ವಿಷಯಕ್ಕೆ ಹೋಗು

ಸದಸ್ಯ:Akshithakaveramma

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಲೆಕ್ಟ್ರಾನಿಕ್ ಕಾಮರ್ಸ್

[ಬದಲಾಯಿಸಿ]

ಎಲೆಕ್ಟ್ರಾನಿಕ್ ಕಾಮರ್ಸ್ ಸಾಮಾನ್ಯವಾಗಿ (ಇ-ಶಾಪಿಂಗ್)ಇ-ಕಾಮರ್ಸ್ ಅಥವಾ eCommerce ಎಂದೇ ಪರಿಚಿತ. ಇದರಲ್ಲಿ ಯಾವುದೇ ವಸ್ತು ಗಳನ್ನು ಅಥವಾ ಸೇವೆಗಳನ್ನು ಎಲೆಕ್ಟ್ರಾನಿಕ್ ವ್ಯವಸ್ಥೆಗಳಾದ ಅಂತರಜಾಲ ಹಾಗು ಇತರ ಕಂಪ್ಯೂಟರ್ ಜಾಲಗಳ ಮೂಲಕ ಕೊಂಡುಕೊಳ್ಳುವುದು ಅಥವಾ ಮಾರಾಟಮಾಡುವುದು. ಇಲೆಕ್ಟ್ರಾನಿಕವಾಗಿ ನಡೆಸಲಾಗುತ್ತಿರುವ ವ್ಯಾಪಾರದ ಪ್ರಮಾಣವು ವ್ಯಾಪಕವಾದ ಅಂತರಜಾಲದ ಬಳಕೆಯಿಂದ ಅಸಾಧಾರಣ ರೀತಿಯಲ್ಲಿ ಅಭಿವೃದ್ಧಿಯಾಗಿದೆ. ಈ ವಿಧಾನದಲ್ಲಿ ನಡೆಸಲಾಗುತ್ತಿರುವ ವ್ಯಾಪಾರದಲ್ಲಿ ಇಲೆಕ್ಟ್ರಾನಿಕ್ ವಿಧಾನದಲ್ಲಿ ಹಣದ ವರ್ಗಾವಣೆ, ಸಪ್ಲೈ ಚೈನ್ ಮ್ಯಾನೇಜ್ಮೆಂಟ್, ಅಂತರಜಾಲದಲ್ಲಿ ಮಾರಾಟ ವ್ಯವಸ್ಥೆ, ಆನ್ಲೈನ್ ನಲ್ಲಿ ವ್ಯವಹಾರ ಪ್ರಕ್ರಿಯೆ, ಇಲೆಕ್ಟ್ರಾನಿಕ್ ಡಾಟಾ ವಿನಿಮಯ(EDI), ಸರಕು-ಸಂಗ್ರಹ ನಿರ್ವಹಣಾ ವ್ಯವಸ್ಥೆಗಳು ಹಾಗು ಸ್ವಯಂಚಾಲಿತ ಡಾಟಾ ಸಂಗ್ರಹಣಾ ವ್ಯವಸ್ಥೆಗಳು ಉತ್ತೇಜನ ಪಡೆಯುತ್ತಿರುವ ಜೊತೆಗೆ ಹೊಸ ಆವಿಷ್ಕಾರಗಳನ್ನು ಆಕರ್ಷಿಸುತ್ತಿದೆ. ಆಧುನಿಕ ಇಲೆಕ್ಟ್ರಾನಿಕ್ ವ್ಯವಹಾರವು ವಿಶಿಷ್ಟವಾಗಿ ವರ್ಲ್ಡ್ ವೈಡ್ ವೆಬ್ ನ್ನು ಕಡೇಪಕ್ಷ ವರ್ಗಾವಣೆಯ ಚಕ್ರದ ಕೆಲವು ಹಂತದಲ್ಲಿ ಬಳಸುತ್ತದೆ, ಆದರೂ ಇದು ಒಂದು ವ್ಯಾಪಕ ಶ್ರೇಣಿಯ ತಂತ್ರಜ್ಞಾನಗಳಾದ ಇ-ಮೇಲ್ ನ್ನು ಸಹ ಒಳಗೊಂಡಿರುತ್ತದೆ.. ಒಂದು ದೊಡ್ಡ ಪ್ರಮಾಣದ ಇಲೆಕ್ಟ್ರಾನಿಕ್ ವ್ಯವಹಾರವನ್ನು, ಪರಿಣಾಮಸಿದ್ಧ ವಸ್ತುಗಳಿಗೆ ಉದಾಹರಣೆಗೆ ಅಂತರಜಾಲದಲ್ಲಿ ಅಧಿಕ ಮೌಲ್ಯದ ವಸ್ತುಗಳನ್ನು ತಲುಪಲು ಸಂಪೂರ್ಣವಾಗಿ ಇಲೆಕ್ಟ್ರಾನಿಕವಾಗಿ ನಡೆಸಲಾಗುತ್ತದೆ. ಆದರೆ ಹಲವು ಇಲೆಕ್ಟ್ರಾನಿಕ್ ವ್ಯವಹಾರವು, ಯಾವುದೋ ರೀತಿಯಲ್ಲಿ ಭೌತ ವಸ್ತುಗಳ ಸಾಗಣೆಯನ್ನು ಒಳಗೊಂಡಿರುತ್ತದೆ. ಆನ್ಲೈನ್ ನ ಕಿರುಕೋಳ ಮಾರಾಟಗಾರರನ್ನು ಕೆಲವೊಂದು ಬಾರಿ ಇ-ಟೈಲರ್ ಎಂದು