ಸದಸ್ಯ:Aishwarya CA

ವಿಕಿಪೀಡಿಯ ಇಂದ
Jump to navigation Jump to search

320px|thumbnail|ಐಶ‍್ವರ್ಯ ಸಿ ಎ

ಕುಟುಂಬ[ಬದಲಾಯಿಸಿ]

ನನ್ನ ಹೆಸರು ಐಶ್ವರ್ಯ ಸಿ ಎ. ನಾನು ಕ್ರೈಸ್ಟ್ ಕಾಲೇಜಿನಲ್ಲಿ ಪ್ರಥಮ ಬಿ.ಎಸ್ಸಿ ವಿದ್ಯಾರ್ಥಿ. ನಾನು ಶಾಲೆಯ ಶಿಕ್ಷಣವನ್ನು ಅಮೃತ ವಿದ್ಯಾಲಯಂ ದಾವಣಗೆರೆಯಲ್ಲಿ ಮುಗಿಸಿದರೆ ಪಿಯುಸಿ ಶಿಕ್ಷಣವನ್ನು ಮಹೇಶ್ ಪಿಯು ಕಾಲೇಜಿನಲ್ಲಿ

ಮುಗಿಸಿದೆ. 

ನನ್ನ ತಂದೆ ಅಶೋಕ ಆರ್ ಚಂಚಿ ದಾವಣಗೆರೆಯಲ್ಲಿ ಫಾರ್ಮಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ನನ್ನ ಅಮ್ಮ ಶಶಿರೇಖ ಸಿ ಎ, ಎಂ.ಎಸ್ಸಿ ಪದವೀಧರರಾಗಿದ್ದು ಮನೆಯಲ್ಲೆ ಮಕ್ಕಳಿಗೆ ಪಾಠ ಹೇಳಿಕೊಡುತ್ತಾರೆ. ನನಗೆ ಒಬ್ಬ ತಂಗಿ ಇದ್ದಾಳೆ. ಅವಳ ಹೆಸರು ಐಸಿರಿ ಸಿ ಎ. ಅವಳು ಮೊದಲನೆ ಪಿ.ಯು.ಸಿ ಓದುತ್ತಿದ್ದಾಳೆ.

ಸಾಧನೆ[ಬದಲಾಯಿಸಿ]

