ಸದಸ್ಯ:Advaitha Chitragar
ಅದ್ವೈತ ಚಿತ್ರಾಗರ್ ಆದ ನಾನು, ಭಾರತದ ಪಶ್ಚಿಮ ಭಾಗದ ಒಂದು ರಾಜ್ಯವಾದ ಮಹಾರಾಷ್ಟ್ರದ ಮುಂಬೈನಲ್ಲಿ ಕೆಲಸ ಮಾಡುತ್ತಿರುವ ಒಬ್ಬ ಇಂಜಿನಿಯರ್. ನಾನು ಕರ್ನಾಟಕದಲ್ಲಿ ಹುಟ್ಟಿದ ಒಬ್ಬ ಕನ್ನಡದ ಹುಡುಗ. ಓದು ಮತ್ತು ಕೆಲಸದ ಮೇರೆಗೆ ಮುಂಬೈಗೆ ಬಂದ ನಾನು, ಈಗ ಅಲ್ಲಿಯೇ ನೆಲೆಸಿರುವೆನು.೨೬ ವಯಸ್ಸಿನ ನಾನು ಒಬ್ಬ ಹವ್ಯಾಸಿ ಓದುಗಾರ. ನಾನು ಬಹಳವಾಗಿ ನಾನಾ ರೀತಿಯ ಬರಹಗಳನ್ನು ಹಾಗೂ ಪುಸ್ತಕಗಳನ್ನು ಓದುತ್ತೇನೆ ಮತ್ತು ಇದರಿಂದ ಜ್ಞಾರ್ಜನೆ ಮಾಡುವುದು ಎಂದರೆ ನನಗೆ ಎಲ್ಲಿಲ್ಲದ ಆಸಕ್ತಿ. ಬಹಳ ಜನರು ಹೇಳುವ ಹಾಗೆ ಜ್ಞಾನವೇ ಎಲ್ಲಕಿಂತ ಮಿಗಿಲಾದ ಶಕ್ತಿ ಎಂದು ನಂಬಿರುವವನು . ಎಷ್ಟು ಜ್ಞಾನ ವನ್ನು ಪಡೆದರು ಸಾಲದು ಎನ್ನುವಂತೆ ನನ್ನ ಓದುವ ಹವ್ಯಾಸ. ಬರೀ ಓದಿಗೆ ಸೀಮಿತವಾಗದ ನನ್ನ ಹವ್ಯಾಸ, (ಫೋಟೋಗ್ರಫೀ) ಛಾಯಾಚಿತ್ರಗಾರನನ್ನಾಗಿಯೂ ಮಾಡಿದೆ.
ಹವ್ಯಾಸಿ ಛಾಯಾಚಿತ್ರಗಾರನಾಗಿ ನಾನು ಪ್ರಕೃತಿಯ ಸೌಂದರ್ಯವನ್ನು ಸೆರೆ ಹಿಡಿಯಲು ಬಯಸುತ್ತೇನೆ. ಒಬ್ಬ ಪ್ರಕೃತಿ ಪ್ರೇಮಿಯಾದ ನಾನು ಸುಂದರ ಸುಮನೋಹರ ಪ್ರಕೃತಿಯನ್ನು ಮತ್ತು ಅದರವಿಚಿತ್ರ ವೈಶಿಷ್ಠತೆಗಳನ್ನುಅದರ ಹತ್ತಿರದಿಂದ ಸವಿಯಲು ಇಚ್ಛೆ ಪಡುವಂತ ಒಬ್ಬ ನಿಸರ್ಗ ಪ್ರೇಮಿ ಮತ್ತು ಅದರ ವಿಚಿತ್ರ ವೈಶಿಷ್ಠತೆಗಳನ್ನುನನ್ನ ಕ್ಯಾಮರ ದಲ್ಲಿ ಸೆರೆಹಿಡಿಯಲು ಬಯಸುತ್ತೇನೆ. ಬರೀ ಪ್ರಕೃತಿಗೆ ಸೀಮಿತವಾಗದ ನನ್ನ ಛಾಯಾಚಿತ್ರಗಾರಿಕೆ ಬೇರೆಯದಕ್ಕೂ ಮೀಸಲಾಗಿದೆ. ನನ್ನ ಪ್ರಕೃತಿ ಪ್ರೇಮ ಮತ್ತು ಫೋಟೋಗ್ರಫೀ ಈ ಎರಡು ಹವ್ಯಾಸಗಳು ನನ್ನನ್ನು ಬೇರೆ ಬೇರೆ ಜಾಗಗಳಿಗೆ ಮತ್ತು ಊರುಗಳಿಗೆ ಹೋಗುವಂತೆ ಮಾಡುತ್ತವೆ ಮತ್ತು ನನ್ನ ಹವ್ಯಾಸಗಳನ್ನು ಕಾಪಾಡಿಕೊಳ್ಳಲು ನಾನು ನನ್ನ ಗೆಳೆಯರೊಡನೆ ಉತ್ತಮ ಪ್ರಕೃತಿ ತಾಣಗಳು, ಪ್ರವಾಸಿತಾಣಗಳು ಮತ್ತಿತರ ಜಾಗಗಳನ್ನು ಆಗಿಂದಾಗೆ ಬೇಟಿ ಮಾಡುತ್ತಿರುತ್ತೇನೆ.
