ವಿಷಯಕ್ಕೆ ಹೋಗು

ಸದಸ್ಯ:Amitha Athresh H.R/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಶತಕಗಳಲ್ಲಿ ಭಾವಗೀತೆ


ಶುದ್ಧ್ಸ್ದ ಭಾವಗೀತೆಯಾಗಿ ನಿಲ್ಲುವ ಶಕ್ತಿಯನ್ನೂ ಅವಕಾಶ ವೈಫಲ್ಯವನ್ನು ಪಡೆದುಕೊಂಡ ಮತ್ತೊಂದು ಸಾಹಿತ್ಯ ರೂಪ ಶತಕ.ಭಕ್ತಿಯ ಸಾಧನೆ ಬೊಧನೆಗಳ ನಿವ೯ಹಣೆಯಲ್ಲಿ ವಚನಗಳು ವಹಿಸಿದ ಪಾತ್ರವನ್ನೇ ಶತಕಗಳು ವಹಿಸಿವೆ.ಅನೇಕ ಪದ್ಯಗಳಲ್ಲಿ ತಮ್ಮ ಮನಸ್ಸಿನ ಭಾವನೆಗಳನ್ನು ಅಭಿವ್ಯಕ್ತಗೊಳಿಸುವುದೋ,ಯಾವುದಾದರ ವಿಷಯಗಳನ್ನು ಬೊಧಿಸುವುದೋ ಶತಕ ಸಾಹಿತ್ಯದ ಸಾಮಾನ್ಯ ಗುಣಗಳು.ಕವಿ ತ್ನ್ನ ಮನಸ್ಸಿನ ವಿವಿಧ ಭಾವನೆಗಳಿಗೆ ಕಾವ್ಯಮಯವಾದ ಅಭಿವ್ಯಕ್ತಿಯನ್ನು ನೀಡಿದಾಗ ಅಲ್ಲಿ ನಾವು ಸಾಹಿತ್ಯವನ್ನು ಕಾಣುತ್ತೇವೆ.ಕನ್ನಡದಲ್ಲಿ ಅತ್ಯಂತ ಉತ್ತಮವಾದ ಕೃತಿಗಳನ್ನು ಶತಕದಲ್ಲಿ ರಚಿಸಿರುವ ಕೀತಿ೯ ಹಂಪೆಯ ಹರಿಹರನಿಗೆ ಸಲ್ಲುತ್ತದೆ.ಅವನ ಶತಕಗಳಿಗೆ ಅತ್ಯಂತ ಮಹತ್ವವಿದೆ.ಅದು ಅವನ ತುದಿನಾಲಿಗೆಯಿಂದ ಬಂದಿದ್ದಲ್ಲ,ಅದು ಅವನ ಅಂತರಾತ್ಮದ ವಾಣಿ. ಈ ರೀತಿಯ ಭಾವನೆಗಳು ಅವನ ಮನಸ್ಸಿನ ನೋವು ,ನಲಿವುಗಳ ಅನುಭವಗಳಿಂದ ಭಾವಗೀತೆಯಾಗಿ ಹೊರಬಂದಿದೆ.

ರಗಳೆಗಳಲ್ಲಿ ಭಾವಗೀತೆ ಕಾವ್ಯವನ್ನು ಸಂಪೂಣ೯ವಾಗಿ ರಗಳೆಯ ಛಂಧಸ್ಸಿನಲ್ಲಿ ಯಶಸ್ವಿಯಾಗಿ ನಿವ೯ಹಿಸಿದ ಕವಿ ಹಂಪೆಯ ಹರಿಹರ.ಅನೇಕ ಶಿವಶರಣರ ಕಥೆಯನ್ನೂ ಎದೆ ತುಂಬಿ ಹಾಡಿದ್ದಾರೆ.ಹರಿಹರನ ಪ್ರಮುಕವಾದ ಶಕ್ತಿ ಭಕ್ತಿ. ಈ ಸಹಜ ಕವಿಯ ಹೃದಯ ನೂರಾರು ಭಕ್ತರ ಜೀವನದ ರೋಮಾಂಚಕರವಾದ ಘಟನೆಗಳನ್ನು ಪುನರನುಭವವನ್ನು ಯಥಾವತ್ತಾಗಿ ಪಡೆದಿದೆ.ಇವನ ಒಂದೊಂದು ರಗಳೆಯೂ ಭಾವದೀಪ್ತವಾದ ಒಂದೊಂದು ಕಥನ ಕವನ ರೂಪವಾಗಿ ಮೂಡಿಬಂದಿದೆ.'ಪುಷ್ಪಾರಗಳೆ' ಅವನ ಜೀವನದ ಭಕ್ತಿ ಸಾಧನೆಯನ್ನು ರಸಪೂಣ೯ವಾಗಿ ಚಿತ್ರಿಸಿದ್ದಾರೆ.

