ವಿಷಯಕ್ಕೆ ಹೋಗು

ಸದಸ್ಯ:Abubakkar Siddeek H/ನನ್ನ ಪ್ರಯೋಗಪುಟ16

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ವಿಮಲನಾಥ, ಅನಂತನಾಥ, ಧರ್ಮನಾಥ ಸ್ವಾಮಿಯವರ ಪಡುಬಸದಿ, ಮೂಡುಬಿದಿರೆ

ಪಡುಬಸದಿಯು ಮೂಡುಬಿದಿರೆಯ ಬಸ್ ನಿಲ್ದಾಣದಿಂದಒಂದು ಕೀಮಿ ದೂರದಲ್ಲಿದೆ. ಶ್ರೀ ಜೈನ ಮಠದ ಸಮೀಪದಲ್ಲಿದೆ. ಇಲ್ಲಿ ಪೂಜಿಸಲ್ಪಡುವ ಮೂಲ ನಾಯಕರು 13ನೇ ತೀರ್ಥಂಕರರಾದ ಶ್ರೀ ವಿಮಲನಾಥ ಸ್ವಾಮಿ, 14ನೇ ತೀರ್ಥಂಕರ ಅನಂತನಾಥ ಸ್ವಾಮಿ,15ನೇ ತೀರ್ಥಂಕರಧರ್ಮನಾಥ ಸ್ವಾಮಿ.

ಇತಿಹಾಸ

[ಬದಲಾಯಿಸಿ]

ಇಲ್ಲಿ 1955ರ ಹೊತ್ತಿಗೆ ಪ್ರಾಚೀನ ತಾಡೋಲೆಗಳು ಮತ್ತುಕಲ್ಲಿನ ವಿಗ್ರಹಗಳು ಮೇಲ್ಛಾವಣಿಯಲ್ಲಿ ಸಿಕ್ಕಿವೆ.ಬಸದಿಯ ಉತ್ತರಕ್ಕೆ ಗೆಜ್ಜೆ ಬ್ರಹ್ಮನ ವಿಗ್ರಹವಿದೆ. ಇಲ್ಲಿಯಕ್ಷಿಯ ಮೂರ್ತಿಗಳಿದ್ದರೂ ಪ್ರಧಾನವಾಗಿ ಬ್ರಹ್ಮದೇವರನ್ನೇಗುರುವಾರದಂದು ಪೂಜಿಸಲಾಗುತ್ತದೆ. ಪಡುಬಸದಿಗೆ ಯಾವುದೇ ಮಾನಸ್ತಂಭವಿರುವುದಿಲ್ಲ.ಇಲ್ಲಿ ನಾಗನಕಲ್ಲುವಾಯುವ್ಯ ದಿಕ್ಕಿನಲ್ಲಿದ್ದು ಪ್ರಾಯಶಃ ನೈರುತ್ಯದಿಕ್ಕಿನಲ್ಲಿರುವಕಲ್ಲನ್ನು ನಂತರ ವಾಯುವ್ಯ ದಿಕ್ಕಿನಲ್ಲಿರಿಸಲಾಗಿದೆಎನ್ನಬಹುದು.[]

ಈ ಬಸದಿಯು ಗುರುಗಳ ಬಸದಿಗೆ ಸಮಕಾಲೀನ ಬಸದಿಯಾಗಿದೆ. ಗರ್ಭಗುಡಿಯಲ್ಲಿ ವಿವಿಧ ಕೆತ್ತನೆಯಿಂದ ಕೂಡಿದ ನಾಲ್ಕು ಶಿಲಾ ಸ್ತಂಭಗಳಿವೆ. ಇಲ್ಲಿ ಸಭಾಂಗಣ ಮತ್ತು ಗಂಧಕುಟಿ ಮಂಟಪವನ್ನುಕಾಣಬಹುದು. ಗರ್ಭಗುಡಿಯ ಮೇಲೆ ಉಲ್ಲೇಖಿಸಿರುವ 3 ಜಿನೇಶ್ವರರನ್ನು ಪೂಜಿಸಲಾಗುತ್ತದೆ. ಮೂರ್ತಿಗಳು ಶಿಲೆಯದ್ದಾಗಿವೆ. 3 ಅಡಿ ಎತ್ತರದ ಈ ಮೂರು ಮೂರ್ತಿಗಳು ಖಡ್ಗಾಸನ ಭಂಗಿಯಲ್ಲಿವೆ.ಪಡುಬಸದಿಯಲ್ಲಿ ಪ್ರತಿನಿತ್ಯ ದಿನಕ್ಕೆರಡು ಸಲ ಪೂಜೆ ನಡೆಯುತ್ತದೆ, ಬೆಳುವಾಯಿ ಮತ್ತುಕಾಂತಾವರ ಪುತ್ತಿಗೆ ಮತ್ತು ಪ್ರಾಂತ್ಯಗ್ರಾಮದ ಪರಂಪರಾಗತ ಪ್ರಮುಖರು ಪೂಜೆ ಪುರಸ್ಕಾರ ಸಲ್ಲಿಸುತ್ತಾರೆ.ಇದೇ ಜಮೀನಿನಲ್ಲಿ ಹಿಂದೆ ಶ್ರೀ ಜೈನ ಮಠವಿದ್ದು ಪ್ರಾಚೀನ ಮಠವು ಇಲ್ಲಿತ್ತೆಂದು ತಿಳಿದು ಬರುತ್ತದೆ.

ಆಡಳಿತ

[ಬದಲಾಯಿಸಿ]

ಪಡು ಬಸದಿಯ ಆಗ್ನೇಯ ದಿಕ್ಕಿನಲ್ಲಿಒಂದು ಚಿಕ್ಕ ಕೇಂದ್ರ ಕಚೇರಿಯಿದ್ದು ಮೂಲ ವ್ಯವಸ್ಥಾಪಕ ಮಂಡಳಿ ಶ್ರೀ ಮಠದಲ್ಲಿದೆ. ಶ್ರೀ ಮಠದ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿಯವರ ನೇತೃತ್ವದಲ್ಲಿ ಆಡಳಿತವನ್ನು ನಿರ್ವಹಿಸಲಾಗುತ್ತದೆ. 1994ರ ಸುಮಾರಿಗೆಜೀರ್ಣೋದ್ಧಾರ ಮಾಡಲಾಗಿದೆ.2000-2013ರಲ್ಲಿ 2 ಬಾರಿರಿಪೇರಿಕಾರ್ಯ ಮಾಡಲಾಗಿದೆ.ಇಲ್ಲಿರುವ ಶ್ರೀ ಅನಂತನಾಥ ಸ್ವಾಮಿಯ ಬಿಂಬವು ಉಳಿದ ಎರಡು ಮೂರ್ತಿಗಳಿಗಿಂತ ಹೆಚ್ಚು ಪ್ರಾಚೀನವೆಂದುಇಲ್ಲಿಯತಾಮ್ರ ಶಾಸನಗಳು ಹೇಳುತ್ತವೆ.

ಉಲ್ಲೇಖ

  1. ಶೆಣೈ, ಉಮನಾಥ್ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜುಶ್ರಿ ಪ್ರಿಂಟರ್ಸ್. pp. ೧೩೮.

ಜೈನ ಧರ್ಮದ ಪುಣ್ಯ ಕ್ಷೇತ್ರಗಳು