ವಿಷಯಕ್ಕೆ ಹೋಗು

ಸದಸ್ಯ:2240575AISHWARYAA/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಚಿಕ್ಕ ಕಥೆ !

ನನ್ನ ಹೆಸರು ಐಶ್ವರ್ಯ ಎ.  ನನ್ನನ್ನು  ಎಲ್ಲರೂ ಪ್ರೀತಿಯಿಂದ   "ಐಶು" ಎಂದು ಕರೆಯುತ್ತಾರೆ . ನಾನು ಸೆಪ್ಟೆಂಬರ್ 24, 2003ರಂದು ರಾಯಚೂರು ಜಿಲ್ಲೆಯ , ಸಿಂಧನೂರು ತಾಲ್ಲೂಕಿನ ಅನ್ನದಾನೇಶ್ವರಿ  ಆಸ್ಪತ್ರೆಯಲ್ಲಿ ಜನಿಸಿದೆ. ನಾನು ನನ್ನ ತಂದೆ ತಾಯಿಯ ದ್ವಿತೀಯ ಪುತ್ರಿ .


ನನ್ನ  ಕುಟುಂಬ ,

ನನ್ನ ತಂದೆಯ ಹೆಸರು ಅಜಿತ್ ಕುಮಾರ್ (ನಾನು  ನನ್ನ ತಂದೆಯ ಪ್ರೀತಿಯ ಮಗಳು )ತಾಯಿಯ ಹೆಸರು ಉಮಾದೇವಿ. ನನ್ನ ತಂದೆ ತಾಯಿ ಇಬ್ಬರು ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಅನುಷಾ ನನ್ನ ಪ್ರೀತಿಯ ಅಕ್ಕ ಅವಳು ವೈದ್ಯಕೀಯ  ಶಿಕ್ಷಣವನ್ನು ಅಭ್ಯಾಸಿಸುತ್ತಿದ್ದಾಳೆ, ಪ್ರಭು ರಾಜ್ ನನ್ನ ಪ್ರೀತಿಯ ತಮ್ಮ ,ಇವನು ೮ ನೇಯಾ ತರಗತಿಯಲ್ಲಿ ಓದುತ್ತಾ  ಇದ್ದಾನೆ . ಸುಜಾತಾ ನನ್ನ ಪ್ರೀತಿಯ ಚಿಕ್ಕಮ್ಮ.ನಾನು ಪ್ರೀತಿಯಿಂದ  ಅವರನ್ನು  "ಅಮ್ಮ'' ಎಂದು ಕರಿಯುವೆನು .ನನಗೆ ೮೦ ವಯಸ್ಸಿನ ಅಜ್ಜ ಇದ್ದಾರೆ .ಅವರು ನನ್ನನು ಪ್ರೀತಿಯಿಂದ  "ಸಕ್ಕರಿ"ಎಂದು ಕರೆಯುತ್ತಾರೆ .ನನ್ನ ಅಜ್ಜಿ ನನ್ನನ್ನು ತುಂಬಾ  ಅಕ್ಕರೆಯಿಂದ ಬೆಳೆಸಿದರು. ಆದರೆ, ಈಗ ಅವರು ನನ್ನ ಜೊತೆಯಲ್ಲಿ ಇಲ್ಲ. ಅವರನ್ನು  ನಾನು ತುಂಬಾ ನೆನಪಿಸಿಕೊಳ್ಳುತ್ತೇನೆ. ನನ್ನ ಪೋಷಕರು ಕೆಲಸ ಮಾಡುವವರಾದ್ದರಿಂದ ನನ್ನ ಜೊತೆ  ಬಹಳ ಸಮಯ ಕೊಡಲು ಆಗುತ್ತಾ    ಇರಲಿಲ್ಲ .ಆದರೆ ಸಮಯ ಸಿಕ್ಕಾಗೆಲ್ಲ ನಾವು ಜೊತೆ ಕುಳಿತು ಸಂಭ್ರಮಿಸುತ್ತಿದ್ದೆವು  .ನನ್ನ ತಂದೆ ತಾಯಿ ನನಗೆ ತುಂಬಾ ಬೆಂಬಲ ನೀಡುತ್ತಾರೆ.ಅವರನ್ನು ಯಾವಾಗಲು ಸಂತೋಷವಾಗಿ ಇರಿಸುವುದೇ ನನ್ನ ಆಸೆ.


