ಸದಸ್ಯ:Arpitha K C/ನನ್ನ ಪ್ರಯೋಗಪುಟ1
ಜಾಫರ್ ಇಕ್ಬಾಲ್
[ಬದಲಾಯಿಸಿ]ಜಾಫರ್ ಇಕ್ಬಾಲ್ (ಜನನ 12 ಜೂನ್ 1956) ಇವರು ಭಾರತದ ಮಾಜಿ ಹಾಕಿ ಪಟು ಮತ್ತು ಭಾರತೀಯ ಹಾಕಿ ತಂಡದ ನಾಯಕ.
ಆರಂಭಿಕ ಜೀವನ
[ಬದಲಾಯಿಸಿ]ಜಾಫರ್ ಇಕ್ಬಾಲ್ ಅವರು 12 ಜೂನ್ 1956ರಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಮೊಹಮ್ಮದ್ ಮತ್ತು ನಜ್ಮುನ್ ನಿಶಾ ಅವರ ಐದು ಮಕ್ಕಳಲ್ಲಿ ಮೂರನೆಯವರಾಗಿ ಬಿಹಾರದ ಷರೀಫ್ ನ ಹರ್ಗವಾನ್ ಹಳ್ಳಿಯಲ್ಲಿ ಜನಿಸಿದರು. ನಂತರ ಅವರ ಕುಟುಂಬವು ಉತ್ತರ ಪ್ರದೇಶದ ಅಲಿಘರ್ಗೆ ಸ್ಥಳಾಂತರಗೊಂಡಿತು. ಇಕ್ಬಾಲ್ ಅವರಿಗೆ ಬಾಲ್ಯದಿಂದಲೂ ಫುಟ್ಬಾಲ್ ಆಡುವ ಹವ್ಯಾಸವಿತ್ತು. 1969-70ರಲ್ಲಿ ಇವರನ್ನು ಹಾಕಿಗೆ ತೆಗೆದುಕೊಳ್ಳುವುದಕ್ಕೂ ಮೊದಲು ಅವರ ತಂದೆಯ ಸಹೋದ್ಯೋಗಿ ಪ್ರೊಫೆಸರ್ ಖಾನ್ ಇವರಿಗೆ ಇವರಿಗೆ ಪ್ರೋತ್ಸಾಹ ನೀಡಿದರು. ಆ ಸಮಯದಲ್ಲಿ ಅಲಿಘರ್ ಮುಸ್ಲಿಂ ಯುನಿವರ್ಸಿಟಿಯ ಹಾಕಿ ತರಬೇತುದಾರ ಮತ್ತು 1936ರ ಬರ್ಲಿನ್ ಒಲಂಪಿಕ್ಸ್ನಲ್ಲಿ ಭಾರತೀಯ ರಾಷ್ಟ್ರೀಯ ತಂಡದ ಮ್ಯಾನೇಜರ್ ಆಗಿದ್ದ ಸ್ವಾಮಿ ಜಗನ್ನಾಥ್ ಅವರು ಇಕ್ಬಾಲ್ ರವರಿಗೆ ಮಾರ್ಗದರ್ಶನ ನೀಡಿದರು. ಹಾಕಿಯ ಜೊತೆಗೆ, ಇಕ್ಬಾಲ್ ಅವರು ಎಎಂಯು ನಿಂದ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು 1978ರಲ್ಲಿ 74 ಶೇಕಡಾ ಅಂಕಗಳನ್ನು ಗಳಿಸಿ ಉತ್ತೀರ್ಣರಾದರು.
ವೃತ್ತಿ ಜೀವನ
[ಬದಲಾಯಿಸಿ]ಇಕ್ಬಾಲ್ ಅವರು ಅಂತರ್ ವಿಶ್ವವಿದ್ಯಾನಿಲಯಗಳ ಹಾಕಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲಯಲ್ಲಿ ವಿಶ್ವವಿದ್ಯಾನಿಲಯದ ತಂಡಕ್ಕೆ ಆಯ್ಕೆಯಾದರು. ಆ ನಂತರ ಇಕ್ಬಾಲ್ ಅವರು ಎಎಂಯು ಪರ ಆಡುತ್ತಿದ್ದರು. ಇಕ್ಬಾಲ್ 1978ರಲ್ಲಿ ಬ್ಯಾಂಕಾಕ್ನಲ್ಲಿ ನಡೆದ ಏಷ್ಯನ್ ಗೇಮ್ಸ್ ಮತ್ತು 1982ರಲ್ಲಿ ನವದೆಹಲಿಯ ತಂಡದ ನಾಯಕರಾಗಿ ಎರಡರಲ್ಲಿಯೂ ಬೆಳ್ಳಿ ಪದಕವನ್ನು ಗೆದ್ದರು. 1980 ರಲ್ಲಿ ಅವರು ಮಾಸ್ಕೋ ಒಲೆಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿ ಅವರು ಸುದೀರ್ಘ ಸಮಯದ ನಂತರ ಚಿನ್ನದ ಪದಕವನ್ನು ಗೆದ್ದು ಸರ್ವಶ್ರೇಷ್ಠ ವೃತ್ತಿ ಜೀವನದ ಕಿರೀಟವನ್ನು ಮುಡಿಗೇರಿಸಿಕೊಂಡರು. ಇದಲ್ಲದೆ, ಅವರು 1984ರಲ್ಲಿ ಲಾಸ್ ಎಂಜಲೀಸ್ ನಲ್ಲಿ ನಡೆದ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ತಮ್ಮ ತಂಡವನ್ನು ಮುನ್ನಡೆಸಿದ್ದರು. ಹಾಲೆಂಡ್ನಲ್ಲಿ ನಡೆದ ಚಾಂಪಿಯನ್ ಟ್ರೋಫಿ 1982ರಲ್ಲಿ ದೇಶಕ್ಕಾಗಿ ಕಂಚಿನ ಪದಕವನ್ನು ಗೆದ್ದರು ಮತ್ತು ಪಾಕಿಸ್ತಾನದ ವಿರುದ್ಧ ಮತ್ತು ಮಲೇಷ್ಯಾ, ಅಸ್ಟ್ರೇಲಿಯಾ, ನ್ಯೂಜಿಲೆಂಡ್, ಪಶ್ಚಿಮ ಜರ್ಮನಿ ಮತ್ತು ಇತರ ಯೂರೋಪಿಯನ್ ರಾಷ್ಟ್ರಗಳ ವಿರುದ್ಧ ಅನೇಕ ಪಂದ್ಯಾವಳಿಗಳನ್ನು ಗೆದ್ದರು.