ಸದಸ್ಯ:ABHINANDAN M/ನನ್ನ ಪ್ರಯೋಗಪುಟ-1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪುತ್ತಿಗೆ

ಬಾರ್ದಿಲ ಶ್ರೀ ಸಾಂಬಸದಾಶಿವ ದೇವಸ್ಥಾನ[ಬದಲಾಯಿಸಿ]

"ದೇವನಿಲಯ"ಗಳು ಗ್ರಾಮ, ರಾಷ್ರ್ಟಗಳ ಕ್ಷೇಮಾಭ್ಯುದಯಕ್ಕಾಗಿ ಸ್ಥಾಪಿತವಾಗಿದ್ದು,ಆಸ್ತಿಕ ಸಮಾಜದ ಆಸ್ತಿಯಾಗಿರುವುದು.ತ್ರೇತಾಯುಗದಲ್ಲಿ ಕ್ಷತ್ರೀಯ ಸಂಹಾರಕ ಭಗವಾನ್ ಪರಶುರಾಮರು ತನ್ನ ಕೊಡಲಿಯನ್ನೆಸೆದು ಸೃಷ್ಟಿಸಿದ ಪವಿತ್ರ ಸ್ಥಳ ಈ ತುಳು ನಾಡಿನ ದಕ್ಷಿಣ ಕನ್ನಡ ಜಿಲ್ಲೆ,ಮಂಗಳೂರು ತಾಲೂಕು,ಕಿಲೆಂಜಾರು ಗ್ರಾಮದ ದೇವರಗುಡ್ಡೆ ಎಂಬ ಎತ್ತರವಾದ ಗುಡ್ಡದಲ್ಲಿರುವ ಶ್ರೀ ಕ್ಷೇತ್ರದಲ್ಲಿ "ಅಂಬಾ(ಪಾರ್ವತಿ)ಗಣಪತಿ" ಸಮೇತರಾಗಿ 'ಶಿವ ದೇವರು' ನೆಲೆಸಿರುವುದರಿಂದ "ಸಾಂಬಸದಾಶಿವ" ಎಂಬ ಹೆಸರಿನಿಂದ ಆರಾಧಿಸಲ್ಪಡುತ್ತಿದ್ದು,ಶ್ರೀ ಕ್ಷೇತ್ರವು ಕಾರಣಿಕ ಹಿನ್ನಲೆಯುಳ್ಳ ಪರಮ ಪವಿತ್ರ ಕ್ಷೇತ್ರವಾಗಿರುವುದು.

ಶ್ರೀ ಕ್ಷೇತ್ರದ ಇತಿಹಾಸ:[ಬದಲಾಯಿಸಿ]

ಶ್ರೀ ದೇವಾಷ್ಟಮಂಗಲ ಪ್ರಶ್ನೆ (20-01-2013)ಯಲ್ಲಿ ವಿಮರ್ಶಿಸಲಾಗಿ ಕಂಡು ಬಂದಂತೆ:ಸಾವಿರಾರು ವರ್ಷಗಳ ಹಿಂದೆ ಭಗವಾನ್ ಪರಶುರಾಮ ದೇವರು ಈ ಎತ್ತರವಾದ ಗುಡ್ಡ ಪ್ರದೇಶದಲ್ಲಿ ತಪಸ್ಸನ್ನಾಚರಿಸಿದರೆಂದೂ,ತದನಂತರ ಋಷಿಮುನಿಗಳು ಈ ಪ್ರದೇಶದಲ್ಲಿ ಹಲವು ಕಾಲ ಯಾಗ,ಯಜ್ಞ,ತಪಸ್ಸುಗಳನ್ನು ಮಾಡಿದ ತಪೋಭೂಮಿಯಾಗಿತ್ತೆಂದೂ,ನಂತರದ ಕಾಲದಲ್ಲಿ  ಇಲ್ಲಿಯ ಮೂಲ ನಿವಾಸಿಗಳು ತಮಗೆ ಬಂದ ತೊಂದರೆಗಳನ್ನು ಕಂಡು,ಈ ಪ್ರದೇಶದಲ್ಲಿ ದೈವಿ ಶಕ್ತಿಯಿದೆಯೆಂದು ತಿಳಿದು  ತಮ್ಮದೇ ರೀತಿಯಲ್ಲಿ  ದೇವಿ ಶಕ್ತಿ/ಕಾಳಿಶಕ್ತಿಯನ್ನು ಪೂಜಿಸಿ ಆರಾಧಿಸಿಕೊಂಡು ಬಂದಿದ್ದರೆಂದೂ ತದನಂತರ ರಾಜ ಮಹಾರಾಜರ ಆಳ್ವಿಕೆಯ ಕಾಲದಲ್ಲಿ ತಮಗೆ ಗಂಡು ಸಂತಾನ ಇಲ್ಲದೇ ದತ್ತು ಸ್ವೀಕಾರ ಮಾಡಬೇಕಾಗಿ ಬಂದ ಸಂದರ್ಭದಲ್ಲಿ ಪ್ರಾಯಶ್ಚಿತವಾಗಿ ಈ ಪ್ರದೇಶದ  ಕೆಲವು ಕೃಷಿ ಭೂಮಿಯನ್ನು ಬ್ರಾಹ್ಮಣರಿಗೆ ದಾನವಾಗಿ ಕೊಟ್ಟು ,ಇಲ್ಲಿ ವಾಸವಿರುವಂತೆ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದು,ಸದ್ರಿ ಬ್ರಾಹ್ಮಣರಿಗೆ ಈ ಎತ್ತರದ ಪ್ರದೇಶದಲ್ಲಿರುವ ಪವಿತ್ರ ಚೈತನ್ಯವು ಗೋಚರಕ್ಕೆ ಬಂದು ಶ್ರೀ ಗಣಪತಿ ದೇವರನ್ನು ಆರಾಧಿಸಿಕೊಂಡು ಬಂದರೆಂದೂ,ನಂತರದ ವರ್ಷಗಳಲ್ಲಿ ರಾಜರುಗಳ ಮುಂದಾಳತ್ವದಲ್ಲಿ ಇಲ್ಲಿ ಅಂಬಾಗಣಪತಿ ಸಮೇತನಾದ ಶ್ರೀ ಸಾಂಬಸದಾಶಿವ ದೇವಸ್ಥಾನವನ್ನು ನಿರ್ಮಿಸಿ ಪೂಜಾಧಿಗಳನ್ನು ಬಹಳ ವೈಭವದಿಂದ ನಡೆಸಿಕೊಂಡು ಬಂದರೆಂದೂ ,ನಂತರದ ಕಾಲದಲ್ಲಿ ಸಹೋದರತ್ವದಲ್ಲಿ ಸ್ವಂತಿಕೆಗಾಗಿ ವೈರತ್ವ ಉಂಟಾಗಿ ಯುದ್ಧ ನಡೆದು ಕಷ್ಟ-ನಷ್ಟಗಳಾಗಿ ,ಕಾಲಕ್ರಮೇಣ ,ಕಾರಣಾಂತರದಿಂದ ಶ್ರೀ ಸಾಂಬಸದಾಶಿವ ದೇವಸ್ಥಾನವು ಶಿಥಿಲಗೊಂಡಿತೆಂದು ತಿಳಿದುಬಂದಿರುವುದು,ತದನಂತರ ಸುಮಾರು 800 ವರ್ಷಗಳ ಹಿಂದೆ ,ಶಿಥಿಲಗೊಂಡಿರುವ  ಈ ಕ್ಷೇತ್ರದ ಪವಿತ್ರ ಶಿವಲಿಂಗವನ್ನು ಚೌಟರ ಅರಸರ ಆಡಳಿತದಲ್ಲಿ ನಿರ್ಮಾಣಗೊಂಡ ಪುತ್ತಿಗೆ ಶ್ರೀ ಸೋಮನಾಥ ದೇವಸ್ಥಾನದಲ್ಲಿ  ಪ್ರತಿಷ್ಠೆ ಮಾಡಲಾಯಿತೆಂದು ತಿಳಿದುಬಂದಿರುವುದು.

