ಸದಸ್ಯ:Ankitha Patla/ನನ್ನ ಪ್ರಯೋಗಪುಟ4

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಾರ್ಶ್ವನಾಥ ಸ್ವಾಮಿ ಬಸದಿ, ಬೈಲಂಗಡಿ

ಸ್ಥಳ[ಬದಲಾಯಿಸಿ]

ಇದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಬೈಲಂಗಡಿಯ ಶ್ರೀ ಪಾರ್ಶ್ವನಾಥ ಬಸದಿಯು ಉಜಿರೆಯಿಂದ ೧೮ ಕಿ.ಮೀ. ದೂರದಲ್ಲಿದೆ.

ಇತಿಹಾಸ[ಬದಲಾಯಿಸಿ]

ಇದನ್ನು ಬಂಗಾಡಿಯ ಬಂಗರಸನ ಪತ್ನಿಯಾದ ಬೈಲಂಗಡಿಯ ರಾಣಿ ಸೋಮಲಾದೇವಿಯು ಕಟ್ಟಿಸಿದ್ದಳು. ರಾಣಿ ಸೋಮಲಾದೇವಿಯಿಂದ ನಿರ್ಮಿತವಾದ ಈ ಸುಂದರ ಬಸದಿಯು ಆ ರಾಜವಂಶದ ಒಮದು ನಿರ್ಮಾಣವಾಗಿಯೂ ಅದರ ವೈಭವ ಘನತೆಗಳನ್ನು ಜಗತ್ತಿಗೆ ಸಾರುವ ಇತಿಹಾಸದ ಕುರುಹಾಗಿಯೂ ನಿಂತಿದೆ. ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಹೆಮ್ಮೆಯ ಪ್ರಾಚೀನ ಐತಿಹಾಸಿಕ ಪೂಜಾ ಕೇಂದ್ರವಾಗಿಯೂ ಮೆರೆಯುತ್ತಿದೆ.

ವಿನ್ಯಾಸ[ಬದಲಾಯಿಸಿ]

