ವಿಷಯಕ್ಕೆ ಹೋಗು

ಸದಸ್ಯ:Akadeeb/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                  ಭಾರತೀಯ ಸಂಸ್ಕೃತಿ


ಪುರಾತನ ಇತಿಹಾಸ, ಅನನ್ಯ ಭೌಗೋಳಿಕ ರಚನೆ, ವೈವಿಧ್ಯಮಯ ಜನ ಸಮುದಾಯ, ವಿಭಿನ್ನ ಸಂಪ್ರದಾಯಗಳು ಮತ್ತು ಆಚರಣೆಗಳು, ಪ್ರಾಚೀನ ಪರಂಪರೆ ಹಾಗೂ ನೆರೆಹೊರೆ ರಾಷ್ಟ್ರಗಳ ಪ್ರಭಾವಗಳು ಭಾರತೀಯ ಸಂಸ್ಕೃತಿ ಯನ್ನು ರೂಪಿಸಿವೆ. ಸಿಂಧೂ ಕಣಿವೆ ನಾಗರಿಕತೆ ಯಿಂದ ಆರಂಭಗೊಂಡ ಭಾರತೀಯ ಸಂಸ್ಕೃತಿ ವೇದಗಳ ಕಾಲದಲ್ಲಿ ಅಸಾಧಾರಣ ವಿಕಸನ ಕಂಡಿತು. ಇದಾದ ನಂತರ ಬೌದ್ಧ ಧರ್ಮದ ಉನ್ನತಿ ಮತ್ತು ಅವನತಿ, ಸುವರ್ಣ ಯುಗ, ಮುಸ್ಲಿಂ ಆಳ್ವಿಕೆಗೆ ಭಾರತ ಅಧೀನವಾದದ್ದು ಹಾಗೂ ಯುರೋಪಿಯನ್ನರ ವಸಾಹತು ಆಳ್ವಿಕೆ ಸಂದರ್ಭದಲ್ಲಿ ಈ ವಿಕಸನ ಮತ್ತಷ್ಟು ವೈವಿಧ್ಯಮಯವಾಯಿತು. ಭಾರತದ ಶ್ರೇಷ್ಠ ಧಾರ್ಮಿಕ ಆಚರಣೆಗಳು, ಭಾಷೆಗಳು, ಪದ್ಧತಿ ಮತ್ತು ಸಂಪ್ರದಾಯಗಳು ಕಳೆದ ಐದು ಸಾವಿರ ವರ್ಷಗಳಿಂದ ಇದರ ಅನನ್ಯತೆಗೆ ಸಾಕ್ಷಿಯಾಗಿವೆ. ವಿವಿಧ ಧರ್ಮಗಳು ಮತ್ತು ಸಂಪ್ರದಾಯಗಳ ಸಂಯೋಜನೆಯಾಗಿರುವ ಭಾರತೀಯ ಸಂಸ್ಕೃತಿ ವಿಶ್ವದ ಇನ್ನಿತರ ಸಂಸ್ಕೃತಿಗಳ ಮೇಲೂ ತನ್ನ ಪ್ರಭಾವ ಬೀರಿದೆ.

