ವಿಷಯಕ್ಕೆ ಹೋಗು

ಸದಸ್ಯ:Abubakkar Siddeek H/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಭಿನಂದನನಾಥ ಸ್ವಾಮಿ

ಮೂರನೆಯ ತೀರ್ಥಂಕರನ ನಿರ್ವಾಣವಾಗಿ ಹತ್ತು ಲಕ್ಷಕೋಟಿ ಸಾಗರ ವರ್ಷಗಳು ಕಳೆದ  ಮೇಲೆ ನಾಲ್ಕನೆಯ ತೀರ್ಥಂಕರನಾದ ಅಭಿನಂದನ ಅವತಾರವಾದುದು.

ಮೋಕ್ಷ

[ಬದಲಾಯಿಸಿ]

ಕಾಲಲಬ್ದಯಾದ ಮೇಲೆ ಈತನೂ ಮೂರು ಜನ್ಮಗಳನ್ನೆತ್ತಿ ಮೋಕ್ಷವನ್ನು ಪಡೆದಿದ್ದರು.

ಇತಿಹಾಸ

[ಬದಲಾಯಿಸಿ]

ಪೂರ್ವವಿ ದೇಹದ ಸೀತಾ ನದಿಗೆ ದಕ್ಷಿಣದಲ್ಲಿ ಮಂಗಲಾವತಿಯೆಂಬ ದೇಶವಿತ್ತು. ರತ್ನ ಸಂಚಯವೆಂಬ ನಗರ ಅದರ ರಾಜಧಾನಿ. ಅಲ್ಲಿ ಮಹಾಬಲನೆಂಬ ರಾಜನು ಲಕ್ಷ್ಮಿಪತಿಯಾಗಿ ಬಹುಕಾಲ ವ್ಯೆಭವದಿಂದ ರಾಜ್ಯವಾಳುತ್ತಿದ್ದನು.

ಜೈನದೀಕ್ಷೆ

[ಬದಲಾಯಿಸಿ]

ಬಹುಕಾಲವಾದ ಮೇಲೆ ಆತನಿಗೆ ಭೋಗದಲ್ಲಿ ಜಿಹಾಸೆ ಹುಟ್ಟಿತ್ತು. ದವರ್ಪಾಲನೆಂಬ ತನ್ನ ಮಗನಿಗೆ ರಾಜ್ಯವನ್ನು ವಹಿಸಿ,ಆತನು ಜೈನದೀಕ್ಷೆಯನ್ನು ವಹಿಸಿದನು.ಜಿನಪದವನ್ನು ಧ್ಯಾನಮಾಡುತ್ತಾ ಸಮಾಧಿ ಮರಣವನ್ನು ಹೊಂದಿ ಪಂಚಾಣೂತ್ತ ರವಿಮಾನಗಳಲ್ಲಿ ಮೊದಲನೆಯದಾದ ವಿಜಯದಲ್ಲಿ ಅಹಮಿಂದ್ರನಾದನು.ಅಲ್ಲಿ ಬಹುಕಾಲ ಸ್ವರ್ಗ ಸುಖವನ್ನು ಅನುಭವಿಸಿ,ಕಡೆಗೆ ಜಿನನನ್ನು ಅನನ್ಯ ಭಕಿಯಿಂದ ಅಯೋಧ್ಯಾ ನಗರದಲ್ಲಿ ಇಕ್ಷ್ವಾಕು ವಂಶದ ಸ್ವಯಂವರ(ಸಂಬರ) ರಾಜನಿಗೂ ಆತನ ಮಡದಿ ಸಿದ್ಧಾರ್ಥ ದೇವಿಗೂ ಆತನು ಮಾಘ ಶುಕ್ಲ ದ್ವಾದಶೀದಿನದ ಬ್ರಹ್ಮಯೋಗದಲ್ಲಿ ಮಗನಾಗಿ ಜನಿಸಿದನು. []

ಪೌರಾಣಿಕ ಹಿನ್ನಲೆ

[ಬದಲಾಯಿಸಿ]

