ಸದಸ್ಯ:2230981 MEGHANA S BODH/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಣಿಪುರದಲ್ಲಿ ಹಿಂಸಾಚಾರ[ಬದಲಾಯಿಸಿ]

ಮಣಿಪುರದಲ್ಲಿನ ಮೈತೇಯಿ ಹಿಂದೂಗಳ ಮತ್ತು ಕುಕಿ ಬುಡಕಟ್ಟು ಸಮುದಾಯಗಳ ನಡುವಣ ಕಲಹ ಇಂದಿನದ್ದಲ್ಲ. ಈ ಕಲಹಕ್ಕೆ ಶತಮಾನಗಳ ಇತಿಹಾಸವಿದೆ. ಎರಡು ಸಮುದಾಯಗಳ ಜನರು ತಾವೇ ಮಣಿಪುರದ ಮೂಲ ನಿವಾಸಿಗಳು ಎಂದು ಹೇಳಿಕೊಳ್ಳುತಿದ್ದಾರೆ. ಜತೆಗೆ ಮಣಿಪುರದ ಸಂಪೂರ್ಣ ಭೌಗೋಳಿಕ ಪ್ರದೇಶದ ಮೂಲ ಹಕ್ಕುದಾರರು ತಾವೇ ಎಂದು ಪ್ರತಿಪಾದಿಸುತ್ತಿದ್ದಾರೆ. ಈ ಸಂಬಂಧದಿಂದ ಎರಡು ಸಮುದಾಯಗಳ ಮಧ್ಯೆ ಹಲವು ಬಾರಿ ಕಲಹ ನಡೆದಿದೆ. ಮೈತೇಯಿ ಮತ್ತು ಕುಕಿಗಳು ಸಂಪೂರ್ಣ ಭಿನ್ನ ಎಂಬ ಜನಾಂಗೀಯ ಭಿನ್ನತೆಯ ಪ್ರತಿಪಾದನೆಯೇ ಈ ಕಲಹದ ಮೂಲ ಎಂದು ವಿಶ್ಲೇಷಿಸಲಾಗಿದೆ. ಮೈತೇಯಿ ಸಮುದಾಯದ ಜನರು ತಾವು ಮಹಾಭಾರತದ ಅರ್ಜುನ-ಚಿತ್ರಾಂಗದನ ಮಗ ಬಬ್ರುವಾಹನನ ಸಂತತಿಯವರು ಎಂದು ಹೇಳಿಕೊಳ್ಳುತ್ತಾರೆ. ೧೮ನೇ ಶತಮಾನದ ನಂತರದ ಮಣಿಪುರಿ ಭಾಷೆಯಲ್ಲಿ ರಚನೆಯಾದ ಸಾಹಿತ್ಯ ಕೃತಿಗಳೂ ಇದನ್ನೇ ಹೇಳುತ್ತವೆ. 'ಕುಕಿಗಳು ಕಾಡು ಜನರು, ಅವರು ಹೊರಗಿನಿಂದ ಇಲ್ಲಿಗೆ ಬಂದವರು' ಎಂದು ಮೈತೇಯಿ ಜನರು ಹೇಳುತ್ತಾರೆ. ಕುಕಿ ಜನರೂ ಸಹ 'ಮೈತೇಯಿಗಳು ನಮಗಿಂತ ಭಿನ್ನ. ನಾವೇ ಮಣಿಪುರದ ಮೂಲ ನಿವಾಸಿಗಳು' ಎಂದು ಹೇಳುತ್ತಾರೆ. ಆದರೆ ಈ ಎರಡು ಸಮುದಾಯಗಳು ಮೂಲತಃ ಒಂದೇ ಜನಾಂಗಕ್ಕೆ ಸೇರಿದವು ಎಂದು ಮಾನವಶಾಸ್ತ್ರಜ್ಞರು ಪ್ರತಿಪಾದಿಸಿದ್ದಾರೆ. [೧]


