವಗಳತ್ತ ಎಳೆದುಕೊಳ್ಳುತ್ತವೆ.ಹೀಗೆ ವಿರುದ್ಧ ದಿಕ್ಕಿಗೆ ತೆರಳುವ ವರ್ಣ ತಂತುಗಳ ಎರಡು ತಂಡಗಳ ಮಧ್ಯೆ ಹೊಸ ರೀತಿಯ ಕೋಶರಸದ ಎಳೆಗಳು ಕಾಣಿಸಿಕೊಳ್ಳುತ್ತವೆ.ಇವುಗಳಿಗೆ ಅಂತರ್ವಲಯಗಳು ಎಂದು ಹೆಸರು.

ಟಿಲೋಫೇಸ್

ಇದು ಕೋಶಕೇಂದ್ರ ವಿಭಜನೆಯ ಕೊನೆಯ ಹಂತ.ಈ ಹಂತದಲ್ಲಿ ಕೋಶದ ಪ್ರತಿ ಧ್ರುವ ಪ್ರದೇಶದಲ್ಲಿ ಒಂದು ಹೊಸ ಮರಿ ಕೋಶಕೇಂದ್ರ ರಚನೆಯಾಗುತ್ತದೆ.ವಿರುದ್ಧ ದಿಕ್ಕಿನ ಧ್ರುವಗಳತ್ತ ತೆರಳಿದ ವರ್ಣ ತಂತುಗಳು ಎಳೆಗಳು ಮತ್ತೆ ಪರಸ್ಪರ ಸುತ್ತಿಕೊಂಡು ವರ್ಣ ಗ್ರಾಹಕ ಜಾಲವಾಗುತ್ತದೆ.ಈ ಜಾಲದ ಸುತ್ತಲೂ ಹೊಸ ಕೋಶಕೇಂದ್ರ ಪೊರೆ ಹಾಗೂ ಜಾಲದಲ್ಲಿ ಹೊಸ ಕಿರು ಕೋಶಕೇಂದ್ರ ರಚನೆಯಾಗುತ್ತದೆ.ಹೀಗೆ ಎಲ್ಲಾ ವಿಧದಲ್ಲೂ ಪರಸ್ಪರ ಹೋಲುವ ಒಂದೇ ಸಂಖ್ಯೆಯ ವರ್ಣ ತಂತುಗಳಿರುವ ಎರಡು ಮರಿ ಕೋಶಕೇಂದ್ರಗಳು ಉಂಟಾಗುತ್ತವೆ.ಕೋಶರಸದಲ್ಲಿದ್ದ ಎಲ್ಲಾ ಎಳೆಗಳು ಅದ್ರಶ್ಯವಾಗುತ್ತವೆ.ಹೀಗೆ ಟೀಲೋಫೇಸ್ ಕೊನೆಗೊಂಡು ಕೋಶಕೇಂದ್ರ ವಿಭಜನೆ ಪೂರ್ಣಗೊಳ್ಳುತ್ತದೆ.ಈ ಕೋಶಕೇಂದ್ರ ವಿಭಜನೆಗೆ ಕ್ಯಾರಿಯೊಕೈನೆಸಿಸ್ ಎಂದು ಹೆಸರು.

ಕೋಶರಸ ವಿಭಜನೆ

ಟೀಲೋಫೇಸ್ ಮುಗಿಯುತಿದ್ದಂತೆಯೆ ಕೋಶರಸ ವಿಭಜನೆ ಪ್ರಾರಂಭವಾಗುವುದು.ಟಲೊಫೇಸ್ ಕೊನೆಗೊಳ್ಳುತಿದ್ದಂತೆಯೇ ಕೋಶವು ಎರಡಾಗಿ ವಿಭಜಿಸಲು ಪ್ರಾರಂಭವಾಗುವುದು.ಪ್ರಾಣಿಕೋಶಗಳಲ್ಲಿ ಕೋಶಹದ ಮಧ್ಯ ಭಾಗವು ಹೊರಗಿನಿಂದ ಒಳಗೆ ಕ್ರಮೇಣ ಸಂಪೀಡನೆಗೊಂಡು ಎರಡಾಗಿ ಕತ್ತರಿಸುತ್ತದೆ.ಕೋಶವು ಸೀಳಿ ಎರಡು ಮರಿ ಕೋಶಗಳಾಗುತ್ತವೆ.ಕೋಶರಸ ವಿಭಜನೆಗೆ ಸೈಟೊಕೈನೆಸಿಸ್ ಎಂದು ಹೆಸರು .

ಮೈಟಾಸಿಸ್ ಕೋಶ ವಿಭಜನೆಯಿಂದ ಜನಿಸುವ ಎರಡು ಮರಿ ಕೋಶಗಳಲ್ಲಿ ಸಮಾನಾಂತರ ವರ್ಣತಂತುಗಳ ಸಂಖ್ಯೆ ತಾಯಿ ಕೋಶದಲ್ಲಿದ್ದಷ್ಟೆ ಇರುವುದು.ಈ ಸಂಖ್ಯೆಗೆ ದ್ವಿಗುಣಿತ ಸಂಖ್ಯೆ ಅಥವಾ ಡಿಪ್ಲಾಯಿಡ್ ಎಂದು ಹೆಸರು.ಈ ಸಂಖ್ಯೆಯನ್ನು 2n ಎಂದು ಸೂಚಿಸುವುದು.