ದೇವೇಂದ್ರನು ಆತನಿಗೆ ಜನ್ಮೋತ್ಸವ ಕಲ್ಯಾಣಗಳನ್ನು ಎಸಗಿ ಅಭಿನಂದನನೆಂದು ನಾಮಕರಣ ಮಾಡಿದನು.ಐವತ್ತು ಲಕ್ಷ ಪೂರ್ವ ವರ್ಷಗಳಷ್ಟು ಆಯುಷ್ಯವುಳ್ಳ ಅಭೀನಂದನ ದೇವನು ಹೇಮಾವರ್ಣವುಳ್ಳವನಾಗಿ ಬೆಳೆದು, ಯೌವ್ವನದಲ್ಲಿ ರಾಜ್ಯಾಭಿಷಿಕ್ತನಾದನು. ಬಹುಕಾಲದ ವರೆಗೆ ಸಂಸಾರ ಭೋಗಗಳನ್ನು ಅನುಭವಿಸುತ್ತಿದ್ದು, ಆಕಾಶದಲ್ಲಿ ಕಂಡ ಗಂಧರ್ವ ನಗರಿಯ ಕ್ಷಣಭಂಗುರತೆಯಿಂದ ವೈರಾಗ್ಯವನ್ನು ಕಳೆದನು.ಕಾಲಾಂತಿಕ ದೇವರುಗಳು ಈ ವೈರಾಗ್ಯವನ್ನು ದೃಢಪಡಿಸಿದರು; ದೇವತೆಗಳು ಪರಿನಿಷ್ಕ್ರಮಣ ಕಲ್ಯಾಣವನ್ನು ನೆರವೇರಿಸಿದರು. ಹಸ್ತ ಚಿತ್ರವೆಂಬ ಸಿಬಿಕೆಯಲ್ಲಿ ಆಗ್ರೋದ್ಯಾನಕ್ಕೆ ಬಂದ ಅಭನಂದನ ಸ್ವಾಮಿಯು ದೀಕ್ಷೆವಹಿಸಿ ಮನಃ ಪರ್ಯಯಜ್ಞಾನವನ್ನು ಪಡೆದನು.

ಮುಕ್ತಿ

[ಬದಲಾಯಿಸಿ]

ಎರಡನೆಯ ದಿನ ಅಯೋಧ್ಯೆಯ ಇಂದ್ರದತ್ತ ರಾಜನಿಂದ ಆಹಾರದಾನವನ್ನು ಪಡೆದು ಹನ್ನೆರಡು ವರ್ಷಗಳ ಕಾಲ ಮೌನವೃತದಿಂದ ಛದ್ಮಸ್ಥ ಕಾಲವನ್ನು ಕಳೆದ ಮೇಲೆ ದೀಕ್ಷವನದ ಕಕ್ಕೆಯ ಮರದ ಬುಡದಲ್ಲಿ ಧ್ಯಾನ ಸ್ಥಿಮಿತ ಮೂರ್ತಿಯಾಗಿ ನಿಂತು,ಪುಷ್ಯ ಶುಕ್ಲ ಚತುದರ್ಶಿಯ ಸಂಜೆ ಪುನರ್ವಸು ನಕ್ಷತ್ರದಲ್ಲಿ ಕೇವಲ ಜ್ಞಾನವನ್ನು ಪಡೆದನು. ಅನಂತರ ಕುಬೇರ ನಿರ್ಮಿತ ಸಮವಸರಣದಲ್ಲಿ ನೂರ ಮೂರು ಗಣಧರರೊಡನೆ ಧರ್ಮವರ್ಷಣ ಮಾಡುತ್ತಾ ಬಹುಕಾಲ ಆರ್ಯಾವರ್ತ ಭೂವಲಯವನ್ನೆಲ್ಲ ಸಂಚರಿಸಿ, ಕಡೆಗೆ ಒಂದು ತಿಂಗಳು ಕಾಲ ಸಮ್ಮೇದ ಪರ್ವತದಲ್ಲಿ ನಿಂತು,ವೈಶಾಖ ಶುಕ್ಲ ಷಷ್ಠಿಯ ಪ್ರಾತಃಕಾಲ ಪುನರ್ವಸು ನಕ್ಷತ್ರದಲ್ಲಿ ಮುಕ್ತಿಯನ್ನು ಹೊಂದಿದನು.ಮುನ್ನೂರು ಬಿಲ್ಲು ಎತ್ತರವಿದ್ದ ಈ ಜಿನನ ಲಾಂಛನ ಕಪಿ. ಈತನ ಯಕ್ಷ-ಯಕ್ಷಿಯರು ಯಕ್ಷೇಶ್ವರ ವಜ್ರ ಶೃಂಖಲೆ.  


ಉಲ್ಲೇಖಗಳು

[ಬದಲಾಯಿಸಿ]
  1. ಶೆಣೈ, ಉಮನಾಥ್ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜುಶ್ರಿ ಪ್ರಿಂಟರ್ಸ್. pp. ೪೨೮.


ವರ್ಗ ಜೈನ ದರ್ಮದ ಪುಣ್ಯ ಕ್ಷೇತ್ರಗಳು