ವಿಷಯಕ್ಕೆ ಹೋಗು

ಸದಸ್ಯ:31divya/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                         ಅಂತಾರಾಷ್ತ್ತ್ರೀಯ ವ್ಯಾಪಾರ

ಪ್ರಮುಖವಾದವರೆ ಅದರ ಅಧ್ಯಕ್ಷರು-ವೈಕೌಂಟ್ ಸೆಸಿಲ್,ವಿನ್ಸಟನ್ ಚರ್ಚಿಲ್, ಮೀಜರ್ ಅಟ್ಲೀ ಮೊದಲಾದವರು. ಬ್ರಿಟನನ್ನಿನ ಪ್ರಧಾನಮಂತ್ರಿ ಅಧಿಕಾರದ ಕಾರಣದಿಂದಾಗಿ ನೇಮಕಗೊಂಡ ಉಪಾಧ್ಯಕ್ಷ.ಇದರ ಆಶ್ರಿತ ಸಂಸ್ಥೆಗಳು ಕೆನಡ,ಆಸ್ಟ್ರೇಲಿಯ ಮತ್ತು ಪಾಕಿಸ್ತಾನಗಳಲ್ಲಿವೆ. ಸಂಸ್ಥೆಯ ಸದಸ್ಯತ್ವ ಕೇವಲ ಆಮಂತ್ರಣಗಳ ಮೂಲಕ. ಅದ್ದರಿಂದ ಇದ್ದಕ್ಕೆ ವಿದ್ವಾಂಸರಲ್ಲಿ ಆಧಿಕ ಮನ್ನಣೀ, ಪರಸ್ಕಾರ. ಸದಸ್ಯರ ಸಂಖ್ಯೆ ಸು.೩೦೦೦,ಪಸ್ತಕಾಲಯದಲ್ಲಿ ೧೦ ಲಕ್ಷಕ್ಕೆ ಮೀರಿ ಗ್ರಂಥಗಲಿವೆ.ಮುಖ್ಯ ನಿಯತಕಾಲಿಕೆ ಪ್ರಕಾಶನಗಳು-ಸರ್ವೆ ಆಫ಼್ ಇಂಟರ್ನ್ಯಾಷನಲ್ ಆಫ಼ೆರ್ಸ್(ವಾರ್ಷಿಕ); ಬ್ರಿಟಿಷ್ ಬುಕ್ ಆಫ಼್ ಇಂಟರ್ನ್ಯಾಷನಲ್ ಲಾ(ವಾರ್ಷಿಕ); ಇಂಟರ್ನ್ಯಷನಲ್ ಆಫ಼ೆರ್ಸ್(ತ್ರೈಮಾಸಿಕ), ದಿ ವರ್ಲ್ಟ್ ಟುಡೇ(ಮಾಸಿಕ). ಇವಲ್ಲದೆ ಹಲವಾರು ಇತರ ಉತ್ತಮ ಪ್ರಕಾಶನಗಳೂ ಉಂಟು. ಅಂತರಾಷ್ಟ್ರೀಯ ವ್ಯಾಪಾರ: ಸರಕು, ಸೇವೆಗಳನ್ನು ಇತರ ಸರಕು ಸೇವೆಗಳಿಗೆ ವಿನಿಮಯ ಮಾಡುವುದೂ ಬೆಲೆಗೆ ಇವುಗಲಳನ್ನು ಮಾರುವುದೂ ಕೊಳ್ಳುವುದೂ ವ್ಯಾಪಾರವೆನ್ನಿಸುವುದು. ಬೇರೆ ಬೇರೆ ರಾಷ್ಟ್ರಗಳ ಜನ, ಸರ್ಕಾರ ಅಥವ ಸಂಸ್ಥೆಗಳೊಡನೆ ನಡೆಯುವ ಇಂಥ ವ್ಯವಹಾರಗಳು ಅಂತಾರಾಷ್ಟ್ರೀಯ ವ್ಯಾಪಾರವಾಗುವುದು. ಆಂದಮೇಲೆ ಪ್ರಪಂಚದಲ್ಲಿ ಇರುವ ಪ್ರತ್ಯೆಕ ರಾಷ್ಟ್ರಗಳು ಅವುಗಳೊಳಗೆ ಪರಸ್ಪರವಾಗಿ ನಡೆಸುವ ಮಾರವ ಹಾಗು ಕೊಳ್ಳುವ ವ್ಯವಹಾರಗಳ ಮೊತ್ತವೇ ಪ್ರಪಂಚದ ಅಂತಾರಾಷ್ಟ್ರೀಯ ವ್ಯಾಪಾರದ ಒಟ್ಟು ಮೊತ್ತವಗುವುದು. ವ್ಯವಹರಿಸುವ ರಾಷ್ಟ್ರ ಸ್ವತಂತ್ರ ರಾಷ್ಟ್ರವೇ ಆಧೀನ ರಾಷ್ಟ್ರವೇ ಅಥವ ವಸಾಹತು ರಾಷ್ಟ್ರವೇ ಎಂಬ ಪ್ರಶ್ನೆ ಆಪ್ರಕ್ರುತ. ರಾಜಕೀಯ ಸ್ವಾತಂತ್ರ್ಯಕ್ಕೆ ಮುನ್ನ ಭಾರತ ಮತ್ತು ಇತರ ಆಧೀನ ರಾಷ್ತ್ರಗಳು ಇತರ ರಾಷ್ಟ್ರಗಳೊಡನೆ ನಡೆಸುತ್ತಿದ್ದ ವ್ಯಾಪಾರವೆಲ್ಲವು ಅಂತಾರಾಷ್ಟ್ರೀಯ ವ್ಯಾಪಾರವೆಂದೆ ಪರಗಣಿಸಲ್ಪಟ್ಟಿದಿತು. ಆದರೆ ರಾಷ್ಟ್ರದ ರಾಜಕೀಯ ಎಲ್ಲೆ ಬದಲಾವಣೆಯಿಂದ ಒಳ ದೇಶದ ವ್ಯಾಪಾರ ಅಂತರಾಷ್ಟ್ರೀಯ ವ್ಯಾಪಾರವಗಬಹುದು.ಮಾಯನ್ಮಾರ್ ಮತ್ತು ಪಾಕಿಸ್ತಾನಗಳು ಪ್ರತ್ಯೇಕ ರಾಷ್ಟ್ರಗಳಾಗಿ ಹುಟ್ಟುವ ಮುನ್ನ ಈ ಭಾಗಗಳು ಮತ್ತು ಇಂದಿನ ಭಾರತ ಇವುಗಳೊಳಗೆ ನಡೆಯುತ್ತಿದ್ದ ವ್ಯಾಪಾರ ಒಳದೇಶ ವ್ಯಾಪಾರವಾಗಿದ್ದು ಅವು ಪ್ರತ್ಯೇಕ ರಾಷ್ಟ್ರಗಳಾದ ಮೇಲೆ ಈ ಭೌಗೋಳಿಕ ಭಾಗಗಳ ಪರಸ್ಪರ ವ್ಯಾಪಾರವು ಅಂತಾರಾಷ್ತ್ರೀಯ ವ್ಯಾಪಾರವಾಗಿ ಪರಗನಣೀಸಲ್ಪಟ್ಟಿದೆ. ರಾಷ್ಟ್ರಗಳ ಎಲ್ಲೆಗಳು ಬದಲಾಯಿಸುವುದರಿಂದ ವ್ಯಾಪಾರದ ಲಕ್ಷಣ ಹೀಗೆ ಬದಲಾಯಿಸಿರುವುದಕ್ಕೆ ಪ್ರಪಂಚದ ಇತಿಹಾಸದಲ್ಲಿ ಅನೇಕ ನಿದರ್ಶನಗಳಿವೆ.ಅಂತಾರಾಷ್ಟ್ರೀಯ ವ್ಯಾಪಾರ ಈಚೆಗೆ ಹುಟ್ಟಿದುದೇನೂ ಅಲ್ಲ; ಪುರಾತನ ಕಾಲ್ಲದಲ್ಲಿಯೂ ದೇಶದೇಶಗಳ ವ್ಯಾಪಾರ ಸಂಬಂದಗಳು ಇದ್ದುದನ್ನು ಇತೆಹಾಸ ತೆಳಿಸುತ್ತದೆ. ಆದರೆ, ಅಂತಾರಾಷ್ಟ್ರೀಯ ವ್ಯಾಪಾರದ ತೀವ್ರ ಬೆಳೆವಣಿಗೆ ಕೈಗಾರಿಕಾ ಕ್ರಾಂತಿ ಕಾಲದಿಂದ ಈಚೆಗೆ ಸಂಭವಿಸಿರುವ ಮುಖ್ಯ ಘಟನೆ.