ಸದಸ್ಯ:Ajith Kumar.s547/WEP 2018-19

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಹದೇವಪುರ ಕ್ಷೇತ್ರದ ಬಗ್ಗೆ(ಬೆಂಗಳೂರಿನ ವಿಧಾನ ಸಭಾ ಕ್ಷೇತ್ರದ ಕುರಿತು):

ಮಹದೇವಪುರ ಕರ್ನಾಟಕದ ಬೆಂಗಳೂರು ಜಿಲ್ಲೆಯ ಉಪನಗರ ಮತ್ತು ಬಿಬಿಎಂಪಿ ವಲಯಗಳಲ್ಲಿ ಒಂದಾಗಿದೆ.

ಹೊಸ ಕ್ಷೇತ್ರ:

೨೦೦೮ ರಲ್ಲಿ ವಿಂಗಡಯಾಗಿದ್ದು, ಅದಕ್ಕಿಂತ ಹಿಂದೆ ವತೂರು ಕ್ಷೇತ್ರದ‍ ಒಂದು ಭಾಗವಾಗಿತ್ತು. ವಿಂಗಡಣೆಯಾದ ನಂತರ ಕ್ಷೇತ್ರದ‍ ಜನರು ಅಭಿವೃದ್ಡಿ ಕಾಣದೆ ತೊಂದರೆಆಗುತ್ತಿತ್ತು.

ಮಹದೇವಪುರ ಕ್ಷೇತ್ರದಲ್ಲಿ ಗ್ರಾಮೀಣ ಸೊಗಡಿನ ಹಳ್ಳಿಗಳಿವೆ, ಇಲ್ಲಿ ಮೊದಲಿಗೆ ಮಣ್ಣಿನ ರಸ್ತೆಗಳು ಹೆಚ್ಚು ಇದ್ದವು. ಚರಂಡಿಗಳು, ವಿದ್ಯುತ್ ದೀಪಗಳು ಹಾಗೂ ನಿರುದ್ಯೋಗಿ ಸಮಸ್ಯೆಯೂ ಸಹ ಎದ್ದು ಕಾಣುತ್ತಿತ್ತು. ಹೆಚ್.ಎ.ಎಲ್. ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಈ ಪ್ರದೇಶದ ಜನರಿಗೆ ವಿಮಾನಗಳು ಸೋಸುವ ಬಳಕೆ ರಾತ್ರಿಯ ಬದುಕಿಗೆ ಆದಾರವಾಗಿತ್ತು. ಇದಲ್ಲದೆ ವಸತಿ ಸಮಸ್ಯೆಯು ಬಹಳವಿತ್ತು.

ಚುನಾವಣಾ ಅಂಶಗಳು:

ಮಹಾದೇವಪುರವು ಕರ್ನಾಟಕ ಶಾಸನಸಭೆಯ ಕ್ಷೇತ್ರವಾಗಿದೆ. ಪ್ರಸ್ತುತ ಇದು ಅರವಿಂದ ಲಿಂಬಾವಳಿ ಪ್ರತಿನಿಧಿಸುತ್ತದೆ. ಅವರು ೨೦೦೮ ರಲ್ಲಿ ಅವರು ಶಿವಣ್ಣ ವಿರುದ್ಧ ಗೆದ್ದಿದ್ದಾರೆ ೨೦೧೨ ಮತ್ತು ೨೦೧೮ ರಲ್ಲೂ ಮಹದೇವಪುರ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಶ್ರೀನಿವಾಸ ಎ.ಸಿ ಯನ್ನು ಸೋಲಿಸಿದರು.

ಅರವಿಂದ ಲಿಂಬಾವಳಿ ಅವರು ಕ್ಷೇತ್ರಕ್ಕೆ ಶಾಸಕರಾಗಿ ೨೦೦೮ ರಲ್ಲಿ ಬಂದರು:

ಪರಿಚಯ:ಅರವಿಂದ ಲಿಂಬಾವಳಿ ಅವರು ಇಂಜಿನಿಯರಿಂಗ್ ಪದವಿದರರು,ಇವರು ರಾಷ್ಟ್ರೀಯ ಸ್ವಯಂ ಸೇವಾ ಸಂಘ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಸಂಘದ ಮುಖಂಡರಾಗ್ಗಿದ್ದರು.೨೦೦೮ ಹಾಗೂ ೨೦೧೨ ವಿಧಾನ ಸಭಾ ಚುನಾವಣೆಯಲ್ಲಿ ವಣೆಯಭಾಗವಹಿಸಿ ವಿಜಯಶಾಲಿಯಾಗ್ಗಿದ್ದರು ಮತ್ತು ೨೦೧೮ ರಲ್ಲೂ ಮಹದೇವಪುರ ಕ್ಷೇತ್ರದ ಚುನಾವಣೆಯಲ್ಲಿ ವಿಜಯಶಾಲಿಯಾಗಿದ್ದಾರೆ.

