ಸದಸ್ಯ:Akshata r nadig

ವಿಕಿಪೀಡಿಯ ಇಂದ
Jump to navigation Jump to search
ಅಕ್ಷತ ಆರ್ ನಾಡಿಗ್

ಪರಿಚಯ[ಬದಲಾಯಿಸಿ]

ನನ್ನ ಹೆಸರು ಅಕ್ಷತ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ ಓದುತ್ತಿದ್ದೇನೆ.ನಾನು ಬೆಂಗಳೂರಿನಲ್ಲಿ ಜನಿಸಿದ್ದು.ಹಾಡುಗಳನ್ನು ಹಾಡುವುದು,ಪುಸ್ತಕಗಳನ್ನು ಓದುವುದು,ಹಾಡುಗಳನ್ನು ಕೇಳುವುದು ನನ್ನ ಹವ್ಯಾಸಗಳು.ನನಗೆ ಪ‍್ರಾಣಿಗಳು ಎಂದರೆ ಬಹಳ ಇಷ್ಟ.ನನ್ನ ಅಮ್ಮನ ಊರು ಕೊಪ್ಪ ಹಾಗೂ ಅಪ್ಪನ ಊರು ಸಾಗರ.ಹಾಗಾಗಿ ನನಗೆ ರಜದ ದಿನಗಳಲ್ಲಿ ಅಲ್ಲಿಗೆ ಹೋಗುವುದೆಂದರೆ ಬಹಳ ಇಷ್ಟ.ನಾನು ಕಾರ್ಮಲ್ ಶಾಲೆಯಲ್ಲಿ ಒಂದರಿಂದ ಹತ್ತನೆಯ ತರಗತಿಯವರೆಗು ಓದಿದ್ದು.ನಾನು ನನ್ನ ಪದವಿ ಪೂರ್ವ ಶಿಕ್ಷಣವನ್ನು ಜ್ಞಾನೋದಯ ಕಾಲೇಜಿನಲ್ಲಿ ಮುಗಿಸಿದ್ದೇನೆ.ನನಗೆ ನನ್ನ ಜೀವನದಲ್ಲಿ ನನ್ನ ಅಜ್ಜ ಹಾಗು ನನ್ನ ಅಪ್ಪ ಉತ್ತಮ ಮಾರ್ಗದರ್ಶಿಯಾಗಿದ್ದರು.ನನಗೆ ನನ್ನ ಅಜ್ಜ ಎಂದರೆ ಬಹಳ ಇಷ್ಟ.ಅವರು ನನಗೆ ಯಾವಾಗಲೂ ಪ್ರೀತಿಯಿಂದ ಕಾಣುತಿದ್ದರು ಮತ್ತು ಯಾವ ಸನ್ನಿವೇಶದಲ್ಲು ಅವರು ನನ್ನ ಹತ್ತಿರ ಜೋರಾಗಿ ಮಾತಾಡಿದ್ದು ಎಂದೂ ನಾನು ಕಂಡಿರಲ್ಲಿಲ್ಲ.ನನಗೆ ನನ್ನ ಶಾಲೆಯಯಲ್ಲಿ ಕಳೆದ ದಿನಗಳು ನನಗೆ ಸದಾ ನೆನಪಿಗೆ ಬರುತ್ತದೆ.

ಶಾಲೆ[ಬದಲಾಯಿಸಿ]