ಈ ಬಸದಿಯು ೧೪ ಮೆಟ್ಟಿಲುಗಳ ಮೇಲಿರುವ ಒಂದು ದಿಣ್ಣೆಯ ಮೇಲೆ ನಿರ್ಮಾಣಗೊಂಡಿದೆ. ಇದರ ಮುಂಭಾಗದಲ್ಲಿ ಧ್ವಜಸ್ತಂಭವಿದೆ. ಇದರ ನಂತರ ಹೊಸದಾಗಿ ನಿರ್ಮಿಸಿದ ಚಂದ್ರಶಾಲೆಯಿದೆ. ಇಲ್ಲಿಂದ ವೀಕ್ಷಿಸಿದಾಗ ಗರ್ಭಗೃಹದಲ್ಲಿ ಅಂದಾಜು ೩ ಅಡಿ ಎತ್ತರವುಳ್ಳ, ೨೩ನೇ ತೀರ್ಥಂಕರರಾದ ಶ್ರೀ ಪಾರ್ಶ್ವನಾಥ ಸ್ವಾಮಿಯ ಕಪ್ಪು ಶಿಲೆಯಿಂದ ನಿರ್ಮಿಸಿದಂತಹ ವಿಗರಹವು ಶೋಭಾಯಮಾನವಾಗಿ ಕಾಣಿಸುತ್ತದೆ. ಅವು ಯಾವುದೆಂದರೆ ಗರ್ಭಗೃಹ, ಹೊರಮಂಟಪ, ಶುಕನಾಸಿ, ಘಂಟಾಮAಟಪ ಹಾಗೂ ಹೊರಮಂಟಪ ಅಥವಾ ಪ್ರಾರ್ಥನಾ ಮಂಟಪ. ಗರ್ಭಗೃಹದಲ್ಲಿರುವ ಸುಮಾರು ೩ ಅಡಿ ಎತ್ತರದ ಪಾರ್ಶ್ವನಾಥ ಸ್ವಾಮಿಯ ಮೂರ್ತಿಯು ಖಡ್ಗಾಸನ ಭಂಗಿಯಲ್ಲಿದೆ. ಮೂರ್ತಿಯ ಕೆಳಗಡೆ ಅಲಂಕೃತ ಸಿಂಹಪೀಠವಿದ್ದು ಮೇಲ್ಗಡೆ ಮೂರ್ತಿಯ ಸುತ್ತಲೂ ಪ್ರಭಾಳಿಯಿದೆ. ಗರ್ಭಗೃಹದ ಹೊರಗಡೆ ಪೂಜಾಮಂಟಪವಿದೆ. ಪೂಜಾಮಂಟಪದ ನಂತರ ಶುಕನಾಸಿಯಿದ್ದು ಇದಕ್ಕೆ ತಾಗಿಕೊಂಡು ಗಂಧಕುಟಿಯಿದೆ. ಗಂಧಕುಟಿಯಲ್ಲಿ ಒಳಗೆ ಶ್ರುತಸ್ಕಂಧಫಲಕ, ಅಷ್ಟಮನಂದೀಶ್ವರ, ಬಾಹುಬಲಿ, ಸರ್ವಾಹ್ಣ ಯಕ್ಷ, ಬ್ರಹ್ಮಯಕ್ಷ ಮತ್ತು ಕೇವಲಿಗಳ ಕೆಲವು ಶಿಲಾ ವಿಗ್ರಹಗಳು, ಮಂಗಳಕರ ಹರಿವಾಣಗಳು ಇವೆ ಇದರ ಮುಂದುಗಡೆ ಪ್ರಥಮ ತೀರ್ಥಂಕರ ವೃಷಭದೇವರ ಸಹಿತವಾದ ೨೪ ತೀರ್ಥಂಕರ ಮೂರ್ತಿಗಳಿವೆ. ಅಲ್ಲದೆ ಇಲ್ಲಿ ಸರಳವಾಗಿ ಅಲಂಕೃತಗೊಂಡ ೬ ಕಂಬಗಳು ಕಂಡುಬರುತ್ತವೆ. ಇವುಗಳ ಪೈಕಿ ೨ ಅರೆಕಂಬಗಳಾಗಿವೆ. ಮೇಲ್ಛಾವಣಿಯಲ್ಲಿ ಕಮಲದಾಕಾರದ ಕೆತ್ತನೆಯನ್ನೊಳಗೊಂಡ ಭುವನೇಶ್ವರಿಯಿದೆ. ಕೆಳಗೆ ನೆಲದ ಮೇಲೆ ಶುಕನಾಸಿಯಿಂದ ಫಂಟಾಮಂಟಪಕ್ಕೆ ದಾಟಲು ತೋರಣಗಳಿಂದ ಅಲಂಕೃತಗೊಂಡ ಕಲ್ಲಿನ ಬಾಗಿಲುವಾಡವಿದೆ. ಇದರ ಮೇಲ್ಗಡೆ ತೀರ್ಥಂಕರರ ಒಂದು ಉಬ್ಬುಶಿಲ್ಪವಿದೆ. ಈ ಘಂಟಾಮಂಟಪದಲ್ಲಿ ನಾಲ್ಕು ಕಂಬಗಳನ್ನು ಕಾಣಬಹುದು.[೧]

ವಿಧಿ-ವಿಧಾನ[ಬದಲಾಯಿಸಿ]

ಇಲ್ಲಿ ದಿನವೂ ಮಧ್ಯಾಹ್ನ ಮತ್ತು ಸಂಜೆ ಹೇಗೆ ಎರಡು ಹೊತ್ತು ಪೂಜೆ ನಡೆಯುತ್ತದೆ.

ಆವರಣ[ಬದಲಾಯಿಸಿ]