ಜಾನಪದ ಭಾವಗೀತೆಗಳು ತನ್ನ ದೈನಂದಿನ ಸಮಾನ್ಯ ಭೂಮಿಕೆಯಲ್ಲಿ ಸಹಸ್ರಾರು ಹೃದಯಗಳ ಅನುಭವವಾಗಿ,ಸಹಸ್ರಾರು ಕಂಠಗಳ ಮೂಲಕ ಬಿಂದುರೂಪದಲ್ಲಿಯೂ ಚಿಮ್ಮುತ್ತದೆ.ಸತ್ಯದ ಸಾಧನೆ,ಸೌಂದಯ೯ದ ಅನುಭೂತಿ.ಈ ಪದ್ಯಗಳಲ್ಲಿ ಸುಷ್ಟಿಯ ಸತ್ಯ ,ಸೌಂದಯ೯ಗಳನ್ನು ,ಹಾಗೇಯೇ ಸಾಂಸಾರಿಕ ಜೀವನದ ದೈನಂದಿನ ಅನುಭವಗಳು ನುಡಿಯ ಪರಿಪೂಣ೯ತೆಯನ್ನು ಮುಟ್ಟಿಯೋ ಮುಟ್ಟದಯೋ ಇರಬಹುದಾದ ಕಲೆ ಅಸಂಖ್ಯಾತವಾದ ರೂಪದಲ್ಲಿ ಸಾಮಾನ್ಯ ಜನರ ನಡುವೆ ಕಾವ್ಯರೂಪವನ್ನು ತಳೆದು ಉಳಿದಿದೆ.ಇದನ್ನೇ ನಾವು ಜಾನಪದ ಸಾಹಿತ್ಯ ಎಂದು ಕರೆಯುತ್ತೇವೆ.

ಹೊಸಗನ್ನಡದ ಭಾವಗೀತೆಗಳು ಶತಮಾನಗಳ ಹಳೆಯತನವನ್ನು ಕಿತ್ತೂಗೆಯಲು ಅಂತರಂಗದಲ್ಲಿಯೂ ಮಹಾಕ್ರಾಂತಿ ನಡೆಯುತ್ತಿತ್ತು. ಕಾವ್ಯ -ಭಾವಗೀತೆಗಳ ಕನ್ನಡ ಸಾಹಿತ್ಯ ಲೋಕಕ್ಕೆ ಕಾಣಿಕೆಯಾಗಿ ಬಿ.ಎಂ ಶ್ರೀಕಂಠಯ್ಯನವರು.ಅವರ "ಇಂಗೀಷ್ ಗೀತಗಳು" ಆಧುನಿಕ ಕನ್ನಡ ಕಾವ್ಯಪ್ರಪಂಚಕ್ಕೆ ಹೊಸದೊಂದು ಹೆದ್ದಾರಿಯನ್ನು ತೆರೆದು ಚಿರಂಜೀವಿಯಾಗವ ಸತ್ವವನ್ನು ತೆಳೆದಿರುವ ಕೃತಿ. ಅವರು ಕನ್ನಡ ಕಾವ್ಯದ ಚರಿತ್ರೆಯಲ್ಲಿ ಚಿರಸ್ಮರಣಿಯವಾಗಿ.ಹ.ನಾರಾಯಣರಾಯರ ನಂತರ ನಾವು ಸ್ಮ್ಮರಣಿರವಾದ ಹೆಸರು ದಿವಂಗತ ಪಂಜೆ ಮಂಗೇಶರಾಯರು . ಪಂಜೆಯವರ ಕಾವ್ಯಶಕ್ತಿ ಅವರ ವಾತ್ಸಲ್ಯಶಕ್ತಿ. ಮಕ್ಕಳ ಮೇಲಣ ಪ್ರೇಮದಿಂದ ,ಅವರ ವಿದ್ಯಾಭ್ಯಾಸದ ಕಡೆಗೆ ಅವರ ಕೆಲವು ಕವನಗಳನ್ನು ಇಂಗೀಷ್ ನಿಂದ ಅನುವಾದ ಮಾಡಿದರು,ಮತ್ತೆ ಕೆಲವನ್ನು ಹಳೆಯ ಕವನಗಳಿಂದಲ್ಲೂ ಸಮಕಾಲೀನ ಕವನಗಳಿಂದಲ್ಲೂ ಆರಿಸಿದರು.