ಸದಸ್ಯ:Amagond.biradar/ಹಿರೋಹಿಟೊ
ಚಕ್ರವರ್ತಿ ಶೋವಾ(昭和天皇 Shōwa-tennō, ಏಪ್ರಿಲ್೨೯ ೧೯೦೧ – ಜನವರಿ ೭, ೧೯೮೯) ಅವರು ಸಾಂಪ್ರದಾಯಿಕ ಅನುಕ್ರಮದ ಪ್ರಕಾರ ಜಪಾನಿನ ೧೨೪ನೇಯ ಚಕ್ರವರ್ತಿಯಾಗಿದ್ದು, ಅವರು ಡಿಸೆಂಬರ್ ೨೫ ೧೯೨೬ರಿಂದ ತಮ್ಮ ಜೀವಿತಾವಧಿಯ ಕೊನೆಯಗಾಲ ಜನೆವರಿ ೭ ೧೯೮೯ರ ವರೆಗೆ ಆಡಳಿತ ನಡೆಸಿದರು. ಶೋವಾ ಅವರ ಮರಣಾನಂತರ ಅವರ ಜೇಷ್ಠ ಸುಪುತ್ರರಾದ ಅಕಿಹಿಟೋ ಅವರ ಉತ್ತರಾಧಿಕಾರಿಯಾದರು. ಜಪಾನಿನ ಹೊರಗೆ ಅವರನ್ನು ಅವರ ವೈಯಕ್ತಿಕ ಹೆಸರು ಹಿರೋಹಿಟೊವಿನಿಂದ ಕರೆಯಲಾಗುತ್ತಿದ್ದರೂ ಜಪಾನಿನಲ್ಲಿ ಅವರಿಗೆ ಈಗ ಮುಖ್ಯವಾಗಿ ಶೋವಾ (裕仁) ಎಂಬ ಅವರ ಮರಣೋತ್ತರ ಹೆಸರಿನಿಂದ, ಸಂಭೋದಿಸಲಾಗುತ್ತದೆ. ಶೋವಾ ಪದವು ಅವರ ಆಳ್ವಿಕೆಯ ಕಾಲವನ್ನು ಕೂಡ ಸೂಚಿಸುತ್ತದೆ. ಹಿರೋಹಿಟೊ ಪದವು ದಯಾನಿಧಿ ಎಂಬ ಅರ್ಥವನ್ನು ಸೂಚಿಸುತ್ತದೆ.
ಅವರ ಆಳ್ವಿಕೆಯ ಪ್ರಾರಂಭದಲ್ಲಿಯೇ ಜಪಾನವೂ ಒಂದು ಬಲಿಷ್ಠ ರಾಷ್ಟ್ರವಾಗಿತ್ತು - ಅರ್ಥಿಕವಾಗಿ ಜಗತ್ತಿನ ಒಂಬತ್ತನೆಯ ಅತಿ ದೊಡ್ಡ, ನೌಕಾಪಡೆಯ ಪ್ರಕಾರ ವಿಶ್ವದ ಮೂರನೇಯ ದೊಡ್ಡ ಹಾಗೂ ಲೀಗ್ ಆಫ್ ನೇಶನ್ಸ್ ನ ನಾಲ್ಕನೇಯ ಶಾಶ್ವತ ಸದಸ್ಯ ದೇಶವಾಗಿತ್ತು. ಜಪಾನೀಯ ರಾಜ ಸಂವಿಧಾನದ ಪ್ರಕಾರ ಅವರು ಜಪಾನಿನ ರಾಜತಾಂತ್ರಿಕ ವಿಸ್ತರಣೆ, ಜಪಾನಿನ ಮಿಲಿಟರೀಕರಣ ಹಾಗೂ ದ್ವಿತೀಯ ವಿಶ್ವಯುದ್ಧದಲ್ಲಿ ಭಾಗಿಯಾಗುವುದರ ಮುಖ್ಯಸ್ಥರಾಗಿದ್ದರು. ಜಪಾನಿನ ಯುದ್ಧ ಶರಣಾಗತಿಯ ನಂತರ ಅನೇಕ ಇತರ ಪ್ರಮುಖ ಸರಕಾರಿ ಅಧಿಕಾರಿಗಳನ್ನು ಯುದ್ಧ ಅಪರಾಧಗಳ ವಿಚಾರಣೆ ನಡೆಸಿದಂತೆ ಅವರನ್ನು ವಿಚಾರಿಸಲಿಲ್ಲ ಮತ್ತು ಇತಿಹಾಸಕಾರರ ಪ್ರಕಾರ ವಿಶ್ವಯುದ್ಧದಲ್ಲಿ ನಿರ್ಧಾರಗಳ ಪಾಲ್ಗೊಳ್ಳುವಿಕೆಯಲ್ಲಿ ಅವರ ನಿಲುವು ವಿವಾದಾತ್ಮಕ ಉಳಿದಿದೆ. ಯುದ್ಧಾನಂತರದ ಅವಧಿಯಲ್ಲಿ ಅವರು ಯುದ್ಧೋತ್ತರ ಸಂವಿಧಾನ ಮತ್ತು ಜಪಾನಿನ ಚೇತರಿಕೆಯ ಹರಿಕಾರರಾಗಿ ಕಾಣುತ್ತಾರೆ. ಅವರ ಆಡಳಿತದ ಅಂತ್ಯಯಲ್ಲಿ ಜಪಾನ ವಿಶ್ವದ ದ್ವಿತೀಯ ಬಲಿಷ್ಠ ರಾಷ್ಟ್ರವಾಗಿ ಹೊಮ್ಮಿತು.
ಆರಂಭಿಕ ಜೀವನ
[ಬದಲಾಯಿಸಿ]ತನ್ನ ಅಜ್ಜ ಚಕ್ರವರ್ತಿ ಮೈಜಿಯವರ ಅಧಿಕಾರವಧಿಯಲ್ಲಿ ಟೋಕಿಯೋದ ಔಯಮ ಅರಮನೆಯಲ್ಲಿ, ಯುವರಾಜ ಯೊಶಿಹಿಟೊ(ಭವಿಷ್ಯದ ರಾಜ ತೈಶೋ) ಮತ್ತು ಯುವರಾಣಿ ಸಡಾಕೊ ದಂಪತಿಯ ಪ್ರಥಮ ಪುತ್ರನಾಗಿ ಜನಿಸಿದರು. ಅವರ ಬಾಲ್ಯದ ಬಿರುದು ಯುವರಾಜ ಮಿಚಿ ಎಂದಿತ್ತು. ಜನನದ ೭೦ನೇಯ ದಿನದ ತರುವಾಯ ಅವರನ್ನು ಮಾಜಿ ಅಡ್ಮಿರಲ್ ಕವಾಮುರಾ ಸುಮಿಯೋಶಿಯವರ ಸುಪರ್ದಿಗೆ ಒಪ್ಪಿಸಲಾಯಿತು. ಅವರು ಮಗುವನ್ನು ತಮ್ಮ ಸ್ವಂತ ಮೊಮ್ಮಗನಂತೆ ನೋಡಿಕೊಂಡರು. ಹಿರೋಹಿಟೊ ಅವರ ಮೂರನೇಯ ವಯಸ್ಸಿನಲ್ಲಿ ಕವಾಮುರಾರವರು ತೀರಿಕೊಂಡ ಕಾರಣ ತಮ್ಮ ಔಯಮ ಅರಮನೆಗೆ ಮರಳಿದರು[೩]. ೧೯೦೮ರಲ್ಲಿ ಅವರು ಗಕುಶುಯಿನ್ನಲ್ಲಿ ಪ್ರಾಥಮಿಕ ಅಧ್ಯಯನ ಪ್ರಾರಂಭಿಸಿದರು.
Notes
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]Citations
[ಬದಲಾಯಿಸಿ]