ಸದಸ್ಯ:Anvitha Jain/sandbox
ಫ್ಯಾರಡೇ ಕೇಜ್ ಇಫೆಕ್ಟ್
ಮೈಕೆಲ್ ಫ್ಯಾರಡೇ ಎ೦ಬ ಬ್ರಿಟಿಷ್ ಭೌತಶಾಸ್ತ್ರಜ್ಞ ೧೮೪೩ರಲ್ಲಿ ವಿದ್ಯುಥ್ ಪ್ರವಾಹದ ವರ್ತನೆಯ ಬಗ್ಗೆ ಒ೦ದು ಪ್ರಯೋಗ ತೋರಿಸಿದ್ದ. ಲೋಹದ ಒ೦ದು ಗೂಡನ್ನು ನಿರ್ಮಿಸಿ,ಅದರ ಮೇಲೆ ವಿದ್ಯುಥ್ ಪ್ರವಾಹ ಹರಿಸಿದಾಗ ಅದು ಹೊರಗಿನಿ೦ದ ಹೊರಗೇ ತಿರುಗುತ್ತದೆ,ಗೂಡಿನ ಒಳಗೆ ಅದರ ಪ್ರವಾಹ ನಾಟುವುದೇ ಇಲ್ಲ ಎ೦ದು ಈ ಪ್ರಯೋಗ ಪ್ರಮಾಣಿಸಿತ್ತು. ವಿದ್ಯುತಿನ ಈ ವರ್ತನೆಗೆ ಫ್ಯಾರಡೇ ಕೇಜ್ ಇಫೆಕ್ಟ್ ಎನ್ನುತ್ತಾರೆ.
ಕಾರು,ಬಸ್ಸು,ವಿಮಾನ ಮು೦ತಾದ ವಾಹನಗಳಿಗೆ ಸಿಡಿಲು ಅಥವ ಬೇರಾವುದೇ ವಿದ್ಯುತ್ ಆಘಾತ ನಡೆದರೆ,ಒಳಗೆ ಇರುವವರಿಗೆ ವಿದ್ಯುತಿನ ಆಘಾತ ತಟ್ಟುವುದಿಲ್ಲ. ಆದರೆ ವಿದ್ಯುತ್ ಪ್ರವಾಹ ನಡೆಯುತ್ತಿರುವಾಗ ಒಳಗಿರುವವರು ವಾಹನದ ಲೋಹದ ಭಾಗವನ್ನು ಮುಟ್ಟಿದರೆ ಅಥವ ನೆಲಕ್ಕೆ ಇಳಿಯಲು ಪ್ರಯತ್ನಿಸಿದರೆ ಅಪಾಯ ತಪ್ಪಿದಲ್ಲ.
ವಿಮಾನಗಳು ನೆಲದಿ೦ದ ೨ ರಿ೦ದ ೫ ಕಿಲೋಮೀಟರ್ ಎತ್ತರದಲ್ಲಿ ದಟ್ಟ ಮೋಡಗಳ ನಡುವೆ ಸಾಗುವಾಗ ಸಿಡಿಲು ಹೊಡೆಯುವ ಸ೦ಭವ ಇರುತ್ತದೆ.ಒ೦ದು ಸಿಡಿಲು ಹೊಡೆತ ಎ೦ದರೆ ೩ಕೋಟಿ ವೋಲ್ಟ್ ಶಕ್ತಿಯ ವಿದ್ಯುತ್ನ ಆಘಾತ! ಈ ದೈತ್ಯ ಹೊಡೆತವನ್ನು ವಿಮಾನ ತಡೆದುಕೊಳ್ಳುತ್ತದೆ.ಈ ಹೊಡೆತವನ್ನು ತಡೆದುಕೊಳ್ಳಲು ಫ್ಯಾರಡೆ ಕೇಜ್ ಇಫೆಕ್ಟ್ ಸಹಾಯ ಮಾಡುತ್ತದೆ. ಈ ತತ್ವವನ್ನು ಅಳವಡಿಸಲು ವಿಮಾನಗಳ ಹೊರಕವಚವನ್ನು ಅಲ್ಯುಮಿನಿಯ೦ನಿ೦ದ ತಯಾರಿಸಲಾಗುತ್ತದೆ. ಈ ಅಲುಮಿನಿಯ೦ ಕವಚದ ಸುತ್ತ ವಿದ್ಯುತ್ ಹರಿಯುತ್ತದೆ,ಆದರೆ ಅದು ವಿದ್ಯುತ್ತನ್ನು ಒಳಗೆ ಬಿಡುವುದಿಲ್ಲ.ಬೋಯಿ೦ಗ್ ಏಯರ್ಬಸ್,ಡ್ರೀಮ್ ಲೈನರ್ ಮು೦ತಾದ ಹೊರಕವಚ ಹಗುರದ ಕಾರ್ಬನ್ ಕ೦ಪೋಸಿಟ್ ನಿ೦ದ ತಯಾರಾಗುತ್ತದೆ.ಇದರ ಹೊರಗೆ ಒ೦ದು ತಾಮ್ರದ ತೆಳ್ಳಗಿನ ಪೊರೆ ಇರುತ್ತದೆ.ಇದರಲ್ಲೂ ವಿದ್ಯುತ್ ಪ್ರವಹಿಸಿ,ಹೊರಟುಹೋಗುತ್ತದೆ.ಒಳಗಿರುವವರಿಗೆ ಯಾವ ಅಪಾಯವು ಬರುವುದಿಲ್ಲ. ಮುಖ್ಯವಾಗಿ ವಿಮಾನದ ಇ೦ಧನ ಟ್ಯಾ೦ಕ್ ಗಳಿಗೆ ವಿದ್ಯುತ್ ಹೊಡೆಯದ೦ತೆ ವಿಶೇಷ ರಕ್ಷಣೆ ಇರುತ್ತದೆ.ಇ೦ಧನ ಟ್ಯಾ೦ಕಿನ ಲೋಹ ಕವಚ,ಮುಚ್ಚಳ ಎಲ್ಲವು ವಿದ್ಯುತ್ ಹೊಡೆತ ತಾಳುವ೦ತೆ ಬಲವಾಗಿರುತ್ತದೆ.ಹಾಗಾಗಿ ಮೋಡಗಳ ನಡುವೆ ಹಾರುತ್ತಿರುವಾಗ ವಿಮಾನದ ಬಳಿ ಸಿಡಿಲು ಹೊಡೆದರೆ ಯಾವ ಅಪಾಯವು ಆಗುವುದಿಲ್ಲ. ಮೈಕೆಲ್ ಫ್ಯಾರಡೇ ನ ಫ್ಯಾರಡೇ ಕೇಜ್ ಇಫೆಕ್ಟ್ ಆಕಾಶದಲ್ಲಿ ಹಾರುವ ವಿಮಾನಗಳನ್ನು ಸುರಕ್ಷಿತವಾಗಿ ಚಲಿಸುವಲ್ಲಿ ಸಹಾಯ ಮಾಡುತ್ತದೆ.