ಯಂತ್ರ,ಹಬೆಶಕ್ತಿ,ವಿಧ್ಯುಚ್ಛಕ್ತಿ ಮತ್ತು ಇತರ ವೈಜ್ನ್ಯಾನಿಕ ಕಾರ್ಯವಿಧಾನಗಳ ಪ್ರಯೋಗ ಮೊದಲುಮೊದಲು ಇಂಗ್ಲೆಂಡ್ ತರುವಾಯ ಕೆಲವು ಐರೋಪ್ಯ ರಾಷ್ಟ್ರಗಳು,ಅಮೆರಿಕ,ಜಪಾನ್,ಸೋವಿಯತ್ ರಷ್ಯ ರಾಷ್ಟ್ರಗಳಲ್ಲಿ ವಿಸ್ತರಿಸಿದಂತೆ ಪ್ರಪಂಚದಲ್ಲಿ ಅಂತ್ತರಾಷ್ಟ್ರೀಯ ವ್ಯಾಪಾರವೂ ಹೆಚ್ಚು ವೈವಿಧ್ಯ ತಾಳಿ ಹೆಚ್ಚು ಪ್ರಮಾಣದಲ್ಲಿ ಬೆಳೆಯುತ್ತ ಬಂದಿತು.ಈ ಬೆಳೆವಣಿಗೆಗೆ ತಕ್ಕಂತೆ ವ್ಯವಸ್ಥಾಕ್ರಮಗಳಲ್ಲಿ ಮತ್ತು ರೀತಿನೀತಿಗಳಲ್ಲಿ ಬದಲಾವಣೆಗಳಾಗುತ್ತ ಬಂದಿವೆ.ಇಂದಿನ ಪ್ರಪಂಚದಲ್ಲಿ ಅನೇಕ ಹಿಂದುಳಿದ ರಾಷ್ಟ್ರಗಳು ಶೀಘ್ರ ಆರ್ಥಿಕಾಭಿವೃದ್ಧಿಗೆ ಹವಣಿಸುತ್ತಿರುವುದರಿಂದಲೂ ಮುಂದುವರಿದಿರುವ ರಾಷ್ಟ್ರಗಳ ರಾಷ್ಟ್ರಿಯ ಉತ್ಪಾದನೆ ಉನ್ನತಮಟ್ಟಗಳನ್ನು ತಲುಪಿರುವುದರಿಂದಲೂ ಅಂತರಾಷ್ಟ್ರೀಯ ವ್ಯಾಪಾರದ ಪ್ರಾಮುಖ್ಯ ಹೆಚ್ಚಿರುವುದೇ ಅಲ್ಲದೆ ಅದು ಹೊಸ ಸ್ವರೂಪವನ್ನು ತಾಳುತ್ತಿದೆ. ಇದರಿಂದ ಹೊಸ ಸಮಸ್ಯೆಗಳೂ ಉದ್ಭವಿಸುತ್ತಿವೆ.ಒಟ್ಟಿನಲ್ಲಿ ಅಂತಾರಾಷ್ಟ್ರೀಯ ವ್ಯಾಪಾರ ಪ್ರಪಂಚದ ಆರ್ಥಿಕಾಭಿವೃದ್ಧಿಯ ಒಂದು ಮುಖವಾಗಿದೆ; ಅಲ್ಲದೆ ಆಧುನಿಕ ನಾಗರಿಕತೆಯ ತಳಹದಿಯ ಒಂದು ಮುಖ್ಯ ಭಾಗವೂ ಆಗಿದೆ. ಪ್ರಪಂಚದಲ್ಲಿ ಶ್ರಮದ ಹಂಚಿಕೆ(ಡಿವಿಷನ್ ಆಫ಼್ ಲೇಬರ್) ತತ್ತ್ವದ ಅನುಸರಣೆಯ ಮುನ್ನಡೆಯನ್ನು ಅಂತಾರಾಷ್ಟ್ರೀಯ ವ್ಯಾಪಾರ ಸೂಚಿಸುವುದು. ಪ್ರತಿ ರಾಷ್ಟ್ರವು ಅದರ ಪ್ರಾಕೃತಿಕ ಹಾಗು ಇತರ ಸಾಧನಗಳ ಬಲಕ್ಕೆ ಅನುಸಾರವಾಗಿ ಆರ್ಥಿಕ ಉತ್ಪನ್ನವನ್ನು ರೂಡಿಸಿ ಅನೇಕ ಮಾರ್ಗಗಳಲ್ಲಿ ವೈಶಿಷ್ಟ್ಯಗಳಿಸಿಕೊಂಡು ಈ ಸರಕುಗಳ ಸ್ವದೇಶದ ಬೇಡಿಕೆ ಪೂರೈಸುವುದೇ ಅಲ್ಲದೆ ಇತರ ರಾಷ್ತ್ರಗಳ ಪರಸ್ಪರ ಅವಲ್ಂಬನೆ ಹೆಚ್ಚಿದಂತೆ ಆಗುವುದಲ್ಲದೆ ಒಟ್ಟಿನಲ್ಲಿ ಶ್ರಮ ಹಂಚಿಕೆಯ ಪ್ರಯೋಗದ ವಿಶೀಷ ಫ಼ಲ ಪ್ರಪಂಚಕ್ಕೆ ಲಭಿಸುವಂತಾಗುತ್ತದೆ.ಆದುದರಿಂದಲೇ ವಿಶ್ವವ್ಯಾಪಾರಕ್ಕೆ ಹೆಚ್ಚಿನ ಪ್ರಾಮುಖ್ಯ ಸಲ್ಲುವುದು. ಅಂರಾಷ್ಟ್ರೀಯ ಅರ್ಥಶಾಸ್ತ್ರ ಅರ್ಥಶಾಸ್ತ್ರದ ಒಂದು ಪ್ರತ್ಯೇಕ ವಿಭಾಗವಾಗಿ ಪರಿಗಣಿಸಲ್ಪಟ್ಟಿದೆ.ದೇಶದೊಳಗೆ ನಡೆಯುವ ವ್ಯಾಪಾರ ಹಾಗೂ ಇದ್ದಕ್ಕೆ ಸಂಬಂಧಪಟ್ಟ ಉತ್ಪನ್ನ,ಸಾರಿಗೆ,ವಿನಿಮಯ,ಹಣವ್ಯವಸ್ಥೆ-ಇವುಗಳಿಗೆ ಅನ್ವಯಿಸುವ ಆರ್ಥಿಕತತ್ವಗಳು ಅಷ್ಟು ನೇರವಾಗಿ ಅಂತಾರಾಷ್ತ್ರೀಯ ವ್ಯಾಪಾರ ಹಾಗೂ ಅದರೊಡಗೂಡಿದ ಆರ್ಥಿಕ ವಿಷಯಗಳ ಪ್ರತಿಪಾದನೆಗೆ ಅನ್ವಯಿಸುವುದಿಲ್ಲ ಎಂಬುದೇ ಈ ರೀತಿ ಪ್ರತ್ಯೇಕ ಶಸ್ತ್ರಾ ವಿಭಾಗ ಬೆಳೆದು ಬಂದಿರುವುದಕ್ಕೆ ಕಾರಣ. ಸಿದ್ಧಾಂತ ನಿರೂಪಣೆಯ ದೃಷ್ಟಿಯಿಂದ ಈ ರೀತಿಯ ಪ್ರತ್ಯೇಕತೆ ಎಷ್ಟರಮಟ್ಟಿಗೆ ವಾಸ್ತವವಾಗಿಯೂ ಅವಶ್ಯಕ ಎಂಬುದು ವಿಚಾರಾರ್ಹವಾಗಿದೆ. ಶ್ರಮ(ಲೇಬರ್),ಬಂಡವಾಳ ಉದ್ಯಮಶೀಲತೆ(ಎಂಟರ್ಪ್ರೈಸ್)- ಇಂಥ ಉತ್ಪಾದನಾಂಗಗಳು ಒಂದು ದೇಶದ ಒಳ ವ್ಯವಹಾರಕ್ಕೆ ಚೆನ್ನಾಗಿ ಒಗ್ಗುತ್ತವೆಂದೂ ರಾಷ್ಟ್ರ-ರಾಷ್ಟ್ರಗಳೊಳಗಿನ ವ್ಯವಹಾರಗಳಲ್ಲಿ ಅಷ್ಟು ಒಗ್ಗವೆಂದೂ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಆರ್ಥಿಕ ವಿಷಯಗಳ ಪರಿಶೀಲನೆಯಲ್ಲಿ ಇದೇ ಮೂಖ್ಯವಾದ ವ್ಯತ್ಯಾಸವೆಂದೂ ಪ್ರಾಚೀನ ಪಂಥದ(ಕ್ಲಾಸಿಕಲ್ ಸ್ಕೂಲ್) ಅರ್ಥಶಾಸ್ತ್ರಜ್ನ್ಯರ ವಾದವಾಗಿದ್ದಿತು.