MANIPUR_district_map

ಐತಿಹಾಸಿಕ ಹಿನ್ನೆಲೆ

ಕಣಿವೆ ಜಿಲ್ಲೆಗಳಾದ ತೌಬಾಲ್, ಬಿಷ್ಣುಪುರ್, ಕಾಕ್ಚಿಂಗ್, ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮಗಳು ಹಿಂದಿನ ಕಾಂಗ್ಲೀಪಾಕ್ (Kangleipak) ಸಾಮ್ರಾಜ್ಯದ ಭಾಗವಾಗಿದ್ದವು. ಕಂಗ್ಲೀಪಾಕ್ ರಾಜ್ಯವನ್ನು ನಿಂಗ್ಥೌಜಾ (Ningthouja) ರಾಜವಂಶದವರು ಆಳಿದರು. ಅನೇಕ ಇತಿಹಾಸಕಾರರ ಪ್ರಕಾರ, ಕಣಿವೆಯ ಹೊರಗಿನ ಬುಡಕಟ್ಟು ಭಾಗಗಳು ಸಹ ಸಾಮ್ರಾಜ್ಯದ ಭಾಗವಾಗಿದ್ದವು. ಆದರೆ, ಬುಡಕಟ್ಟು ಜನಾಂಗದವರು, ವಿಶೇಷವಾಗಿ ನಾಗಾ ಬುಡಕಟ್ಟುಗಳು ಇದನ್ನು ತಿರಸ್ಕರಿಸಿದ್ದಾರೆ ಮತ್ತು ಅವರದ್ದೇ ನಿರೂಪಣೆ ಹೊಂದಿದ್ದಾರೆ. ಕಾಂಗ್ಲೀಪಾಕ್ ರಾಜ್ಯವು ಬ್ರಿಟಿಷರ ಸಂರಕ್ಷಿತ ಪ್ರದೇಶವಾಗಿದ್ದಾಗ ಉತ್ತರದ ಬೆಟ್ಟಗಳಿಂದ ನಾಗಾ ಬುಡಕಟ್ಟುಗಳು ಪದೇ ಪದೇ ದಾಳಿ ಮಾಡಿದರು. ಕಣಿವೆಯನ್ನು ರಕ್ಷಿಸುವ ಸಲುವಾಗಿ, ಮಣಿಪುರದ ಬ್ರಿಟಿಷ್ ರಾಜಕೀಯ ಕಾರ್ಯಕರ್ತ ಬರ್ಮಾದ ಕುಕಿ-ಚಿನ್ ಬೆಟ್ಟಗಳಿಂದ ಕುಕಿ-ಜೋಮಿಯರನ್ನು ತಂದು ಮೈತೇಯಿ ಮತ್ತು ನಾಗಾಗಳ ನಡುವಿನ ಬಫರ್ ಪ್ರದೇಶವನ್ನಾಗಿ (buffer territory) ಮಾಡಿದರು. ನಾಗಾ ಮತ್ತು ಕುಕಿಗಳು ಉಗ್ರ ಶಿರಸ್ತ್ರಾಣದ ಯೋಧರಾಗಿದ್ದರಿಂದ ಸಧೃಶರಾಗಿದ್ದರು. ಮಹಾರಾಜನು ಅವರಿಗೆ ಕಣಿವೆಯ ಗುರಾಣಿಯಾಗಿ ಕಾರ್ಯನಿರ್ವಹಿಸಲು ಪರ್ವತಗಳ ಉದ್ದಕ್ಕೂ ಭೂಮಿಯನ್ನು ಒದಗಿಸಿದರು.

ಬ್ರಿಟಿಷ್ ಆಳ್ವಿಕೆಯಲ್ಲಿ ಕಲಹ

ನಾಗಾಗಳು ಇಂಫಾಲ್ ಕಣಿವೆ ಪ್ರದೇಶಕ್ಕೆ ಬರುವುದನ್ನು ತಡೆಯಲು ಗುಡ್ಡಗಾಡು ಜನರನ್ನು ಮೈತೇಯಿ ರಾಜಮನೆತನವು ಬಳಸಿಕೊಳ್ಳುತಿತ್ತು ಎಂಬುದನ್ನು ಮೈತೇಯಿ ಪುರಾಣಗಳು ದಾಖಲಿಸಿವೆ. ಕುಕಿಗಳು ನಾಗಾಗಳ ದಾಳಿಗಳನ್ನು ಎದುರಿಸುವ ಮೂಲಕ ಇಂಫಾಲ್ ಕಣಿವೆ ಪ್ರದೇಶದಲ್ಲಿ ಇದ್ದ ಮೈತೇಯಿ ಜನರನ್ನು ರಕ್ಷಿಸಿದ್ದರು ಎಂದು ಈ ಪುರಾಣ ಕಾವ್ಯಗಳು ಹೇಳುತ್ತವೆ. ಹೀಗೆ ತಮ್ಮ ರಕ್ಷಣೆಗಾಗಿ ಕುಕಿಗಳನ್ನು ತಮ್ಮ ರಕ್ಷಣೆಗೆ ಬಳಸಿಕೊಳ್ಳುತ್ತಿದ್ದ ಪರಿಪಾಟವೇ ಕುಕಿ ಮತ್ತು ಮೈತೇಯಿ ಜನರ ನಡುವಣ ಕಲಹಕ್ಕೆ ಕಾರಣವಾಯಿತು ಎಂಬುದನ್ನು ಬ್ರಿಟಿಷ್ ಅಧಿಕಾರಿಗಳು ದಾಖಲಿಸಿದ್ದಾರೆ.

