ಸದಸ್ಯ:ANNON DeSA/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪುಂಡೂರು ಲಕ್ಶ್ಮೀನಾರಯಣ ಪುಣಿಂಚತ್ತಾಯ

ಪುಂಡೂರು ಮನೆತನದಲ್ಲಿ ೧೭-೪-೧೮೯೯ರಂದು ಲಕ್ಶ್ಮೀನಾರಾಯಣ ಪುಣಿಂಚತ್ತಾಯರ ಜನನ. ವಿಜಿತಾಶ್ವ ವಿಜಯ,ಪೃಥು ವಿಜಯ, ಸೌಭಾಗ್ಯ ಸುಂದರಿ ಮುಂತಾದ ಕೃಥಿಗಳ ಕರ್ತೃ

ರಾಮಚಂದ್ರ ಪುಣಿಂಚತ್ತಾಯರು ಇವರ ತಂದೆ. ತಾಯಿ ಸೀಥಾಲಕ್ಷ್ಮಿ.೧೯೨೦ರಲ್ಲಿ [[ಮಂಗಳೂರಿನ]] ಸರಕರಿ ಕಾಲೆಜಿನಲ್ಲಿ ಇಂಟರ್ಮೀಡಿಯಟ್ ಓದು. ಇಂಟರ್ಮೀಡಿಯಟ್ನಲ್ಲಿದಾಗಲೇ

'ಬಾಲಗಂಗಾಧರ ಸ್ತವ' ಎಂಬ ಕೃಥಿಯ ಪ್ರಕಟಣೆ.

ತಿಲಕರ ವಿಯೋಗದೊಂದಿಗೆ ಪುಣಿಂಚತ್ತಾಯರ ಕಾವ್ಯಕೃಶಿಯ ಆರಂಭ. ಕವ್ಯ ಕೇವಲ ಕವ್ಯವಗಿ ಅಲ್ಲ ಸ್ವತಂತ್ರ್ಯ್ ಚಳುವಳಿಯ ಮಾಧ್ಯಮವಾಗಿಯೂ, ಸಾಮಾಜಿಕ ಬದಲಾವಣೆಯ

ಪ್ರೇರಕ ಶಕ್ಥಿಯಾಗಿಯೂ ದುಡಿಯಬೇಕೆನ್ನುವ ನಿಲುವು ಅವರದ್ದು. ಸಂಪ್ರದಾಯವಾದೀ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ 'ಥೇಟ್ ಕಾಂಗ್ರೆಸ್' ಎಂದು ಕರೆಸಿಕೊಂಡ ಅವರು ,ಹರಿಜನ

ಸಂಧಾನ,ದಂತಹ ಕೃತಿಯನ್ನು ಬರೆದದ್ದು ಮಾತ್ರವಲ್ಲ, ಹರಿಜನರನ್ನು ಮುಟ್ಟಿ ಮೈದವಡಿ ಸಂತೈಸುತ್ತಿದ್ದರು. ಒಕ್ಕಲಿನ ಜನರನ್ನು ಜಮೀನ್ದಾರಿಕೆಯ ಬಿಗಿಹಿಡಿತದಲ್ಲಿಡಲು ಒಪ್ಪದೆ

ಮಿತ್ರರಂತೆ, ಆತ್ಮೀಯರಂತೆ ನೋಡಿಕೊಳ್ಳುತಿದ್ದರು.

'ಲೀಲೆ' ಮತ್ತು ಒಂದೆರಡು ಮದುವೆ ಹಾಡುಗಳನ್ನು ಬಿಟ್ಟರೆ ಲಕ್ಶ್ಮೀನಾರಾಯಣ ಪುಣಿಂಚಿತ್ತಾಯರ ಪ್ರತಿಯೊಂದು ಕವಿತತೆಯೂ ನೇರವಗಿ ಸ್ವಾತಂತ್ರ್ಯ ಸಂಗ್ರಾಮಕ್ಕೇ ಸಂಬಂಧಿಸಿದಂತೆ.

ಬಹುಶಃ ಕನ್ನಡದಲ್ಲೇ ಅವರಷ್ಟು ದೊದ್ದ ಪ್ರಮಾಣದಲ್ಲಿ ಸ್ವಾತಂತ್ರ್ಯ ಗೀತೆಗಳನ್ನು ಯಾರೂ ಬರೆದಿರಲಾರರು. ಯಾರ ಹಂಗು ಇಲ್ಲದೆ, ಯಾವ ದಾಕ್ಶಿಣ್ಯಕ್ಕೂ ಬಾಗದೆ, ರಾಜತ್ವವನ್ನು

ಪ್ರಭುಸಂಹಿತೆಯಿಂದಲೇ ಟೀಕಿಸಿದ ಧೈರ್ಯಶಾಲಿ. ಬ್ರಿಟೀಷ್ ಸರಕಾರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ವಿಧಿಸಿದ್ದ ತೀವ್ರ ನಿರ್ಬಂಧನೆಗಳನ್ನು ಲೆಕ್ಕಿಸದೆ ಇಷ್ಟು ಕಠೋರವಗಿ ಬರೆದ ವಿರಳ.

ಅಂಥವರಲ್ಲಿ ಪುಣಿಂಚತ್ತಾಯರೂ ಒಬ್ಬರು.