ಸದಸ್ಯ:AKASH S/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದ ಸಂಯುಕ್ತ ಪದ್ಧತಿ ಭಾರತವು ಸಂಯುಕ್ತ ಪದ್ಧತಿಯ ಸರಕಾರವನ್ನು ಹೊಂದಿದೆಯೆ ಎಂಬುದು ವಾದಗ್ರಸ್ಥ ವಿಷಯವಾಗಿದೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಎರಡು ಬಗೆಯ ವಾದಗಳನ್ನು ಮಂಡಿಸಲಾಗಿದೆ.

ಪ್ರೊ. ಕೆ. ಸಿ. ವೇರ್ ಅವರು, "ಭಾರತದ ಸಂವಿಧಾನವು ಅರೆ-ಸಂಯುಕ್ತ ಪದ್ಧತಿತಯ ಸರಕಾರವನ್ನು ಒದಗಿಸಿಕೊಟ್ಟಿದ್ದು ಕೇಂದ್ರಿಕೃತ ಲಕ್ಷಣಗಳನ್ನೂಳಗೊಂಡ ಸಂಯುಕ್ತ ರಾಜ್ಯ ಪದ್ಧತಿಯನ್ನು ಕಲ್ಪಿಸಿಕೊಟ್ಟಿದೆ ಎಂಬುದನ್ನು ಅವರು ಒಪ್ಪವುದಿಲ್ಲ. ಡಾ. ಡಿ. ಎನ್. ಬ್ಯಾನರ್ಜಿಯವರು "ಭಾರತವು ಕೇಂದ್ರದ ಜೊತೆಗೆ ಬಲವದ ಒಲವನ್ನು ಹೊಂದಿದೆ ಸಂಯುಕ್ತ ಪದ್ಧತಿ ರಾಜ್ಯ ವಾಗಿದೆ" ಎಂದು ವಾದಿಸಿದ್ದರೆ. ಭಾರತದ ಸಂವಿಧಾನದ ರಚನಾಕಾರರು ಉದ್ದೇಶ ಪೂರ್ವಕವಾಗಿ ಭಾರತದ ಸಂವಿಧಾನ ಸಂಯುಕ್ತ ಪದ್ಧತಿಯನ್ನು ಒದಗಿಸಿಕೊಟ್ಟಿದ್ದಾರೆ. ಸಂವಿಧಾನದ ಮೂಲಗ್ರಂಥದಲ್ಲಿ ಸಂಯುಕ್ತ ರಾಜ್ಯ ಎಂಬ ಪದವನ್ನು ಬಳಸಿಲ್ಲ. ಆದರೆ ಸಂವಿಧಾನದ ೧ ನೇ ಅನುಚ್ಛೇದವು ಭಾರತವು ರಾಜ್ಯ ಗಳ ಒಕ್ಕೂಟವಾಗಿರಬೇಕು" ಎಂಬುದರ ಬಗ್ಗೆ ವಿವರಿಸುತ್ತದೆ. ಭಾರತದಲ್ಲಿ ಏಕತೆ ಹಾಗು ಸಮಗ್ರತೆಯನ್ನು ಕಾಪಡುವ ಉದ್ದೇಶದಿಂದ ಸಂವಿಧಾನದ ರಚನಾಕಾರರು ಬಲಿಷ್ಠ ಕೇಂದ್ರದ ಸಂಯುಕ್ತ ಪದ್ಧತಿಯನ್ನು ಒದಗಿಸಿಕೊಟ್ಟಿದ್ದಾರೆ. ನಮ್ಮ ಸಂವಿಧಾನದದಲ್ಲಿ ಬಲಿಷ್ಠ ಕೇಂದ್ರಿಕೃತ ಸರಕಾರದ ಬಗ್ಗೆ ಹೆಚ್ಚಿನ ಒಲವು ಇರುವದರಿಂದ ಕೆಲ ಟೀಕಾಕಾರು "ಭಾರತ ಸರಕಾರವು ಕೇಂದ್ರಿಕೃತವಾಗಿದೆ ಹೊರತು ಸಂಯುಕ್ತ ಪದ್ಧತಿಯಗಿಲ್ಲ" ವೆಂದು ಹೇಳೆದ್ದಾರೆ. ಆದರೂ ಸಂಯುಕ್ತ ಪದ್ಧತಿಗೆ ಬೇಕಾಗುವ ಲಕ್ಷಣಗಳು ಸಂವಿಧಾನದಲ್ಲಿ ಇರುವದರಿಂದ ಸಂಯುಕ್ತ ಪದ್ಧತಿಯ ಸರಕಾರವನ್ನು ಅವಲಂಬಿಸಿದೆ ಎಂದು ಹೇಳಬಹುದು.


Emblem of the Supreme Court of India ಸಂಯುಕ್ತ ಪದ್ಧತಿಯ ಲಕ್ಷಣಗಳು

Constitution of India ಭಾರತವು ಕೆನಡಾ ದೇಶದ ಸಂಯುಕ್ತ ಮಾದರಿಯನ್ನು ಹೊಂದಿದೆಯೆ ಹೊರತು ಅಮೆರಿಕೆಯ ಮಾದರಿಯನ್ನು ಹೊಂದಿರುದಿಲ್ಲ. ಅತೀ ಹೆಚ್ಚಿನ ಅಧಿಕಾರಗಳು ಕೇಂದ್ರದ ಸ್ವಾಧ್ದೀನದಲ್ಲಿರುತ್ತವೆ. "ಭಾರತದ ಸಂವಿಧಾನವು ಸಂಯುಕ್ತ ಸ್ವರೂಪನ್ನು ಹೊಂದಿದ್ದು ಏಕಾತ್ಮಕ ಉದೇಶವನ್ನು ಹೊಂದಿದೆ" ಎಂಬುದಕ್ಕಾಗಿ ಈ ಕೆಳಗಿನ ಉದಾಹರಣೆಗಳನ್ನು ಕೊಡಬಹುದು. ಕೇಂದ್ರ ಹಾಗು ರಾಜ್ಯ ಸರಕಾರಗಳು ಸ್ವತಂತ್ರ ಹಾಗೂ ಸ್ವಯಂ ಅಧಿಕಾರಗಳುನ್ನು ಹೊಂದಿದ್ದು ಇವುಗಳ ಕಾರ್ಯ ವಾಪ್ತಿಯಲ್ಲಿ ಸುಲಭವಗಿ ಬದಲಾವಣೆ ಮಾಡುವಂತಿಲ್ಲ. ಇದು ಸಂವಿಧಾನದ ತಿದ್ದುಪಡಿಯಿಂದ ಮಾತ್ರ ಸಾಧ್ಯ. ಸರ್ವೋಚ್ಛ ನ್ಯಾಯಲಯವು ವಿವಿಧ ತಂಟೆಗಳನ್ನು ಇತ್ಯರ್ಥಗೊಳಿಸುತ್ತದೆ. ಭಾರತ ಸಂವಿಧಾನದದಲ್ಲಿ ಒಕ್ಕೂಟ ಸರಕಾರ ಕೆಲ ಲಕ್ಷಣಗಳಿದ್ದು ಅವುಗಳ ಕೆಳಗೆ ವಿವರಿಸಲಾಗಿದೆ.