೧೯ನೇ ಶತಮಾನದ ಅಂತ್ಯದ ವೇಳೆಗೆ ಅಸೋಮ್ ಸಂಸ್ಥಾನ, ಮಣಿಪುರ ಸಂಸ್ಥಾನಗಳು ಬ್ರಿಟಿಷ್ ಭಾರತದ ಅಸ್ಸಾಂ ರಾಜ್ಯದ ಆಡಳಿತಕ್ಕೆ ಒಳಪಟ್ಟಿದ್ದವು. ಬ್ರಿಟಿಷರಿಗೆ ಅಗತ್ಯವಿದ್ದಾಗ ಈ ಸಂಸ್ಥಾನಗಳೆರಡೂ ಸೇನೆಯನ್ನು ಒದಗಿಸಬೇಕಿತ್ತು. ೧೯೧೭ರಲ್ಲಿ ಒಂದನೇ ಮಹಾಯುದ್ಧದ ಸಂದರ್ಭದಲ್ಲಿ, ಈಜಿಪ್ಟ್ ಅಲ್ಲಿ ಕಾರ್ಯಾಚರಣೆಗೆ ಹೆಚ್ಚಿನ ಸೈನಿಕರ ಆಗತ್ಯ ಇತ್ತು. ಇದಕ್ಕಾಗಿ ಅಸ್ಸಾಂ ರಾಜ್ಯದಿಂದ ತಲಾ ೨೦೦೦ ಸಾವಿರ ಮಂದಿಯ ೧೫ ತುಕಡಿಗಳನ್ನು ತರಿಸುವಂತೆ ಬ್ರಿಟಿಷ್ ವೈಸ್ ರಾಯ್ ಆದೇಶಿಸಿದ್ದರು. ಈ ಪ್ರಕಾರ ತಲಾ ೨೦೦೦ ಸಾವಿರ ಜನರು ಇರುವ ತುಕಡಿಗಳನ್ನು ಕಳುಹಿಸಲು ಮಣಿಪುರದ ಸಂಸ್ಥಾನಕ್ಕೂ ಆದೇಶಿಸಲಾಗಿತ್ತು. ಮಣಿಪುರದ ಸಂಸ್ಥಾನವು ೪೦೦೦ ಸಾವಿರ ಕುಕಿ ಜನರನ್ನು ಯುದ್ಧಕ್ಕಾಗಿ ಕಳುಹಿಸುವಂತೆ ಕುಕಿ ಬುಡಕಟ್ಟು ಮಂಡಲಗಳ ಮುಖ್ಯಸ್ಥರಿಗೆ ಆದೇಶಿಸಿದ್ದರು. ಇದನ್ನು ಕುಕಿ ಬುಡಕಟ್ಟು ಮಂಡಲಗಳ ಮುಖ್ಯಸ್ಥರು ನಿರಾಕರಿಸಿದ್ದರು. ಈ ಅಸಹಕಾರದ ವಿರುದ್ಧ ೧೯೧೯ರಲ್ಲಿ ಬ್ರಿಟಿಷ್ ಸೇನೆ ಮತ್ತು ಮೈತೇಯಿ ಸೇನೆ ಜಂಟಿ ಕಾರ್ಯಾಚರಣೆ ನಡೆಸುತ್ತವೆ. ಕುಕಿ ಜನರ ಮನೆಗೆ ಮತ್ತು ಹೊಲಗಳಿಗೆ ಬೆಂಕಿ ಹಚ್ಚಲಾಗುತ್ತದೆ. ಇದಕ್ಕೆ ಪ್ರತೀಕಾರವಾಗಿ ಕುಕಿ ಬುಡಕಟ್ಟು ಜನರು ಮೈತೇಯಿ ಗ್ರಾಮಗಳ ಮೇಲೆ ದಾಳಿ ನಡೆಸುತ್ತಾರೆ. ಮೈತೆಯಿ ಜನರ ಹೊಲಗಳಿಗೆ ಮತ್ತು ಮನೆಗಳಿಗೆ ಬೆಂಕಿ ಹಚ್ಚುತ್ತಾರೆ. ಇಂತಹ ಪರಸ್ಪರ ದಾಳಿಗಳು ೧೯೨೦ರವರೆಗೂ ಹಲವು ಬಾರಿ ಪುನರಾವರ್ತನೆ ಆಗುತ್ತವೆ. ಅನಂತರ ದಾಳಿಗಳು ನಿಲ್ಲುತ್ತವೆ ಎಂದು ಬ್ರಿಟಿಷ್ ಅಧಿಕಾರಿಗಳು ತಮ್ಮ ವೈಸ್ ರಾಯ್ ಗೆ ಸಲ್ಲಿಸಿದ ವರದಿಯಲ್ಲಿ ವಿವರಿಸಿದ್ದಾರೆ ಎಂದು ಎಸ್.ಎಂ. ಎ. ಡಬ್ಲ್ಯೂ ಷಿಸ್ತಿ ಅವರು ತಮ್ಮ 'ಕುಕಿ ಅಪ್ರೈಸಿಂಗ್ ಇನ್ ಮಣಿಪುರ್: ೧೯೧೯-೧೯೨೦' ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಎರಡು ಸಮುದಾಯಗಳು ಪರಸ್ಪರರ ಮೇಲೆ ದಾಳಿ ನೆಡೆಸುವಾಗ ಈಗಲೂ ಮನೆ ಮತ್ತು ಹೊಲಗಳಿಗೆ ಬೆಂಕಿ ಹಚ್ಚುವ ವಿಧಾನವನ್ನೇ ಪ್ರಧಾನವಾಗಿ ಬಳಸುತ್ತಿವೆ.

