ಸದಸ್ಯ:Achyuta Kaushik/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬ್ಲಾಕ್ ಚೈನ್ ವಿವರಣೆ-ಭದ್ರತೆ

ಪರಿಚಯ[ಬದಲಾಯಿಸಿ]

ಇದು ಬಂದು ಆನ್-ಲೈನ್ ವ್ಯವಹಾರಗಳ ಬೆಳೆಯುತ್ತಿರುವ ದಾಖಲೆಗಳು.ಪ್ರತಿಯೊಂದೂ ಬ್ಲಾಕ್ ಚೇನಿನ ಘಟಕದಲ್ಲಿ ಹಿಂದಿನ ಘಟಕದ ಕ್ರಿಪ್ಟೋಗ್ರಾಫಿಕ್ ಹ್ಯಾಶ್ ಜೊತೆಗೆ ಟೈಮ್‌ಸ್ಟ್ಯಾಂಪ್ ಇರುತ್ತದೆ. ಈ ಕ್ರಿಪ್ಟೋಗ್ರಾಫಿಯಿಂದ ಈ ತಂತ್ರಜ್ಞಾನದ ಭದ್ರತೆಯನ್ನು ಹೆಚ್ಚಿಸುತ್ತದೆ.

ವಿನ್ಯಾಸದಿಂದ ಬ್ಲಾಕ್ ಚೀನ್ ಅದರಲ್ಲಿರುವ ವಿಶಯಕ್ಕೆ ನಿರೋಧವಾಗಿರುತ್ತದೆ. ಇದು ತೆರೆದ, ವಿತರವಾದ ದಾಖಲೆ (ಒಪೆನ್, ಡಿಸ್ಟ್ರಿಬ್ಯುಟೆಡ್). ಈ ತಂತ್ರಜ್ಞಾನವು ಎರಡು ಪಕ್ಷಗಳ ನಡುವೆ ನಡೆಯುವ ವ್ಯವಹಾರಗಳನ್ನು ದಾಖಲೆಗೊಳಿಸುತ್ತದೆ. ಇದನ್ನು ಬದಲಾಯಿಸಬಹುದಾದರು ಇದನ್ನು ಹೆಚ್ಚು ಭದ್ರತೆಯಿಂದ(ಸೆಕ್ಯೂರಿಟಿ) ಕಲ್ಪಿಸಲಾಗುತ್ತದೆ.

ಈ ತಂತ್ರಜ್ಞಾನವನ್ನು ಸತೋಶಿ ನಾಕಮೋಟೊ[೧] ಎಂಬ ಒಬ್ಬ ವ್ಯಕ್ಥಿ ಅಥವ ಇದೆ ಹೆಸರ ಕೆಳಗೆ ಕೆಲಸ ಮಾಡಿದ ಒಂದು ತಂಡ ರಚಿಸಿರುವುದು ಎಂಬ ನಂಬಿಕೆ ಇದೆ. ಇದನ್ನು ೨೦೦೮ರಲ್ಲಿ ಬಿಟ್-ಕಾಇನ್ ಮೂಲಕ ಪ್ರಾರಂಭಗೊಂಡದ್ದು ಎಂದು ಹೇಳಬಹುದು.

ಇತಿಹಾಸ[ಬದಲಾಯಿಸಿ]

ಮೊದಲ ಬಾರಿಗೆ ಕ್ರಿಪ್ಟೊಗ್ರಫಿ ಎಂದರೆ ಗುಪ್ತ ಲಿಪಿ ಶಾಸ್ತ್ರವನ್ನು ಇಂತಹದ್ದಾಗಿ ಉಪಯೂಗಿಸಬಹುದೆಂದು ಸ್ಟುಅರ್ಟ್ ಹೆಬರ್ ಮತ್ತು ಸ್ಕಾಟ್ ಸ್ಟಾರ್ನೆಟ್ಟ ಎಂಬುವರು ೧೯೯೧ ರಲ್ಲಿ ವಿವರಿಸಿದ್ದು. ಇವರಿಬ್ಬರು ಟೈಮ್‌ಸ್ಟ್ಯಾಂಪನ್ನು ಬದಲಾಯಿಸಲಾಗದಂತಹ ಒಂದು ವ್ಯವಸ್ಥೆಯನ್ನು ಕಾರ್ಯಗತಗೊಳಿಸಲು ಇಚ್ಚೆಯನ್ನಿಟ್ಟಿದ್ದರು.

