ಸದಸ್ಯ:AKSHAY KUMAR .M/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೆಂಪ್ಲೇಟು:ಫ್ರಾಣಿಲೋಕದ ಫ್ರೇಮಾಕಾವ್ಯಗಳು

ಫ್ರಾಣಿಲೋಕದ ಫ್ರೇಮಾಕಾವ್ಯಗಳು[ಬದಲಾಯಿಸಿ]

ಫ್ರೀತಿ ಫ್ರೇಮವೆಂಬುದು ಕೇವಲ ಮನುಷ್ಯರಿಗೆ ಮತ್ರ ಎಂಬ ತಪ್ಪು ಕಲ್ಪನೆ ನಮ್ಮಲ್ಲಿದೆ. ಪ್ರತಿ ಜೀವಿಯಲ್ಲಿಯೂ ಫ್ರೀತಿಯ ಸೆಲೆಯೆದೆ. ಪ್ರೇಮ ಅಂಕರಿಸುತ್ತದೆ. ಹಲವು ಫ್ರಾಣಿಗಳಲ್ಲಿ ಸಂತಾನೋತ್ಪತಿ ಕಾಲದಲ್ಲಿ ಆರಂಭಗೊಂಡು ಆ ಕ್ರಿಯೆ ನಡೆದ ಆನಂತರ ತಮ್ಮ ಪಾಡಿಗೆ ತಾವಿದ್ದು ಬಿಡುತ್ತವೆ. ಆದರೆ ಮತ್ತೆ ಹಲವು ಫ್ರಾಣಿಗಳಲ್ಲಿ ಗಂಡು ಹೆಣ್ಣಿನದು ಅಪ್ರತಿಮ ಮಧುರ ಬಾಂಧವ್ಯ. ಸದಾ ಸತಿಪತಿಗಳಂತೆ ಒಟ್ಟಾಗಿದ್ದು ತಮ್ಮ ಮರಿಗಳ ಪಾಲನೆ ಪೋಷಣೆಯಲ್ಲಿ ತೊಡಗುತ್ತವೆ.ಆದರೆ ಅವು ಕೇವಲ ಸಂತನ ಕ್ರಿಯೆಗಾಗಿ ಒಂದನ್ನೊಂದು ಬಯಸುತೆವೆಯೇ? ಅಥವಾ ನಿಜ ಅರ್ಥದ ಪ್ರಿತಿಯಿದೆಯೇ?

