ಸದಸ್ಯ:Abhinanthonym1940449/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ[ಬದಲಾಯಿಸಿ]

ನನ್ನ ಹೆಸರು ಅಭಿನ್ ಅ೦ತೋಣಿ ಎ೦. ನನ್ನ ಊರು ಚಿಕ್ಕಮಗಳೂರು. ನಾನು ಪ್ರಸ್ತುತ ಕ್ರೈಸ್ಟ್ ಯುನಿವಸಿ೯ಟಿಯಲ್ಲಿ ಬಿ.ಎಸ್ಸಿ. ವ್ಯಾಸಾ೦ಗ ಮಾಡುತ್ತಿರುವೆ. ನಾನು ಇಲ್ಲಿ ನನ್ನ ಪೋಷಕರ ಬಗ್ಗೆ ಬರೆಯಬೇಕೆಂದುಕೊಂಡಿದ್ದೇನೆ. ನನ್ನ ತಂದೆಯ ಹೆಸರು ಮರಿಯಪ್ಪ. ಇವರು ಎಲ್.ಐ.ಸಿ.ಯಲ್ಲಿ ಕಾಯ೯ನಿವ೯ಹಿಸುತ್ತಿದ್ದಾರೆ. ಸಿ.ಆರ್.ಪಿ.ಎಫ್.ನಲ್ಲಿ ಸಹ ಇವರು ಸೇವೆಯನ್ನು ಸಲ್ಲಿಸಿದ್ದಾರೆ. ನನ್ನ ಎಲ್ಲಾ ನಡೆಗಳಲ್ಲೂ ನನ್ನ ಬೆನ್ನೆಲುಬಾಗಿ ನಿಂತು ನನ್ನನ್ನು ಪ್ರೋತ್ಸಾಹಿಸುತ್ತಾರೆ. ನನ್ನ ತಾಯಿಯ ಹೆಸರು ಸೆಲಿನ್ ಮೇರಿ ರೋಸಲಿನ್. ಇವರು ಕನ್ನಡ ಅಧ್ಯಾಪಕಿ. ಜೀವನದ ಪಾಠವನ್ನು ಕಲಿಸಿಕೊಟ್ಟಂತಹವರು. ನೋವಿನ ಸಮಯದಲ್ಲಿ ಸಾ೦ತ್ವಾನವನ್ನು, ಸಂತೋಷದ ಸಮಯದಲ್ಲಿ ಎಚ್ಚರಿಕೆಯನ್ನು ನೀಡಿದರು.

ನನ್ನ ಓದು ಹಾಗು ಶಾಲೆಗಳ ಬಗ್ಹೆ ತಿಳಿಸುವುದಾದರೆ, ನಾನು ೧-೭ನೇ ತರಗತಿಯವರೆಗು ಸ೦ತ ಜೋಸೆಫರ ಆ೦ಗ್ಲ ಮಾಧ್ಯಮ ಶಾಲೆಯಲ್ಲಿ ಒದಿದೆ. ಈ ಶಾಲೆಯಲ್ಲಿ ನನಗೆ ಜೀವನದ ಬಗ್ಗೆ, ಅದರ ವಿವಿಧ ಹಾದಿಗಳ ವಿವರವನ್ನು ತಿಳಿಸಿದ್ದಾರೆ. ಬದುಕುವ ಮಾಗ೯ವನ್ನು ಹೇಳಿಕೊಟ್ಟಿದ್ದಾರೆ. ನಮ್ಮ ಶಿಕ್ಷಕರು ನಮಗೆ ಥಳಿಸಿ,ತಿದ್ದಿ ಬುದ್ದಿ ಹೇಳಿದ್ದರಿಂದಲೇ ನಾನು ಈ ರೀತಿಯಲ್ಲಿ ಬದುಕಲು ಸಾದ್ಯವಾಗಿದೆ. ಅದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಇಲ್ಲಿ ಮೌಲ್ಯಗಳ ಆಧಾರದ ಮೇಲೆ ನಮ್ಮ ಜೀವನವನ್ನು ನಡೆಸುವಂತೆ ತಿಳಿಸಿಕೊಟ್ಟಿದ್ದಾರೆ. ಶಾಲೆಯ ನಂತರ ಬಿಡುವಿನ ವೇಳೆಯಲ್ಲಿ ಭರತನಾಟ್ಯ ಹಾಗು ಶಾಸ್ತ್ರೀಯ ಸಂಗೀತ ಅಭ್ಯಾಸಿಸುತ್ತಿದ್ದೆ.