೧೯೧೨ರಲ್ಲಿ ಅವರು ಪ್ರಕಟಿಸಿದ"ಕನ್ನಡ ಮೊದಲನೆಯ ಪದ್ಯ ಪುಸ್ತಕ"ದಲ್ಲಿ ವಿವರಿಸಿದ್ದಾರೆ. ಕಾವ್ಯದಲ್ಲಿ ಹಳೆಗನ್ನಡಕ್ಕಿಂತ ನಡುಗನ್ನಡದಲ್ಲಿ ಹೆಚ್ಚಾಗಿ ಪ್ರಯೋಗಗಳನ್ನು ಕವಿಗಳಾದ ಮ.ರಾ.ಹ ನಾರಾಯಣರಾವ್ ,ಬಿ.ಆರ್.ಎಲ್, ಇವರು 'ಕನ್ನಡ ಕವಿತೆಯ ಭವಿತವ್ಯ' ಪುಸ್ತಕದಲ್ಲಿ ಕಾಣಬಹುದು.'ಇಂಗೀಷ್ ಗೀತೆಗಳ ' ಪ್ರಸ್ತಾವನೆಯಲ್ಲಿ ಶ್ರೀ ತೀ.ನಂ.ಶ್ರೀಯವರು ಹೆಚ್ಚಿನ ವಿಚಾರಣೆಯಿಂದ ಅದು ಹೊಸಗನ್ನಡ ಕಾವ್ಯದಲ್ಲಿ ಅನೇಕ ಕವಿತೆಗಳನ್ನು ತಮ್ಮ ಭಾವನೆಗಳ ಮುಖೇನ ತಮ್ಮ ಪದ್ಯದಲ್ಲಿ ಚಿತ್ರಿಸಿದ್ದಾರೆ. ಆದಿಪ್ರಾಸ ಪರಿತ್ಯಾಗದ "ಧೀರ ನಿಧಾ೯ರದ" ದ ಕೀತಿ೯ಪಂಜೆಯವರ ಶಿಷ್ಯರಾದ ರಾಷ್ಟ್ರಕವಿ ಗೊವಿಂದ ಪೈರವರಿಗೆ ಸೇರುತ್ತದೆ.ಶ್ರೀ ಗೋವಿಂದ ಪೈರವರು ಪ್ರಾಸತ್ಯಾಗ ಕವಿತೆಗೆ ಸಂತಸ ಸೊಬಗನ್ನು ನೀಡುತ್ತದೆ.ಈ ಬಗೆಯ ಅವರ ಕಾಯ೯ನಿಧಾ೯ರವನ್ನು ಕವಿತೆಗಳಲ್ಲಿ ರಮ್ಯವಾಗಿ ಚಿತ್ರಿಸಿದ್ದಾರೆ.ಹೀಗೆ ವಿವಿಧ ರೀತಿಯ ಪ್ರೆಮಕವನಗಳೇ, ಹೆಚ್ಚಾಗುತ್ತಿದೆ .ಪಾಶ್ಚಾತ್ಯರು ಶೃಂಗಾರವನ್ನು ಗಂಭೀರವಾಗಿ ,ನವುರಾಗಿ ಹೇಗೆ ತಮ್ಮ ಕವನಗಳಲ್ಲಿ ತಂದಿದ್ದಾರೆ ಎಂಬುದನ್ನು ಕನ್ನಡದಕವಿತೆಗಳಲ್ಲಿ ಕಾಣಬಹುದು.ಶ್ರಿ ಗಳ ಕವನಗಳು ಇದೆ ರೀತಿ ಅನುವಾದ ಮಾಡಿರುವ ಅತ್ಯಂತ ಸುಂದರ ಕವಿತೆಗಳನ್ನು ನೋಡಿ ಮನಸ್ಸಿನಲ್ಲಿ ಭಾವನೆಗಳು ಮೂಡುತ್ತದೆ.ಹೀಗೆ ಇವರ ಸಮಕಾಲಿನ ಕವಿಗಳು ಅವರಿಂದ ಸ್ಫೂತಿ೯ಪಡೆದರು.ಅವರ ಛಂಧೋ ಮಾಗ೯ವನ್ನು ಅನುಸರಿಸಿದರು.ವೈಯಕ್ತಿಕ ಭಾವಭಾವನೆಗಳಿಗೆ ಉಕ್ತಿ ನೀಡಿದರು. ನವೋದಯ ಯುಗದಲ್ಲಿ ಶ್ರೀ ಅರವಿಂದರು ಕವಿ ವಿಮಶ೯ಕರು ನಡುವೆ ಕಾಲದ ಅಂತರದ ಅಭಾವದಿಂದ ,ಕಾವ್ಯದ ರಚನೆಯಲ್ಲಿ ತೊಡಕು ಉಂಟಾಗುವುದು ಎಂದು ಹೇಳಿದ್ದಾರೆ.