ಮೈತ್ರೇಯ ವಿಗ್ರಹವನ್ನು ರೂಪಿಸುತ್ತಿರುವ ಸಮೀಪ ನೋಟ, ತಿಕ್ಸೆ ಮಾಂಟೆಸ್ಸೋರಿ, ಲಡಾಕ್‌, ಭಾರತಭಾರತ, ಹಿಂದೂ, ಬೌದ್ಧಧರ್ಮಗಳಂತಹ ಹಲವು ಧರ್ಮಗಳ ಜನ್ಮಸ್ಥಳ. ಹಿಂದೂ, ಬೌದ್ಧ, ಜೈನ ಮತ್ತು ಸಿಖ್ ಧರ್ಮಗಳಿಗೆ ಭಾರತ ಜನ್ಮ ಭೂಮಿ.[೨] ವಿಶ್ವದಲ್ಲಿ ಅಬ್ರಹಾಮ್‌ ಧರ್ಮಗಳ ನಂತರದ ಅತ್ಯಂತ ಮಹತ್ವದ ಸ್ಥಾನ ಭಾರತೀಯ ಧರ್ಮಗಳದ್ದಾಗಿದೆ. ಇಂದು ಹಿಂದೂ ಧರ್ಮ ವಿಶ್ವದಲ್ಲೇ 3ನೇ ಅತಿ ದೊಡ್ಡ ಧರ್ಮವಾಗಿದ್ದು, ಬೌದ್ಧಧರ್ಮ ನಾಲ್ಕನೇ ಸ್ಥಾನದಲ್ಲಿದೆ. ಈ ಎರಡೂ ಧರ್ಮದ ಒಟ್ಟು ಅನುಯಾಯಿಗಳು 1.4 ಶತಕೋಟಿಯನ್ನೂ ಮೀರುತ್ತಾರೆ. ಗಾಢ ಧರ್ಮ ನಿಷ್ಠ ಸಮುದಾಯಗಳು ಮತ್ತು ಸಂಸ್ಕೃತಿಯನ್ನು ಹೊಂದಿರುವ ಭಾರತ ವಿಶ್ವದಲ್ಲೇ ಅತ್ಯಂತ ಧಾರ್ಮಿಕ ವೈವಿಧ್ಯತೆಯುಳ್ಳ ದೇಶ. ಇಲ್ಲಿನ ಬಹುತೇಕ ಜನರ ಬದುಕಿನಲ್ಲಿ ಇಂದಿಗೂ ಧರ್ಮ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಇಲ್ಲಿನ ಸುಮಾರು 80.4%ಗಿಂತ ಹೆಚ್ಚಿನ ಜನರದ್ದು ಹಿಂದೂ ಧರ್ಮ. ಇಸ್ಲಾಂ ಧರ್ಮವನ್ನು ಸುಮಾರು 13.4% ಭಾರತೀಯರು ಪಾಲಿಸುತ್ತಾರೆ.[೩] ಸಿಖ್‌ ಧರ್ಮ ಜೈನ ಧರ್ಮ ಮತ್ತು ವಿಶೇಷವಾಗಿ ಬೌದ್ಧ ಧರ್ಮೀಯರು ಕೇವಲ ಭಾರತದಲ್ಲಷ್ಟೇ ಅಲ್ಲದೆ ವಿಶ್ವದ ನಾನಾ ಭಾಗಗಳಲ್ಲಿ ತಮ್ಮ ಪ್ರಭಾವ ಬೀರಿದ್ದಾರೆ. ವಿಶ್ವದೆಲ್ಲೆಡೆ ಇರುವ ಕ್ರೈಸ್ತ , ಝೋರಾಷ್ಟ್ರಿಯನ್‌, ಯಹೂದ್ಯ ಮತ್ತು ಬಹಾಯಿ ಮತಗಳ ಅನುಯಾಯಿಗಳ ಸಂಖ್ಯೆ ವಿರಳವಾದರೂ ಆ ಮತಗಳು ತಮ್ಮದೇ ಆದ ವರ್ಚಸ್ಸನ್ನು ಹೊಂದಿವೆ. ಭಾರತೀಯರ ಬದುಕಿನಲ್ಲಿ ಧರ್ಮ ಮಹತ್ವದ ಪಾತ್ರ ವಹಿಸಿದ್ದರೂ, ಅನ್ಯ ನಂಬಿಕೆಗಳಿಗೆ ತಾವು ಸಹಿಷ್ಣುಗಳೆಂಬ ಸ್ವಯಂ ಘೋಷಣೆಯೊಂದಿಗೆ ನಾಸ್ತಿಕರು ಮತ್ತು ಆಜ್ಞೇಯತಾವಾದಿಗಳೂ ಕೂಡ ಒಟ್ಟಿಗೆ ಬದುಕುತ್ತಿದ್ದಾರೆ.