ವಾಸ್ತವವಾಗಿ ನೋಡಿದರೆ ಈ ಭೇದ ಅಷ್ಟು ಸ್ವಷ್ಟವಾಗಿಲ್ಲ. ದೇಶದ ಒಳಗಡೆ ಉತ್ಪಾದನಾಂಗಗಳು ಒಗ್ಗದೆ ಅಂತಾರಾಷ್ಟ್ರೀಯವಾಗಿ ಸ್ವಲ್ಪಮಟ್ಟಿಗೆ ಒಗ್ಗಿರುವ ನಿದರ್ಶನಗಳಿವೆ.ಆದುದರಿಂದ ಆರ್ಥಿಕ ತತ್ತ್ವ ಪ್ರತಿಪಾದನೆಯ ದೃಷ್ಟಿಯಿಂದ ಕೇವಲ ಈ ಅಂಶದ ಮೇಲೆಯೋ ಆಧಾರಗೊಂಡ ವ್ಯತ್ಯಾಸ ಅಷ್ಟು ಸಮಂಜಸವಾಗಲಾರದು. ಆದರೆ, ಇತರ ಕೆಲವು ಕಾರಣಗಳಿಂದಾಗಿ ಅಂತಾರಾಷ್ಟ್ರೀಯ ವ್ಯಾಪಾರವನ್ನು ಕುರಿತ ಪ್ರತ್ಯೇಕ ತಾತ್ತ್ವಿಕ ಅಧ್ಯಯನ ಸಾಧುವಾದುದು ಎಂದು ಹೇಳಬಹುದು.ಒಂದೊಂದು ರಾಷ್ಟ್ರವೂ ತನ್ನದೇ ಆದ ಹಣವನ್ನೂ ಹಣ ಮತ್ತು ಬ್ಯಾಂಕು ವ್ಯವ್ಯಾಸ್ಥೆಯನ್ನೂ ಹೊಂದಿರುವುದರಿಂದ ಒಂದು ರಾಷ್ಟ್ರದ ಹಣ ಇತರ ರಾಷ್ಟ್ರಗಳ ಹಣಗಳಿಗೆ ವಿನಿಮಯವಾಗುವ ರೀತಿನೀತಿಗಳ ವಿಶೇಷ ವಿವೇಚನ ಅಗತ್ಯ. ಅಂತಾರಾಷ್ಟ್ರೀಯ ವ್ಯಾಪಾರ,ಸಾಗಣೆಯಲ್ಲಿ ವಿದೇಶೀ ವಿನಿಮಯ ದರ ಹಾಗೂ ವ್ಯವಸ್ಥೆಯ ಪಾತ್ರ ಅತಿ ಮುಖ್ಯವಾದುದು. ಅಲ್ಲದೆ,ಆಮದು ರಫ಼್ತುಗಳು,ವಿದೇಶೀ ಬಂಡವಾಳ, ಸಾರಿಗೆ ವ್ಯವಸ್ಥೆ,ವಿದೇಶೀಯರು ದೇಶಕ್ಕೆ ಬರುವುದು,ನೆಲೆಸುವುದು ಮತ್ತು ಆರ್ಥಿಕೋದ್ಯಮ ನಡೆಸುವುದು, ದೇಶೀಯರು ಇತರ ದೇಶಗಳಿಗೆ ಹೋಗಿ ನೆಲೆಸುವುದು-ಇತ್ಯಾದಿ ವಿಷಯಗಳ ಬಗ್ಗೆ ಒಂದೊಂದು ರಾಷ್ಟ್ರವೂ ತನ್ನದೇ ಆದ ವಿಧಾಯಕಗಳನ್ನೂ ನಿಯಂತ್ರಣ ಕ್ರಮಗಳನ್ನು ನಿರ್ಮಿಸಿದೆ.