ನಾನು ಹತ್ತನೆ ತರಗತಿಯಲ್ಲಿರುವಾಗ ನಮ್ಮ ಶಾಲೆಗೆ IRIS(INITIATIVE FOR RESEARCH AND INNOVATION IN SCIENCE) ತಂಡವು ಮಕ್ಕಳ ವಿಜ್ಞಾನ ಆಸಕ್ತಿಯನ್ನು ಬೆಳೆಸಲು ಹೊಸ ಅನ್ವೇಷಣೆ ಮಾಡುವ ಅವಕಾಶ ನೀಡಿತು. ನಾನು ನನ್ನ ಸ್ನೇಹಿತೆ ಸೇರಿ ಒಂದು ಗಣಿತ ಯೋಜನೆ 'DISSECTION OF A GIVEN SQUARE INTO 'N' CONGRUENT SQUARES' ಕೊಟ್ಟೆವು. ನಮ್ಮ ಶಾಲೆಯಿಂದ ನಾಲ್ಕು ಅನ್ವೇಷಣೆಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದವು. ಅದರಲ್ಲಿ ನಮ‍್ಮ ಯೋಜನೆ ಒಂದು. ರಾಷ್ಟ್ರಮಟ್ಟಕ್ಕೆ ಆಯ್ಕೆ ಆದ ೧೧೨ ಯೋಜನೆಗಳಲ್ಲಿ ನಮ್ಮದು ಒಂದು. ನಾವು ದೆಹಲಿಯಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದೆವು. ಅಲ್ಲಿ ೧೭ ವಿಭಾಗಗಳಿದ್ದವು. ನಾವು ಗಣಿತ ವಿಭಾಗದ ಅವಿಷ್ಕಾರದಲ್ಲಿ ಭಾಗವಹಿಸಿದ್ದೆವು. ಚಿನ್ನದ ಪದಕ, ಬೆಳ್ಳಿ ಪದಕ ಮತ್ತು ಬೇರೆ ಬೇರ ತರಹದ ಬಹುಮಾನಗಳಿದ್ದವು. ನಾವು ಗಣಿತದ ವಿಭಾಗದಲ್ಲಿ ಚಿನ್ನದ ಪದಕವನ್ನು ತೆಗೆದುಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಆಯ್ಕೆ ಆದೆವು. ಎಲ್ಲಾ ದೇಶಗಳಿಂದ ಆಯ್ಕೆ ಆದ ಸುಮಾರು ೧೨೦೦ ಯೋಜನೆಗಳು ಆರಿಜೋನ, ಅಮೇರಿಕದಲ್ಲಿ ನಡೆದ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಅಲ್ಲಿಗೆ ಹೋಗುವ ಮುಂಚೆ ನಾವು ೩ ಶಿಬಿರಗಳಲ್ಲಿ ಭಾಗವಹಿಸಿ ನಮ‍್ಮ ಅವಿಷ್ಕಾರವನ್ನು ತುಂಬಾ ಅಭಿವೃದ್ಧಿಸಿಕೊಂಡೆವು. ಮೇ ೮ ರಿಂದ ೧೨ರ ತನಕ ನಡೆದ ಆ ಸ್ಪರ್ಧೆಯಲ್ಲಿ ವಿವಿಧ‍ ದೇಶದ ವಿಜ್ಞಾನಿಗಳು ಹಾಗೂ ಸ್ಪರ್ಧಿಗಳ ಜೊತೆ ಸ್ಪರ್ಧಿಸಿ ನಾವು ಕಲಿತಿದ್ದು ಬಹಳ. ಅಲ್ಲಿ ನಮಗೆ ಒಂದು ದಿನ ಪಿನ್ ಎಕ್ಸ್ಚೇಂಜ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ತುಂಬಾ ದೇಶಗಳೊಡನೆ ನಾವು ನಮ್ಮ ದೇಶದ ಪಿನ್ ಕೊಟ್ಟು ಅವರ ದೇಶದ ಪಿನ್ಗಳನ್ನು ತೆಗೆದುಕೊಂಡೆವು . ಇದರಿಂದ ನಾವು ಎಷ್ಟೋ ದೇಶಗಳ ಪರಿಚಯ ಮಾಡಿಕೊಂಡೆವು. ನಂತರ ಮರುದಿನ ನಮ್ಮ ಅವಿಷ್ಕಾರಗಳನ್ನು ವಿಜ್ಞಾನಿಗಳಿಗೆ ತೋರಿಸಿ ಅದರ ಬಗ್ಗೆ ವಿವರಣೆ ಕೊಟ್ಟೆವು. ಅಲ್ಲಿಯೂ ನಾವು ೪ನೇ ಬಹುಮಾನ ಪಡೆದು ನಮ್ಮ ದೇಶವನ್ನು ಪ್ರತಿನಿಧಿಸಿದೆವು. ಅಲ್ಲಿ ನಮಗೆ ೫೦೦$ಗಳನ್ನು ಕೊಟ್ಟರು. ಭಾರತಕ್ಕೆ ಹಿಂದಿರುಗಿದಾಗ ನಮಗೆ ದೆಹಲಿಯಲ್ಲಿ ರಾಹುಲ್ ‍ಗಾಂಧಿಯೊಡನೆ ಚಹಾಕೂಟ ಇತ್ತು. ಅವರ ಮನೆಯಲ್ಲೇ ಚಹಾಕೂಟವನ್ನು ಏರ್ಪಡಿಸಲಾಗಿತ್ತು. ನಂತರ ಅವರೊಡನೆ ಮಾತನಾಡಿ ಅಲ್ಲಿಂದ ಹೊರಟೆವು. ಅಲ್ಲಿಂದ ಬಂದಾಗ ನಮಗೆ ಬಹಳ ಕಡೆ ಸನ್ಮಾನ ಮಾಡಿದರು. ನಮಗೆ ಸಿಬಿಎಸ್ಸಿ ಬೋರ್ಡ್ ನ ನಿರ್ವಾಹಕರಾದ ವಿನೀತ್ ಜೋಶಿ ಅವರು ಜುಲೈ ೩, ೨೦೧೩ರಂದು ಪ್ರಶಂಸೆಯ ಹಾಗು ಪ್ರಮಾಣ ಪತ್ರವನ್ನು ‍ದೆಹಲಿಗೆ ಕರೆಸಿ ಗೌರವದಿಂದ ನೀಡಿದರು. ನಂತರ ಕರ್ನಾಟಕ ಸರ್ಕಾರ ಸೆಪ್ಟೆಂಬರ್ ೧೬, ೨೦೧೪ರಂದು ನಮಗೆ ಬೆಂಗಳೂರಿಗೆ ಕರೆದು ಸನ್ಮಾನ ಮಾಡಿದರು. ಜಗಳೂರಿನಲ್ಲಿ ಗಣಿತದ ದಿವಸವನ್ನು ಏರ್ಪಡಿಸಿ ನಮ್ಮನ್ನು ಮುಖ್ಯ ಅತಿಥಿಗಳಾಗಿ ಕರೆದಿದ್ದರು. ನನಗೆ ನನ್ನ ಶಾಲೆಯಲ್ಲೂ ಸನ್ಮಾನ ಮಾಡಿದರು ಹಾಗು ನನ್ನ ಕಾಲೇಜಿನಲ್ಲೂ ಸನ್ಮಾನ ಮಾಡಿದರು.

ಗುರಿ[ಬದಲಾಯಿಸಿ]

ನನಗೆ ಪಿ.ಹೆಚ್ಡಿಯನ್ನು ಕೆಮಿಸ್ಟ್ರಿಯಲ್ಲಿ ಮಾಡಬೇಕೆಂಬ ಆಸೆ ಇದೆ ಅಷ್ಟಲ್ಲದೆ ನನಗೆ ಸಂಶೋಧನೆಯಲ್ಲಿ ಕೆಲಸ ಮಾಡುವ ಗುರಿ ಇದೆ.

Indian School.pngThis user is a member of WikiProject Education in Indiaಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Aishwarya CA