ಬ್ರಿಟಿಷರು ಮೈತೇಯಿಗಳನ್ನು ಪರಿಶಿಷ್ಟ ಪಂಗಡ ಎಂದೇ ಕರೆದಿದ್ದರು. ೧೯೪೮-೪೯ರಲ್ಲಿ ಮಣಿಪುರ ಸಂಸ್ಥಾನವು ಭಾರತದೊಂದಿಗೆ ವಿಲೀನವಾದ ನಂತರ ಮೈತೇಯಿಗಳನ್ನು ಪರಿಶಿಷ್ಟ ಪಂಗಡದಿಂದ ಹೊರಗಿಡಲಾಯಿತು. ಪರಿಶಿಷ್ಟ ಪಂಗಡ ಗಳಿಗೆ ಅರಣ್ಯ ಪ್ರದೇಶಗಳ ಒಡೆತನದ ಹಕ್ಕನ್ನು ನೀಡುವ ಸಂವಿಧಾನ ಆರು ಮತ್ತು ಎಂಟನೇ ಪರಿಚ್ಛೇಧದಲ್ಲಿ ಮಣಿಪುರವನ್ನು ಸರಿಸಲಾಯಿತು. ಇದರಿಂದ ಮಣಿಪುರದ ಅರಣ್ಯ ಪ್ರದೇಶಗಳಲ್ಲಿ ಭೂಮಿ ಖರೀದಿಸುವ ಹಕ್ಕನ್ನು ಮೈತೇಯಿಗಳು ಕಳೆದುಕೊಂಡರು. ಆಗ ಮೈತೀಯಿ ಜನಸಂಖ್ಯೆಗೆ ಅಗತ್ಯವಿದ್ದುದ್ದಕ್ಕಿಂತ ಹೆಚ್ಚು ಜಾಗ ಇಂಫಾಲ್ ಕಣಿವೆ ಪ್ರದೇಶದಲ್ಲೇ ಇತ್ತು. ಈಗ ಮೈತೇಯಿ ಜನರ ಸಂಖ್ಯೆಯು ಏರಿಕೆಯಾಗಿದ್ದು, ಭೂಮಿಯ ಕೊರತೆ ಉಂಟಾಗಿದೆ. ಹೀಗಾಗಿ ತಮಗೆ ಪರಿಶಿಷ್ಟ ಪಂಗಡದ ಸ್ಥಾನ ನೀಡಿ, ಆಗ ನಾವು ಗುಡ್ಡಗಾಡು ಪ್ರದೇಶದಲ್ಲಿ ಭೂಮಿ ಖರೀದಿಸಬಹುದು ಎಂಬುದು ಮೈತೇಯಿ ಜನರ ಬೇಡಿಕೆ. ಹೀಗೆ ಮಾಡಿದರೆ ತಮ್ಮ ಹಕ್ಕುಗಳಿಗೆ ಧಕ್ಕೆ ಆಗುತ್ತದೆ ಎಂಬುದು ಕುಕಿ ಜನರ ಪ್ರತಿರೋಧ.