ಆಧುನಿಕ ಭಾವಗೀತಾ ಸಾಹಿತ್ಯ ಸಂಖ್ಯೆ ಗುಣಗಳಲ್ಲಿ ಬೆಳೆದ ಪ್ರಮಾಣದಲ್ಲಿ ಅವುಗಳನ್ನು ಕುರಿತಾದ ಅನೇಕ ವಿಮಶ೯ಗಳು ಕವಿತೆ ರಚನೆಯಲ್ಲಿ ಸಹಾಯಮಾಡುತ್ತವೆ. ಪ್ರಕೃತಿಯ ವಿವಿಧ ಸುಂದರ ದೃಶ್ಯಗಳು ಕವಿಯ ಕಣ್ಣಿಗೆ ,ಕುರುಡನ ಕಣ್ಣಿಗೆ ಅಂತೇ ಅಲ್ಲ. ದೂರದಲ್ಲಿ ಏಕಾಂತವಾಗಿ ಕೋಣೆಯಲ್ಲಿ ಕುಳಿತಾಗಲೋ,ನಗರದ ಗಲಿಬಿಲಿಯಲ್ಲಿ ನಿಂತಾಗಲೋ,ಮನವು ತೀರ ಬಳಲಿದಾಗಲೋ ಈ ದೃಶ್ಯ ಗಳು ಧಾನ ಮಾಡಿದ ಮಧುರಾನುಭವಗಳು ಮತ್ತೆ ತೇಲಿಬರುತ್ತಿದ್ದದೆ,ತನ್ನ ನೆತ್ತರದಲ್ಲಿ ಈ ಅನುಭವಗಳು ಹರುಯುವುದನ್ನು,ಹೃದಯದಲ್ಲಿ ಮನೆಮಾಡಿರುವುದನ್ನು ,ತನ್ನ ಶುದ್ಧ ಚೇತನದ ಅಳಕ್ಕೆ ಅವು ಅವತರಿಸುವುದನ್ನು ,ಅಪೂವ೯ವಾದ ಶಾಮ್ತಿಯನ್ನು ಅವು ತಂದಿದವುಗಳನ್ನು ಕವಿ ತನ್ನ ಮನಸ್ಸಿನ ಅಳದಿಂದ ಅನುಭವಿಸುವುದೆ ಭಾವಗೀತೆಯಾಗಿ ಹೊರ ಹೊಮ್ಮಿದೆ. ಈ ಜಗತ್ತಿನ ಬಳಲಿಕೆಯ ಭಾರವನ್ನು ಕಳೆದು ಹಗುರಮಾಡುತ್ತದೆ.ನಮ್ಮ ಬಾಳಿಗೆ ದಿವ್ಯಶಾಂತಿಯನ್ನು ನೀಡಿ ದೇಹದ ಹಗುರತೆಯನ್ನು ತಾಳಿ ನಾವು ಉಸಿರನ್ನು ನೆಮ್ಮದಿಸುವಂತೆ ಮಾಡುತ್ತದೆ.ನಮ್ಮ ದೇಹಕ್ಕೆ ರಕ್ತಚಲನೆ ಕೂಡ ವಿರಮಿಸಿದಂತೆಯಾಗುತ್ತದೆ.ಅನಂದದ ಸಮರಸತೆಯ ಶಕ್ತಿಯಿಂದ ಶಾಂತಿಯನ್ನು ಪಡೆದ ದೃಷ್ಟಿಯಿಂದ ವಸ್ತುಗಳ ಆತ್ಮವನ್ನೇ ಒಳಹೊಕ್ಕು ನೋಡಬಲ್ಲವರಾಗುತ್ತಾರೆ.ಮನೋಹರವಾದ ಪ್ರಕೃತಿಯ ವಿವಿಧ ಅಂಶಗಳು , ಬಿಳಿ ಮಳಲ ರಾಶಿ , ಕಾಡಿನ ಹಸಿರು , ಎಲೆ, ಬೆಟ್ಟಗಳು,ಗಿರಿ,ಶಿಖರಗಳು ಮತ್ತು ಸಾಗರ,ಈ ಮುಂತಾದವು ಕವಿಗಳ ಸೃಷ್ಟಿಯಲ್ಲಿ ಕವನಗಳಾಗಿ ಭಾವದಿಂದ ಭಾವಗೀತೆಯಾಗಿದೆ."ಪ್ರಕೃತಿಯಾರಾಧನೆಯ ಪರಮನಾರಾಧನೆ".