ಕೌಟುಂಬಿಕ ವ್ಯವಸ್ಥೆ

ನಮಸ್ತೆ ನಮಸ್ತೆ , ನಮಸ್ಕಾರ್‌ ಅಥವಾ ನಮಸ್ಕಾರಮ್‌ ಎನ್ನುವ ಪದಗಳು ವಿನಯಪೂರ್ವಕ ಅಥವಾ ಗೌರವ ಸಂಬೋಧನೆಯ ಪ್ರತೀಕಗಳಾಗಿ ಭಾರತ ಉಪಖಂಡದ ಜನರ ಆಡುಮಾತಿನಲ್ಲಿ ಬಳಕೆಯಾಗುತ್ತಿದೆ. ನಮಸ್ಕಾರ್‌ ಪದ ನಮಸ್ತೆ ಪದಕ್ಕಿಂತ ಹೆಚ್ಚು ಔಪಚಾರಿಕವಾದದ್ದು. ಆದರೆ ಈ ಎರಡೂ ಪದಗಳು ವಿನಮ್ರ ಗೌರವವನ್ನು ಸೂಚಿಸುತ್ತವೆ. ಹಿಂದೂ, ಜೈನ ಮತ್ತು ಬೌದ್ಧ ಸಮುದಾದಯಕ್ಕೆ ಸೇರಿದ ಭಾರತ ಮತ್ತು ನೇಪಾಳದ ಜನ ಈ ಪದಗಳನ್ನು ಅತ್ಯಂತ ಸರ್ವೇಸಾಮಾನ್ಯವಾಗಿ ಬಳಸುತ್ತಾರೆ. ಭಾರತ ಉಪಖಂಡದಾಚೆಗೂ ಕೆಲವರು ಇವನ್ನು ಬಳಸುವುದುಂಟು. ಭಾರತ ಮತ್ತು ನೇಪಾಳಿ ಸಂಸ್ಕೃತಿಯಲ್ಲಿ, ಲಖಿತ ಪತ್ರವ್ಯವಹಾರದ ಆರಂಭದಲ್ಲಿ ಅಥವಾ ಆಡುಭಾಷೆಯ ಮೊದಲ ನುಡಿಯಾಗಿ ನಮಸ್ಕಾರ್‌ ಅಥವಾ ನಮಸ್ಕಾರ ಪದ ಬಳಕೆಯಾಗುತ್ತದೆ. ಎರಡೂ ಕೈಗಳು ಒಟ್ಟಿಗೆ ಬಂಧಿಸಿರುವ ಚಿಹ್ನೆ ನಿರ್ಗಮನದ ಭಾವನೆಯನ್ನು ಮೌನವಾಗಿ ಸೂಚಿಸುತ್ತದೆ. "ನನ್ನಲ್ಲಿರುವ ಪ್ರಕಾಶ ನಿನ್ನಲ್ಲಿರುವ ಪ್ರಭೆಯನ್ನು ಬೆಳಗುತ್ತದೆ" ಎಂಬ ಅರ್ಥದಲ್ಲಿ ಯೋಗ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಮಧ್ಯೆ ನಮಸ್ತೆ ಪದ ಪರಸ್ಪರ ವಿನಿಮಯವಾಗುತ್ತದೆ. "ನಾನು ನಿನಗೆ ಬಾಗುತ್ತೇನೆ ಅಥವಾ ಶರಣಾಗುತ್ತೇನೆ" ಎಂಬುದೇ ಇದರ ಪದಶಃ ಅರ್ಥ. ತಲೆಬಾಗು, ಪ್ರಣಾಮ, ಪೂಜ್ಯ ವಂದನೆ, ಮತ್ತು ಗೌರವ (te): ಎಂಬೆಲ್ಲ ಅರ್ಥ ಕೊಡುವ ನಮಸ್ಕಾರ ನಮಸ್‌ ಎಂಬ ಸಂಸ್ಕೃತ ಪದದಿಂದ ನಿಷ್ಪನ್ನ ಹೊಂದಿದೆ.