ವ್ಯಕ್ತಿಚಿತ್ರ:

ಮಹದೇವಪುರ ಕ್ಷೇತ್ರದ ಜನತೆಯ ಮನೆ-ಮನಗಳನ್ನು ಪ್ರವೇಶಿಸಿ ಮುಕ್ತವಾಗಿ ಮಾತನಾಡುವ, ಜನರೊಂದಿಗೇ ಬೆರೆತು ಕಷ್ಟ – ಸುಖಗಳನ್ನು ಅರಿಯುವ ಸ್ವಭಾವ ಅರವಿಂದ ಲಿಂಬಾವಳಿಯವರಿಗೆ ವಿದ್ಯಾರ್ಥಿ ದೆಸೆಯಿಂದಲೂ ಬಂದಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿದ್ಯಾರ್ಥಿ ಆಂದೋಳನಗಳ ಮೂಲಕವೇ ಅರವಿಂದ ಲಿಂಬಾವಳಿ ಬೆಳೆದಿದ್ದಾರೆ. ಎಪ್ಪತ್ತರ ದಶಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಹಾಗೂ ಎಂಬತ್ತರ ದಶಕದ ಆರಂಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಅಭಾವಿಪ) ಕಾರ್ಯಕರ್ತರಾಗಿ ಸಾಮಾಜಿಕ ಜೀವನ ಆರಂಭಿಸಿದ ಅರವಿಂದ ಲಿಂಬಾವಳಿಯವರು ೧೯೮೬ರಿಂದ ಆರು ವರ್ಷಗಳ ಕಾಲ ಅಭಾವಿಪ ರಾಜ್ಯ ಸಹಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು. ಪಾಲಿಟೆಕ್ನಿಕ್ ಶಿಕ್ಷಣ ರಂಗದ ಸಮಸ್ಯೆಗಳ ವಿರುದ್ಧ ಹೋರಾಡಲು ೧೯೮೭ರಲ್ಲಿ ಮೂಡಿದ ಕರ್ನಾಟಕ ರಾಜ್ಯ ಪಾಲಿಟೆಕ್ನಿಕ್ ಕ್ರಿಯಾಸಮಿತಿ ಸಂಚಾಲಕರಾದ ಅರವಿಂದ ಲಿಂಬಾವಳಿ ಅವರಲ್ಲಿ ಕಂಡಿದ್ದು ಯುವೋತ್ಸಾಹದ ಕಿಚ್ಚು. ವಿದ್ಯಾರ್ಥಿ ಆಂದೋಲನದಲ್ಲಿ ಭಾಗಿಯಾಗಿ ಬದಲಾವಣೆ ತರಬೇಕೆಂಬ ತವಕ.

ಚಟುವಟಿಕೆಗಳು:

  1. ಬದಲಾವಣೆ ಬಯಸುತ್ತಿರುವ ಯುವಶಕ್ತಿಯ ಬದ್ಧತೆಗೆ ಕನ್ನಡಿ ಹಿಡಿದ ಬೈಕ್‌ ರ‍್ಯಾಲಿ.
  2. ಮಹದೇವಪುರ ಕ್ಷೇತ್ರದ ಬಿಜೆಪಿ ಯುವ ಶಕ್ತಿಗೆ ಸಾಕ್ಷಿಯಾದ ಬೈಕ್‌ ರ‍್ಯಾಲಿ.
  3. ಬೆಳ್ಳಂದೂರಿನ ಬ್ರಹ್ಮರಥೋತ್ಸವದಲ್ಲಿ ಭಾಗಿ.
  4. ಬೆಳ್ಳಂದೂರಿನಲ್ಲಿ ಕರ್ಗಾ ಮಹೋತ್ಸವ.
  5. ಫ್ರೆಂಚ್ ನಿಯೋಗದೊಂದಿಗೆ ಚರ್ಚೆ.
  6. ಉಡುಪಿ ನಳಪಾಕ ಹೋಟೆಲ್ ಗೆ ಭೇಟಿ.
  7. ಆಂಜನೇಯ ಮೂರ್ತಿಗೆ ಪೂಜೆ.
  8. ಬಿಜೆಪಿ ಸೇರಿದ ಕೆ. ದೊಮ್ಮಸಂದ್ರ ಬೂತ್ ನ ಕಾರ್ಯಕರ್ತರು.
  9. ಬಿಜೆಪಿ ಪ್ರಣಾಳಿಕೆ ಕುರಿತ ಸಭೆ.

