ಸದಸ್ಯ:Apoorva poojay/ನನ್ನ ಪ್ರಯೋಗಪುಟ2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಹಿಬೇವಿನ ಮರ:

ಕಹಿ ಬೇವು

ಇದು ಒಂದು ಔಷದಿಯಾ ಸಸ್ಯ. ಇದರ ಎಲೆಯನ್ನು ಅನೇಕ ರೋಗಗಳಿಗೆ ಕಷಾಯವಾಗಿ ಬಳಸುತ್ತಾರೆ.

ವಿವರಣೆ[ಬದಲಾಯಿಸಿ]

ಇದು ಸುಮಾರು ೨೦ ಅಡಿ ಎತ್ತರಕ್ಕೆ ಬೆಳೆಯುವ ಬಹುವಾರ್ಷಿಕ ಮರವಾಗಿದೆ ಇದರ ತೊಗಟೆ ಕಂದು ಹಾಗೂ ಕಪ್ಪು ಬಣ್ಣದಿಂದ ಕುಡಿರುತ್ತದೆ.ಎಲೆಗಳು ಪರ್ಯಾಯವಾಗಿ ಜೋಡಣೆಗೊಂಡಿದ್ದು ಗರಿಯಾ ರೂಪದಂತೆ ಕೂಡಿದೆ. ಇದರ ಒಂದೊಂದು ಎಲೆಯು ಸು.೫-೮ ಉಪ ಎಲೆಯನ್ನು ಹೊಂದಿರುತ್ತದೆ.

ಉಪಯೋಗ[ಬದಲಾಯಿಸಿ]

ಆಯುರ್ವೇದದಲ್ಲಿ ಬೇವಿಗೆ ಉತ್ತಮ ಸ್ಥಾನವಿದೆ,ಬೇವಿನ ಎಲೆಯನ್ನು ಹಲವು ಔಷದಿಗಳಲ್ಲಿ ಬಳಸುತ್ತರೆ. ಯುಗಾದಿ ದಿನ ಬೇಲ್ಲದೊಂದಿಗೆ ಬೆರೆಸಿ ಸೇವಿಸುತ್ತಾರೆ. ಇದರ ತೊಗಟೆಯು ಹಲವು ಔಷದಿ ಗುಣ ಹೊಂದಿದೆ.ಬೇವಿನ ಎಲೆಯಲ್ಲಿ ಉರಿಯೂತ ಶಮಕಾರಿ,ನಂಜುನಿರೋಧಕ ಗುಣ ಹೊಂದಿದ್ದು ಕಾಯಿಲೆಯನ್ನು ದೂರವಿಡುತ್ತದೆ,ಇತ್ತೀಚಿನ ದಿನಗಳಲ್ಲಿ ಇದನ್ನು ಫೇಸ್ ವಾಶ್,ಶಾಂಪೂ,ಸೋಪ್ ಇತ್ಯಾದಿಳಲ್ಲಿ ಬಳಸುತ್ತಾರೆ. ಎಲೆಯನ್ನು ಒಣಗಿಸಿ ಅದನ್ನು ಹುಡಿ ಮಾಡಿ ಬಳಸುತ್ತಾರೆ. ರಕ್ತ ಸಂಚಾರವು ಸರಿಯಾಗಿ ಆಗದೆ ಹಾರ್ಮೋನ್ ಸಮಸ್ಯೆ ಕಂಡುಬಂದರೆ ಬೇವಿನ ಹುಡಿಯನ್ನು ಬಳಸುದರಿಂದ ರತ್ತ ಸಂಚಾರವು ಸರಾಗವಾಗುತ್ತದೆ. ಇದರ ಹುಡಿಯನ್ನು ಅಸ್ತಮಾ ನಿವಾರಣಗೆ,ಮೊಡವೆ ನಿವಾರಣೆಗು ಬಳಸುತ್ತಾರೆ. ಬೇವಿನಲ್ಲಿ ಇರುವಂತ ಬ್ಯಾಕ್ಟೀರಿಯಾ ವಿರೋಧಿ ಗುಣವು ದಂತಕುಳಿಗೆ ಕಾರಣವಾಗುವಂತಹ ಪದರವನ್ನು ದೂರ ಮಾಡುತ್ತದೆ. ಬೇವನ್ನು ಹಲವಾರು ಟೂಥ್ ಪೇಸ್ಟ್ ಅಲ್ಲಿ ಬಳಸುತ್ತಾರೆ ಹಾಗೂ ಇದರ ಕಡ್ಡಿಯಿಂದ ಹಲ್ಲನ್ನು ಉಜ್ಜುದರಿಂದ, ಹಲ್ಲುಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ[೧]. ಅಲ್ಲದೆ, ರಕ್ತವನ್ನು ಶುದ್ದೀಕರಿಸುವ ಗುಣ ಹೊಂದಿದೆ.

ಕ್ಯಾನ್ಸರ್ ನಿರೋಧಕ[ಬದಲಾಯಿಸಿ]

ಬೇವು ಕ್ಯಾನ್ಸರ್ ಕೋಶಗಳನ್ನು ನಾಶ ಮಾಡುತ್ತದೆ. ಪ್ರತಿದಿನ ಬೆಳ್ಳಿಗೆ ಬೇವಿನ ಎಲೆ ತಿನ್ನುದ್ದರಿಂದ ದೇಹದಲ್ಲಿನ ಕ್ಯಾನ್ಸರ್ ಕೋಶಗಳ ಸಂಖ್ಯೆಯನ್ನು ಮಿತಿಯಲ್ಲಿರಿಸುತ್ತದೆ. ಹಾಗಾಗಿ ಕ್ಯಾನ್ಸರ್ ಬರುವ ಸಂದರ್ಭವನ್ನು ಕಡಿಮೆ ಮಾಡುತ್ತದೆ.

ಮಲೇರಿಯಾ[ಬದಲಾಯಿಸಿ]

ಬೇವಿನ ಎಲೆಯ ಕಷಾಯ ಕುಡಿಯುದರಿಂದ ಮಲೇರಿಯಾ ರೋಗವು ನಾಶವಾಗುತ್ತದೆ ಅಲ್ಲದೆ, ಜ್ವರ,ಶೀತ ನಿವಾರಣೆಯಾಗುತ್ತದೆ.

ಉಲ್ಲೇಖ[ಬದಲಾಯಿಸಿ]

  1. https://indianexpress.com/article/lifestyle/health/neem-twigs-datun-brushing-benefits-7946617/