ಮನೆಯಲ್ಲಿರುವ ಪಾರಿವಾಳಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗಿ ಅನ್ಯೋನ್ಯ ಸಂಬಂಧ ಗೋಚರಿಸುತ್ತದೆ.ಪಾರಿವಾಳಗಳಲ್ಲಿ ಗಂಡು - ಹೆಣ್ಣು ಸದಾ ಜೊತೆಯಾಗಿಯೇ ಬದುಕುತ್ತವೆ. ಪ್ರತಿ ಜೋಡಿಗೊ ಪ್ರತ್ಯೇಕ ಗೊಡು ಇರುತ್ತದೆ. ಮರಿಗಳು ಬೆಳೆಯುತ್ತಾ ಪ್ರಬುಧ್ಧಾವೆಸ್ಥೆಗೆ ಬಂದಾಗ ಅವು ತಮ್ಮ ಸಂಗತಿಗಳನ್ನು ತಾವೇ ಆಯ್ಕೆ ಮಾಡಿಕೊಳ್ಳುತ್ತವೆ.ಹೆಣ್ಣು ಸದಾ ಸೌಮ್ಯ ಗಂಡು ಗುಟುರು ಹಾಕುತ್ತಾ ಹೆಣ್ಣಿನ ಹಿಂದೆ ತಿರುಗುತ್ತಿರುತ್ತದೆ. ಒಮ್ಮೆ ಅವು ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಂಡವೆಂದರೆ ಮುಗಿಯೆತು. ಸದಾ ಜೊತೆಯಾಗಿಯೇ ಇರಬಯಸುತ್ತವೆ. ಅವುಗಳ ಎಷ್ಟು ಅನ್ಯೋನವಾಗಿರುತ್ತವೆಯೆಂದರೆ ನೀವೇನಾದರೂ ಹೆಣ್ಣು ಪಾರಿವಾಳವನ್ನು ಕೈಗೆತ್ತಿಕೊಂಡರೆ ಗಂಡು ತತ್ಕ್ಶಣ ಬಂದು ನಿಮ್ಮ ಕೈ ಮೇಲೆ ಕೊರುತ್ತದೆ. ಬೇರೊಂದು ಗಂಡು ತನ್ನ ಹೆಣ್ಣಿನತ್ತೆ ಸುಳಿದರೂ ಸಾಕು, ಓಡಿ ಬಂದು ಅದನ್ನು ಹಿಮ್ಮೆಟ್ಟಿಸುತ್ತದೆ. ಅವುಗಳ ಮಿಲನದ ಅನಂತರ ಹೆಣ್ಣು ಮೊಟ್ಟೆ ಇಡುವ ಕಾಲಕ್ಕೆ ಗಂಡು ಪಾರಿವಾಳ ಅಲ್ಲಿ ಇಲ್ಲಿ ಬಿದ್ಡಿರುವ ಕಡ್ಡಿಗಳನ್ನು ಆಯ್ದು ತಂದು ಹೆಣ್ಣಿಗೆ ಕೊಡುತ್ತೆದೆ.ಅವುಗಳನ್ನು ಒಪ್ಪಓರಣವಾಗಿ ಜೋಡಿಸಿಕೊಂಡು ಅವುಗಳ ಮದ್ಯದಲ್ಲಿ ಮೊಟ್ಟೆಗಳನ್ನು ಹೊಂದಿಸಿಕೊಂಡು ಹೆಣ್ನು ಕಾವು ಕೊಡುವ ಪ್ರಕ್ರಿಯೆಯಲ್ಲಿ ಗಂಡು ಸಮ ಪಾಲು ಪಡೆಯುತ್ತದೆ.ಮೊಟ್ಟೆಯೊಡೆದು ಮರಿ ಹೊರ ಬಂದ ಮೇಲೆ, ಮರಿ ತನ್ನನ್ನು ತಾನು ಸಂಭಾಳಿಸಿಕೊಳ್ಳುವವರೆಗೂ ಹೆಣ್ಣು-ಗಂಡು ಎರಡು ಪಾರಿವಾಳಗಳು ಮರಿಗಳಾ ಪಾಲನೆ ಮಾಡುತ್ತವೆ. ಮರಿ ಬಲಿತ ಮೇಲೆ ಅದನ್ನು ತಮ್ಮ ಗೂಡನಿಂದ ಹೊರಕ್ಕಟ್ಟಿಬಿಡುವ ಈ ತಾಯಿ-ತಂದೆಯರ ತಮ್ಮ ದಾಂಪತ್ಯ ಜೇವನ ಮುಂದುವರಿಸುತ್ತವೆ. ಮತ್ತೆ ಮೊಟ್ಟೆ,ಮರಿ ಪಾಲನೆ...ಹೀಗೆ ಸಾಗುತ್ತದೆ ಅವುಗಳ ಜೀವನ.

ಕೆಲವೊಮ್ಮೆ ಅಲ್ಲಿಯೂ ದುರಂತಗಳು ತಪ್ಪುವುದಿಲ್ಲ.ಈ ದಂಪತಿಗಳು ಯಾರಾದರೂ ಅಕಾಲ ಮರಣಕ್ಕೆ ತುತ್ತಾದರೆ ಉಳದ ಪಾರಿವಾಳ ತೀವ್ರ ವೇದನೆಯನ್ನು ಅನುಭವಿಸುತ್ತದೆ. ಕಾಳು ತಿನ್ನದೇ, ನೀರು ಕುಡಿಯದೇ ಮಂಕಾಗಿ ಕೂತಿರುತ್ತದೆ.ಆದರೂ ಕಾಲ ಎಲ್ಲವನ್ನೂ ಮರೆಸುತ್ತದೆ.ಕೆಲದಿನಗಳ ಅನಂತರ ಅದು ಮತ್ತೊಬ್ಬ ಸಂಗಾತಿಯ ಸಖ್ಯ ಬಯಸಿ ಹೊರಡುತ್ತದೆ.