ನನ್ನ ಶಾಲೆಯಲ್ಲಿ ಸ್ನೇಹಿತರೊಂದಿಗೆ ಬಹಳ ಸಮಯವನ್ನು ಕಳೆಯುತ್ತಿದ್ದೆ.ನನ್ನ ಗರುಗಳು ಸಹ ಬಹಳ ಉತ್ತಮವಾಗಿ ಪಾಠ ಮಾಡುತ್ತಿದ್ದರು.ನಾನು ಶಾಲೆಗೆ ಸೇರಿದ ಮೊದಲನೇ ದಿನವೇ ತರಗತಿಗೆ ಹೋಗಲು ಬಹಳ ಅಳುತ್ತಿದ್ದೆ ನನಗೆ ಈ ಘಟನೆ ಯಾವಾಗಲೂ ಕಣ್ಣು ಮುಂದೆ ಬರುತ್ತದೆ.ನನಗೆ ನನ್ನ ಗುರುಗಳು ಎಲ್ಲಾ ತರಹದ ಕ್ರಿಯೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ಮಾಡುತ್ತಿದ್ದರು.ಜೀವನದಲ್ಲಿ ಹೇಗೆ ಉತ್ತಮ ವ್ಯಕ್ತಿಗಳಾಗಿ ಇರಬೇಕೆಂಬುದಾಗಿ ಸರಳವಾಗಿ ಸರ್ವರಿಗೂ ಅರ್ಥವಾಗುವಂತೆ ತಿಳಿಸಿ ಹೇಳುತ್ತಿದ್ದರು.ನನಗೆ ಬಹಳ ನೆನಪಿರುವ ದಿನಗಳೆಂದರೆ ನನ್ನ ಗೆಳೆಯರೊಂದಿಗೆ ೧೦ನೇ ತರಗತಿಯಲ್ಲಿ ಕಳೆದ ದಿನಗಳು ಮತ್ತು ಅವರೊಂದಿಗೆ ಪ್ರವಾಸದಲ್ಲಿ ಕಳೆದ ದಿನಗಳು.ಆ ಪ್ರವಾಸದಲ್ಲಿ ನಮ್ಮ ಗರುಗಳು ಸಹ ನಮ್ಮೊಂದಿಗೆ ಕ್ರಿಕೆಟನ್ನು ಆಡಿದ್ದರು.ನಂತರ ಎಲ್ಲರೂ ಅಲ್ಲಿ ಹಾಕಿದ್ದ ಹಾಡಿಗೆ ಒಟ್ಟಾಗಿ ಕುಣಿದಿದ್ದೆವು.ಹಾಗೆ ದಿನ ಕಳೆದ ಹಾಗೆ ನಮ್ಮ ೧೦ನೇ ತರಗತಿಯ ಕೊನೆಯ ದಿನಗಳು ಸುಳಿದವು ಹಾಗೂ ಆ ದಿನದಂದು ಎಲ್ಲರ ಮುಖದಲ್ಲಿ ದಃಖ ತುಂಬಿ ತುಳುಕುತ್ತಿತ್ತು.ನನಗೂ ಸಹ ಬಹಳ ದಃಖವಾಗಿತ್ತು.ಎಲ್ಲಾ ಮುಗಿದು ಕೊನೆಗೆ ನಮ್ಮ ಪರೀಕ್ಷೆಯು ಮುಗಿದು ಅದರ ಪಲಿತಾಂಶವು ಹೊರಬಿದ್ದಿತು ಹಾಗೂ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣಳಾದೆನು.ಈಗಲೂ ನನ್ನ ಗೆಳೆಯರನ್ನು ಭೇಟಿ ಮಾಡುತ್ತಿರುತ್ತೇನೆ.ಹೀಗೆ ನಾನು ನನ್ನ ಶಾಲೆಯಲ್ಲಿ ಕಳೆದ ದಿನಗಳನ್ನು ನಾನು ಎಂದಿಗೂ ಮರೆಯುವುದಿಲ್ಲ ನಾನು ಮನೆಯಲ್ಲೂ ಸಹ ಸ್ವಲ್ಪ ಕೀಟಲೆ ಮಾಡುತ್ತಿದ್ದೆ ಹಾಗೂ ಅಮ್ಮನಿಗೂ ಸಹ ಸಹಾಯ ಮಾಡುತ್ತಿದ್ದೆ.ನನಗೆ ದಾರಿಯಲ್ಲಿ ಯಾವುದೇ ಪ್ರಾಣಿ ಕಂಡರೂ ಅದನ್ನು ನೋಡುತ್ತಲೇ ನಿಲ್ಲುತ್ತಿದ್ದೆ ಅಮ್ಮ ನನಗೆ ಯಾವಾಗಲೂ ಬಯ್ಯುತ್ತಿದ್ದರು.ಆದರೆ ಅಮ್ಮನಿಗೆ ಪ್ರಾಣಿಗಳನ್ನು ಕಂಡರೆ ಇಷ್ಟವಿರಲಿಲ್ಲ ಹಾಗಾಗಿ ನಾನು ಪ್ರಾಣಿಗಳನ್ನು ಸಾಕಲಾಗಲಿಲ್ಲ.ನನಗೆ ನನ್ನ ಮನೆಯ ಹತ್ತಿರವು ಬಹಳ ಸ್ನೇಹಿತರಿದ್ದರು ರಜ ಬಂತೆಂದರೆ ಅವರ ಜೊತೆಯಲ್ಲಿ ಆಟವಾಡುವುದರಲ್ಲಿ ಅರ್ಧದಿನವನ್ನು ಕಳೆಯುತ್ತಿದ್ದೆ.ನನಗೆ ನನ್ನ ಬೇಸಿಗೆ ರಜದಲ್ಲಿ ನನ್ನ ಅಜ್ಜನ ಮನೆಗೆ ಹೋಗುವುದೆಂದರೆ ಬಹಳ ಇಷ್ಟ.ಅಲ್ಲಿಗೆ ಹೋದಾಗ ಒಂದೊಮ್ಮೆ ಕುಪ್ಪಳ‍್ಳಿಗೆ ಹೋಗಿದ್ದೆ ಅಲ್ಲಿ ಕವೆಂಪುರವರ ಮನೆ ಹಾಗು ಅವರು ಕಳೀತುಕೊಂಡು ಪದ್ಯ ಬರೆಯುತ್ತಿದ್ದ ಜಾಗ ಎಲ್ಲವೂ ಬಹಳ ಚೆನ್ನಾಗಿತ್ತು.ಅಲ್ಲಿಯ ವಾತಾವರಣವು ಬಹಳ ಚೆನಾಗಿದ್ದು ಅಲ್ಲಿಗೆ ಹೋದರೆ ವಾಪಾಸಾಗಲು ಮನಸೇ ಬರುವುದಿಲ್ಲ