ಭೌಗೋಳಿಕ ವ್ಯತ್ಯಾಸಗಳು

ಮಣಿಪುರದ ಹಿಂಸಾಚಾರವನ್ನು ಅರ್ಥಮಾಡಿಕೊಳ್ಳಲು, ನಾವು ಈ ಎರಡು ಸಮುದಾಯಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು. ಈ ಅಂತರಗಳು ರಾಜಕೀಯ ಮತ್ತು ಜನಾಂಗೀಯ ಮಾತ್ರವಲ್ಲ, ಭೌಗೋಳಿಕ ಮತ್ತು ಆರ್ಥಿಕವೂ ಆಗಿದೆ. ನಾವು ಭೌಗೋಳಿಕತೆಯ ಬಗ್ಗೆ ಚರ್ಚಿಸುವಾಗ, ಮಣಿಪುರದ ನಕ್ಷೆಯನ್ನು ನೋಡಿದರೆ, ನಕ್ಷೆಯನ್ನು ಸುಲಭವಾಗಿ ಎರಡು ಭಾಗಗಳಾಗಿ ವಿಂಗಡಿಸಬಹುದು. ಮೊದಲನೆಯದು ಇಂಫಾಲ್ ಕಣಿವೆ ಮತ್ತು ಎರಡನೆಯದು ಹತ್ತಿರದ ಬೆಟ್ಟಗಳು. ಮೈಟಿ ಜನರು ಕಣಿವೆಯಲ್ಲಿ ವಾಸವಾಗಿದ್ದಾರೆ ಮತ್ತು ಕುಕಿ ಜನರು ಸುತ್ತಮುತ್ತ ಬೆಟ್ಟಗುಡ್ಡಗಳಲ್ಲಿ ವಾಸವಾಗಿದ್ದಾರೆ. ಕಣಿವೆಯಲ್ಲಿರುವ ಜಿಲ್ಲೆಗಳು ಮಣಿಪುರ ಪ್ರದೇಶದ ಸುಮಾರು 11 ಪ್ರತಿಷತ್ತು ಜಾಗವಾಗಿದೆ ಮತ್ತು ಬೆಟ್ಟಗಳಲ್ಲಿನ ಜಿಲ್ಲೆಗಳು ಮಣಿಪುರ ಪ್ರದೇಶದ 89 ಪ್ರತಿಷತ್ತು ಜಾಗವಾಗಿದೆ. ಆದ್ದರಿಂದ ಬೆಟ್ಟಗುಡ್ಡಗಾಡು ಜಿಲ್ಲೆಗಳು ಹೆಚ್ಚಿನ ಪ್ರದೇಶವನ್ನು ಒಳಗೊಂಡಿದೆ. ರಾಜಕೀಯವಾಗಿ ಹೇಳುವುದಾದರೆ, ಮಣಿಪುರದ ಶಾಸಕಾಂಗ ಸಭೆಯ 60 ಸ್ಥಾನಗಳಲ್ಲಿ, ಕಣಿವೆಯಲ್ಲಿರುವ ಜಿಲ್ಲೆಗಳಿಗೆ 40 ಸ್ಥಾನಗಳನ್ನು ನೀಡಲಾಗಿದೆ ಆದರೆ ಬೆಟ್ಟಗಳಿಗೆ ಕೇವಲ 20 ಸ್ಥಾನಗಳನ್ನು ನೀಡಲಾಗಿದೆ. ಈ ಅಸಮಾನ ಹಂಚಿಕೆಯ ಒಂದು ಕಾರಣ ಜನಸಂಖ್ಯೆ. ಕಣಿವೆ ಪ್ರದೇಶಗಳು ಹೆಚ್ಚು ಜನನಿಬಿಡವಾಗಿವೆ. 2011 ರ ಜನಗಣತಿಯ ಪ್ರಕಾರ, 1.33 ಪಟ್ಟು ಹೆಚ್ಚು ಜನರು ಕಣಿವೆಯಲ್ಲಿರುವ ಜಿಲ್ಲೆಗಳಲ್ಲಿ ವಾಸವಾಗಿದ್ದಾರೆ ಆದರೆ ಇವರಿಗೆ ದ್ವಿಗುಣ ಅಸೆಂಬ್ಲಿ ಸ್ಥಾನಗಳು ಹಂಚಲಾಗಿದೆ. ಇದರಿಂದ ಕುಕಿ ಜನರಿಗೆ ಹೆಚ್ಚು ಪ್ರಾತಿನಿಧ್ಯ ಸಿಗದೆ ಕಷ್ಟ ಅನುಭವಿಸುತ್ತಿದ್ದಾರೆ. ಸೀಟುಗಳ ಅಸಮಾನ ಹಂಚಿಕೆಯನ್ನು ಹಲವರು ಟೀಕಿಸಿದ್ದಾರೆ . ಇದಲ್ಲದೇ ಬೆಟ್ಟ ಮತ್ತು ಕಣಿವೆ ಪ್ರದೇಶಗಳ ನಡುವೆ ಆರ್ಥಿಕ ಮತ್ತು ಧಾರ್ಮಿಕ ಅಂತರವಿದೆ. [೨]