ಪ್ರಕೃತಿಯನ್ನು ಕುರಿತಾಗಿ ಇಂತಹ "ಆನಂದ ಹುಚ್ಚು" ಮೂಡಿ ,ಬೆಳೆದು ,ಜೀವನವನ್ನೆಲ್ಲಾ ಆಕ್ರಮಿಸಿಕೊಂಡಿರುವ ಮತ್ತೊಂಬ ಕವಿ ಕನ್ನಡ ಸಾಹಿತ್ಯ ದಲ್ಲಿ ಎದುರುಗೊಂಡ ಕವಿ "ಪ್ರಕೃತಿ ಕವಿ " ಕುವೆಂಪುರವರು.ಪ್ರಕೃತಿಯ ಮಡಿನಲ್ಲಿ ಬೆಳೆದರು ,ಅದನ್ನು ಕಾಣುತ್ತಲ್ಲೆ ಹುಟ್ಟಿದರು. ಅವರ ವಿವಿಧ ಭಾವನೆಗಳ ರಾಗಗಳನ್ನು ಕೆಳಬಹುದು.ಪ್ರಕೃತಿಯನ್ನು ಆರಾಧಿಸಿದರ ಫಲವಾಗಿ ಪ್ರಕೃತಿ ಒಲಿದು ಏಕಾಗ್ರತೆಯಿಂದ ಆರಾಧಿಸಿದ ಈ ಚೇತನಕ್ಕೆ ಪ್ರಕೃತಿಯೂ ತನ್ನ ಅಂತರಂಗದ ಶ್ರೀಮಂತಭಂಡಾರವನ್ನು ಬಹಿರಂಗ ಸೌಂದಯ೯ವನ್ನು ಅಂತು ನಿವ೯ಂಚನೆಯಿಂದ ಸೂರೆಗೊಟ್ಟಿದೆ.ಆದುದರಿಂದಲೆ ಕವಿ ಆ ಅನುಭವಗಳ ಭಾರದಿಂದ ಬಳುಕುತ್ತಿರುವ ಅನೇಕ ಶ್ರೇಷ್ಟ ಕವನಗಳನ್ನು ಕನ್ನಡಕ್ಕೆ ಕಾಣಿಕೆಯಾಗಿ ನೀಡಿದ್ದಾರೆ. ಪ್ರೇಮಗೀತೆಗಳಲ್ಲಿ ಭಾವಗೀತೆಗಳನ್ನು ಕಾಣಬಹುದು,ಶ್ರೀ ತೀ.ನಂ.ಶ್ರೀರವರ "ಒಲುಮೆ" ನವೋದಯದ ಕನ್ನಡ ಸಾಹಿತ್ಯದಲ್ಲಿ ಪ್ರೇಮ ಕವನಗಳ ಪ್ರಥಮ ಸಂಕಲನ .ನಂತರ ಪ್ರೇಮಗೀತೆಗಳ ಇತಿಹಾಸದಲ್ಲಿ ಶ್ರೀ ಕೆ.ಎಸ್.ನರಸಿಂಹಸ್ವಾಮಿಯವರಿಗೆ ವಿಶಿಷ್ಟವಾದ ಒಂದು ಸ್ಥಾನವಿದೆ.ಅವರಿಗೆ ಕನ್ನಡ ನಾಡಿನಲ್ಲಿ ತುಂಬ ಪ್ರಖ್ಯಾತಿಯನ್ನು ತಂದುಕೊಟ್ಟ "ಮೈಸೂರು ಮಲ್ಲಿಗೆ"ಅವರ ಕಾವ್ಯ ಶಕ್ತಿಯನ್ನು ಪ್ರತಿಪಾದಿಸುತ್ತದೆ. ಹೀಗೆ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ತನ್ನದೆಯಾದ ಶೈಲಿಯಲ್ಲಿ ಮತ್ತು ವಿಶಿಷ್ಟತೆಯಿಂದ ಜನರ ಮನಸ್ಸಿನ ಮೇಲೆ ಅಚ್ಚು ಮಾದಿದೆ ಭಾವಗೀತೆಗಳು .ಇದೊಂದು ಸಾಹಿತ್ಯ ಪ್ರಕಾರವಾಗಿ ಸದಾ ಜನರ ಮನಸ್ಸಿನಲ್ಲಿ ನೆಲೆಸಿರುತ್ತದೆ.