ಸದಸ್ಯ:Abhilasha.mr/ನನ್ನ ಪ್ರಯೋಗಪುಟ
ಬಾಲ್ಯ ಜೀವನ
[ಬದಲಾಯಿಸಿ]ಮೊದಲನೆಯ ಎಲಿಜ಼ಬೆಥ್ ರವರು ಸೆಪ್ಟೆಂಬರ್ ೭ ೧೫೩೩ರಂದು ಜನಿಸಿದರು, ಇವರು ಹೆನ್ರಿ ಮತ್ತು ಅವರ ಪತ್ನಿಯಾದಅನ್ನಿ ಬೊಲಿನ್ ರವರ ಮಗಳು . ಹೆನ್ರಿ ಮತ್ತು ಅನ್ನಿ ಬೊಲಿನ್ ರವರ ವಿವಾಹ ಅಕ್ರಮವೆಂದು ತೀರ್ಮಾನಿಸಿದರಿಂದ ಎಲಿಜ಼ಬೆಥ್ ರವರ ಜನನ ನ್ಯಾಯಸಮ್ಮತವಲ್ಲವೆಂದು ಘೋಶಿಸಲಾಯಿತು, ಎಲಿಜ಼ಬೆಥ್ ಎರಡು ವರ್ಷ ಎಂಟು ತಿಂಗಳಿನ ಮಗುವಾಗಿದ್ದಾಗ ಅವರ ತಾಯಿ ಮರಣದಂಡನೆಗೆ ತುತ್ತಾಗಿ ಸಾವನ್ನಪ್ಪಿದರು, ಇವರು ತಮ್ಮ ಶಿಕ್ಷಣವನ್ನು ೧೫೫೦ರಲ್ಲಿ ಮುಗಿಸಿದಾಗ ಅವರ ಪೀಳಿಗೆಗೆ ಅವರೇ ಅತ್ಯುತ್ತಮ ವಿದ್ಯಾವಂತೆ ಮಹಿಳೆಯಾಗಿದ್ದರು. ಎಲಿಜ಼ಬೆಥ್ ತಂದೆಯ ಆಳ್ವಿಕೆಯ ನಂತರ ರಾಜ್ಯದ ಆಳ್ವಿಕೆಯ ಅಧಿಕಾರವನ್ನು ಅವರ ಅರೆಸಹೋದರನಾದ ಎಡ್ವರ್ಡ್ ಗೆ ಕೊಡಲಾಯಿತು, ಎಲಿಜ಼ಬೆಥ್ ಜನನ ನ್ಯಾಯವಲ್ಲವಾದ್ದರಿಂದ ಎಡ್ವರ್ಡ್ ಲೇಡಿ ಜೇನ್ ಗ್ರೇ ಕಿರೀಟವನ್ನು ಧರಿಸಿ ತನ್ನ ಸಾವಿನ ತನಕ ಆಳ್ವಿಕೆಯನ್ನು ನಡೆಸಿದರು. ಅವರ ಸಾವಿನ ನಂತರ ಅವರ ಅಧಿಕಾರವನ್ನು ಅರೆಸಹೋದರಿಯಾದ ಎಲಿಜ಼ಬೆಥ್ ರವರಿಗೆ ಕೊಡದೆ ಮೇರಿಗೆ ಕೊಟ್ಟು ಅವರನ್ನು ರಾಣಿಯನ್ನಾಗಿ ಘೋಶಿಸಲಾಯಿತು. ಮೇರಿಯ ಆಳ್ವಿಕೆಯ ಸಮಯದಲ್ಲಿ ಎಲಿಜ಼ಬೆಥ್ ರವರನ್ನು ವಿರೋಧಿರಾಜ್ಯದ ಬಂಡಾಯಗಾರ ಘೋಶಕಿ ಎಂಬ ಅನುಮಾನದ ಮೇಲೆ ಒಂದು ವರ್ಷದ ಕಾಲ ಸೆರೆಯಲ್ಲಿಟ್ಟಿದ್ದರು.
