ಸದಸ್ಯ:Apoorva gopal

ವಿಕಿಪೀಡಿಯ ಇಂದ
Jump to navigation Jump to search
                           ನನ್ನ ಪರಿಚಯ

ನನ್ನ ಹೆಸರು ಅಪೂರ್ವ.ನಾನು ಸುರತ್ಕಲ್‍ನ ಕಾಟಿಪಳ್ಳದ ನಿವಾಸಿ.ನಮ್ಮದೊಂದು ಪುಟ್ಟ ಸಂಸಾರ ನಾನು,ಅಮ್ಮ.ಅಪ್ಪ ಹಾಗು ನನ್ನ ತಂಗಿ. ನನ್ನ ತಂದೆ ಎನ್.ಎಮ್.ಪಿ.ಟಿ ನಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ ಹಾಗು ನನ್ನ ತಾಯಿ ಗೃಹಣಿ.

ನಾನು ಸಂತ ಅಲೋಶಿಯಸ್ ಕಾಲೇಜಿನ ಪ್ರಥಮ ಬಿ.ಕಾಂ ವಿದ್ಯಾರ್ಥಿನಿ.ನನ್ನ ಪದವಿ ವಿದ್ಯಬ್ಯಾಸವನ್ನು ಸುರತ್ಕಲ್‌ನ ಗೊವಿಂದದಾಸ ಪದವಿ ಪೂರ್ವ ಕಾಲೇಜು ನಲ್ಲಿ ಮುಗಿಸಿರುತ್ತೆನೆ ಹಾಗು ನನ್ನ ಪ್ರಾಥಮಿಕ ಹಾಗು ಪ್ರೌಢ ಶಾಲಾ ವಿದ್ಯಾಬ್ಯಾಸವನ್ನು ಬ್ರಹ್ಮಾಶ್ರೀ ನಾರಾಯಣಗುರು ಶಿಕ್ಷಣ ಸಂಸ್ಥೆ ಕಾಟಿಪಳ್ಳದಲ್ಲಿ ಮುಗಿಸಿರುತ್ತೆನೆ.ನನ್ನ ನೆಚ್ಚಿನ ವಿಷಯ ಕನ್ನಡ ಹಾಗು ಸಮಾಜ ವಿಜ್ಞಾನ . ನಾನು ವಿದ್ಯಾರ್ಥಿನಿಯಾಗಿರುವಾಗ ಎಲ್ಲ ಚಟುವಟಿಕೆಗಳು ಹುಮ್ಮಸ್ಸಿನಿಂದ ಭಾಗ ವಹಿಸುತ್ತಿದ್ದೆ ಹಾಗು ನನ್ನ ಶಾಲ ದಿನಗಳಲ್ಲಿ ಸಾಂಸ್ಕೃತಿಕ ಮಂತ್ರಿಯು ಕೂಡ ಆಗಿದ್ದೆ.ಕ್ರೀಡೆ ಎಂದರೆ ನನಗೆ ತುಂಬ ಆಸಕ್ತಿ ಅದರಲ್ಲಿಯೂ ವಾಲಿಬಾಲ್ ಮತ್ತು ತ್ರೂಬಾಲ್ ನನ್ನ ನೆಚ್ಚಿನ ಕ್ರೀಡೆ.

ನಮ್ಮ ಶಾಲ ದಿನಗಳಲ್ಲಿ ಸ್ಕೌಟ್ ಗೈಡ್ ಕ್ಯಾಂಪ್‌ಗಳಲ್ಲಿಯು ಭಾಗವಹಿಸಿದ್ದೆ.ಹಾಗು ಗೈಡ್‍ನಲ್ಲಿ ರಾಜ್ಯಪುರಸ್ಕರವನ್ನು ಕೂಡ ಮುಗಿಸಿರುತ್ತೆನೆ. ನನಗೆ ಸಂಗೀತ ಮತ್ತು ನೃತ್ಯದಲ್ಲಿ ತುಂಬ ಆಸಕ್ತಿ.ಅದರಲ್ಲೂ ಭರತನಾಟ್ಯ ನೃತ್ಯದಲ್ಲಿ ಜೂನಿಯರ್ ಪದವಿಯನ್ನು ಮುಗಿಸಿ ಸೀನಿಯರ್ ಪದವಿಯನ್ನು ಹೊಂದಲು ಸಿದ್ದಳಾಗುತ್ತಿದ್ದೆನೆ.ಶಾಲ ದಿನಗಳಲ್ಲಿ ಆಯೊಜಿಸಿದ್ದ ಪ್ರತಿಭಾ ಕಾರಂಜಿಯಲ್ಲಿ ತಾಲೂಕು ಮಟ್ಟದಲ್ಲಿ ನನ್ನ ಶಾಲೆಯನ್ನು ಪ್ರತಿನಿದಿಸಿರುತ್ತೆನೆ.

ದ್ವಿತೀಯ ಪಿ.ಯು.ಸಿ ಯಲ್ಲಿ ಒಳ್ಳೆಯ ಅಂಕಗಳಿಸಿದ ಕಾರಣದಿಂದಾಗಿ ಈ ಕಾಲೇಜಿಗೆ ಸೇರಬೇಕೆಂದು ತುಂಬಾನೆ ಆಸಕ್ತಿ ಇತ್ತು.ನನಗೆ ಮುಂದೊಂದುದಿನ ಶಿಕ್ಷಕಿಯಾಗ ಬೇಕೆಂದು ಆಸೆ.ನಾನು ಮುಂದೆ ಒಳ್ಳೆಯ ವಿದ್ಯಾಬ್ಯಾಸವನ್ನು ಮಾಡಿ ಹೆತ್ತವರ ಆಸೆಯನ್ನು ಪೂರೈಸ ಬೇಕೆಂಬುದೆ ನನ್ನ ಕನಸು.