ಸದಸ್ಯ:Ananth subray/wikipedain of the month

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ತಿಂಗಳ ವಿಕಿಪೀಡಿಯ ಸಂಪಾದಕ

ಈ ತಿಂಗಳ ವಿಕಿಪೀಡಿಯ ಸಂಪಾದಕರು ಶ್ರೀಕಾಂತ ಮಿಶ್ರಿಕೋಟಿ ಅವರು. ವಿಕಿಪೀಡಿಯದಲ್ಲಿ ‎Shreekant.mishrikoti ಎಂದು ಪರಿಚಿತ. ಇವರು ವಿಕಿಪೀಡಿಯದಲ್ಲಿ ಸಂಪಾದನೆಯನ್ನು ಆರಂಭಿಸಿದ್ದು ಮಾರ್ಚ್ ೨೦೧೬ರಲ್ಲಿ. ಕನ್ನಡ ವಿಕಿಪೀಡಿಯಕಿಂತ ಕನ್ನಡ ವಿಕಿಸೋರ್ಸ್‍ನಲ್ಲಿ ಹೆಚ್ಚು ಕೆಸಲಮಾಡಿದಾರೆ

ಪರಿಚಯ[ಬದಲಾಯಿಸಿ]

ಶ್ರೀಕಾಂತ ಮಿಶ್ರಿಕೋಟಿ ಅವರು ಮೂಲತಃ ಕರ್ನಾಟಕದ ಧಾರವಾಡದವರು.ಪ್ರಸ್ತುತ ಇವರು ಮುಂಬೈನಲ್ಲಿ ನೆಲೆಸಿದ್ದಾರೆ. ಇವರು ಮುಂಬೈಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೇಂದ್ರ ಕಚೇರಿಯಲ್ಲಿ ಚೀಫ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡ , ಕಂಪ್ಯೂಟರ್, ಓದು , ಸಂಗೀತ ಇವರ ಆಸಕ್ತಿಗಳು. ತಾವು ಓದಿದ ಒಳ್ಳೆಯ ಸಂಗತಿಗಳನ್ನು sampada.net ತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ­. Haridasa.in ತಾಣಕ್ಕಾಗಿ 1000ಕ್ಕೂ ಹೆಚ್ಚು ದಾಸರ ಪದಗಳನ್ನು , ಚಿಲುಮ ತಾಣಕ್ಕಾಗಿ 600 ಕ್ಕೂ ಹೆಚ್ಚು ಶಿಶುನಾಳ ಶರೀಫರ ಪದಗಳನ್ನು , ಕೀ ಇನ್ ಮಾಡಿದ್ದಾರೆ. ಕನ್ನಡ ಭಾಷೆಗೆ ಸ್ಪೆಲ್ ಚೆಕರ್ ಗಾಗಿಯೂ . ಲಿನಕ್ಸ್ ಕನ್ನಡ ಆವೃತ್ತಿಗಾಗಿಯೂ ಶ್ರಮಿಸಿದ್ದಾರೆ. ಕನ್ನಡ ವಿಕಿಪೀಡಿಯಕ್ಕಾಗಿ ಅನೇಕ ಲೇಖನಗಳನ್ನು ಇಂಗ್ಲಿಷ್ ನಿಂದ ಅನುವಾದಿಸಿರುವದಲ್ಲದೆ ಸದ್ಯ ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶದ ಸುಮಾರು 15000 ಲೇಖನಗಳನ್ನು ಕನ್ನಡ ವಿಕಿಪೀಡಿಯವನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಡಿಜಿಟಲೀಕರಿಸಿ ಕನ್ನಡ ವಿಕಿಸೋರ್ಸ ತಾಣಕ್ಕೆ ಅಪ್ಲೋಡ್ ಮಾಡುವ ಗುರಿಯನ್ನು ಇಟ್ಟುಕೊಂಡು ಕಾರ್ಯಪ್ರವೃತ್ತರಾಗಿದ್ದ­ಾರೆ.