ಬಸದಿಯ ಸುತ್ತಲೂ ವಿಜಯನಗರ ಶೈಲಿಯ ಪಟ್ಟಕಗಳುಳ್ಳ ೪೦ ಕಂಬಗಲಿವೆ. ಬಸದಿಯ ಮುಮಭಾಗದ ಮೇಲ್ಛಾವಣಿಯು ದೇವಕೂಟವನ್ನೂ, ಅದರ ಮೇಲ್ಗಡೆ ಕೀರ್ತಿಮುಖವನ್ನೂ ಹೊಂದಿದೆ. ಹೊರಮಂಟಪದಿಂದ ಚಂದ್ರಸಾಲೆಗೆ ಇಳಿಯುವಲ್ಲಿ ೩ ಮೆಟ್ಟಿಲುಗಳಿದ್ದು, ಅಕ್ಕಪಕ್ಕದಲ್ಲಿ ಯಾಳಿಯ ಮುಖದ ಕೆತ್ತನೆಯನ್ನು ಕಾಣಬಹುದಾಗಿದೆ. ಎದುರಿಗಿರುವ ಚಂದ್ರಶಾಲೆ ಅಥವಾ ಗೋಪುರವು ಬಸದಿಗೆ ಆಗಮಿಸಿದ ಭಕ್ತಾದಿಗಳಿಗೆ ಅಥವಾ ಯಾತ್ರಿಕರಿಗೆ ಕುಳಿತುಕೊಳ್ಳಲು ಅನುಕೂಲಕರವಾಗಿದೆ. ಇಲ್ಲಿ ಕೆಲವು ಚಿಕ್ಕ ಸಾಮಾಜಿಕ ಅಥವಾ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶವಿದೆ. ಬಸದಿಯಲ್ಲಿ ದಿನಕ್ಕೆ ಮಧ್ಯಾಹ್ನ ಮತ್ತು ಸಂಜೆ ಹೀಗೆ ಎರಡು ಸಲ ಪೂಜೆ ನೆರವೇರುತ್ತದೆ. ಬಸದಿಯಲ್ಲಿ ಇಬ್ಬರು ಇಂದ್ರರು ಲಭ್ಯರಿದ್ದಾರೆ. ಒಬ್ಬರು ಶ್ರೀ ಮಿತ್ರ ಸೇನ ಇಂದ್ರರು, ಮತ್ತೊಬ್ಬರು ಅವರ ಮಗ ಶ್ರೀ ಸಂಕಿರಣ ಇಂದ್ರರು. ತೀರ್ಥಂಕರರಿಗೆ ಅಭಿಷೇಕ ಮಾಡುವಾಗ ಸಂಸ್ಕೃತ ಶ್ಲೋಕ ಬಳಸುವರು. ಸಾಮಾನ್ಯವಾಗಿ ತೀರ್ಥಂಕರರಿಗೆ ಅಭಿಷೇಕವನ್ನು ಜಲ, ಸೀಯಾಳ, ಹಾಲು, ಮೊಸರು, ಶ್ರೀಗಂಧದಿAದ ಮಾಡುತ್ತಾರೆ. ವಿಶೇಷ ದಿನಗಳಲ್ಲಿ ತುಪ್ಪ, ಬೆಲ್ಲ, ಬೇಲೆ, ಹೂವು ಮತ್ತು ಕನಕಾಭಿಷೇಕ ಮಾಡಲಾಗುತ್ತದೆ. ಬಸದಿಯ ಗಂಧಕುಟಿಯಲ್ಲಿ ಶ್ರುತ, ಗಣಧರಪಾದ, ಚವ್ವೀಸ ತೀರ್ಥಂಕರರು, ಸರ್ವಾಹ್ಣ ಯಕ್ಷ, ಬಾಹುಬಲಿ, ಸರಸ್ವತಿ, ಪಂಚ ಪರಮೇಷ್ಠಿ, ಬೈಲಂಗಡಿ ಅರಮನೆಯ ಶ್ರೀ ಪದ್ಮಾವತಿ ಅಮ್ಮನವರ ಮತ್ತು ಸ್ಫಟಿಕದಿಂದ ತಯಾರಿಸಿದ ಸಿದ್ಧರ ಮೂರ್ತಿಗಳಿವೆ. ಇಲ್ಲಿ ನೋಂಪಿ ಉದ್ಯಾಪನೆ ಮಾಡಿದ ಮೂರ್ತಿಗಳೂ ಇವೆ. ಪದ್ಮಾವತಿ ಅಮ್ಮನವರ ಕಪ್ಪುಶಿಲೆಯ ಮೂರ್ತಿ ಇದೆ. ಉಲ್ಲೇಖಗಳು

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೧೫೧-೧೫೪.