ಸದಸ್ಯ:Annadanappa S C/ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನೀಜ್ ಫಾತಿಮಾ[ಬದಲಾಯಿಸಿ]

ಕನೀಜ್‌ ಫಾತಿಮಾ ಇವರೊಬ್ಬ ಭಾರತೀಯ ರಾಜಕಾರಿಣಿ ಮತ್ತು ಎರಡನೇ ಬಾರಿಗೆ ಗುಲ್ಬರ್ಗಾ ಉತ್ತರ ಕ್ಷೇತ್ರದಿಂದ ಆಯ್ಕೆಯಾದ ಕರ್ನಾಟಕ ವಿಧಾನಸಭಾ ಸದಸ್ಯೆ. ಇವರು ಅದೇ ಕ್ಷೇತ್ರದ ವಿಧಾನಸಭೆ ಸದಸ್ಯರಾಗಿದ್ದ, ಮಾಜಿ ಸಚಿವರಾದ ಲೇಟ್‌ ಕಮರ್‌ - ಉಲ್‌ - ಇಸ್ಲಾಮ್‌ ಅವರ ಪತ್ನಿ

ಕ್ಷೇತ್ರ[ಬದಲಾಯಿಸಿ]

ಇವರು ಕರ್ನಾಟಕ ವಿಧಾನಸಭೆಯ ಗುಲ್ಬರ್ಗಾ-ಉತ್ತರ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ

ರಾಜಕೀಯ ಜೀವನ[ಬದಲಾಯಿಸಿ]

ಫಾತಿಮಾರವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಸದಸ್ಯರು. ತಮ್ಮ ಪತಿ ಡಾ. ಕಮರ್‌ ಉಲ್‌ ಇಸ್ಲಾಮ್‌ ಅವರ ಮರಣದ ನಂತರ ಇವರು ರಾಜಕೀಯವಾಗಿ ಸ್ಪರ್ಧಿಸಲು ನಿರಾಕರಿಸಿದರು. ಆದರೆ ಇವರನ್ನು ಸಿದ್ಧರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತು ಜಿ. ಪರಮೇಶ್ವರ್‌ ಮನವೊಲಿಸಿದರು. ಜೊತೆಗೆ ಎಲ್ಲ ಸಮುದಾಯದ ಜನರು ಇವರನ್ನು ಸ್ಪರ್ಧಿಸಲು ಒಪ್ಪಿಸಿದರು. ಗುಲ್ಬರ್ಗಾದ ಕಾಂಗ್ರೇಸ್ಸಿನ ಎಂ.ಎಲ್.ಎ ಪ್ರಿಯಾಂಕ್‌ ಖರ್ಗೆ, ಎಂ.ಎಲ್.ಎ ಅಜಯ್‌ ಸಿಂಗ್‌, ವಾಹೀದ್‌ ಅಲಿ ಫತೇಖಾನಿ, ಬಾಬಾ ನಾಜರ್‌ ಮೊಹ್ಮದ್‌ ಇತ್ಯಾದಿ ಅನೇಕ ನಾಯಕರು ಇವರನ್ನು ಬೆಂಬಲಿಸಿದರು. ಅನುಕಂಪಕ್ಕಿಂತ ಹೆಚ್ಚಾಗಿ ಇವರ ಪತಿಯ ಕೊಡುಗೆಗಳನ್ನು ಎತ್ತಿಹಿಡಿದು ರಾಜಕೀಯ ಪ್ರಚಾರ ಕೈಗೊಂಡರು. ಪರಿಣಾಮವಾದಿ ಜೇ.ಡಿ.ಎಸ್ ಪಕ್ಷದ ನಾಸಿರ್‌ ಹುಸ್ಸೇನ್‌ ಉಸ್ತಾದ್ ಅವರ ವಿರುದ್ಧ ಮತ್ತು ಬಿ.ಜೆ.ಪಿ ಪಕ್ಷದ ಚಂದ್ರಕಾಂತ್‌ ಪಾಟೀಲ್‌ ವಿರುದ್ಧ 5,940 ಮತಗಳಿಂದ ಗೆದ್ದರು.