ಮಹದೇವಪುರ ಜನಹಿತ ಶ್ರೀ ಅರವಿಂದ ಲಿಂಬಾವಳಿಯವರ ಅವಧಿಯ ಸಾಧನೆಗಳು:

ಮಹದೇವಪುರ ಕ್ಷೇತ್ರದಲ್ಲಿ ಗ್ರಾಮೀಣ ಸೊಗಡಿನ ಹಳ್ಳಿಗಳಿವೆ, ಆಧುನಿಕತೆಯ ಪ್ರಭಾವದ ನಗರಪ್ರದೇಶಗಳಿವೆ, ಹಳ್ಳಿಯೋ ನಗರವೋ ಎಂದು ಗೊತ್ತಾಗದ ಅರೆಪಟ್ಟಣಗಳಿವೆ. ಇಲ್ಲಿ ಸ್ಥಳೀಯ ಉದ್ದಿಮೆಗಳೂ ಹರಡಿವೆ; ನೂರಾರು ವಿಶ್ವಖ್ಯಾತಿಯ ಕಂಪೆನಿಗಳೂ ಸ್ಥಾಪನೆಯಾಗಿವೆ. ತಳಮಟ್ಟದ ಕಾರ್ಮಿಕರಿಂದ ಹಿಡಿದು ಬಹುರಾಷ್ಟ್ರೀಯ ಸ್ತರದ ಉದ್ಯೋಗಿಗಳು ಕ್ಷೇತ್ರದೆಲ್ಲೆಡೆ ಇದ್ದಾರೆ.

ಇಂಥ ವೈವಿಧ್ಯಮಯ ಕ್ಷೇತ್ರವು ಕೆಲವು ವರ್ಷಗಳ ಹಿಂದೆ ಬಹುಮುಖ ಅನುಭವದ ನೆಲೆಯಲ್ಲಿ ಬೆಳೆದ ಅರವಿಂದ ಲಿಂಬಾವಳಿಯವರನ್ನು ಆಯ್ಕೆ ಮಾಡಿದ್ದು ಸಹಜವೇ ಆಗಿತ್ತು. ತನ್ನ ಆಯ್ಕೆಗೆ ನ್ಯಾಯ ಒದಗಿಸಲು ಅರವಿಂದ ಲಿಂಬಾವಳಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.ಮೊದಲು ಹಳ್ಳ-ದಿಣ್ಣೆಗಳಿಂದ ಕೂಡಿದ ಕಳಪೆ ರಸ್ತೆಗಳಿದ್ದ ಮಹದೇವಪುರದಲ್ಲಿ ಈಗ ಡಾಂಬರು ರಸ್ತೆಗಳದ್ದೇ ದರ್ಬಾರು. ನಿರ್ವಹಣೆ ಇಲ್ಲದೇ ಬರಡಾಗಿದ್ದ ಪ್ರದೇಶಗಳಲ್ಲಿ ಸಾರ್ವಜನಿಕ ಉದ್ಯಾನಗಳಿವೆ. ಹೂಳು ತುಂಬಿ ಹಾಳಾಗಿದ್ದ ಚರಂಡಿಗಳೀಗ ದುರಸ್ತಿಗೊಂಡಿವೆ.

ಮಹದೇವಪುರದ ಸಾಮಾಜಿಕ ಸ್ವಾಸ್ಥ್ಯವೂ ಮಾದರಿ ಪ್ರಮಾಣದಲ್ಲಿ ಸುಧಾರಿಸಿದೆ. ಇಡೀ ಕ್ಷೇತ್ರದಲ್ಲಿ ಕಳೆದ ವರ್ಷಗಳಲ್ಲಿ ಒಂದೂ ಜಾತಿ ವಿದ್ವೇಷದ ಪ್ರಕರಣ ದಾಖಲಾಗಿಲ್ಲ.

ಕ್ಷೇತ್ರದ ಅಭಿವೃದ್ಧಿಗೆ ಇಲ್ಲಿನ ಹಲವಾರು ಸಂಘ ಸಂಸ್ಥೆಗಳು ನೀಡಿದ ಸಹಕಾರವೂ ಮುಖ್ಯವಾಗಿತ್ತು.