ಪದವಿ ಪೂರ್ವ ಶಿಕ್ಷಣ[ಬದಲಾಯಿಸಿ]

ನನ್ನ ಪದವಿ ಪೂರ್ವ ಶಿಕ್ಷಣವನ್ನು ಜ್ಞಾನೋದಯ ಕಾಲೇಜಿನಲ್ಲಿ ಮುಗಿಸಿದೆ.ಅಲ್ಲಿ ಕಳೆದ ದಿನಗಳು ಸಹ ಬಹಳ ನೆನಪಾಗುತ್ತದೆ.ಅಲ್ಲಿಯ ವಾತಾವರಣ ಶಾಲೆಯ ಹಾಗೆ ಇದ್ದು ನಮ್ಮ ಜೀವನದಲ್ಲಿ ಸಮಯದ ಮಹತ್ವವನ್ನು ತಿಳಿಸಿಕೊಟ್ಟಿತು.ನಾವು ಊಟದ ಸಮಯದ ವಿರಾಮದಲ್ಲಿ ಎಲ್ಲರೂ ಒಟ್ಟಾಗಿ ಕುಳಿತು ತಮಾಷೆ ಮಾಡುತ್ತಾ ಮಾತಾನಾಡುತ್ತಿದ್ದೆವು.ಎಲ್ಲಾ ಗುರುಗಳೊಂದಿಗೆ ನಾವೆಲ್ಲರು ಬಹಳ ಪ್ರೀತಿಯಿಂದ ಹಾಗೂ ಸ್ನೇಹದಿಂದಿದ್ದೆವು.ಅವರೂ ಸಹ ನಮ್ಮನ್ನು ಎಲ್ಲಾ ಒಳ್ಳೆಯ ವಿಷಯಗಳಲ್ಲೂ ಪ್ರೋತ್ಸಾಹ ನೀಡುತ್ತಿದ್ದರು.ಹಾಗೆ ದಿನ ಕಳೆದ ಹಾಗೆ ನನ್ನ ಪದವಿ ಪೂರ್ವ ಶಿಕ್ಷಣವೂ ಮುಗಿದು ನಾನು ಒಳ್ಳೆಯ ಅಂಕಗಳಿಂದ ಉತ್ತೀರ್ಣಳಾದೆನು.ಹೀಗೆ ಕಣ್ಣು ಮುಚ್ಚಿ ತೆರೆಯುವದರೊಳಗಾಗಿ ಪದವಿ ಪೂರ್ವ ಶಿಕ್ಷಣವು ಮುಗಿದಿತ್ತು. ಹೀಗೆ ಈ ಎಲ್ಲಾ ದಿನಗಳು ಬಹಳ ಬೇಗ ಕಳೆದು ಎಲ್ಲಾ ಚೆನ್ನಾಗಿ ಕಳೆದವು.ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲೂ ಸಹ ನಾನು ಕಳೆದ ದಿನಗಳೆಲ್ಲಾ ಬಹಳ ಚೆನ್ನಾಗಿತ್ತು ಮತ್ತು ಜಗತ್ತಿನೆಲ್ಲೆಡೆಯಿಂದ ನಮ್ಮ ವಿಶ್ವವಿದ್ಯಾಲಯಕ್ಕೆ ಬಂದು ವ್ಯಾಸಂಗ ಮಾಡುತ್ತಾರೆಂದು ತಿಳಿದು ಇನ್ನು ಹೆಮ್ಮೆಯೆನಿಸಿತು.

Indian School.pngThis user is a member of WikiProject Education in Indiaಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Akshata r nadig