ನ೦ತರ ೮-೧೦ನೇ ತರಗತಿಯವರೆಗು ಶ್ರೀ ಸಾಯಿ ಏ೦ಜಲ್ಸ್ ಶಾಲೆಯಲ್ಲಿ ಓದಿದೆ. ಸಾಯಿ ಸಂಸ್ಥೆಯಾದ್ದರಿಂದ ನಮ್ಮಲ್ಲಿ ದೇವರ, ಹಾಗು ದೈವತ್ವದ ಮೇಲೆ ಪ್ರಾಶಸ್ಥ್ಯ ನೀಡಿ ದೇವರ ಮೇಲಿನ ಭಕ್ತಿಯ ಅಥ೯ ಹೇಳಿಕೊಟ್ಟರು. ಇಲ್ಲಿಯೇ ನನಗೆ ವಿಜ್ಞಾನದಲ್ಲಿ ಮುಂದುವರೆಯಬೇಕೆಂಬ ಧೃಢ ನಿಧಾ೯ರವನ್ನು ಕೈಗೊಂಡೆ.

ನನ್ನ ಪಿಯು ತರಗತಿಯನ್ನು ಶ್ರೀ ಸಾಯಿ ಏ೦ಜಲ್ಸ್ ಪ.ಪೂ. ಕಾಲೇಜಿನಲ್ಲಿ ಮುಗಿಸಿದೆ. ನಮ್ಮ ಶಿಕ್ತಕರು ನಮ್ಮ ಗೆಳೆಯರಂತೆ ಇದ್ದರು. ಅವರ ಜೀವನದ ಅನುಭವವನ್ನು ಹೇಳಿ ಸರಿಮಾಗ೯ ತೋರಿದರು. ಈ ೨ ವಷ೯ಗಳಲ್ಲಿ ನಮ್ಮ ಇಡೀ ತರಗತಿಯು ಉತ್ತಮ ಸೌಹಾದ೯ತೆಯೊಂದಿಗೆ, ಬಾಂಧವ್ಯದೊಂದಿಗೆ ಇದ್ದೆವು.