ಶಿಕ್ಷಣ
[ಬದಲಾಯಿಸಿ]ಎಲಿಜ಼ಬೆಥ್ ರವರು ಬೇರೆ ರಾಜವಂಶದ ಮಕ್ಕಳಿಗಿಂತ ಚೆನ್ನಾಗಿ ಬೆಳೆದರು, ಅವರು ಸಂಗೀತ ಮತ್ತು ಹಲವಾರು ಭಾಷೆಗಳಲ್ಲಿ ಪಾಂಡಿತ್ಯವನ್ನು ಪಡೆದರು , ಅವರ ತಂದೆಯ ಮರಣದ ನಂತರ ತಮ್ಮ ಮಲತಾಯಿಯಾದ ಕ್ಯಾತೆರಿನ್ ಪರ್ರ್ ಮಡಿಲಲ್ಲಿ ತಮ್ಮ ಜೀವನ ನಡೆಸಿದರು. ಪರ್ರರವರು ಎಲ್ಜ಼ಬೆಥ್ ನ ವಿದ್ಯಾಭ್ಯಾಸಕ್ಕಾಗಿ ವಿಲಿಯಂ ಗ್ರಿಂಡಲ್ ಮತ್ತು ರೋಜ಼ನ್ ಆಶನ್ ರವರನ್ನು ಕೆಲಸಕ್ಕೆ ತೆಗೆದುಕೊಂಡರು. ಕ್ಯಾತೆರಿನ್ ಪರ್ರರವರ ಎರಡನೇ ಗಂಡನಾದ ಥಾಮಸ್ ಸೆಮೌರ್ ರವರ ಒತ್ತಾಯದಿಂದ ಅವರೆಲ್ಲರು ಹ್ಯಾಟ್ಫೀಲ್ಡ್ ನಲ್ಲಿರುವ ರಾಜರ ಎಸ್ಟೇಟ್ಗೆ ತೆರಳಿದರು. ಎಲಿಜ಼ಬೆಥ್ ರವರು ತಮ್ಮ ಮಲತಾಯಿಯ ಎರಡನೇ ಗಂಡನಾದ ಸೆಮೌರ್ ರವರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಯತ್ನಿಸಿದರು ಮತ್ತು ಇನ್ನೊಂದು ಕಡೆ ಸೆಮೌರ್ ರಾಜ್ಯದ ಆಳ್ವಿಕೆಯನ್ನು ತಮ್ಮ ವಶ ಮಾಡಿಕೊಳ್ಳಲು ಎಲೆಜ಼ಬೆಥ್ ರವರನ್ನು ಮದುವೆಯಾಗುವ ಯತ್ನ ನಡೆಸಿದರು ಇದು ರಾಜ್ಯದಲ್ಲಿ ತಿಳಿದು ಸೆಮೌರ್ ರವರನ್ನು ನೇಣುಗೇರಿಸಿದರು. ಎಲಿಜ಼ಬೆಥ್ ರವರ ತಂದೆಯ ಮರಣದ ನಂತರ ರಾಜ್ಯದ ಆಳ್ವಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಆರಂಭಿಸಿದರು ಆದರೆ ಇವರಿಗೆ ಆಳ್ವಿಕೆ ಸಿಗಬಾರದೆಂದು ಅವರ ಅರೆ ಸಹೋದರ- ಸಹೋದರಿಯಾದ ಲೇಡಿ ಜೇನ್ ಗ್ರೇ ಮತ್ತು ಮೇರಿ ಯತ್ನಿಸಿದರು. ಎಡ್ವರ್ಡ, ಲೇಡಿ ಜೇನ್ ಗ್ರೇ ರವರನ್ನು ತಮ್ಮ ಹೇಳಿಕೆ ಪಾಲಿಸುವ ವ್ಯಕ್ತಿಯನ್ನಾಗಿ ಇಟ್ಟುಕೊಂಡಿದ್ದರು,ಆದರೆ ಅವರ ಆಳ್ವಿಕೆಯ ಸಮಯ ಕಡಿಮೆಯಿತ್ತು, ಮೇರಿ ಬ್ರಿಟೀಷ್ ಮತ್ತು ಅವರ ತಮ್ಮ ಗ್ರೇ ಕಡೆಯಿಂದ ಸಹಾಯ ಪಡೆದುಕೊಂಡು ರಾಣಿಯ ಪಟ್ಟವನ್ನು ಏರಿದರು. ರಾಣಿ ಪಟ್ಟವನ್ನು ಪಡೆದುಕೊಂಡ ನಂತರ ಮೇರಿ ಎಲಿಜ಼ಬೆಥ್ ರವರನ್ನು ರಾಜ್ಯದ್ರೋಹಿ ಎಂಬ ಆರೋಪದ ಮೇಲೆ ಸೆರೆಮನೆಯಲ್ಲಿ ಬಂದಿಸಿದರು, ಎಲಿಜ಼ಬೆಥ್ ನ ಬಂದಿಸಿದ್ದರೂ ಮೇರಿಯವರಿಗೆ ಮನಸ್ಪೂರ್ತಿಯಾಗಿ ಸಂತೋಷವಾಗಿರಲಿಲ್ಲ ಏಕೆಂದರೆ ಎಲಿಜ಼ಬೆಥ್ ರವರಿಗೆ ತಮ್ಮ ಮೇಲಿನ ವಿಶ್ವಾಸ ಬಹಳವಾಗಿತ್ತು. ಎಲಿಜ಼ಬೆಥ್ ಸೆರೆಮನೆಯಿಂದ ಬಿಡುಗಡೆಯಾದ ನಂತರ ಅವರ ಮುಂದಿನ ಜೀವನ ಅವರ ಅರೆ-ಸಹೋದರಿಯಾದ ಮೇರಿಯ ಕೈಯಲ್ಲಿತ್ತು, ಆದ್ದರಿಂದ ಎಲಿಜ಼ಬೆಥ್ ಆಳ್ವಿಕೆಯ ಕಡೆ ಹೆಚ್ಚು ಗಮನ ಕೊಡದೆ ಮತ್ತೆ ಹ್ಯಾಟ್ಫೀಲ್ಡ್ಗೆ ತೆರಳಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದರು.[೧]
ಇತಿಹಾಸ
[ಬದಲಾಯಿಸಿ]೧೫೫೮ರಲ್ಲಿ ಮೇರಿಯ ಮರಣದ ನಂತರ ಎಲಿಜ಼ಬೆಥ್ ರಾಜ್ಯದ ಆಳ್ವಿಕೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ಮೇರಿಯ ಆಳ್ವಿಕೆಯ ಸಮಯದಲ್ಲಿ ಹುಟ್ಟುಕೊಂಡಿದ್ದ ಸಮಸ್ಯೆಗಳೆಲ್ಲವನ್ನು ಪರಿಹರಿಸಿದರು, ನಂತರ ಅವರ ರಾಜ್ಯಕ್ಕೆ ಫ್ರಾನ್ಸ್ ರವರ ಜೊತೆ ಯುದ್ದವಿದ್ದು ಅದರಿಂದ ಅವರ ರಾಜ್ಯವು ಮುಳುಗುವಿಕೆಯ ಸಂದರ್ಭವನ್ನು ಸರಿಪಡಿಸಿದರು. ಮೇರಿಯ ಆಳ್ವಿಕೆಯ ಸಮಯದಲ್ಲಿ ಅವರು ತಪ್ಪು ಮಾಡಿದವರೆಲ್ಲರಿಗೂ ನೇಣು ಹಾಕುವ ಕ್ರಮ ತೆಗೆದುಕೊಂಡಿದ್ದರಿಂದ ಅವರನ್ನು ರಾಜ್ಯದ ಜನರೆಲ್ಲರು ಮೂರ್ಖ ಮೇರಿ ಎಂದು ಕರೆಯುತ್ತಿದ್ದರು. ಎಲಿಜ಼ಬೆಥ್ ರವರು ೧೫೫೮ರಲ್ಲಿ ತಮ್ಮ ಅರೆಸಹೋದರಿಯಾದ ಮೇರಿಯಿಂದ ಆಡಳಿತವನ್ನು ತೆಗೆದುಕೊಳ್ಳುವುದರಲ್ಲಿ ಯಶಸ್ವಿಯಾಗಿ ಉತ್ತಮ ವಕೀಲನ ಸಹಾಯದಿಂದ ಆಳ್ವಿಕೆಯನ್ನು ನಡೆಸಿದರು, ಇವರು ವಿಲಿಯಂ ಸೆಸಿಲ್ ಬ್ಯಾರನ್ ಬರ್ಗ್ಲೇ ನೇತೃತ್ವದಲ್ಲಿರುವ ಸಲಹೆಗಾರರ ಒಂದು ಗುಂಪಿನ ಮೇಲೆ ಭಾರಿ ಅವಲಂಭಿತರಾಗಿದ್ದರು. ಎಲಿಜ಼ಬೆಥ್ ಆಳ್ವಿಕೆಯ ಸಮಯದಲ್ಲಿಇಂಗ್ಲೆಂಡ್ ನೌಕಾದಳದ ಮತ್ತು ವ್ಯವಹಾರದ ಶಕ್ತಿಯ ಹೊರಹೊಮ್ಮಿಕೆ ಕಂಡಿತು. ಇಂಗ್ಲೆಂಡ್, ಸ್ಪ್ಯಾನಿಷ್ ನೌಕಪಡೆಯನ್ನು ೧೫೮೮ರಲ್ಲಿ ಸೋಲಿಸಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿತು ಮತ್ತುಎಲಿಜ಼ಬೆಥ್ ಇಂಗ್ಲೆಂಡ್ ಚರ್ಚನ್ನು ತಮ್ಮ ನೇತೃತ್ವದಲ್ಲಿ ಸ್ಥಾಪಿಸಲು ಪ್ರಾರಂಭಿಸಿದರು. ಎಲಿಜ಼ಬೆಥ್ ತಮ್ಮ ಆಳ್ವಿಕೆಯ ಸಮಯದಲ್ಲಿ ಲಂಡನನ್ನು ಇಂಗ್ಲೆಂಡಿನ ಹೃದಯವೆಂದು ಕರೆಯಲ್ಪಡಲಾಗಿತ್ತು. ಎಲಿಜ಼ಬೆಥ್ ರವರು ತಮ್ಮ ಆಡಳಿತದ ಸಮಯದಲ್ಲಿ ಕೈಗೊಂಡ ಮೊದಲನೆಯ ಕ್ರಮವೇನೆಂದರೆ ಇಂಗ್ಲಿಷ್ ಪ್ರೊಟೆಸ್ಟೆಂಟ್ ಚರ್ಚ್ ಸ್ಥಾಪನೆ, ಇವರು ಮದುವೆಯಾಗಿ ಉತ್ತರಾಧಿಕಾರಿಯನ್ನು ನೀಡುತ್ತಾರೆಂಬ ನಿರೀಕ್ಷೆಯಿತ್ತು ಆದರೆ ಇವರು ಇಂಗ್ಲೆಂಡನ್ನು ಪ್ರಭಲ ರಾಷ್ಟ್ರವನ್ನಾಗಿ ಮಾಡುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡು ಅವರ ವೈವಾಹಿಕ ಜೀವನದ ಕಡೆ ಗಮನ ಹರಿಸದೆ ಕನ್ಯೆಯಾಗಿ ಉಳಿದು ಕನ್ಯತ್ವದಲ್ಲಿ ಪ್ರಖ್ಯಾತವಗಿದ್ದರು. ಸರ್ಕಾರದಲ್ಲಿ ಎಲಿಜ಼ಬೆಥ್ ರವರು ತನ್ನ ತಂದೆ ಮತ್ತು ಅರೆಸಹೋದರ-ಸಹೋದರಿಗಿಂತ ಹೆಚ್ಚು ಮಾದ್ಯಮವಾಗಿದ್ದರು, ಇವರ ಧ್ಯೇಯವಾಕ್ಯವೆಂದರೆ " ನಾನು ನೋಡುತ್ತೇನೆ ಆದರೆ ಏನು ಹೇಳುವುದಿಲ್ಲ"(ವೀಡಿಯೊ ಅಟ್ ಟಾಸಿಯೊ), ಎಲಿಜ಼ಬೆಥ್ ಆಳ್ವಿಕೆಯ ಕಾಲವನ್ನು ಎಲಿಜ಼ಬೆಥ್ ಯುಗ ಅಥವಾ ಸುವರ್ಣ ಯುಗ ಎಂದು ಕೂಡ ಕರೆಯಲಾಗುತ್ತಿತ್ತು, ಈ ಸಮಯದಲ್ಲಿ ಇಂಗ್ಲೀಷ್ ನಾಟಕಗಳು ವಿಲಿಯಂ ಷೇಕ್ಸ್ಫಿಯರ್ ಮತ್ತುಕ್ರಿಸ್ಟೋಫರ್ ಅಂತಹ ಸಾಹಿತಿಗಾರರ ನೇತ್ರತ್ವದಲ್ಲಿ ಪ್ರಸಿದ್ದವಾದವು. ಎಲಿಜ಼ಬೆಥ್ ರವರನ್ನು ವರ್ಜಿನ್ ರಾಣಿ, ಗುಡ್ ರಾಣಿ ಬೆಸ್ ಮತ್ತು ಗ್ಲೋರಿಯನ ಎಂಬ ಹೆಸರಿನಲ್ಲೂ ಕೂಡ ಕರೆಯಲಾಗುತ್ತಿತ್ತು, ಮಕ್ಕಳಿಲ್ಲದ ಇವರು ಟ್ಯೂಡರ್ ಸಾಮ್ರಾಜ್ಯದ ಕೊನೆಯ ಆಡಳಿತಗಾರಿಯಾಗಿದ್ದರು.[೨] ಎಲಿಜ಼ಬೆಥ್ ತಮ್ಮಅಳ್ವಿಕೆಯ ಸಮಯದಲ್ಲಿ ಎರಡು ಮುಖ್ಯ ಕಾರ್ಯಗಳಿಗೆ ತಮ್ಮನ್ನು ತಾವು ತೊಡಗಿಸಿಕೊಂಡರು , ಮೊದಲನೆಯದಾಗಿ ೧೫೫೯ರಲ್ಲಿ ಮೊದಲನೆ ಪಾರ್ಲಿಮೆಂಟ್ ವಿಚಾರಣೆ ನಡೆಸಿ ಅದರಲ್ಲಿ ಇಂಗ್ಲೆಂಡಿನ ಚರ್ಚನ್ನು ಪುನರ್ ಸ್ಥಾಪನೆ ಮಾಡಲು ಮತ್ತು ಪ್ರೆಯರ್ ಪುಸ್ತಕವನ್ನು ಬಿಡುಗಡೆ ಮಾಡಲು ತೀರ್ಮಾನಿಸಿದರು. ಎಲಿಜ಼ಬೆಥ್ ತಮ್ಮ ರಾಜ್ಯದಲ್ಲಿ ಧಾರ್ಮಾತ್ಮಿಕ ಧ್ಯೇಯೆಯನ್ನು ತೆಗೆದುಕೊಂಡು "ಒಬ್ಬನೇ ಜೀಸಸ್ ಕ್ರೈಸ್ಟ್ ಉಳಿದ್ದಿದ್ದೆಲ್ಲಾ ಬರೀ ನಮ್ಮ ಕಲ್ಪನೆಗಳು " ಎಂಬ ಹೇಳಿಕೆ ನೀಡಿದರು, ೧೫೮೫ರಲ್ಲಿ ಎಲಿಜ಼ಬೆಥ್ ರವರು ಯುದ್ದದಲ್ಲಿ ಸ್ಪೇನ್ ರಾಜ್ಯದ ಪ್ರತಿಯೋಗಿತ ಎದುರಾಳಿಗಳಿಗೆ ಸಹಾಯ ಮಾಡಲು ಮುಂದಾದರು ಆದ್ದ ಕಾರಣದಿಂದಾಗಿ ಸ್ಪೇನ್ ರಾಜ್ಯದವರು ತಮ್ಮ ಮುಂದಿನ ದಾಳಿಯನ್ನು ಇಂಗ್ಲೆಂಡಿನ ಮೇಲೆ ಮಾಡಲು ತೀರ್ಮಾನಿಸಿದರು. ಈ ದಾಳಿಯ ಸಮಯದಲ್ಲಿ ತಮ್ಮಲ್ಲಿರುವ ಸಮಸ್ಯೆಗಳನ್ನು ಸರಿಪಡಿಸುವಾಗ ಜೇಮ್ಸ್ ವಿ ಸ್ಕಾಟ್ಲ್ಯಾಂಡ್ ರಾಜನ ಮಗಳಾದ ಯುವರಾಣಿ ಮೇರಿ ಸ್ಟಾರ್ಟ್ ಕಡೆಯಿಂದಲು ಮುಂತಾದ ತೊಂದರೆಗಳು ಎದುರಾದವು ಇದ್ದರಿಂದ ಎಲಿಜ಼ಬೆಥ್ ರವರು ೧೫೬೭ರಲ್ಲಿ ಮೇರಿಯನ್ನು ಸೆರೆಮನೆಗೆ ಕಳುಹಿಸಿದರು ಮತ್ತು ಅವರನ್ನು ೨೦ ವರ್ಷ ಸೆರೆಮನೆಯಲ್ಲಿಡಿಸಿ ಕೊನೆಗೆ ೧೫೮೭ರಲ್ಲಿ ಅವರನ್ನು ನೇಣಿಗೇರಿಸಿದರು.ಎಲಿಜ಼ಬೆಥ್ ತಾವು ಮದುವೆಯಾಗದೆ ತಮ್ಮನ್ನು ತಾವು ಇಂಗ್ಲೆಂಡಿನ ಉದ್ದಾರಕ್ಕಾಗಿ ತೊಡಗಿಸಿಕೊಂಡಿದ್ದರಿಂದ ಅವರನ್ನು ವರ್ಜಿನ್ ರಾಣಿ ಎಂದು ಕರೆಯಲಾಯಿತು, ಅವರಿಗೆ ಸಂಗೀತದಲ್ಲಿ ಆಸಕ್ತಿಯಿದ್ದು ಕೊಳಲನ್ನು ನುಡಿಸುತ್ತಿದ್ದರು , ಅವರಿಗೆ ಸಂಗೀತವನ್ನು ವಿಲಿಯಂ ಬೈರ್ಡ್ ಮತ್ತು ಥಾಮಸ್ ತಾಲ್ಲಿಸ್ ರವರು ಕಲಿಸಿಕೊಡುತ್ತಿದ್ದರು. ಎಲಿಜ಼ಬೆಥ್ ರವರಿಗೆ ನೃತ್ಯದಲ್ಲಿ ಮತ್ತು ನಾಟಕವನ್ನು ನೋಡುವುದರಲ್ಲಿ ಆಸಕ್ತಿಯಿದ್ದು ಅವೆರಡರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಅವರಿಗೆ ತುಂಬಾ ಸಂತೋಷವಗುತ್ತಿತ್ತು.