ಸುಮಾರು 38ವರ್ಷಗಳ ಹಿಂದೆ ಬಾರ್ದಿಲ ಪರಿಸರದಲ್ಲಿ ವಾಸಿಸುತ್ತಿರುವ ಜನರು ಸಂಕಷ್ಟದ ಸರಮಾಲೆಯನ್ನು ಎದುರಿಸುತ್ತಿದ್ದು ಹಿನ್ನಲೆಯಲ್ಲಿ ಜ್ಯೋತಿಷ್ಯರ ಮೂಲಕ ಚಿಂತನೆ ನಡೆಸಲಾಗಿ ,ದೇವರಗುಡ್ಡೆ ಎಂದೇ ಹೆಸರಿರುವ ಈ ಎತ್ತರದ ಕಾಡು ಪ್ರದೇಶದಲ್ಲಿ ಶಿವ ದೇವಾಲಯವಿದ್ದ ಕುರುಹುಗಳು ಲಭಿಸಿದವು.ಸದ್ರಿ ಕ್ಷೇತ್ರವನ್ನು ನವ ನಿರ್ಮಾಣಗೊಳಿಸಿ ಊರ್ಜಿತಗೊಳಿಸಬೇಕೆಂದು ಸಂಕಲ್ಪ ಮಾಡಿ,ಶ್ರೀ ಯಂ.ಕಾಂತಪ್ಪ ಶೆಟ್ಟಿಯವರ ಮುಂದಾಳತ್ವದಲ್ಲಿ ಹಾಗೂ ಶ್ರೀ ಮಿಜಾರು ಗುತ್ತು ಆನಂದ ಆಳ್ವ ಇವರ ಘನ ಅಧ್ಯಕ್ಷತೆಯಲ್ಲಿ ಶ್ರೀ.ಐ.ರಾಮ ಆಸ್ರಣ್ಣ ಅವರ ಆಶೀರ್ವಚನದೊಂದಿಗೆ ಜೀರ್ಣೋದ್ಧಾರ ಸಮಿತಿ ರಚನೆ ಮಾಡಿ ಕಾರ್ಯಪ್ರವೃತರಾಗಿ ,ಪ್ರಕೃತವಿರುವ ಗರ್ಭಗುಡಿಯೊಂದಿಗೆ ,ಈ ಹಿಂದೆ ಇದ್ದ ಸುತ್ತು ಪೌಳಿಯೊಂದಿಗೆ ಶ್ರೀ ಸಾಂಬಸದಾಶಿವ ದೇವಸ್ಥಾನವು ನಿರ್ಮಿಸಲ್ಪಟ್ಟು ಲಿಂಗ ಪ್ರತಿಷ್ಟೆ ,ಬ್ರಹ್ಮಕಲಶಾದಿ ಪುಣ್ಯ ಕಾರ್ಯಗಳು ದಿನಾಂಕ 18.03.1992ರಂದು ಶ್ರೀ ದೇವರ ಅನುಗ್ರಹದಿಂದ ,ಕೊಡುಗೈ ದಾನಿಗಳ ಸಹಕಾರದಿಂದ ನಡೆಯಲ್ಪಟ್ಟಿತ್ತು.ಶ್ರೀ ಕ್ಷೇತ್ರದಲ್ಲಿ ಭಕ್ತರೆಲ್ಲರೂ ಸೇರಿ ಭಜನೆ,ರಂಗಪೂಜೆ,ನಿತ್ಯನಂದಾದೀಪ ಸೇವೆ,ಮಾಸ ಶಿವರಾತ್ರಿ,ಶಿವ ಜಾಗರಣೆ,ಚೌತಿ,ದೀಪಾವಳಿ ಆಚರಣೆ,ಹೋಮ -ಹವನಾದಿ ವಿಧಿ,ವಿಧಾನಗಳು,ಅನ್ನದಾನದಿ ಸೇವೆಗಳು,ತ್ರಿಕಾಲ ಪೂಜಾ ಸೇವೆಗಳು ನಡೆಯುತ್ತಾ ಬರುತ್ತಿರುವುದು.