ಇದು ನನಗೆ ಸಂತೋಷ ಸಂತಸಗಳೆರಡನ್ನು ನೀಡುವುದಲ್ಲದೆ ನನ್ನ ಜ್ಞಾನಾರ್ಜನೆಗೂ ಸಹಾಯ ಮಾಡುತ್ತದೆ. ಮತ್ತು ಪ್ರಕೃತಿಗೆ ಹತ್ತಿರವಾದ ಅದರ ಮಡಿಲೇ ಆದ ಕಾಡಿನಲ್ಲಿ ಪ್ರಕೃತಿಯ ಪರಿಚಯವಾಗುವಷ್ಟು ಇನ್ನೆಲ್ಲೂ ಆಗಲು ಸಾಧ್ಯವಿಲ್ಲ ಹಾಗಾಗಿ ನನ್ನ ವೈಲ್ಡ್ಲೈಫ್ ಫೋಟೋಗ್ರಫೀ ಇಂದ ಕಾಡು ಮೃಗಗಳ ಮತ್ತು ಕಾಡಿನ ನಿಸರ್ಗದತ್ತ ದೈನಂದಿನ ಆಗುಹೋಗುಗಳನ್ನು ಸೆರೆಹಿಡಿಯುವುದು ನನ್ನ ಮತ್ತೊಂದು ಹವ್ಯಾಸ.
ಇಷ್ಟೆಲ್ಲ ಹವ್ಯಾಸಗಳನ್ನು ಹೊಂದಿರುವ ನಾನು ನನ್ನ ಅನುಭವಗಳನ್ನು ನಾನೇ ಇಟ್ಟುಕೊಳ್ಳುವುದು ಸರಿಯಲ್ಲ. ಜ್ಞಾನವನ್ನು ಹಚಿಕೊಂಡಷ್ಟು ನಮ್ಮ ಅರಿವು ಹೆಚ್ಚುವುದು ಎನ್ನುವುದು ನನ್ನ ಭಾವನೆ. ಹಾಗಾಗಿ ನನ್ನ ಮತ್ತೊಂದು ಅಭ್ಯಾಸ ವಾದ ಬರವಣಿಗೆಯನ್ನು ಬಳಸಿ ಜನರಿಗೆ ನನ್ನ ಅನುಭವಗಳನ್ನು ಹಂಚಿಕೊಳ್ಳಲು ನನ್ನ ಬ್ಲೋಗ್ನಲ್ಲಿ ಬರೆಯುತ್ತೇನೆ. ನನ್ನ ಬ್ಲೋಗ್ ಬರವಣಿಗೆ ಇಂದ ಜನರು ಚಿತ್ರಗಳ ಸಮೇತ ಮತ್ತು ಅನುಭವಗಳನ್ನು ಒಳಗೊಂಡ ಸಂಪೂರ್ಣ ಮಾಹಿತಿಯನ್ನುಬೇರೆಲ್ಲೂ ಹುಡುಕಾಡದಹಾಗೆ ಪ್ರತಿಯೊಂದು ಸಣ್ಣ ವಿವರಗಳನ್ನು ಒಳಗೊಂಡಂತೆ , ಒಂದು ಜಾಗದ ಅಥವಾ ವಿಷಯದಮೇಲೆ ನನ್ನ ಬರವಣಿಗೆಯ ಮೂಲಕ ತಿಳಿಸಿಕೊಡಬೇಕು ಎನ್ನುವುದು ನನ್ನ ಆಶಯ. ಮತ್ತು ಇದರಿಂದ ಜನರಿಗೆ ನನ್ನ ತಿಳುವಳಿಕೆಯ ಹಂಚಿಕೆಯಾಗುವುದು ಎನ್ನುವುದು ನನ್ನ ಭಾವನೆ.