ಹಿಂದೆ ಹೇಳಿರುವಹಾಹೆ ಬ್ಲಾಕ್ ಚೇನನ್ನು ಮೊದಲು ಸತೋಶಿ ನಾಕಮೋಟೊ ಎಂಬವನು ೨೦೦೮ ರಲ್ಲಿ ಮೊದಲನೆಯ ಬಾರಿಗೆ ಉಪಯೋಗಿಸಿದ್ದು. ಇದರ ಮೂಲಕವಾಗಿ ಬಿಟ್ಕಾಯಿನ್ ಎಂಬ ಕ್ರಿಪ್ಟೋಕರೆನ್ಸಿ ಜನಿಸಿತು. ೨೦೧೪ ರ ಅಗಸ್ತಿನಲ್ಲಿ ಬಿಟ್ ಕಾಇನ್ನಿನ್ಸ ಫೈಲ್ ಗಾತ್ರ ಬಂದು ೨೦ ಗಿ.ಬಿ. ಅ‌‍‍‍ಷ್ಟು ಮುಟ್ಟಿತ್ತು. ಜನವರಿ ೨೦೧೫ ರ ವೇಳೆಗೆ ಇದರ ಗಾತ್ರ ೩೦ ಗಿ.ಬಿ. ಆಗಿತ್ತು, ಜನವರಿ ೨೦೧೬ ರಿಂದ ೨೦೧೭ ರ ವೇಳೆಗೆ ಇದರ ಗಾತ್ರ ೫೦ ಗಿ.ಬಿ. ಇಂದ ೧೦೦ ಗಿ.ಬಿ. ಸೇರಿತು.

ಆರಂಭದಲ್ಲಿ ಸತೋಶಿಯ ಕಾಗದದಲ್ಲಿ ಬ್ಲಾಕ್ ಮತ್ತು ಚೇನ್ ಬೇರ್ಪಡಿಸಿ ಉಪಯುಕ್ತವಾದರು ಇಂದು ಇವೆರಡರನ್ನು ಒಗ್ಗಟ್ಟಿನಲ್ಲೆ ಉಪಯೋಗಿಸಲಾಗಿಬಂದಿದೆ.

ಬಳಕೆಗಳು[ಬದಲಾಯಿಸಿ]

ಈ ತಂತ್ರಜ್ಞಾನವನ್ನು ಹಲವಾರು ಕ್ಷೇತ್ರಗಳಲ್ಲಿ ಉಪಯೋಗಿಸಲಾಗುತ್ತದೆ. ಅವುಗಳಲ್ಲಿ ಈಗ ಕೊದಲಗಬರುವ ಕೆಲವು ಉದಾಹರಣೆಗಳು ಇವು:

ಕ್ರಿಪ್ಟೋಕರೆನ್ಸಿ[೨]

ಬಿಟ್ ಕಾಯಿನ್ ಲೋಗೊ

ಹೆಚ್ಚು ಭಾಗ ಕ್ರಿಪ್ಟೋಕರೆನ್ಸಿಗಳು ವ್ಯವಹರಗಳನ್ನು ಗೆರೆಹಾಕಲು ಬ್ಲಾಕ್ ಚೇನನ್ನು ಉಪಯೋಗಿಸುತ್ತದೆ. ಉದಾಹರಣೆಗೆ ಬಿಟ್ಕಾಯಿನ್ ನೆಟ್‌ವರ್ಕ್ ಮತ್ತು ಇಥೀರಿಯಮ್ ನೆಟ್‌ವರ್ಕ್ ಎರಡು ಕೂಡ ಬ್ಲಾಕ್ ಚೇನಿನ ಮೇಲೆ ಆಧಾರಿತವಾದದ್ದು. ೨೦೧೮ ರಲ್ಲಿ ಫೆಸ್-ಬೂಕ್ ಕೂಡ ಅದರದೇ ಆದ ಒಂದು ಕ್ರಿಪ್ಟೋಕರೆನ್ಸಿಯನ್ನು ಪ್ರಾರಂಬಗೊಳಿಸುತ್ತದೆಂದು ಘೋಷಿಸಿತು. ಈ ಪ್ಟೋಕರೆನ್ಸಿಯ ಹೆಸರು ಲಿಬ್ರಾ.

ಬುದ್ಧಿವಂತ(ಸ್ಮಾರ್ಟ್) ಕರಾರು[೩]

ಬ್ಲಾಕ್ ಚೇನ್ ಆಧಾರಿತವಾದ ಈ ಒಪ್ಪಂದಗಳು ಭಾಗವಾಗಿ ಅಥವ ಪೂರ್ಣಾವಾಗಿ ಮನುಷ್ಯನ ಸಹಾಯವಿಲ್ಲದೆ ಕಾರ್ಯಗತಗೊಳಿಸಬಲ್ಲದ್ದು. ಇದರ ಮುಖ್ಯ ಉದ್ದೇಶವು ಬಂದು ಸ್ವಯಂಚಾಲಿತ ಭರವಸೆಕಾಗದ.ಒಂದು ಸಂಶೋಧನೆಯ ಫಲಿತಾಂಶವಾಗಿ ತಿಳಿದುಬರುವ ವಿಷಯವೇನೆಂದರೆ ಇದರಿಂದ ನೈತಿಕ ಅಪಾಯ ಕಡಿಮೆಮಾಡುವುದರ ಜೊತೆಗೆ ಒಪ್ಪಂದದ ಉಪಯೋಗವನ್ನು ಅತ್ಯುತ್ತಮಗೊಳಿಸುತ್ತದೆ.