ನನ್ನ ಅಪರೂಪದ ಬಾಲ್ಯ ,

ನಾನು ನನ್ನ ಬಾಲ್ಯದ ದಿನದಲ್ಲಿ ತುಂಬಾ ಚಟುವಟಿಕೆಗಳನ್ನು ಮಾಡುತ್ತಿದ್ದೆ. ನಾನು ಬಾಲ್ಯದಲ್ಲಿ ಲಗೋರಿ ,ಕುಂಟಿಪಿಲ್ಲೆ,ಮರ ಕೋತಿ ಆಟ ,ಚೆಂಡಿನ ಆಟ ಹಾಗು ಮನೆ ಮನೆ ಆಟ ಕೂಡ ಆಡುತ್ತಿದ್ದೆ.ನಾನು ಆಟದ ಜೊತೆಗೆ ಪಾಠದಲ್ಲೂ  ಆಸಕ್ತಿ ಉಳ್ಳವಳಾಗಿದ್ದೆ.ನನ್ನ ಪ್ರಾರ್ಥಮಿಕ ಶಿಕ್ಷಣ ಹಾಗೂ ಪ್ರೌಢ ಶಿಕ್ಷಣವನ್ನು  ಬ್ಲೆಸ್ಸ್ಡ್ ಅಲ್ಫೋನ್ಸ ಶಾಲೆಯಲ್ಲಿ ಮುಗುಸಿದೆ .ನನ್ನ ಪದವಿ ಪೂರ್ವ ಶಿಕ್ಷಣವನ್ನು  ರಾಯಚೂರಿನ ಸರ್ವಜ್ಞ ಕಾಲೇಜಿನಲ್ಲಿ ಮುಗಿಸಿದೆ. ಪ್ರಸ್ತುತ ಈಗ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ನನ್ನ ಪದವಿಯ ವಿಧ್ಯಾಭ್ಯಾಸವನ್ನು ಪಡೆಯುತ್ತಿದ್ದೇನೆ . ನನ್ನ ಬಾಲ್ಯದ ದಿನಗಳೆಲ್ಲ ನನ್ನ ತಾತನ ಮನೆಯಲ್ಲಿ ಕಳೆದೆನು.ನನಗೆ ಯಶೋದಾ ,ಭಾವನಾ,ವಿನೋದ್ ,ಅಭಿಷೇಕ್,ಕೋಮಲ ,ಅಂಗೂರ್ ,ಸಭೇದ,ಸೋನಿ ಇನ್ನು ಬಹಳ ಸ್ನೇಹಿತರು ಇದ್ದರು.ನನ್ನ ಶಾಲೆಯಾ ಸ್ನೇಹಿತರ ಜೊತೆ   ನನಗೆ ಅಷ್ಟೇನು ಒಡನಾಟ ಇರಲಿಲ್ಲ ಆದರೆ ಕೆಲವು ಸ್ನೇಹಿತರು ಮನಸಿಗೆ ತುಂಬಾ ಹತ್ತಿರವಾಗಿದ್ದರು.ಯಾರೆಂದರೆ ನಿಸರ್ಗ , ಸ್ನೇಹ ,ಸೌಮ್ಯ .ಕಾಲೇಜಿನಲ್ಲಿ ನನಗೆ ಸ್ನೇಹ ಹಾಗು ದವಳದರ್ಶಿನಿ ಇವರಿಬ್ಬರು ಸ್ನೇಹಿತರು ,ದವಳ ನಮ್ಮ ಯೂನಿವೆರ್ಸಿಟಿಯನ್ನು  ಬಿಟ್ಟು ಹೋದರೂ,ಇನ್ನು ಸ್ನೇಹಿತಳಾಗಿಯೇ ಇದ್ದಾಳೆ,ನಾವು ಮೂವರು ಆಗಾಗ  ಭೇಟಿ ಆಗುತ್ತಾ ಇರುತ್ತೇವೆ.ಇವರೆಲ್ಲರೂ ನನ್ನ ಜೀವಿತದಲ್ಲಿ ತುಂಬ ನೆನಪುಗಳನ್ನು ಕೂಡಿಸಿದ್ದಾರೆ.ಇವರಿಂದ ನಾನು ತುಂಬಾ ವಿಷಯಗಳನ್ನು ಕಲಿತುಕೊಂಡಿರುವೆ .ನಾನು ನನ್ನ ಅಜ್ಜನ ಆಸೆಯ ಮೇರೆಗೆ ಕರ್ನಾಟಕ ಸಂಗೀತ ಅಭ್ಯಾಸಿಸಲು ಹೋಗುತ್ತಿದ್ದೆ.ಆದರೆ, ನಾನು ಅದರಲ್ಲಿ ಅಷ್ಟು ಆಸಕ್ತಿ ತೋರಿಸುತ್ತಿದ್ದಿಲ್ಲ  ,ನನ್ನ ಗುರುಗಳು ಹಾರ್ಮೋನಿಯಂ ನುಡಿಸುತ್ತ ಕಣ್ಣು ಮುಚ್ಚಿದಾಗ ನಾನು ಸಂಗೀತ ಕೊಠಡಿಯಿಂದ  ಹೊರಬರುತ್ತಿದ್ದೆ ,ಸಂಗೀತ ತರಗತಿ ಮುಗಿಯುವವರೆಗೂ ನಾನು ಹೊರಗಡೆ ಹೋಗಿದ್ದು ಹೋಗಿದ್ದು ಗುರುಗಳಿಗೆ ಗೊತ್ತೇ ಆಗುತ್ತಿರಲಿಲ್ಲ,ಆಮೇಲೆ ಅವರು ನನಗಾಗಿ ಎಲ್ಲಾ   ವಿಚಾರಿಸುತ್ತಿದ್ದರು .ಕೊನೆಗೆ ಒಂದು ದಿನ ಅವರು ನನ್ನ ತಾಯಿಗೆ ಇದನ್ನು ಹೇಳಿದಾಗ , ನನ್ನ ತಾಯಿ ನನ್ನನ್ನು ಚನ್ನಾಗಿ ಬಯ್ದು ಬುದ್ದಿ ಹೇಳಿದರು .ಅವಾಗಿಂದ ಆಸಕ್ತಿಯಿಂದ ಸಂಗೀತ ಅಭ್ಯಾಸ   ಮಾಡುತ್ತಿದ್ದೆ.ಇದು ಒಂದು ಮರೆಯಲಾಗದ ಬಾಲ್ಯದ ನೆನಪು .


