ಸದಸ್ಯ:Ankitha Patla/ನನ್ನ ಪ್ರಯೋಗಪುಟ1
ಪಾರ್ಶ್ವನಾಥ ಸ್ವಾಮಿ ಬಸದಿ, ರಾಯರಪೇಟೆ, ಶಿರಸಿ
ಸ್ಥಳ
[ಬದಲಾಯಿಸಿ]ಈ ಬಸದಿಯು ಶಿರಸಿ ನಗರದ ರಾಯರಪೇಟೆ(ಕಟ್ಟೆ ಬಜಾರ್)ಎಂಬಲ್ಲಿದೆ. ಪೇಟೆಯ ಕೇಂದ್ರದಿಂದ ಇಲ್ಲಿಗೆ ಅರ್ಧ ಕಿಲೋಮೀಟರ್ ದೂರ. ಪ್ರತೀ ಎರಡು ಮನೆಗಳ ಮಧ್ಯದಲ್ಲಿರುವ ಅಗಲ ಕಿರಿದಾದ ಓಣಿಯೇ ಈ ಬಸದಿಗೆ ಹೋಗುವ ದಾರಿ.
ಇತಿಹಾಸ
[ಬದಲಾಯಿಸಿ]ಒಳಗೆ ದೇವರ ಬಿಂಬವಿಲ್ಲ. ಸುಂದರವಾದ ಆ ಬಿಂಬವನ್ನು ರಕ್ಷಣೆಗೋಸ್ಕರ ಶ್ರೀ ಸ್ವಾದಿ ಮಠದ ಪೂಜ್ಯ ಭಟ್ಟಾರಕರು ಕೊಂಡುಹೋಗಿ ತಮ್ಮ ಕ್ಷೇತ್ರದ ಮುತ್ತಿನ ಕೆರೆಯ ಬಳಿ ಇರುವ ಭಗವಾನ್ ಪಾರ್ಶ್ವನಾಥ ಸ್ವಾಮಿಯ ಮಂದಿರದಲ್ಲಿ ಇರಿಸಿದ್ದಾರೆ. ಅಳಿದು ಉಳಿದಿರುವ ಇದರ ಸಾಮಾಗ್ರಿಗಳ ಅಧ್ಯಯನದ ಸಹಾಯದಿಂದ ಇದು ಸುಮಾರು ಒಂದು ಸಾವಿರ ವರ್ಷಗಳಷ್ಟು ಹಳೆಯದೆಂದು ಹೇಳಬಹುದು.[೧]
ವಿನ್ಯಾಸ
[ಬದಲಾಯಿಸಿ]ಖಡ್ಗಾಸನ ಭಂಗಿಯ ಸುಮಾರು ೩ ಅಡಿ ಎತ್ತರದ ಈ ಶಿಲಾ ಮೂರ್ತಿಯು ಬಹಳ ಸುಂದರವಾಗಿದೆ. ಈ ಬಸದಿಯು ಶಿಲಾಮಯವಾದುದು. ಗೋಡೆ, ಮಾಡುಗಳು, ಶಿಲಾಫಲಕಗಳಿಂದಲೇ ನಿರ್ಮಿಸಲ್ಪಟ್ಟಿದೆ. ಗರ್ಭಗುಡಿಯ ಎದುರಿಗೆ ನವರಂಗ, ತೀರ್ಥಮಂಟಪ, ಪ್ರಾರ್ಥನಾ ಮಂಟಪಗಳಿದ್ದ ಕುರುಹುಗಳಿವೆ. ಎಲ್ಲಕ್ಕಿಂತ ಎದುರಿಗೆ ಬಸದಿ ಪ್ರವೇಶದ ಸೋಪಾನಗಳು ಮತ್ತು ಬದಿಯ ಆನೆ ಕಲ್ಲುಗಳಿವೆ. ಇವುಗಳ ಹೆಚ್ಚಿನ ಭಾಗ ಮಣ್ಣಿನಲ್ಲಿ ಹುದುಗಿ ಹೋಗಿದೆ.
ಆವರಣ
[ಬದಲಾಯಿಸಿ]ಬಸದಿಯ ಸುತ್ತಲೂ ಬಲವಾದ ಪ್ರಾಕಾರಗೋಡ ಇದೆ. ಉತ್ತರಕ್ಕೆ ಮುಖಮಾಡಿರುವ ಈ ಬಸದಿಗೆ ಎದುರಲ್ಲಿ ಮನೆಗಳ ಹಿಂಭಾಗಗಳಿವೆ. ಪೂರ್ವದ ಬದಿಯ ಪ್ರಾಕಾರಗೋಡೆಯ ಹೊರಗಡೆ ದೊಡ್ಡದಾಗಿರುವ ಈಗ ಕೊಳಕು ನೀರು ತುಂಬಿರುವ ಪುಷ್ಕರಣಿ ಇದೆ. ಅದರ ಮೆಟ್ಟಿಲುಗಳ ಮೇಲೆ ಮಣ್ಣನ್ನು ಹಾಕಿ ರಸ್ತೆಯನ್ನು ನರ‍್ಮಿಸಲಾಗಿದೆ. ವಾಹನಗಳೂ, ಮನುಷ್ಯರೂ ಓಡಾಡುತ್ತಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೩೫೪.