ಸದಸ್ಯ:AnthonyRakesh/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ವಸ್ತುತ; ವಾಣೆಜ್ಯ ಬ್ಯಾಂಕುಗಳಂತೆಯೇ ಆಗಿದ್ದರೂ, ಅವುಗಳ ಭೌಗೋಳಿಕ ವ್ಯಾಪ್ತಿ ಪರಿಮಿತವಾಗಿರುತ್ತದೆ. ಗ್ರಾಮೀಣ ಬ್ಯಾಂಕುಗಳು ಗ್ರಾಹಕರಿಗೆ ಸಾಲಕ್ಕಾಗಿ ವಿಧಿಸುವ ಬಡ್ಡಿಯ ದರವು ಸಹಕಾರಿ ಸಂಘಗಳು ವಿಧಿಸುವ ಬಡ್ಡಿ ದರಕ್ಕಿಂತ ಹೆಚ್ಚು ಇರಕೂಡದು.ಇದರಿಂದ ರಿಸರ್ವ್ ಬ್ಯಾಂಕ್ ಈ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಕೆಲ ಸವಲತ್ತುಗಳುನ್ನು ಕೊಡಮಾಡಿದೆ. ಈಬ್ಯಾಂಕುಗಳು ಇತರ ಬ್ಯಾಂಕುಗಳೊಂದಿಗೆ ಸ್ವರ್ಧಿಸುವುದಿಲ್ಲ, ಅವುಗಳಿಗೆ ಪೂರಕವದ ಕಾರ್ಯವನ್ನೇ. ಗ್ರಾಮೀಣ ಬ್ಯಾಂಕುಗಳು ಸಣ್ಣ ರೈತರಿಗೆ,ಭೂರಹಿತ ಕಾರ್ಮಿಕರಿಗೆ, ಗ್ರಾಮೀಣ ಕುಶಲಕರ್ಮಿಗಳಿಗಷ್ಟೇ ಸಾಲಗಳನ್ನು ನೀಡುತ್ತವೆ. ಈಚೆಗೆ ಗ್ರಾಮೀಣ ಬ್ಯಾಂಕುಗಳು ಲಾಭಪ್ರದತೆಯನ್ನು ದೃಷ್ಟಿಯಲ್ಲಿರಿಸಿ ಅವು ಕೆಲವು ದೊಡ್ಡ ಸಾಲಗಳನ್ನೂ ನೀಡಲು ಅನುಮತಿ ಕೊಡಲಾಗಿದೆ.

     ೫ ಬ್ಯಾಂಕುಗಳಿಂದ ೧೯೭೫ರಲ್ಲಿ ಗ್ರಾಮೀಣ ಬ್ಯಾಂಕುಗಳು ಪ್ರಾರಂಭವಾದವು. ೧೯೯೩ರಲ್ಲಿ ೧೯೬ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿದ್ದವು. ಅವು ದೇಶದ ಎಲ್ಲ ಜಿಲ್ಲೆಗಳಲ್ಲೂ ಕಾರ್ಯ ನಿರ್ವಹಿಸುತ್ತಿವೆ. ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಪರಸ್ವರ ವಿಲೀನಗೊಳಿಸಿ ಅವುಗಳ ಸಂಖ್ಯೆಯನ್ನು ೪೦-೪೫ಕ್ಕೆ ಇಳಿಸುವ ಕಾರ್ಯ ನಡೆಯುತ್ತಿದೆ.
     ಮೊದಲು ಈ ಪ್ರಾದೇಶಿಕ ಬ್ಯಾಂಕ್ ಸಿಬ್ಬಂದಿಗೆ ವಾಣಿಜ್ಯ ಬ್ಯಾಂಕಿನ ಸಿಬ್ಬಂದಿಗಿಂತ ಕಡಿಮೆ ಸಂಬಳವನ್ನು ಕೊಡುತ್ತಿದ್ದುದರಿಂದ ಸಿಬ್ಬಂದಿಯ ವೆಚ್ಚ ಕಡಿಮೆಯಾಗಿತ್ತು. ಆದರೆ ಈಗ ಸುಪ್ರೀಂ ಕೋರ್ಟಿನ ತೀರ್ಪಿನನ್ವಯ ವಾಣಿಜ್ಯ ಬ್ಯಾಂಕುಗಳ ಸಿಬ್ಬಂದಿಗೆ ನೀಡುವಷ್ಟೇ ಸಂಬಳವನ್ನು ಇವರಿಗೂ ನೀಡಲಾಗುತ್ತಿದೆ. ಸೀಮಿತ ಕಾರ್ಯವ್ಯಾಪ್ತಿ ಮತ್ತು ಕಡಿಮೆ ಬಡ್ಡಿ ದರದಿಂದ ಈ ಬ್ಯಾಂಕುಗಳು ಮೊದಮೊದಲು ನಷ್ಟದಲ್ಲಿಯೇ ನಡೆದರೂ ಈಚೆಗೆ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ದಕ್ಷತೆ ಹೆಚ್ಚೆ ಬಹುತೇಕ ಪ್ರಾದೇಶಿಕ ಬ್ಯಾಂಕುಗಳು ಲಾಭ ಗಳಿಸುತ್ತಿವೆ.