ನನ್ನ ಹವ್ಯಾಸಗಳು ,

ಪುಸ್ತಕ ಒದುವದರಿಂದ  ನನಗೆ ಜ್ಞಾನ ಅಷ್ಟೇ ಅಲ್ಲ ಮನಸ್ಸಿಗೆ  ತುಂಬಾ ಸಂತೋಷವನ್ನು ಉಂಟು ಮಾಡುತ್ತದೆ ,ನನಗೆ  ಕಥೆಗಳ ಪುಸ್ತಕ,ಕಾದಂಬರಿ,ಹಾಗು ಜೀವನ ಚರಿತ್ರೆಗಳನ್ನು ಓದುವ ಹವ್ಯಾಸವಿದೆ .ನನಗೆ ಬೈಬಲ್ ಅನ್ನು ಹಾಗು ಅದರ ವಿವಿಧ ತರ್ಜುಮೆಗಳನ್ನ ಓದುವ ಆಸಕ್ತಿ ಇದೆ .

ನಾನು ಶಾಲೆಯಲ್ಲಿ  ಟೇಬಲ್ ಟೆನ್ನಿಸ್ ಆಡುತ್ತಿದ್ದೆನು.ಹಾಗೆಯೆ ನಾನು ಶಾಲೆಯಲ್ಲಿ ರಾಜ್ಯ ಮಟ್ಟದ ಟೇಬಲ್ ಟೆನ್ನಿಸ್  ಪಂದ್ಯಾವಳಿಯಲ್ಲಿ ಭಾಗವಹಿಸಿದ್ದೇನು.

ಸೈಕಲ್ ರೈಡಿಂಗ್,ವಿಷನ್ ವೀಡಿಯೋಸ್ ನೋಡುವುದು , ಸಂಗೀತ ಕೇಳುವುದು ಹಾಗು ತಂತಿ ವಾದ್ಯ ನುಡಿಸುವುದು ಹಾಗು ಇತರೆ .


ನನ್ನ ಗುರಿ,

ನನಗೆ  ಚಿಕ್ಕ ವಯಸ್ಸಿನಿಂದ ದೇಶದ ಆಡಳಿತದ ಬಗ್ಗೆ ತುಂಬಾ ಆಸಕ್ತಿ ಇತ್ತು.ಯಾವಾಗಲು ಡಿಸಿ ಅಥವಾ ಪೊಲೀಸ್ ಅಧಿಕಾರಿಗಳ ವಾಹನ ನೋಡಿದರೆ ತುಂಬಾ ಖುಷಿ ಅನ್ನಿಸುತಿತ್ತು,ಹಾಗೆ ನಾನು ಬೆಳಿಯುತ್ತ ಇದ್ದ  ಹಾಗೆ ನಮ್ಮ ದೇಶದ ಸಮಸ್ಯೆಗಳು ಹಾಗು ಕುಂದು ಕೊರತೆಗಳು ಮತ್ತು ಆಡಳಿತದ ಅಸ್ತ ವ್ಯಸ್ತದ ಬಗ್ಗೆ ತುಂಬಾ ಆಲೋಚನೆಗಳು ನನ್ನ ಮನಸ್ಸಿಗೆ ಬರಲು ಪ್ರಾರಂಭಿಸಿದವು. ಆಗ ನಾನು ಭಾರತದ ಆಡಳಿತ ಅಧಿಕಾರಿ ಆಗಬೇಕು ಎಂದು ನಿರ್ಧಾರ ಮಾಡಿದೆ .ಅದೇ ನನ್ನ ಗುರಿಯಾಗಿ ಇಟ್ಟುಕೊಂಡಿರುವೆ .ನಾವು ಯಾವಾಗ ನಿಸ್ವಾರ್ಥ ಮನಸ್ಸಿನಿಂದ ಏನಾದರು  ಸಾಧಿಸುವ ಆಸೆ ಪಟ್ಟರೆ ಖಂಡಿತ  ಆ ದೇವರು ನೆರವೇರಿಸುವನು ಎಂದು ನನ್ನ ನಂಬಿಕೆ ಆಗಿದೆ .