ಹಣಕಾಸು ಸೇವೆಗಳು

ಹಣಕಾಸು ಉದ್ಯಮದ ಪ್ರಮುಖ ಭಾಗಗಳು ಬ್ಲಾಕ್ ಚೇನ್ ಮೂಲಕ ವಿತರ ದಾಖಲೆಗಲನ್ನು ಜಾರಿಗೊಳಿಸಿಕೊಂಡಿವೆ. ಇದರಿಂದಾಗಿ ಇನಿಶ್ಯಲ್ ಕಾಯಿನ್ ಆಫರಿಂಗ್ ಅಥವ ಐ.ಸಿ.ಒ. ಮತ್ತು ಹಲವು ಭದ್ರತಾ ಟೋಕನ್ ಕೊಡುಗೆ ಅಥವ ಎಸ್.ಟಿ.ಒ ಎಂಬ ಡಿಜಿಟಲ್ ಆಸ್ತಿಗಳು ಬಂದಿವೆ.

ವೀಡಿಯೊ ಆಟಗಳು

ಕ್ರಿಪ್ಟೋಕಿಟ್ಟಿಸ್ ಎಂಬ ಆಟವು ಬ್ಲಾಕ್ ಚೇನ್ ಉಪಯೋಗದಿಂದ ಕೆಲಸ ಮಾಡುತ್ತದೆ. ಈ ಆಟದಲ್ಲಿ ಯೇನೆ ಖರೀದಿ ಮಾಡಬೇಕಾದರು ಇಥೀರಿಯಮ್ಮಿನ ಮೂಲಕ ವ್ಯವಹರ ಮಾಡಬೇಕಿತ್ತು. ಹೀಗೆ ಬೇರೆ ಆಟಗಳಲ್ಲು ಇದರ ಮೂಲಕ ಆಟದೊಳಗಿನ ಆಸ್ತಿ ಪತ್ತೆಹಚ್ಚಲು ಉಪಯೋಗಿಸಬಹುದು.

ಸರಬರಾಜು ಸರಪಳಿ

ಹಲವು ಉದ್ಯಮ ಸಂಸ್ಥೆಹಳು ಬ್ಲಾಕ್ ಚೇನನ್ನು ಸರಬರಾಜು ಮತ್ತು ಸರಬರಾಜಿನ ನಿರ್ವಹಣೆಗೆ ಉಪಯೊಗಿಸುವ ಪ್ರಯ್ತ್ನಗಳನ್ನು ಮಾಡಿವೆ. ಐ.ಬಿ.ಎಂ ಮತ್ತು ವಾಲ್ಮಾರ್ಟ್ ಎಂಬ ಸಂಸ್ಥೆಗಳು ಸಪ್ಲೈ ಚೈನ್ ಮಾನಿಟರಿಂಗ್ ಎಂಬಂತೆ ಒಂದು ಬ್ಲಾಕ್ ಚೈನ್ ಕೂಡಿದ ವ್ಯವಸ್ಥೆಯನ್ನು ಪರೀಕ್ಶಿಸಿ ಕಾರ್ಯಗತಗೊಳಿಸಲು ಪ್ರಯತ್ನಿಸುತ್ತಿದೆ.

ವಿಧಗಲಳು[ಬದಲಾಯಿಸಿ]

ಸಾರ್ವಜನಿಕ

ಈ ತರದ ಬ್ಲಾಕ್ ಚೈನಿಗೆ ಯಾವುದೆ ಪ್ರವೇಶ ಭದ್ರತೆ ಇರುವುದಿಲ್ಲ. ಇಂಟರ್ನೆಟ್ ಇರುವ ಯಾವುದೆ ವ್ಯಕ್ಥಿ ಇದರಿಂದ್ ವ್ಯವಹಾರ ಮಾಡಿಕೊಳ್ಳಬಹುದು.ಹಾಗು ಕಾಯಂಗೊಳಿಸಬಹುದು. ಇವು ಸಾಮಾನ್ಯವಾಗಿ ಇಂತಹ ನೆಟ್ ವರ್ಕ ಗಳು ಆರ್ಥಿಕ ಪ್ರೋತ್ಸಾಹವನ್ನು ನೀಡುತ್ತವೆ.

ಖಾಸಗಿ

ಇಂತಹ ನೆಟ್ವರ್ಕ್ ಗಳನ್ನು ರಕ್ಷಿಸಲಾಗುತ್ತದೆ. ನಿರ್ವಾಹಕರ ಅನುಮತಿ ಇಲ್ಲದೆ ಇದನ್ನು ಪ್ರವೇಶಿಸಲು ಆಗುವುದಿಲ್ಲ.

ಹೈಬ್ರಿಡ್

ಇಂತಹ ನೆಟ್ವರ್ಕ್ ಗಳಲ್ಲಿ ಕೆಲವು ಸಾರ್ವಜನಿಕ ಮತ್ತು ಕೆಲವು ಖಾಸಗಿ ನೆಟ್ವರ್ಕ್ಗಳ ವೈಶಿಷ್ಟ್ಯಗಳು ಹೊಂದಿರುತ್ತದೆ.

  1. https://en.wikipedia.org/wiki/Satoshi_Nakamoto
  2. https://en.wikipedia.org/wiki/Cryptocurrency
  3. https://en.wikipedia.org/wiki/Smart_contract