ನನ್ನ ಹವ್ಯಾಸಗಳೆ೦ದರೆ ದಿನಪತ್ರಿಕೆ ಓದುವುದು, ಕ್ರೀಡೆ, ಚಾರಣ ಮಾಡುವುದು ಹಾಗು ಅ೦ತಜಾ೯ಲ ವೀಕ್ಷಣೆ. ನಾನು ಒಬ್ಬ ಕಾಲ್ಚೆ೦ಡು ಆಟ ಪ್ರಿಯ. ಸ೦ಗೀತದ ಮೇಲೆ ಆಸಕ್ತಿ ಇದೆ. ನಾನು ಮು೦ದೆ ಸಮಾಜಕ್ಕೆ ಒಳ್ಳೆಯ ನಾಗರಿಕ ಹಾಗು ದೇಶಕ್ಕೆ ಪ್ರಜೆಯಾಗಿ ಬದುಕಬೇಕೆ೦ದುಕೊ೦ಡಿದ್ದೇನೆ.ನನ್ನ ಆದಶ೯ ವ್ಯಕ್ತಿ ನಿಕೊಲಾಸ್ ಟೆಸ್ಲಾ. ಇವರು ಒಬ್ಬ ಮಾಹಾನ್ ವಿಜ್ಞಾನಿ. ಅವರ ಬದುಕು ನನಗೆ ಮಾದರಿ. ನನ್ನ ಪ್ರಕಾರ ಈ ಕಾಲದ ರಾಜಕೀಯ ಹಾಗು ಶಿಕ್ಷಣ ವ್ಯವಸ್ಥೆ ಬಹಳ ಹದಗೆಟ್ಟಿದೆ. ಅದನ್ನು ಬದಲಾಯಿಸಬೇಕೆ೦ಬ ಮಹದಾಸೆ ನನ್ನಲ್ಲಿದೆ. ಈಗ ಓದುತ್ತಿರುವ ರೀತಿ ಹಾಗು ಪರೀಕ್ಷೆ ಪದ್ದತಿ ಬದಲಿಸಿ ನನ್ನದೇ ಆದ ವ್ಯವಸ್ಥೆಯನ್ನು ಜಾರಿಗೆ ತರಬೇಕೆ೦ದು ಅ೦ದುಕೊ೦ಡಿದ್ದೇನೆ. ರಾಜಕೀಯದಲ್ಲಿ ಅವಕಾಶ ಕೊಟ್ಟರೆ ಈಗ ಇರುವ ಕಾಯ್ದಿರಿಸುವಿಕೆ ಹಾಗು ಜಾತಿ ಪದ್ದತಿಯನ್ನು ಅಳಿಸಿ ಹಾಕಬೇಕೆ೦ದುಕೊ೦ಡಿದ್ದೇನೆ.

          ದೇವರ ಮೇಲೆ ನ೦ಬಿಕೆ, ಭಕ್ತಿ ಎಲ್ಲವನ್ನು ಸಾಧ್ಯವಾಗಿಸುತ್ತದೆ.


"ಚಿಕ್ಕಮಗಳೂರು"[ಬದಲಾಯಿಸಿ]

ನಾನು ಚಿಕ್ಕಮಗಳೂರಿನವನಾದ್ದರಿ೦ದ ಅಲ್ಲಿನ ವಿವಿಧ ಪ್ರೇಕ್ಷಣೀಯ ಹಾಗು ಐತಿಹಾಸಿಕ ಮಹತ್ವವುಳ್ಳ ಸ್ಥಳಗಳ ಬಗ್ಗೆ ತಿಳಿಸುವುದು ನನ್ನ ಕತ೯ವ್ಯವೆ೦ದು ತಿಳಿದ್ದಿದ್ದೇನೆ. ನಿಮಗೆಲ್ಲರಿಗು ತಿಳಿದಿರುವ ಹಾಗೆ ಚಿಕ್ಕಮಗಳೂರು ಮಲೆನಾಡು ಹಾಗು ಬಯಲುಸೀಮೆ ಮಿಶ್ರಿತ ಜಿಲ್ಲೆ. ಹಸಿರು ಮೈಸಿರಿಯನ್ನು ಹೊದ್ದುಕೊಂಡು, ಮುಗಿಲು ಮುಟ್ಟುವ ಪಶ್ಚಿಮ ಘಟ್ಟಗಳು ಹಾಗು ಅಲ್ಲಲ್ಲಿ ಹರಿಯುವ ತೊರೆಗಳು ಎಂತಹವರ ಮನಸ್ಸನ್ನು ಗೆಲ್ಲುತ್ತದೆ.ಬೆಟ್ಟಗಳ ನಡುವೆ ಇರುವ ಕಾಫಿ ತೋಟಗಳು, ಅದರ ಬೀಜ, ಹೂವಿನ ವಾಸನೆಯು ಇಡೀ ವಾತಾವರಣವನ್ನು ಹದಗೊಳಿಸುತ್ತದೆ.ಕಾಫಿ, ಮೆಣಸು, ಅಡಕೆ ಇಲ್ಲಿನ ಪ್ರಮುಖ ಬೆಳೆಗಳು.