ರಂಗೋಲಿ ಬಿಡಿಸಿ, ದೀಪ ಬೆಳಗಿಸಿ ಬೆಳಕಿನ ಹಬ್ಬ ದೀಪಾವಳಿಯನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ಹಬ್ಬಗಳು ವಿವಿಧ ಧರ್ಮಗಳ ಬೀಡಾಗಿರುವ ಭಾರತದ್ದು ವೈವಿಧ್ಯಮಯ ಸಂಸ್ಕೃತಿ. ವಿವಿಧ ಧರ್ಮಗಳ ಹಲವು ಹಬ್ಬ-ಹರಿದಿನಗಳನ್ನು ಭಾರತದಲ್ಲಿ ಆಚರಿಸಲಾಗುತ್ತದೆ. ಸ್ವಾತಂತ್ಯ್ರ ದಿನಾಚರಣೆ , ಗಣರಾಜ್ಯೋತ್ಸವ ಮತ್ತು ಗಾಂಧಿ ಜಯಂತಿ, ಇವು ಭಾರತದ ಘೋಷಿತ ರಾಷ್ಟ್ರೀಯ ಹಬ್ಬಗಳು.ಇವುಗಳನ್ನು ಶ್ರದ್ಧೆ ಮತ್ತು ಉತ್ಸಾಹದಿಂದ ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದಲ್ಲದೆ ಹಲವು ರಾಜ್ಯಗಳು ಚಾಲ್ತಿಯಲ್ಲಿರುವ ಅಲ್ಲಿನ ಭಾಷೆ ಮತ್ತು ಧರ್ಮವನ್ನು ಅನುಸರಿಸಿ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ವಿವಿಧ ಸ್ಥಳೀಯ ಹಬ್ಬಗಳನ್ನೂ ಆಚರಿಸುತ್ತವೆ. ದೀಪಾವಳಿ , ಗಣೇಶ ಚತುರ್ಥಿ , ದುರ್ಗಾ ಪೂಜಾ, ಹೋಳಿ , ರಕ್ಷಾಬಂಧನ ಮತ್ತು ದಸರಾ -ಇವು ಇಲ್ಲಿನ ಜನಪ್ರಿಯ ಹಿಂದೂ ಧಾರ್ಮದ ಹಬ್ಬಗಳು. ಸಂಕ್ರಾಂತಿ , ಪೊಂಗಲ್‌ ಮತ್ತು ಓಣಮ್ ಹಬ್ಬಗಳು ಸಮೃದ್ಧತೆಯ ಸಂಕೇತವಾಗಿ ಸುಗ್ಗಿಯ ಹಬ್ಬಗಳೆಂದು ಆಚರಿಸಲ್ಪಡುತ್ತವೆ. ವಿವಿಧ ಧರ್ಮೀಯರು ಆಚರಿಸುವ ಕೆಲವು ನಿರ್ದಿಷ್ಟ ಹಬ್ಬಗಳು ಭಾರತದಲ್ಲುಂಟು. ಮಹತ್ವದ ಹಬ್ಬವೆನಿಸಿರುವ ದೀಪಾವಳಿಯನ್ನು ಹಿಂದೂ, ಸಿಖ್‌, ಜೈನ ಧರ್ಮೀಯರು ಆಚರಿಸಿದರೆ, ಬುದ್ಧ ಪೂರ್ಣಿಮೆಯನ್ನು ಜೈನ ಮತ್ತು ಬೌದ್ಧರು ಆಚರಿಸುತ್ತಾರೆ. ಮುಸ್ಲಿಂ ಹಬ್ಬಗಳಾದ ಈದ್-ಉಲ್‌-ಫಿತರ್ ‌, ಈದ್ ಅಲ್‌-ಅಧಾ ಮತ್ತು ರಂಜಾನ್‌ ಹಬ್ಬಗಳನ್ನು ಭಾರತದಾದ್ಯಂತ ಮುಸ್ಲಿಂ ಬಾಂಧವರು ಸಂಭ್ರಮದಿಂದ ಆಚರಿಸುತ್ತಾರೆ. ಭಾರತದ ಪೂರ್ವ ದಿಕ್ಕಿನ ಗಡಿರಾಜ್ಯವಾದ ಅರುಣಾಚಲ ಪ್ರದೇಶದ ಜೈರೋ ಕಣಿವೆಯ ಅಪಾಟಾನಿಸ್‌ ಬುಡಕಟ್ಟು ಜನ ಆಚರಿಸುವ ದ್ರೀ ಹಬ್ಬ ಭಾರತದ ಬುಡಕಟ್ಟು ಜನರ ಹಬ್ಬಗಳಲ್ಲೊಂದಾಗಿದ್ದು, ಭಾರತೀಯ ಸಂಸ್ಕೃತಿಗೆ ಮತ್ತಷ್ಟು ಮೆರಗು ನೀಡಿದೆ.