ಆ ರಾಜ್ಯದ ಕಲೆಗಾರರು ಎಲಿಜ಼ಬೆಥ್ ರವರ ಚಿತ್ರಗಳನ್ನು ಬಿಡಿಸಿ ಅವರಿಗೆ ಉಡುಗೊರೆಯಾಗಿ ನೀಡುತ್ತಿದ್ದರು ಇದರಿಂದ ಅವರು ತಮ್ಮ ರಾಜ್ಯಕ್ಕಾಗಿ ಎಷ್ಟು ಶ್ರಮ ಪಟ್ಟಿದ್ದಾರೆ ಮತ್ತು ಆ ರಾಜ್ಯದ ಜನರು ಅವರ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾರೆ ಎಂದು ತಿಳಿದು ಬರುತ್ತದೆ. ಎಲಿಜ಼ಬೆಥ್ ರವರಿಗೆ ಹೊಸ ಬಟ್ಟೆಗಳನ್ನು ಧರಿಸಲು ಮತ್ತು ಉಪಯೋಗಿಸಲು ತುಂಬಾ ಆಸಕ್ತಿಯುಳ್ಳವರು, ಅವರು ಉಪಯೋಗಿಸುತ್ತಿದ್ದ ತುಂಬಾ ಬಟ್ಟೆಗಳೆಲ್ಲವು ಚಿನ್ನ ಮತ್ತು ಬೆಳ್ಳಿಗಳಿಂದ ಮಾಡಲಾಗಿದ್ದವು ಮತ್ತು ಅವರು ಮಾಡಿಕೊಳ್ಳುತ್ತಿದ್ದ ಸೌಂದರ್ಯ ಸಲಕರಣೆಗಳಿಂದ ಅವರು ಅತಿ ಸುಂದರವಾಗಿ ಕಾಣಿಸುತ್ತಿದ್ದರು, ಅವರು ಉಪಯೋಗಿಸುತ್ತಿದ್ದ ಸೌಂದರ್ಯ ಸಲಕರಣೆಗಳು ಬೇರೆ ಪದಾರ್ಥಗಳಾದ ವಿನೇಗರ್ ಮತ್ತು ಬಿಳಿ ಚಿಬುರುಗಳಿಂದ ಮಾಡಲಾದ ಕಾರಣ ಅವರ ಆರೋಗ್ಯದಲ್ಲಿ ವ್ಯತ್ಯಾಸವಾಗಿ ತೊಂದರೆಯಾಯಿತು. ಕೊನೆಯ ವರ್ಷಗಳಲ್ಲಿ ಅವರ ರಾಜ್ಯದ ಬೆಳೆ ಹಾಳಾಗುವುದು , ಅನುದ್ಯೋಗ ಇಂತಹ ತೊಂದರೆಗಳು ಎದುರಾದವು ಆದರು ಎಲಿಜ಼ಬೆಥ್ ರವರು ತಮ್ಮ ವಿಶ್ವಾಸ ಬಿಡದೆ ಅಂತಹ ಹಲವಾರು ತೊಂದರೆಗಳನ್ನು ಸರಿಪಡಿಸುವ ಮಾತನ್ನು ಜನಗಳಿಗೆ ನೀಡಿ ತಮ್ಮ ಮಾತನ್ನು ಉಳಿಸಿಕೊಳ್ಳಲು ಎಲ್ಲಾ ತೊಂದರೆಗಳನ್ನು ಸರಿಪಡಿಸಿ ಇಂಗ್ಲೆಂಡಿನ ಪ್ರಭಲತೆಗಾಗಿ ಕೆಚ್ಚೆದೆಯಿಂದ ಹೋರಾಡಿ ಮಾರ್ಚ್ ೨೪, ೧೬೦೩ರಲ್ಲಿ ರಿಚ್ಮಂಡ್ ಹತ್ತಿರದ ಸರ್ರೆ ಅರಮನೆಯಲ್ಲಿ ತಮ್ಮ ಕೊನೆಯುಸಿರೆಳೆದರು.