ಇತಿಹಾಸ[ಬದಲಾಯಿಸಿ]

ಚಿಕ್ಕಮಗಳೂರೆಂಬ ಹೆಸರು ಬರಲು ಹಿರಿಯರು ಎರಡು ಮೂಲಗಳಿವೆ ಎಂದು ಸೂಚಿಸುತ್ತಾರೆ. ಮೊದಲನೆಯದಾಗಿ ಸಖರಾಯಪಟ್ಟಣದ ಸಾಮಂತ ದೊರೆಯು ತನ್ನಿಬ್ಬರು ಹೆಣ್ಣು ಮಕ್ಕಳಿಗೆ ೨ ಊರುಗಳನ್ನು ಮದುವೆಯ ಸಮಯದಲ್ಲಿ ಉಡುಗೊರೆಯಾಗಿ ನೀಡಿದನಂತೆ. ಹಿರಿಯವಳಿಗೆ ಕೊಟ್ಟಿದ್ದನ್ನು ಹಿರೇಮಗಳೂರು, ಹಾಗು ಚಿಕ್ಕವಳಿಗೆ  ಕೊಟ್ಟಿದ್ದನ್ನು ಚಿಕ್ಕಮಗಳೂರೆಂದು ಕರೆದರು. ಇನ್ನೊಂದು ಅಥ೯ವು ಇಲ್ಲಿ ಸಿಗುವ ಅಪರೂಪದ ಚಿಕ್ಕ ಮಲ್ಲಿಗೆ ಹೂವು. ಹೊಯ್ಸಳ ಸಾಮ್ರಾಜ್ಯದ ಸ್ಥಾಪಕನಾದ ಸಳ ಹುಟ್ಟಿದ್ದು ಅಂಗಡಿ ಎಂಬ ಗ್ರಾಮದಲ್ಲಿ. ೧೬೭೦ರಲ್ಲಿ ಬಾಬಾ ಬುಡನ್ ಎಂಬ ಒಬ್ಬ ಸೂಫಿ ಸಂತನು ಇಲ್ಲಿಗೆ ದೂರದ ಅರಬ್ ದೇಶದಿಂದ ಕಾಫಿ ಗಿಡವನ್ನು ತಂದು ಇಲ್ಲಿ ನೆಟ್ಟರು. ವಾತಾವರಣವು ಕಾಫಿ ಬೆಳೆಗೆ ಬಹಳ ಸೂಕ್ತವಾಗಿದ್ದರಿಂದ ಕಾಫಿ ಇಂದು ಚಿಕ್ಕಮಗಳೂರಿನ ಪ್ರಮುಖ ಉದ್ದಿಮೆಯಾಗಿದೆ.

ಇನ್ನು ಇತಿಹಾಸದ ಪ್ರಮುಖ ಘಟನೆಯೆಂದರೆ ೧೯೭೭ರ ಸಾವ೯ತ್ರಿಕ ಲೋಕಸಭೆ ಚುನಾವಣೆಯಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರು ಚಿಕ್ಕಮಗಳೂರಿನ ಲೋಕಸಭಾ ಕ್ಷೇತ್ರದಿಂದ ಸ್ಪಧಿ೯ಸಿ ಗೆದ್ದಿದ್ದರು.


ಭೌಗೋಳಿಕತೆ[ಬದಲಾಯಿಸಿ]

ಸುತ್ತಲೂ ಪಶ್ಚಿಮ ಘಟ್ಟಗಳಿಂದ ಆವೃತವಾದ ಈ ಜಿಲ್ಲೆಯು ಶೇಕಡ ೩೦% ಕಾಡು ಪ್ರದೇಶವಾಗಿದೆ. ಈ ಜಿಲ್ಲೆಯು ಶಿವಮೊಗ್ಗ, ದಾವಣಗೆರೆ, ಚಿತ್ರದುಗ೯, ತುಮಕೂರು, ಹಾಸನ, ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಳ್ಳುತ್ತದೆ. ಇಲ್ಲಿ ಭದ್ರ, ತುಂಗಾ, ವೇದಾವತಿ, ನೇತ್ರಾವತಿ ಹಾಗು ಹೇಮಾವತಿ ನದಿಗಳು ಮೈದುಂಬಿ ಇಡೀ ವಷ೯ ಹರಿಯುತ್ತವೆ. ಇದು ಕಪ್ಪು, ಕೆಮ್ಮಣ್ಣು ಹಾಗು ಜೇಡಿ ಮಣ್ಣಿನ ಪ್ರದೇಶವಾಗಿದೆ. ಇದು ಮಳೆಯಾಶ್ರಿತ ಪ್ರದೇಶ. ಈ ಹಿಂದೆ ದೇಶದಲ್ಲೇ ಅತೀ ಹೆಚ್ಚು ಮಳೆಯಾಗುತ್ತಿದ್ದ ಆಗುಂಬೆ ಇದೇ ಜಿಲ್ಲೆಗೆ ಸೇರುತ್ತದೆ.