ನನ್ನ ಚಿಕಪ್ಪ ,

ನನ್ನ ಚಿಕಪ್ಪ ಪ್ರಕಾಶ್ ಸೈಮನ್ ಎಂಬವರ ಪರಿಚಯ ನಾನು ಮಾಡ್ಲೇಬೇಕು ,ಯಾಕೆಂದರೆ ಅವರು ನನ್ನ ಸ್ವಂತ ಅಪ್ಪನಿಗಿಂತ ಪ್ರಿಯರು .ನನ್ನನ್ನು ತುಂಬಾ ಚನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ ,ಅವರು ನನ್ನನ್ನು ತಮ್ಮ ಮಗಳಿಗಿಂತ ಹೆಚ್ಚು ಎನ್ನುವ ಭಾವನೆಯಿಂದ  ಪ್ರೀತಿಸುತ್ತಾರೆ  . ನನಗೆ   ಯಾವಾಗಲು ಬೆಂಬಲವಾಗಿ ನಿಂತಿದ್ದಾರೆ,ನನ್ನ ನೋವಿನಲ್ಲಿ ಒಳ್ಳೆ ಸ್ನೇಹಿತನ  ಹಾಗೆ ನನ್ನ ಜೊತೆ ಇರುತ್ತಾರೆ.ಅವರೊಂದಿಗೆ ಇರುವುದು ನನಗೆ  ತುಂಬಾ ಇಷ್ಟ.


ನನ್ನ ಬಗ್ಗೆ ನನ್ನ ಅಭಿಪ್ರಾಯ  ,

ನಾನು ಛಲಗಾರ್ತಿ,ಅನ್ಯಾಯದ  ವಿರುದ್ಧ ಧ್ವನಿ ಎತ್ತುವವಳು ,ಸಮಾಜದಲ್ಲಿ ಬದಲಾವಣೆ ತರುವ ಆ ಬದಲಾವಣೆ ಆಗಲು ಬಯಸುವವಳು ಆಗಿದ್ದೇನೆ ,ನನ್ನ ಮನಸ್ಸು ಮುಗ್ದ ಆದರೆ ಮಂದವಲ್ಲ ಎನ್ನಲು ಬಯಸುವೆ ,ಎಲ್ಲರ ಹಾಗೆ ನಾನು ಕೆಲವೊಮ್ಮೆ ತಾಳ್ಮೆಯನ್ನು ಕಳೆದುಕೊಳ್ಳುವೆ ,ಕೋಪ ಮಾಡಿಕೊಳ್ಳುವೆ ಹಾಗೂ ಹಠ ಮಾಡುವೆ ಆದರೆ ಅಷ್ಟೇ ಬೇಗನೆ ಅದರಿಂದ ಹೊರಬರುವ ಪ್ರಯತ್ನ ಮಾಡುವೆ. ನಾವು ಇತರರನ್ನು ನಮ್ಮ ಹಾಗೆ ಪ್ರೀತಿಸುವದರಿಂದ ಅವರಲ್ಲಿ ಒಳ್ಳೆಯ ಬದಲಾವಣೆಯನ್ನು ತರಬಹುದು .ನಾವು  ಧಾರ್ಮಿಕ ಅಭ್ಯಾಸಗಳಿಗಿಂತ ಅಧ್ಯಾತ್ಹ್ಮಿಕವಾಗಿ  ಬೆಳೆಯುವದರಿಂದ ನಮ್ಮನ್ನು ಉತ್ತಮ ವಕ್ತಿಗಳಾಗಿ ಮಾಡಿಕೊಳ್ಳಬಹುದು ಎಂಬುವುದು ನನ್ನ ಅನಿಸಿಕೆ. ಇದರಿಂದ ನಾವು ಉತ್ತಮ ಸಮಾಜವನ್ನು  ನಿರ್ಮಾಣಮಾಡಬಹುದು .

           

                                                                                                     ಇದೇ ನನ್ನ ಚಿಕ್ಕ ಕಥೆ....