ಸದಸ್ಯ:Aditya K Hajeri447
ಮೂಲ ಮಾಹಿತಿ
ನಾನು ಆದಿತ್ಯ. ಪೂರ್ಣ ಹೆಸರು ಆದಿತ್ಯ ಕೆ ಹಜೇರಿ,ಹುಟ್ಟಿದ್ದು ೨೨/೨/೧೯೯೮ ಬೆಂಗಲೂರಿನ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಸಂಜೆ ಸುಮಾರು ೮ ಗಂಟೆಗೆ ಜನಿಸಿದೆ.ತಂದೆ ಕೃಷ್ಣ ಪ್ರಸಾದ್ ಹಾಗೂ ತಾಯಿ ರೂಪ,ಒಬ್ಬಳು ತಂಗಿಯೂ ಇದ್ದಾಳೆ ಅವಳು ೯ನೆ ತರಗತಿ ನಲ್ಲಿ ಓದುತ್ತಿದ್ದಾಳೆ ಅವಳ ಹೆಸರು ಆಕಾಂಕ್ಷಾ.
ನನ್ನ ವಿಧ್ಯಭ್ಯಾಸ
ನಾನು ನನ್ನ ಶಾಲೆಯನ್ನು ವೈಟ್ ಫೀಲ್ಡ್ ನಲ್ಲಿ ಇರುವ ಸಂತ ಧಾಮಸ್ ಶಾಲೆನಲ್ಲಿ ಓದಿದೆನು,ಶಾಲೆಯ ನೆನಪುಗಳು ಇನ್ನು ಹಸಿರಾಗಿ ಇವೆ.ಹತ್ತನೇ ತರಗತಿಯಲ್ಲಿ ನಾನು ಶೇಕಡ ೮೪ ಪರ್ಸೆಂಟ್ ಗಳಿಸಿದೆ,ಹಾಗೂ ದ್ವಿತೀಯ ಪಿಯುಸಿಯನ್ನು ಸರಸ್ವತಿ ವಿಧ್ಯಾನಿಕೇತನದಲ್ಲಿ ಮಾಡಿದೆನು, ಪಿಯುಸಿ ನಲ್ಲಿ ಏನು ಸಹ ಒಳ್ಳೆಯ ನೆನಪುಗಳು ಇಲ್ಲ ಏಕೆಂದರೆ ಅಲ್ಲಿಯೇ ನಾನು ಹೆಚ್ಚು ಕಷ್ಟ ಪಟ್ಟಿರುವುದು ಆದ್ದರಿಂದಲೇ ನಾನು ಪಿಯುಸಿ ನಲ್ಲಿ ೯೩ ಪರ್ಸೆಂಟ್ ಅಂಕ ಗಳಿಸಲು ಸಾಧ್ಯವಾಯಿತು.ಈಗ ಡೈರಿ ಸರ್ಕಲ್ ಹತ್ತಿರ ಇರುವ ಕ್ರೈಸ್ಟ್ ವಿಶ್ವವಿದ್ಯಾಲಯ ಬಿಕಾಂ ಅನ್ನು ವ್ಯಾಸಂಗ ಮಾಡುತ್ತಿದ್ದೇನೆ.
ನನ್ನ ಇಷ್ಟವಾದ ವ್ಯಕ್ತಿಗಳು
ನಾನು ಇಷ್ಟ ಪಡುವ ವ್ಯಕ್ತಿ ಅಂದರೆ ನನ್ನ ತಂದೆ ಅವರು ನನಗೆ ಮಾರ್ಗ ದರ್ಶನವನ್ನು ಸದ ನೀಡುತ್ತಾರೆ ಹಾಗೂ ಅವರ ಮಾರ್ಗ ದರ್ಶನಗಳು ನನ್ನನು ರೋಮಾಂಚನ ಗೊಳಿಸುತ್ತದೆ.ಅವರ ನಡೆ ನುಡಿ ನನಗೆ ಮಾರ್ಗದರ್ಶನವಾಗಿದೆ ಆದ್ದರಿಂದ ಅವರೇ ನನ್ನ ಸರ್ವಸ್ವ ನಾನು ಇಲ್ಲಿ ತನಕ ಬರಲು ಕಾರಣವೇ ನನ್ನ ತಂದೆ ಅವರಿಂದಲೇ ನಾನು ಈ ಸ್ಥಿತಿಯಲ್ಲಿ ಇರುವೆ ಆದ್ದರಿಂದ ನನ್ನ ಜೀವ ಯಾವಾಗಲೂ ನನ್ನ ತಂದೆ ಗೋಸ್ಕರ.↵ಇನ್ನೊಬ್ಬ ವ್ಯತ್ಕಿಯು ನಾನು ಗೌರವಿಸುವುದು ಎಂದರೆ ಮಹೇಂದ್ರ ಸಿಂಘ್ ಧೋನಿ ಅವರ ಆದರ್ಶಗಳು ತುಂಬಾ ಚೆನ್ನಾಗಿವೆ ಅವರ ನಡೆ ನುಡಿಗಳು ಸಹ ನಾನು ಪಾಲಿಸುತೀನೆ.ಅವರು ಭಾರತ ಕ್ರಿಕೆಟ್ನ ಒಳ್ಳೆಯ ನಯಕವಲ್ಲದೆ ಒಬ್ಬ ಒಳ್ಳೆಯ ಪ್ರಜೆಯೂ ಹೌದು.↵ಆದ್ದರಿಂದ ನಾನು ಇಷ್ಟ ಪಡುವ ವ್ಯಕ್ತಿಗಳೆಂದರೆ ನನ್ನ ತಂದೆ ಹಾಗೂ ಮಹೇಂದ್ರ ಸಿಂಘ್ ಧೋನಿ ಯಾಗಿರುತಾರೆ.