ಚಿಕ್ಕಮಗಳೂರಿನಲ್ಲಿ ನೋಡಲು ಹಲವು ಸ್ಥಳಗಳಿರುವುದರಿಂದ ಅವುಗಳನ್ನು ಅವುಗಳ ಪ್ರಕಾರವಾಗಿ ವಂಗಡಿಸಿ ಬರೆದಿದ್ದೇನೆ.


>ಬೆಟ್ಟ-ಗುಡ್ಡ ಹಾಗು ನಿಸಗ೯ ವೀಕ್ಷಣಾ ಸ್ಥಳಗಳು.[ಬದಲಾಯಿಸಿ]


೧.ಮುಳ್ಳಯ್ಯನಗಿರಿ.[ಬದಲಾಯಿಸಿ]

ಸುತ್ತಲೂ ಹಸಿರಿನಿಂದ ಕೂಡಿರುವ ಇದು ಕನಾ೯ಟಕದಲ್ಲೇ ಅತೀ ಎತ್ತರದ ಬೆಟ್ಟವಾಗಿದೆ, ಹಾಗು ನಗರದಿಂದ

೨೫ ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ಅನೇಕ ಜನರು ಚಾರಣಕ್ಕೆಂದು ಬರುತ್ತಾರೆ. ಇಲ್ಲಿರುವ ೧೦೦೦ ಮೇಲು ಮೆಟ್ಟಿಲುಗಳನ್ನು ಹತ್ತಿ

ಮೇಲೇರುವ ಮಜಾನೆ ಬೇರೆ.ಅಲ್ಲಿ ಸಿಗುವ ನೋಟವನ್ನು ಆಸ್ವಾದಿಸಿದರೆ ಮನಸ್ಸಿನ ಚಿಂತೆಯಲ್ಲಾ ದೂರವಾಗುತ್ತದೆ.




೨.ಬಾಬಾಬುಡನ್ ಗಿರಿ / ದತ್ತಪೀಠ.[ಬದಲಾಯಿಸಿ]

ಇತಿಹಾಸ ಪ್ರಸಿದ್ಧವಾದ ಈ ಬೆಟ್ಟವು ನಯನಮನೋಹರವಾಗಿದೆ.ಸೂಫಿ ಸಂತ ಬಾಬಾ ಬುಡನ್ ಅವರು ಇಲ್ಲಿಯೆ

ವಾಸವಾಗಿದ್ದರಿಂದ ಈ ಗಿರಿಯ ಹೆಸರು ಬಂದಿದೆ. ಇಲ್ಲಿ ಹಿಂದು ದೇವಸ್ಥಾನವೊಂದಿದೆ. ಅದುವೆ ದತ್ತಪೀಠ. ಇಲ್ಲಿನ ಜನತೆಗೆ ಇದು ಬಹಳ

ಮಹತ್ತರವಾದುದು. ಅಂತೆಯೇ ಇಲ್ಲಿ ಸಂತರ ಮಸೀದಿಯು ಇದೆ. ಕಾಳಗಗಳು ಇದ್ದರೂ ಜನರಿಗೆ ಯಾವುದೆ ತೊಂದರೆಯಾಗಿಲ್ಲ.

