ಸದಸ್ಯ:AJ Crasta

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹವ್ಯಾಸಗಳು

ನನ್ನ ಹೆಸರು ಆಲ್ವಿನ್ ಜೋಸ್ವಿನ್ ಕ್ರಾಸ್ತ.ನಾನು ಪಾದುವ ಕಾಲೇಜು ಆಫ್ ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟ್ನಲ್ಲಿ ಓದುತ್ತಿದ್ದೇನೆ.ನಾನು ಈಗ ನನ್ನ ಜೀವನದಲ್ಲಿ ಆಗಿರುವ ಸಂಗತಿಯನ್ನು ಹೇಳಲು ಇಚ್ಚಿಸುತ್ತೇನೆ.

ನಾನು ಮೊದಲು ಕಲಿಯುತ್ತಿದ್ದ ಶಾಲೆ ಯಾವುದು ಎಂದರೆ ಸಂತ ಫ್ರಾನ್ಸಿಸ್ ಕ್ಸೇವಿಯರ್ ಹಿರಿಯ ಪ್ರಾಥಮಿಕ ಶಾಲೆ.ಆಗ ನಾನು ಕೇವಲ ಓದುವುದರಲ್ಲಿ ಮಾತ್ರ ಗಮನ ನೀಡುತ್ತಿದೆ.ಕೆಲವು ವರ್ಷಗಳ ನಂತರ ನಾನು ೮ನೇ ತರಗತಿಗೆ ಲೂರ್ಡ್ಸ್ ಪ್ರೌಢ ಶಾಲಾಗೆ ಸೇರಿದೆ.ಮೊದಲು ನನಗೆ ಓದುವುದರಲ್ಲಿ ಮಾತ್ರ ರುಚಿ ಇತ್ತು.

೮ನೇಯಿಂದ ನನಗೆ ಓದುವುದರ ಜೊತೆಗೆ ಆಟ ಆಡುವುದಲ್ಲಿ ಗಮನ ಸೆಳೆಯಿತು. ನಾನು ಅಂದು ಆಟ ಆಡುತ್ತಿದ್ದ ಆಟ ಯಾವುದು ಎಂದರೆ ವಾಲಿಬಾಲ್. ನನಗೆ ಅಂದು ಆ ಆಟ ತುಂಬಾ ಇಷ್ಟಪಡುತ್ತಿದ್ದೆ.ನಂತರ ನಾನು ಮುಂದಿನ ವಿದ್ಯಾಬ್ಯಾಸ ಪಡೆಯಲು ಪಾದುವ ಕಾಲೇಜುಗೆ ಸೇರಿದೆ.

ಇಲ್ಲಿಂದ ನನ್ನ ಜೀವನ ಬದಲಾಯಿತು. ನನಗೆ ಹಲವಾರು ಗೆಳೆಯರ ಪರಿಚಯವಾಯಿತು.ಕೆಲವು ಉದ್ದೇಶಗಳು ಬದಲಾದವು.ನಾಯಕತ್ವದ ಗುಣ ಬಂದಿತು.

ನನ್ನ ಜೀವನದಲ್ಲಿ ಹಲವಾರು ಯೋಚನೆಗಳು ಬಂದವು. ಭವಿಷ್ಯದಲ್ಲಿ ಗುರಿ ಮುಟ್ಟುವ ಕನಸು ಕಂಡೆ.ನಂತರ ನಾನು ವಿದ್ಯಾಬ್ಯಾಸ ಪೂರ್ಣಗೊಳಿಸಲು ಇಲ್ಲಿಗೆ ಸೇರಿದೆ.ಈಗ ನಾನು ನನ್ನ ಹವ್ಯಾಸಗಳನ್ನು ತಿಳಿಸುವೆ.

ನನಗೆ ಚಿಕ್ಕವನಿರುವಾಗ ಚಿತ್ರ ಮಾಡುವ ಆಸೆ ಇತ್ತು. ನಂತರ ನನಗೆ ಕುಣಿಯುವ, ಬರೆಯುವ ಮತ್ತು ಭಾಷಣ ಮಾಡುವ ಹವ್ಯಾಸ ಮೂಡಿತು.ಈಗ ನನಗೆ ಇದ್ದೆಲ್ಲವುದರ ಜೊತೆಗೆ ಆಟವಾಡುವ ಹವ್ಯಾಸವು ಬಂದಿದೆ.

ನಮ್ಮಲ್ಲಿ ಯಾವುದಾದರೂ ಒಂದು ಗುಣ ಅಡಗಿದೆ. ಅದನ್ನು ಹೊರತೆಗೆಯುವ ಹೊತ್ತು ಬರಬೇಕಿದೆ ಅಷ್ಟೇ.

ಗುಣ ಹೊರಹಾಕಲು ಒಂದೇ ದಾರಿ . ಅದು ಯಾವುದು ಎಂದರೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸುವುದು. ಆಗ ಮಾತ್ರ ನಮ್ಮ ಗುಣ ಹೊರಬರಲು ಸಾದ್ಯ. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸುವುದು ನಮ್ಮ ಕೆಲಸ. ಆಗ ಮಾತ್ರ ಎಲ್ಲರೂ ನಮ್ಮ ಮೇಲೆ ಗಮನ ಹರಿಸುತ್ತರೆ.