ಉಡುಗೆ-ತೊಡುಗೆ

ತ್ರಿಪುರಾದ ಪೋರಿಯೊಬ್ಬಳು ಸಾಂಪ್ರದಾಯಿಕ ನೃತ್ಯೋತ್ಸವದಲ್ಲಿ ಭಾಗವಹಿಸಲು ಬಿಂದಿ ಧರಿಸಿ ಸಿದ್ಧಗೊಳ್ಳುತ್ತಿರುವುದು. ಸೀರೆ ಭಾರತೀಯ ಮಹಿಳೆಯರ ಸಾಂಪ್ರದಾಯಿಕ ಉಡುಗೆ, ಇದರ ಜೊತೆಗೆ ಗಾಘ್ರ ಚೋಲಿ(ಲೆಹೆಂಗ)ಯನ್ನೂ ಕೂಡ ಸಾಕಷ್ಟು ಮಹಿಳೆಯರು ಬಳಸುತ್ತಾರೆ. ಧೋತಿ, ಪಂಚೆ, ವೇಷ್ಟಿ ಅಥವಾ ಕುರ್ತಾ ಇವು ಪುರುಷರ ಸಾಂಪ್ರದಾಯಿಕ ತೊಡುಗೆಗಳು. ವಾರ್ಷಿಕ ಫ್ಯಾಷನ್‌ ಮೇಳಗಳನ್ನು ಆಯೋಜಿಸುವ ದೆಹಲಿ ಭಾರತದ ಫ್ಯಾಷನ್‌ ರಾಜಧಾನಿ ಎಂದು ಪರಿಗಣಿಸಲ್ಪಟ್ಟಿದೆ. ಭಾರತದ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಉಡುಗೆಗಳನ್ನು ಈಗಲೂ ಬಹುತೇಕ ಜನರು ಧರಿಸುತ್ತಾರೆ. ದೆಹಲಿ, ಮುಂಬೈ, ಚೆನ್ನೈ ಅಹಮದಾಬಾದ್ ಮತ್ತು ಪುಣೆ- ಈ ನಗರಗಳು ಜನ ಖರೀದಿ ನಡೆಸುವ ಮೆಚ್ಚಿನ ಸ್ಥಳಗಳು. ದಕ್ಷಿಣ ಭಾರತದಲ್ಲಿ ಪುರುಷರು, ತಮಿಳು ಮತ್ತು ಇಂಗ್ಲಿಷ್‌ನಲ್ಲಿ ಧೋತಿ ಎಂದು ಕರೆಯಲಾಗುವ ಬಿಳಿಬಟ್ಟೆಯನ್ನು ಧರಿಸುತ್ತಾರೆ. ಧೋತಿಯ ಮೇಲೆ ಪುರುಷರು ಷರ್ಟ್‌‌ಗಳು, ಟಿ-ಷರ್ಟ್‌‌ಗಳು ಅಥವಾ ಇನ್ನಾವುದೋ ಮೇಲುಡುಗೆ ಧರಿಸುತ್ತಾರೆ. ವಿವಿಧ ನಮೂನೆಗಳ ವಿನ್ಯಾಸಗಳನ್ನುಳ್ಳ ವರ್ಣಮಯ ಸೀರೆಯನ್ನು ಉಡುವ ಮಹಿಳೆಯರು. ಇದಕ್ಕೆ ಹೊಂದುವಂಥ ಸರಳವಾದ ಆದರೆ ಬಣ್ಣ ಬಣ್ಣದ ಕುಪ್ಪಸವನ್ನು ಧರಿಸುತ್ತಾರೆ. ಕುಪ್ಪಸ ಮಹಿಳೆಯರು ಮತ್ತು ಯುವತಿಯರ ಮೇಲುಡುಪು. ಚಿಕ್ಕ ಹುಡುಗಿಯರು ಪಾವಡ ವನ್ನು ಧರಿಸುತ್ತಾರೆ. ಪಾವಡ , ಕುಪ್ಪಸದ ಕೆಳಗೆ ಧರಿಸುವ ಉದ್ದನೆಯ ಸ್ಕರ್ಟ್‌. ಎರಡೂ ವಸ್ತ್ರಗಳನ್ನು ಬೆಡಗಿನಿಂದ ಸಿಂಗರಿಸಿರುತ್ತಾರೆ. ಮಹಿಳೆಯರ ಅಲಂಕಾರ ಪರಿಕರದಲ್ಲಿ ಬಿಂದಿಯೂ ಸೇರಿದೆ. ಕೆಂಪು ಕುಂಕುಮ (=ಸಿಂಧೂರ)ವನ್ನು ವಿವಾಹಿತ ಮಹಿಳೆಯರು ಹಣೆಗೆ ಹಚ್ಚುವುದು ಮೊದಲಿದ್ದ ಭಾರತೀಯ ಸಂಪ್ರದಾಯ. ಆದರೆ ಇತ್ತೀಚಿನ ದಿನಗಳಲ್ಲಿ ಅವಿವಾಹಿತರೂ ಧರಿಸುತ್ತಿದ್ದು, ಇದು ಮಹಿಳೆಯರ ಆಧುನಿಕ ಅಲಂಕಾರದ ಒಂದು ಭಾಗವಾಗಿ ಮಾರ್ಪಟ್ಟಿದೆ. ಮಹಿಳೆಯರು ಧರಿಸುವ ಈ ಬಿಂದಿ ಅವರ 3ನೇ ಕಣ್ಣು ಎಂದೇ ಕೆಲವರಿಂದ ಪರಿಗಣಿಸಲ್ಪಟ್ಟಿದೆ. ಸಾಮಾನ್ಯ ಕಣ್ಣಿಗೆ ಕಾಣದ್ದು ಈ 3ನೇ ಕಣ್ಣಿಗೆ ಕಾಣುತ್ತದೆ ಮತ್ತು ಸೂರ್ಯನ ಹಾಗೂ ಇತರೆ ಬಾಹ್ಯ ಶಕ್ತಿಗಳಿಂದ ಧರಿಸಿರುವವರ ಮಿದುಳಿನ ರಕ್ಷಣೆಗೆ ಇದು ನೆರವಾಗುತ್ತದೆ ಎನ್ನುವ ನಂಬಿಕೆಯೂ ಇದೆ.[೧೩]ಭಾರತ ಉಪಖಂಡ ಮತ್ತು ಪಾಶ್ಚಿಮಾತ್ಯ ಉಡುಗೆ ತೊಡುಗೆ ಮಿಳಿತಗೊಂಡು ಇಂಡೋ-ವೆಸ್ಟ್ರನ್‌ ವಸ್ತ್ರಶೈಲಿ ರೂಪುಗೊಂಡಿದೆ. ಚೂಡಿದಾರ‌, ದುಪ್ಪಟ್ಟಾ, ಗಮ್ಚಾ, ಕುರ್ತಾ, ಮುಂಡುಮ್‌ ನೆರಿಯಾತುಮ್, ಶೇರ‍್ವಾನಿ, ಉತ್ತರೀಯಗಳು ಭಾರತದ ಇತರೆ ವೇಷಭೂಷಣಗಳು.