ಪ್ರಾಣಿಗಳಲ್ಲಿ ಸಂಗತಿಯನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ಬಹು ಸಾಹಸದ ಕೆಲಸ.ಬಹುತೇಕ ಪ್ರಾಣಿಗಳಲ್ಲಿ ಹೆಣ್ಣಿಗೇ ಹೆಚ್ಚಿನ ಆಯ್ಕಯ ಅವಕಾಶಗಳು.ತಾನು ಬಯಸುವ ಹೆಣ್ಣನ್ನು ಒಲಿಸಿಕೊಳ್ಳಾಬೇಕಾದಲ್ಲಿ ಗಂಡು ಅದೆಷ್ಟು ಸಂಕಷ್ಟಗಳನ್ನು ಎದುರಿಸಬೇಕು. ಕೆಲವು ಬಾರಿ ದುರ್ಬಲ ಗಂಡು ಪ್ರೇಮಕ್ಕಾಗಿ ನಡೆಸುವ ಹೋರಾಟದಲ್ಲಿ ಬಲಿಷ್ಟ ಗಂಡನ ಹೊಡೆತದಿಂದ ಸತ್ತೇ ಹೋಗುತ್ತದೆ. ಹೆಣ್ಣೆಗೆ ಅದೆಲ್ಲಾ ಮುಖ್ಯ ಎನಿಸುವುದೇ ಇಲ್ಲ. ತನೆಗೆ ಬೇಕಿರುವ ಬಲಿಷ್ಟ ಗಂಡನ ಆಯ್ಕೆ ಪ್ರಕ್ರಿಯೆಯಲ್ಲಿ ಎಷ್ಟು ಗಂಡಗಳು ಸತ್ತರೂ ಅದಕ್ಕೆ ಚಿಂತೆಯಿಲ್ಲ. ಉದಾಹರಣೆಗೆ ಸಾರಂಗಗಳಲ್ಲಿ ಈ ಪ್ರೇಮಯುದ್ದ ನಡೆಯುತ್ತದೆ. ಸಾಮನ್ಯವಾಗಿ ಹಿಂಡಿನಲ್ಲಿ ಒಂದೇ ಬಲಿಷ್ಟ ಗಂಡಿದ್ದರೆ ಅದರ ಸಾರ್ವಭೌಮತ್ವವನ್ನು ಇತರ ಗಂಡುಗಳು ಒಪ್ಪಿಕೊಂಡು ಬೀಡುತ್ತವೆ. ಅಥವಾ ಕೆಲವು ಚಿಕ್ಕಪುಟ್ಟ ಸ್ಪರ್ಧೆಗಳನ್ನು ಏರ್ಪಡಿಸಿಕೊಳ್ಳುತ್ತವೆ.ವೇಗವಾಗಿ ಓಡುವುದು,ಜೋರಾಗಿ ಹೊಂಕರಿಸುವುದು,ದ್ರಷ್ಟಿಯುದ್ದ ಮುಂತಾದವುಗಳು ಈ ಸ್ಪರ್ಧೆಗಳಲ್ಲಿಯೇ ಗಂಡನ ಆಯ್ಕೆ ನಡೆದುಬಿಟ್ಟರೆ ತೊಂದರೆಯಿಲ್ಲ. ಅದರೆ, ಎರಡು ಬಲಷ್ಟ ಗಂಡುಗಳೇನಾದರೂ ಒಂದೇ ಹಿಂಡೀನಲ್ಲಿ ಇದ್ದವೆಂದರೆ ಅವೆರಡೂ ಯುದ್ದಕ್ಕೆ ನೆಲ್ಲಬೇಕಾಗುತ್ತದೆ. ಈ ರೀತಿಯ ಮುಖಮುಖಯಲ್ಲಿ ಒಂದು ಗಂಡನ ಸಾವು ನಿಶ್ಚಿತ. ಗೆದ್ದ ಗಂಡು ಹೆಣ್ಣಿನ ಮೆಚ್ಚುಗೆಗೆ ಪಾತ್ರವಾಗುತ್ತದೆ.

ವಿಚಿತ್ರ್ ಆಯ್ಕೆ[ಬದಲಾಯಿಸಿ]