ಸದಸ್ಯ:AVISMARAN I S/sandbox
ರೈಲು ನಿಲ್ದಾಣ(ರೈಲ್ವೆ ಸ್ಟೇಷನ್) - ರೈಲುಗಳಿಂದ ಪ್ರಯಾಣಿಕರು ಹಾಗು ಸಾಮಾನುಗಳನ್ನು ಇಳಿಸುವ ಅಥವಾ ಹತ್ತಿಸುವ ನಿಲುಗಡೆಯ ತಾಣ. ಸಮಾನ್ಯವಾಗಿ ರೈಲು ನಿಲ್ದಾಣಗಳಲ್ಲಿ ಓಂದು ಮುಖ್ಯ ಕಟ್ಟಡವಿದ್ದು, ಇದರಲ್ಲಿ ರೈಲು ನಿಲ್ದಾಣದ ಪ್ರಯಾಣಿಕರಿಕೆ ಬೇಕಾಗುವ ವ್ಯವಸ್ಥೆಯಿರುತ್ತದೆ. ರೈಲುಗಳನ್ನು ಹತ್ತಿ ಇಳಿಯಲು ಪ್ರಯಾಣಿಕರಿಕೆ ರೈಲು ಪ್ಲ್ಯಾಟ್ಫಾರ್ಮ್ಗಳ ವ್ಯವಸ್ಥೆಯಿರುತ್ತದೆ. ಸಣ್ಣ ರೈಲು ನಿಲ್ದಾಣಗಳಲ್ಲಿ ಒಂದರಿಂದ ಎರಡು ಪ್ಲ್ಯಾಟ್ಫಾರ್ಮಗಳಿದ್ದರೆ, ದೊಡ್ಡ ನಿಲ್ದಾಣಗಳಲ್ಲಿ ಅನೇಕ ಫ್ಲ್ಯಾಟ್ಫಾರ್ಮ್ಗಳಿರುತ್ತವೆ. ಹಿಂದಿನ ಕಾಲದಲ್ಲಿ ಪ್ರಯಾಣಿಕರು ಹಾಗು ಸಾಮನು ಸಾಗಣೆಗೆ ಒಂದೇ ನಿಲ್ದಾಣವನ್ನ ಉಪಯೋಗಿಸುತ್ತಿದ್ದರು.
ಪ್ರಪಂಚದ ಪ್ರಥಮ ರೈಲು ನಿಲ್ದಾಣ ಇಂದಿನ ಕಾಲದ ಬಸ್ ನಿಲ್ದಾಣಗಳನ್ನು ಹೊಲುತ್ತಿತ್ತು. ಅವುಗಳಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಸರಿಯಾದ ವ್ಯವಸ್ಥೆ ಇರಲಿಲ್ಲ. ಲಿವರ್ಪೂಲ್ ಹಾಗು ಮ್ಯಾಂಚೆಶ್ಟರ್ ರೈಲ್ವೆಯ ವತಿಯಿಂದ ಪ್ರಥಮ ರೈಲು ನಿಲ್ದಾಣಗಳು ೧೮೩೦ರಲ್ಲಿ ಆರಂಭವಾಯಿತು.ಇವು ಜಾರ್ಜಿಯನ್ ಕಾಲದ ಸಾಲು ಮನೆಗಳನ್ನು ಹೊಲುತಿತ್ತು.
ಹಿಂದಿನ ಕಾಲದಲ್ಲಿ ಅಮೇರಿಕ ಹಾಗು ಕೆನಡಾ ದೇಶಗಳ ಗ್ರಾಮಾಂತರ ಹಾಗು ದೂರದ ಪ್ರದೇಶಗಳಲ್ಲಿ,ಪ್ರಯಾಣಿಕರು ರೈಲು ನಿಲ್ದಾಣದಲ್ಲಿ ರೈಲುಗಳನ್ನು ನಿಲ್ಲ್ಲಿಸಲು ಬಾವುಟವನ್ನು ತೊರಿಸುತ್ತಿದ್ದರು. ಇಂತಹ ನಿಲ್ದಾಣಗಳನ್ನು ಫ್ಲ್ಯಾಗ್ ನಿಲ್ದಾಣವೆಂದು ಕರೆಯಲಾಗುತಿತ್ತು. ೧೯ನೆ ಶತಮಾನದಲ್ಲಿ ನಿರ್ಮಾಣವಾದ ರೈಲು ನಿಲ್ದಾಣಗಳು ಆಗಿನ ಕಾಲದ ವಾಸ್ತುಶಾಸ್ತ್ರ ಶೈಲಿಯನ್ವಯ ನಿರ್ಮಾಣಗೊಳ್ಳುತಿದ್ದವು. ಹೆಚ್ಚಿನ ನಿಲ್ದಾಣಗಳು ಗೊಥಿಕ್ ವಾಸ್ತುಶಾಸ್ತ್ರ ಶೈಲಿಯಲ್ಲಿ ನಿರ್ಮಾಣ ಗೊಳ್ಳುತ್ತಿದ್ದವು. ಇದಾದ ನಂತರ ಕೆಲವು ಕಾಲ ನಿಲ್ದಾಣಗಳನ್ನು ಇದೇ ಮಾದರಿಯಲ್ಲಿ ನಿಲ್ದಾಣಗಳನ್ನು ನಿರ್ಮಿಸಲಾಗುತಿತ್ತು. ಆದರೆ, ಇತ್ತೀಚೆಗೆ ನಿರ್ಮಾಣಗೊಂಡ ರೈಲು ನಿಲ್ದಾಣಗಳು, ಆಧುನಿಕ ವಿಮಾನ ನಿಲ್ದಾಣಗಳನ್ನು ಹೋಲುತ್ತವೆ. ಆಧುನಿಕ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಕೆಲವು ಪ್ರಮುಖ ರೈಲು ನಿಲ್ದಾಣಗಳೆಂದರೆ: ಜಪಾನ್ ನಲ್ಲಿರುವ ಶಿಂಕಾನ್ಸೆನ್ ರೈಲು ಒಡುವ ಮಾರ್ಗಗಳು. ಫ್ರಾನ್ಸ್ ನಲ್ಲಿ ಟೀ.ಜೀ.ವೀ ರೈಲು ಒಡುವ ಮಾರ್ಗಗಳು. ಬರ್ಲಿನ್ನ ನ್ಯೂ ಹಾಪ್ಟಭಾಹ್ನ್ಹಾಫ್ ರೈಲು ನಿಲ್ದಾಣ. ಯುನೈಟೆಡ ಕಿಂಗ್ಡಮ್ನಲ್ಲಿರುವ ವಾಟರ್ಲೂ ರೈಲು ನಿಲ್ದಾಣ - ಇಲ್ಲಿಂದ ಯೂರೋಸ್ಟಾರ್ ರೈಲುಗಳು ಚ್ಯಾನಲ್ ಟನಲ್ನ ಮೂಲಕ ಫ್ರಾನ್ಸ್ ಹಾಗು ಬೆಲ್ಜಿಯಂ ದೇಶಗಳಿಗೆ ಸಂಪರ್ಕ ಒದಗಿಸುತ್ತವೆಗೆ ಪ್ರತ್ಯೇಕ ವ್ಯವಸ್ಥೆ ಇರುತ್ತದೆ.