ಕರೆಯಲಾಗುತ್ತದೆ, ಹಾಗು ಆನ್ಲೈನ್ ಕಿರುಕೋಳ ಮಾರಾಟವನ್ನು ಇ-ಟೈಲ್ ಎಂದು ಕರೆಯಲಾಗುತ್ತದೆ. ಹೆಚ್ಚುಕಡಿಮೆ ಎಲ್ಲ ದೊಡ್ಡ ಕಿರುಕೋಳ ಮಾರಾಟಗಾರರು ವರ್ಲ್ಡ್ ವೈಡ್ ವೆಬ್ ನ ಇಲೆಕ್ಟ್ರಾನಿಕ್ ವ್ಯಾಪಾರದಲ್ಲಿ ಉಪಸ್ಥಿತರಿರುತ್ತಾರೆ. ವ್ಯಾಪಾರಗಳ ನಡುವೆ ನಡೆಸಲಾಗುವ ಇಲೆಕ್ಟ್ರಾನಿಕ್ ವ್ಯವಹಾರವನ್ನು ವ್ಯಾಪಾರದಿಂದ ವ್ಯಾಪಾರ ಅಥವಾ B2B ಎಂದು ಕರೆಯಲಾಗುತ್ತದೆ. ಆಸಕ್ತಿಯುಳ್ಳ ಎಲ್ಲ ವ್ಯಕ್ತಿಗಳಿಗೆ B2B ಮುಕ್ತವಾಗಿದೆ (ಉದಾಹರಣೆಗೆ ವಸ್ತು ವಿನಿಮಯ) ಅಥವಾ ಸೀಮಿತ ಹಾಗು ನಿರ್ದಿಷ್ಟ, ಅರ್ಹತೆ ಹೊಂದದ ಪಾಲುದಾರರನ್ನು ಹೊಂದಿದೆ (ಖಾಸಗಿ ಇಲೆಕ್ಟ್ರಾನಿಕ್ ಮಾರುಕಟ್ಟೆ). ಇಲೆಕ್ಟ್ರಾನಿಕ್ ವ್ಯವಹಾರವು ವ್ಯಾಪಾರಗಳು ಹಾಗು ಗ್ರಾಹಕರುಗಳ ನಡುವೆ ನಡೆಯುತ್ತದೆ. ಇನ್ನೊಂದು ಭಾಗದಲ್ಲಿ, ಇದನ್ನು ವ್ಯವಹಾರದಿಂದ ಗ್ರಾಹಕರವರೆಗೆ ಅಥವಾ B2C ಎಂದು ಸೂಚಿಸಲಾಗುತ್ತದೆ. ಈ ರೀತಿಯಾದ ಇಲೆಕ್ಟ್ರಾನಿಕ್ ವ್ಯವಹಾರವನ್ನುನಂತಹ ಸಂಸ್ಥೆಗಳು ನಡೆಸುತ್ತವೆ. ಆನ್ಲೈನ್ ಶಾಪಿಂಗ್ ಎಂಬುದು ಇಲೆಕ್ಟ್ರಾನಿಕ್ ವ್ಯವಹಾರದ ಒಂದು ರೂಪ. ಇದರಲ್ಲಿ ಕೊಂಡುಕೊಳ್ಳುವವನು ಆನ್ಲೈನ್ ನಲ್ಲಿ ನೇರವಾಗಿ ಕಂಪ್ಯೂಟರ್ ನಲ್ಲಿ ಅಂತರಜಾಲದ ಮೂಲಕ ಮಾರಾಟಗಾರನ ಸಂಪರ್ಕದಲ್ಲಿರುತ್ತಾನೆ. ಈ ವಿಧಾನ ಯಾವುದೇ ಮಧ್ಯವರ್ತಿಗಳ ಸೇವೆಯನ್ನು ಹೊಂದಿರುವುದಿಲ್ಲ. ಮಾರಾಟ ಹಾಗು ಕೊಂಡುಕೊಳ್ಳುವ ವ್ಯವಹಾರವು ಇಲೆಕ್ಟ್ರಾನಿಕವಾಗಿ ಸಂಪೂರ್ಣಗೊಳ್ಳುತ್ತದೆ; ಅದು ವಾಸ್ತವದಲ್ಲಿ ಮಾತುಕತೆಯೊಂದಿಗೆ ನಡೆಯುತ್ತದೆ, ಉದಾಹರಣೆಗೆ ಹೊಸ ಪುಸ್ತಕಗಳಿಗಾಗಿ ಯಾವುದೇ ಒಬ್ಬ ಮಧ್ಯಸ್ಥಗಾರನ ಉಪಸ್ಥಿತಿಯಿದ್ದರೆ, ಮಾರಾಟ ಹಾಗು ಕೊಂಡುಕೊಳ್ಳುವ ವ್ಯವಹಾರವನ್ನು ಇಲೆಕ್ಟ್ರಾನಿಕ್ ವ್ಯಾಪಾರದ ಎಂದು ಕರೆಯಲಾಗುತ್ತದೆ. ಇಲೆಕ್ಟ್ರಾನಿಕ್ ವ್ಯವಹಾರವನ್ನು ಸಾಧಾರಣವಾಗಿ ಇ-ಬಿಸನೆಸ್ಸ್ ನ ಮಾರಾಟದ ಭಾಗವೆಂದು ಪರಿಗಣಿಸಲಾಗಿದೆ. ಇದು ಹಣದ ವ್ಯವಹಾರವನ್ನು ಸುಲಭಗೊಳಿಸಲು ಹಾಗು ವ್ಯಾಪಾರ ವ್ಯವಹಾರದ ಹಣ ಸಂದಾಯಕ್ಕೆ ಡಾಟಾದ ವಿನಿಮಯವನ್ನು ಒಳಗೊಂಡಿದೆ.