ಅಂತಾರಾಷ್ಟ್ರೀಯ ಆರ್ಥಿಕ ವ್ಯವಹಾರಗಳಿಗೆ ವಿಶೇಷವಾಗಿ ಸಂಬಂಧಿಸಿದ ಇಂಥ ಅಂಶಗಳು ಭಾವಗರ್ಭಿತವಾಗಿವೆ. ಆರ್ಥಿಕ ಸಿದ್ಧಾಂತಗಳ ಆನ್ವೇಷಣೆಯ ಫ಼ಲವಾಗಿ ಹೊರಬಿದ್ದಿರವ ಅಂತಾರಾಷ್ಟ್ರೀಯ ವ್ಯಾಪಾರಸಿದ್ಧಾಂತಗಳ ವಿಭಾಗ ಅರ್ಥಶಾಸ್ತ್ರದ ಒಂದು ಮುಖ್ಯಭಾಗ. ಆಮದು ರಫ಼್ತು ಪಟ್ಟಿಗಳೊಳಗೆ ಸೇರುವ ಸರಕುಗಳು,ಆಮದು ರಫ಼್ತು ವ್ಯಾಪಾರಮಾರ್ಗಗಳು, ಈ ವ್ಯಾಪಾರದ ಪ್ರಮಾಣ ಮತ್ತು ಬೆಲೆ,ಇಂಥ ವ್ಯಾಪಾರದ ಒಟ್ಟು ಲಾಭ ಮತ್ತು ಅದರ ಹಂಚಿಕೆ,ವಾಣಿಜ್ಯನೀತಿ,ಅಂತಾರಾಷ್ಟ್ರೀಯ ಲೇಣೆ-ದೇಣೆ ಪಟ್ಟಿ-ಇತ್ಯಾದಿ ವಿಷಯಗಳು ಅಂತಾರಾಷ್ಟ್ರೀಯ ಸಿದ್ಧಾಂತ ನೀರೂಪಣೆಯಲ್ಲಿ ಪರಿಶೀಲನೆಗೆ ಬರುವ ವಿಷಯಗಳು.ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಸೇರುವ ಸರಕುಗಳನ್ನು ಗುರುತಿಸಲು ಡೇವಿಡ್ ರಿಕಾರ್ಡೊ ಎಂಬ ಪ್ರಾಚೀನ ಅರ್ಥಶಾಸ್ತ್ರಜ್ನ್ಯತೌಲನಿಕ ವೆಚ್ಚ ನಿಯಮವೊಂದನ್ನು(ಥಿಯರಿ ಒಫ಼್ ಕಂಪ್ಯಾರಟಿವ್ ಕಾಸ್ಟ್ಸ್) ನಿರೂಪಿಸಿದ. ರಾಷ್ಟ್ರ-ರಾಷ್ಟ್ರಗಳ ವ್ಯಾಪಾರ ಅನಿರ್ಬಂಧವಾಗಿರುವ ಸ್ಥಿತಿಯಲ್ಲಿ, ಪ್ರತಿರಾಷ್ಟ್ರವೂ ಯಾವ ಸರಕುಗಳ ಉತ್ಪಾದನೆಯಲ್ಲಿ ಮೇಲ್ಮೆ ಪಡೆದು,ಆ ಸರಕುಗಳನ್ನು ಇತರ ರಾಷ್ಟ್ರಗಳಿಗೆ ರಫ಼್ತು ಮಾಡುವುದು, ಮತ್ತು ಇತರ ರಾಷ್ಟ್ರಗಳು ಯಾವುದನ್ನು ಹೆಚ್ಚು ಸುಲಭ ವೆಚ್ಚದಲ್ಲಿ ತಯಾರು ಮಾಡಬಲ್ಲವೋ ಅವುಗಳನ್ನು ಆ ರಾಷ್ಟ್ರಗಳಿಂದ ಅಮದು ಮಾಡಿಕೊಳ್ಳುವುದು-ಎಂಬುದೇ ಈ ನಿಯಮದ ಸಾರಾಂಶ. ಡೇವಿಡ್ ರಿಕಾರ್ಡೊ ನೀಡಿರುವ ಕೆಳಗಣ ಉದಾಹರಣೆ ಈ ನಿಯಮವನ್ನು ಸ್ಪಷ್ಟಗೊಳಿಸುವುದು.ಇಂಗ್ಲೆಂಡಿನಲ್ಲಿ ೧ ಗ್ಯಾಲನ್ ದ್ರಾಕ್ಷಾರಸದ ಉತ್ಪಾದನೆಯ ವೆಚ್ಚ ೧೨೦ ಗಂಟೆಗಳ ಕೆಲಸವಾದರೆ ಪೋರ್ಚುಗಲ್ಲಿನಲ್ಲಿ ಕೇವಲ ೮೦ ಗಂಟೆ ಕೆಲಸ. ೧ ಗಜ ಬಟ್ಟೆಯನ್ನು ಮಾಡಲು ಇಂಗ್ಲೆಂಡಿನಲ್ಲಿ ೧೦೦ ಗಂಟೆಗಳ ಕೆಲಸ ವ್ಯಯವಾಗುವಲ್ಲಿ ಪೋರ್ಚುಗಲ್ಲಿನಲ್ಲಿ ೯೦ ಗಂಟೆಗಳ ಕೆಲಸ ಸಾಕು. ಪೋರ್ಚುಗಲ್ ದ್ರಾಕ್ಷಾರಸ ಮತ್ತು ಬಟ್ಟೆ ಎರಡನ್ನೂ ಇಂಗ್ಲೆಂಡಿಗಿಂತ ಸುಲಭ ವೆಚ್ಚದಲ್ಲಿ ತಯಾರಿಸಬಲ್ಲದು; ಆದರೆ ಹೋಲಿಕೆ ವೆಚ್ಚದ ಪ್ರಕಾರ ಪೋರ್ಚುಗಲ್ಲು ದ್ರಾಕ್ಷಾರಸವನ್ನೂ ಇಂಗ್ಲೆಂಡ್ ಬಟ್ಟೆಯನ್ನೂ ಹೆಚ್ಚು ಸುಲಭ ವೆಚ್ಚದಲ್ಲಿ ತಯಾರಿಸಬಲ್ಲದು. ಎರಡು ಸರಕುಗಳೂ ಆಯಾ ರಾಷ್ಟ್ರಗಳಲ್ಲಿಯೇ ತಯಾರಾಗುವುದಾದರೆ, ದ್ರಾಕ್ಷಾರಸ ಮತ್ತು ಬಟ್ಟೆಯ ಉತ್ಪಾದನಾ ವೆಚ್ಚಗಳು ಇಂಗ್ಲೆಂಡಿನಲ್ಲಿ ೧೨೦:೧೦೦ ಪ್ರಮಾಣದಲ್ಲಿಯೂ ಪೋರ್ಚುಗಲ್ಲಿನಲ್ಲಿ ೮೦:೯೦ ಇರುವುವು. ಅಂದಮೇಲೆ ೧ ಘಟಕ ದ್ರಾಕ್ಷಾರಸಕ್ಕೆ ಪ್ರತಿಯಾಗಿ ೦.೮೮ ಘಟಕಕ್ಕಿಂತ ಸ್ವಲ್ಪ ಹೆಚ್ಚು ಪ್ರಮಾಣ ಬಟ್ಟೆ ಪಡೆಯುವುದಾದರೆ ಹಾಗೆ ವಿನಿಮಯ ಮಾಡಿಕೊಳ್ಳುವುದು ಪೋರ್ಚುಗಲ್ಲಿಗೆ ಲಾಭಕರವಾಗುವುದು. ಇಂಗ್ಲೆಂಡಿನ್ಲ್ಲಿ ೧ ಘಟಕ ದ್ರಾಕ್ಷಾರಸ ೧.೨ ಘಟಕ ಬಟ್ಟೆಗೆ ಸಮನಾಗುವುದರಿಂದ ಈ ರೀತಿಯ ವಿನಿಮಯಕ್ಕೆ ಇಂಗ್ಲೆಂಡ್ ಸಿದ್ದವಿರುವುದು; ಹೀಗೆಯೇ ಇಂಗೆಂಡು ೧.೨ ಘಟಕಕ್ಕಿಂತ ಸ್ವಲ್ಪ ಕಡಿಮೆ ಬಟ್ಟೆ ಕೊಡುವುದರಿಂದ ೧ ಘಟಕ ದ್ರಾಕ್ಷಾರಸ ಪಡೆಯುವುದಾದರೆ ಅದಕ್ಕೂ ಲಾಭವಾಗುವುದು. ಹೀಗೆ ೧ ಘಟಕ ದ್ರಾಕ್ಷಾರಸಕ್ಕೆ ಪ್ರತಿಯಾಗಿ ೦.೮೮ ಮತ್ತು ೧.೨