ಚಲನಚಿತ್ರ

ಬಾಲಿವುಡ್‌ ನೃತ್ಯದ ಚಿತ್ರೀಕರಣ ಭಾರತದಲ್ಲಿ ಮುಂಬೈ ಮೂಲದ ಹಿಂದಿ ಚಿತ್ರೋದ್ಯಮ ಬಾಲಿವುಡ್‌ ಎಂಬ ಅನೌಪಚಾರಿಕ ಹೆಸರಿನಲ್ಲಿ ಜನಪ್ರಿಯವಾಗಿದೆ. ಬಾಲಿವುಡ್‌ ಮತ್ತು ಇತರೆ ಸಿನಿಮಾ ಕೇಂದ್ರಗಳು (ಬಂಗಾಳಿ, ಕನ್ನಡ, ಮಲಯಾಳಂ, ಮರಾಠಿ, ತಮಿಳು ಮತ್ತು ತೆಲುಗು) ವಿಸ್ತಾರವಾದ ಭಾರತೀಯ ಸಿನಿಮಾ ಉದ್ಯಮವನ್ನು ಮತ್ತಷ್ಟು ವೈವಿಧ್ಯಮಯಗೊಳಿಸಿವೆ. ಬಿಡುಗಡೆಯಾಗುವ ಚಿತ್ರಗಳ ಸಂಖ್ಯೆ ಮತ್ತು ಮಾರಾಟವಾಗುವ ಟಿಕೆಟ್‌ಗಳ ಆಧಾರದ ಮೇಲೆ ಭಾರತೀಯ ಚಿತ್ರೋದ್ಯಮ ಇಡೀ ವಿಶ್ವದಲ್ಲಿ ಅತಿ ಹೆಚ್ಚು ಚಿತ್ರಗಳು ನಿರ್ಮಾಣವಾಗುವ ಚಿತ್ಯೋದ್ಯಮ ಎಂದು ಪರಿಗಣಿತವಾಗಿದೆ. ವಿಮರ್ಶಕರ ಅಪಾರ ಪ್ರಶಂಸೆಗೊಳಗಾದ ವಿಶ್ವಪ್ರಸಿದ್ಧ ಸಿನಿಮಾ ನಿರ್ದೇಶಕ-ನಿರ್ಮಾಪಕರನ್ನು ಭಾರತ ರೂಪಿಸಿದೆ. ಸತ್ಯಜಿತ್‌ ರೇ, ರಿತ್ವಿಕ್ ಘಟಕ್‌, ಗುರುದತ್‌, K. ವಿಶ್ವನಾಥ್‌, ಆದೂರ‍್ ಗೋಪಾಲಕೃಷ್ಣನ್‌, ಗಿರೀಶ್‌ ಕಾಸರವಳ್ಳಿ, ಶೇಖರ‍್ ಕಪೂರ್‌, ಹೃಶಿಕೇಶ್‌ ಮುಖರ್ಜೀ, ಶಂಕರ್‌ ನಾಗ್, ಗಿರೀಶ್‌ ಕಾರ್ನಾಡ್‌, G. V. ಐಯ್ಯರ್‌, ಮುಂತಾದವರನ್ನು ವಿಮರ್ಶಕರು ಕೊಂಡಾಡಿದವರಲ್ಲಿ ಕೆಲವರು.(ನೋಡಿ ಭಾರತದ ಚಿತ್ರ ನಿರ್ದೇಶಕರು)). ಇತ್ತೀಚಿನ ವರ್ಷಗಳಲ್ಲಿ ಆರ್ಥಿಕತೆ ಬೆಳೆದಂತೆಯೂ,ಜಾಗತಿಕ ಮಟ್ಟದ ಚಲನ ಚಿತ್ರಗಳಿಗೆ ನಾವು ಹತ್ತಿರವಾದಂತೆಯೂ, ವೀಕ್ಷಕರ ಅಭಿರುಚಿ ಮತ್ತು ಚಿತ್ರದ ಕಥಾವಸ್ತು ಮತ್ತು ನಿರ್ಮಾಣ ತಂತ್ರಗಳಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ದೇಶದ ಬಹುತೇಕ ನಗರಗಳಲ್ಲಿ ನಾಯಿಕೊಡೆಗಳಂತೆ ಮೇಲೆದ್ದಿರುವ ಮಲ್ಟಿಫ್ಲೆಕ್ಸ್‌ಗಳು (=ವಾಣಿಜ್ಯ ಸಂಕೀರ್ಣಗಳು) ಸಿನಿಮಾ ಉದ್ಯಮದ ಆದಾಯ ಗಳಿಕೆಯ ಮಾದರಿಯನ್ನು ಬದಲಾಯಿಸಿವೆ.