ಇವೆಲ್ಲವನ್ನು ಮರೆತು ಅಲ್ಲಿನ ನಿಸಗ೯ದ ಸುಂದರ ಸೊಬಗನ್ನು ಸವಿದರೆ ಅದರ ಅನುಭವವೆ ಬೇರೆ. ಮೋಡಗಳ ನುಡುವೆ ಇದ್ದು ಆ

ಚಳಿಯನ್ನು ಅನುಭವಿಸಬೇಕು.





>ಜಲಪಾತಗಳು[ಬದಲಾಯಿಸಿ]


೧. ಹೆಬ್ಬೆ ಜಲಪಾತ[ಬದಲಾಯಿಸಿ]

ಕೆಮ್ಮಣ್ಣುಗುಂಡಿಯ ಬಳಿಯಿರುವ ಅತಿ ರಮಣೀಯವಾದ ಜಲಪಾತ ಇದು. ಅನಂತ ಕಾಡುಗಳ ನಡುವೆ,ನದಿಯನ್ನು ದಾಟಿ ಝರಿಯ ಬಳಿ ಬಂದಾಗ ಪುಳಕವಾಗುತ್ತದೆ. ಅಲ್ಲಿಗೆ ತಲುಪಬೇಕಾದರೆ ಅರಣ್ಯ ಇಲಾಖೆಯ ಜೀಪಿನಲ್ಲಿ ಹೋಗಬೇಕು. ಕಾಡಿನ ನಿಶಬ್ಧತೆ, ಹಾಗು ದೂರದ ನೀರಿನ ಭೋಗ೯ರೆತ ನಮ್ಮನ್ನು ಅಲ್ಲಿಗೆ ತಲುಪಲು ಉತ್ಸುಕರನ್ನಾಗಿ ಮಾಡುತ್ತದೆ. ಇದು ನಗರದಿಂದ ಸುಮಾರು ೬೫ ಕಿ.ಮೀ. ದೂರದಲ್ಲಿದೆ.



೨.ಝರಿ ಜಲಪಾತ.[ಬದಲಾಯಿಸಿ]

ನನಗನಿಸಿದ ಪ್ರಕಾರ ಅತಿ ಸುಂದರವಾದ ಜಲಪಾತವಿದು. ನಗರದಿಂದ ೨೫ ಕಿ.ಮೀ. ದೂರದಲ್ಲಿದೆ. ಎರಡು ಭಾಗವಾಗಿ ಇದು ಧುಮುಕುತ್ತದೆ.

ಸುತ್ತಲಿನ ಪರಿಸರವು ಎಲ್ಲರ ಮನಸ್ಸನ್ನು ಗೆಲ್ಲುತ್ತದೆ.

>ದೇವಸ್ಥಾನಗಳು.[ಬದಲಾಯಿಸಿ]


೧.ಶ್ರೀ ವೀರ ನಾರಾಯಣ ಸ್ವಾಮಿ ದೇವಸ್ಥಾನ, ಬೆಳವಾಡಿ.[ಬದಲಾಯಿಸಿ]

ದ್ರಾವಿಡ ಶೈಲಿಯಲ್ಲಿ ಕಟ್ಟಿಸಿರುವ ಈ ದೇವಾಲಯವು ಇದರಲ್ಲಿನ ಕೆತ್ತನೆಗೆ ಪ್ರಸಿದ್ಧಿಯನ್ನು ಪಡೆದಿದೆ.

ಇದನ್ನು ಹೊಯ್ಸಳರ ರಾಜ ೨ನೇ ವೀರ ಬಲ್ಲಾಳನು ಕಟ್ಟಿಸಿದನು.ಮಹಾಭಾರತದಲ್ಲಿ ಈ ಗ್ರಾಮವನ್ನು ಏಕಚಕ್ರನಗರವೆಂದು ಕರೆದಿದ್ದಾರೆ. ಈ ಜಾಗದಲ್ಲಿಯೆ ಭೀಮನು ರಾಕ್ಷಸ ಬಕಾಸುರನ್ನು ಕೊಂದನು ಎಂಬ ಪ್ರತೀತಿ ಇದೆ. ನಗರದಿಂದ ೩೦ ಕಿ.ಮೀ. ದೂರದಲ್ಲಿದೆ.