ನನ್ನ ಹವ್ಯಾಸಗಳು
ನಾನು ಎಲ್ಲ ತರಹದ ಕೆಲಸ,ಆಟ,ಇತ್ಯಾದಿ ಇತ್ಯಾದಿ ಮಾಡಲು ಇಚ್ಛಿಸುತ್ತೇನೆ.ಕ್ರಿಕೆಟ್ ನನ್ನ ಇಷ್ಟವಾದ ಆಟ,ಹಾಗೂ ನಾನು ಅದರಲ್ಲಿ ರಾಷ್ಟ್ರ ಮಟ್ಟದಲ್ಲಿಯು ಆಡಿದೀನೆ.ಫುಟ್ಬಾಲ್ ರಾಜ್ಯ ಮಟ್ಟ ಹಾಗೂ ದ್ರೋಬಲ್ ಸಹ ರಾಷ್ಟ್ರ ಮಟ್ಟದಲ್ಲಿ ಆಡಿದೇನೆ.ಕ್ರೀಡೆ ಕಿಂತ ಇನ್ನು ಚಿತ್ರ ಬಿಡಿಸಲು ಇಚ್ಛಿಸುತ್ತೇನೆ. ನಾನು ನನ್ನಷ್ಟೇ ಒಬ್ಬ ಪ್ರತಿಭಾವಂತ ಅಂದು ಹೇಳಿಕೊಳ್ಳಲು ಇಷ್ಟ ಪಡುತ್ತೇನೆ.
ನನ್ನ ಗುರಿಗಳು ಹಾಗು ಸಾಧನೆಗಳು
ನಾನು ಒಬ್ಬ ಒಳ್ಳೆಯ ಪ್ರಜೆ ಆಗಲು ಇಷ್ಟ ಪಡುತ್ತೇನೆ.ಆದ್ದರಿಂದ ನಾನು ನನ್ನ ಪದವಿ ನಂತರ ಐಎಎಸ್ ಮಾಡಲು ಇಷ್ಟ್ ಪಡುತ್ತೇನೆ.ಹಾಗೂ ಈ ಭಾರತಕ್ಕೆ ಒಳ್ಳೆಯ ಪ್ರದಾನ ಮಂತ್ರಿ ಆಗಲು ಇಷ್ಟ ಪಡುತ್ತೇನೆ.↵ನಾನು ಇಲ್ಲಿಯ ತನಕ ಒಳ್ಳೆಯ ಕೆಲಸ ಮಾಡಿರುವುದು ಎಂದರೆ,ಇಲ್ಲಿಯವರೆಗೂ ಐದು ಸಲ ನನ್ನ ರಕ್ತವನ್ನು ದಾನ ಮಾಡಿರುವುದು ನಾನು ಮಾಡಿರುವ ಒಳ್ಳೆಯ ಕೆಲಸಗಳಲ್ಲಿ ಇದು ಒಂದು ಒಳ್ಳೆಯ ಕೆಲಸವಾಗಿದೆ.ರಕ್ತ ದಾನ ಮಹಾ ದಾನವೆನ್ನುವರು ಏಕೆಂದರೆ ನಾವು ಒಬ್ಬ ಕಷ್ಟದಲ್ಲಿರುವ ವ್ಯಕ್ತಿಗೆ ಸಹಾಯ ಮಾಡಿದಂಗೆ ಅವರ ಸಾವಿನ ಸಮಯದಲ್ಲಿ ನಮ್ಮ ರಕ್ತ ಅವರನ್ನು ಉಳಿಸಬಹುದು ಆದ್ದರಿಂದ ನಾನು ವರ್ಷಕೆ ಎರಡು ಸಲ ರಕ್ತವನ್ನು ದಾನ ಮಾಡುತ್ತೇನೆ. ↵ನನ್ನ ಉಸಿರು ಈ ಕರ್ನಾಟಕ ಗೋಸ್ಕರ ಹಾಗು ಭಾರತ ಗೋಸ್ಕರ.ನಾನು ಒಬ್ಬ ದೇಶದ ಪ್ರೇಮಿಯೂ ಹೌದು ↵ಹಾಗು ಸಾಯುವುದುದಾದರೆ ಭಾರತದಲ್ಲಿಯೆ ಹೌದು.↵ಜೈ ಕರ್ನಾಟಕ ↵ಜೈ ಭಾರತ