ಶ್ರೀ ಸಾಂಬಸದಾಶಿವ ದೇವಸ್ಥಾನದ ಕಾಮಗಾರಿಯಯ ಅಪೂರ್ಣವಾಗಿದ್ದು,ಬ್ರಹ್ಮಕಲಶೋತ್ಸವವಾಗಿ ಸುಮಾರು 25ಸಂವತ್ಸರಗಳು ಕಳೆದಿದ್ದು,ಮುಂದಿನ ಕಾರ್ಯನಡೆಯ ಬಗ್ಗೆ ತಿಳಿಯುವರೇ,ಸಮಿತಿ ಸದಸ್ಯರು ಹಾಗೂ ಊರ ಪರವೂರ ಭಕ್ತರು ನಿರ್ಣಯಿಸಿದಂತೆ ಬ್ರಹ್ಮಶ್ರೀ ದೇರೆಬೈಲು ಶ್ರೀ ಹರಿಕೃಷ್ಣ ತಂತ್ರಿ ಹಾಗೂ ದೇರೆಬೈಲು ಶ್ರೀ ಶಿವಪ್ರಸಾದ್ ತಂತ್ರಿ ಇವರ ಮಾರ್ಗದರ್ಶನದಲ್ಲಿ ,ದೈವಜ್ಞ ರಾದ ಶ್ರೀ ಮಹೇಶ್ ಪೊದುವಳ್ ಉಪ್ಪಿನಂಗಡಿ ಇವರ ಮೂಲಕ 20-01-2013ರಿಂದ ಮೊದಲ್ಗೊಂಡು ಸ್ವರ್ಣಾರೂಢಾಷ್ಟಮಂಗಲ ಪ್ರಶ್ನೆಯಲ್ಲಿ ವಿಮರ್ಶಿಸಲಾಗಿ ,ಶ್ರೀ ಕ್ಷೇತ್ರವು ಬಹಳ ಪುರಾತನವೂ, ಸಿದ್ದಿ ಕ್ಷೇತ್ರವೂ ,ಕಾರಣಿಕ ಹಿನ್ನಲೆಯುಳ್ಳ ಪವಿತ್ರ ಸಾನಿಧ್ಯವಾಗಿರುವುದು ಮಾತ್ರವಲ್ಲದೇ,ಭಕ್ತ ಜನರ ಇಷ್ಟಾರ್ಥಗಳನ್ನು ಕರುಣಿಸುವ ಶ್ರೀ ಸಾಂಬಸದಾಶಿವ ದೇವರಿಗೆ ಪೂರ್ಣ ಪ್ರಮಾಣದ ದೇವಸ್ಥಾನವಾಗಿ ,ಶ್ರೀ ಸಾನಿಧ್ಯ ಚೈತನ್ಯ ವೃದ್ದಿಗಾಗಿ ಬ್ರಹ್ಮಕಲಶೋತ್ಸವವಾಗಬೇಕೆಂಬುದು ದೇವರ ಅಪೇಕ್ಷೆಯಾಗಿರುವುದೆಂದು ತಿಳಿದು ಬಂದಿರುವುದು. ಈ ಹಿನ್ನಲೆಯಲ್ಲಿ ಕ್ಷೇತ್ರದ ಭಕ್ತರೆಲ್ಲರೂ ಶ್ರೀ ಸಾನಿಧ್ಯ ವೃದ್ದಿಗಾಗಿ ಒಮ್ಮತದಿಂದ ಕೈಗೊಂಡ ಸತ್ ಸಂಕಲ್ಪದಂತೆ ,ದೇವಸ್ಥಾನದ ವಾಸ್ತು ವಿನ್ಯಾಸವನ್ನು ವಾಸ್ತುಶಿಲ್ಪಿ ಶ್ರೀ ಕೃಷ್ಣರಾಜ ತಂತ್ರಿ ಕುಡುಪು ಇವರು ರಚಿಸಿದ್ದು ,ಶ್ರೀ ಸಾಂಬಸದಾಶಿವ ದೇವರ ನೂತನ ಗರ್ಭಗುಡಿ ,ಶ್ರೀ ಮಹಾಗಣಪತಿ ದೇವರ ಗುಡಿ ,ಶ್ರೀ ನಾಗ ರಕ್ತೇಶ್ವರಿ ಗುಡಿ,ಕೊಡಮಣಿತ್ತಾಯ ದೈವ ಚಾವಡಿಯನ್ನು ಹೊಂದಿರುವ ಪವಿತ್ರವಾದ ದೇಗುಲವಾಗಿದೆ.