೨. ಶ್ರೀ ಅಮೖತೇಶ್ವರ ದೇವಸ್ಥಾನ, ತರೀಕೆರೆ.[ಬದಲಾಯಿಸಿ]

ಇದನ್ನು ೧೧೯೬ರಲ್ಲಿ ದಂಡನಾಯಕನೊಬ್ಬನು ಹೊಯ್ಸಳ ರಾಜ ೨ನೇ ವೀರ ಬಲ್ಲಾಳನ ಅಡಿಯಲ್ಲಿ ನಿಮಿ೯ಸಿದನು.

ಶಿಲ್ಪಿ ಮಲ್ಲಿತಮ್ಮನ ಕಲೆಯು ಇಲ್ಲಿ ಕಾಣಸಿಗುತ್ತದೆ. ದೇವಸ್ಥಾನದ ಅಂಗಳದಲ್ಲಿ ಕಾಣುವ ಒಂದು ದೊಡ್ಡ ಕಲ್ಲಿನ ಮೇಲೆ ಕವಿಚಕ್ರವತಿ೯ ಜನ್ನನ ಕವನವಿದೆ. ನಗರದಿಂದ ೬೫ ಕಿ.ಮೀ. ದೂರದಲ್ಲಿದೆ.




>ವನ್ಯಜೀವಿ ಸಂರಕ್ಷತಾರಣ್ಯಗಳು.[ಬದಲಾಯಿಸಿ]


೧. ಕುದುರೆಮುಖ ರಾಷ್ಟೀಯ ಉದ್ಯಾನವನ.[ಬದಲಾಯಿಸಿ]

ಕಬ್ಬಿಣದ ಗಣಿಗಾರಿಕೆಯ ನಿಷೇಧಿಸಿದ ನಂತರ ಇಲ್ಲಿರವ ವನ್ಯ ಜೀವ ಸಂಕುಲವನ್ನು ಉಳಿಸಲು ಸಕಾ೯ರವು ಕುದುರೆಮುಖವನ್ನು ವನ್ಯಜೀವಿ ಸಂರಕ್ಷಿತ ಪ್ರದೇಶವೆಂದು ಘೋಷಿಸಿತು. ಅಳಿವಿನಂಚಿನಲ್ಲಿರುವ ಸಿಂಹ ಬಾಲದ ಕೋತಿಗಳು, ಹಾಗು ಇನ್ನಿತರೆ ಅಮೂಲ ್ಯ ಜೀವ ಸಂತತಿಯನ್ನು ಕಾಪಾಡುವುದು ಎಲ್ಲರಿಗೆ ಮನದಟ್ಟಾಯಿತು.


೨.ಮುತ್ತೋಡಿ ಹುಲಿ ಅಭಯಾರಣ್ಯ.[ಬದಲಾಯಿಸಿ]

ಕನಾ೯ಟಕದಲ್ಲಿರುವ ೪ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಇದೂ ಒಂದು. ಇಲ್ಲಿ ಸಫಾರಿಯ ವ್ಯವಸ್ಥೆಯೂ ಇದೆ. ಅಲ್ಲಿ ಒಂದು ರಾತ್ರಿ

ಉಳಿದುಕೊಳ್ಳುವ ಸೌಲಭ್ಯವಿದೆ. ಅನೇಕ ವಿಧಧ ಪಕ್ಷಿ,  ಅಳಿಲು, ಕಾಡೆಮ್ಮೆಗಳು ಈ ಪ್ರದೇಶದಲ್ಲಿ ವಾಸವಾಗಿವೆ. ಹುಲಿಗಳನ್ನು ನೋಡಲು ಇಲ್ಲಿ ಅದೃಷ್ಟ ಬೇಕು.