ಪರಿಶಿಷ್ಟ ಪಂಗಡ ಸ್ಥಾನಮಾನಕ್ಕಾಗಿ ಮೀಟೈ ಸಮುದಾಯದ ಬೇಡಿಕೆಗಳು


Manipur-scstothers-2011

2012 ರಿಂದ, ಮಣಿಪುರದ ಪರಿಶಿಷ್ಟ ಪಂಗಡಗಳ ಬೇಡಿಕೆ ಸಮಿತಿಯು (STDCM) ಮೈತೇಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡುವಂತೆ ನಿರಂತರ ಬೇಡಿಕೆ ಮಾಡಿದೆ. ಮೈತೇಯಿ ಬುಡಕಟ್ಟು ಒಕ್ಕೂಟವು (Meitei Tribe Union) ಮಣಿಪುರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿಯ ಪ್ರಕಾರ 1949 ರಲ್ಲಿ ಮಣಿಪುರವನ್ನು ಭಾರತದ ಒಕ್ಕೂಟದೊಂದಿಗೆ ವಿಲೀನಗೊಳಿಸುವ ಮೊದಲು ಮೈತೇಯಿ ಸಮುದಾಯವನ್ನು "ಬುಡಕಟ್ಟು" ಎಂದು ಗುರುತಿಸಲಾಗಿತ್ತು . ಆ ಗುರುತನ್ನು ಕಳೆದುಕೊಂಡಿದೆ ಎಂದು ವಾದಿಸಿದರು. ಸಮುದಾಯವನ್ನು ಸಂರಕ್ಷಿಸಲು ಮತ್ತು ಅವರ ಪೂರ್ವಜರ ನೆಲ, ಸಂಪ್ರದಾಯ, ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸಲು ಎಸ್‌ಟಿ ಪರಿಶಿಷ್ಟ ಪಂಗಡ ಸ್ಥಾನಮಾನವನ್ನು ಸಮುದಾಯಕ್ಕೆ ವಿಸ್ತರಿಸಬೇಕು ಎಂದು ವಾದಿಸಿದರು.

ರಾಜ್ಯದ ಇತರ ಬುಡಕಟ್ಟು ಗುಂಪುಗಳು ಮೈತೇಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನದ ಬೇಡಿಕೆಯನ್ನು ನೀಡಬಾರದು ಎಂದು ಪ್ರತಿಭಟನೆ ಮಾಡಿದ್ದಾರೆ. ಪರಿಶಿಷ್ಟ ಪಂಗಡದ ಸ್ಥಾನಮಾನದಿಂದ ಹಲವಾರು ಪ್ರಯೋಜನೆಗಳಿವೆ- ಭಾರತೀಯ ಸಂವಿಧಾನದೊಳಗೆ ರಕ್ಷಣೆ ಸಿಗುತ್ತದೆ, ರಾಜಕೀಯ ಪ್ರಾತಿನಿಧ್ಯವನ್ನು ಖಾತರಿಪಡಿಸುವುದು, ಬಡ್ತಿಯಲ್ಲಿ ಆದ್ಯತೆ, ವಿಶ್ವವಿದ್ಯಾಲಯಗಳಲ್ಲಿ ಕೋಟಾ, ಉಚಿತ ಮತ್ತು ಸ್ಟೈಫಂಡ್ ಶಿಕ್ಷಣ, ವಿದ್ಯಾರ್ಥಿವೇತನಗಳು, ಬ್ಯಾಂಕಿಂಗ್ ಸೇವೆಗಳು, ವಿವಿಧ ಸರ್ಕಾರಿ ಯೋಜನೆಗಳು. ಮೈತೇಯಿ ಜನರು ಜನಸಂಖ್ಯಾದಲ್ಲಿ ಹೆಚ್ಚಿದ್ದಾರೆ, ರಾಜಕೀಯ ಲಾಭವನ್ನು ಹೊಂದಿದ್ದಾರೆ ಶೈಕ್ಷಣಿಕವಾಗಿ, ಉದ್ಯೋಗದಲ್ಲಿ ಮತ್ತು ಇತರ ಅಂಶಗಳಲ್ಲಿ ಮುಂದುವರೆದಿದ್ದಾರೆ ಎಂಬುದು ಇತರ ಸಮುದಾಯಗಳ ಅಭಿಪ್ರಾಯ. [೩]


ಇತ್ತೀಚಿನ ಹಿಂಸೆ

3 ಮೇ 2023 ರಂದು, ಭಾರತದ ಈಶಾನ್ಯ ರಾಜ್ಯವಾದ ಮಣಿಪುರದ ಇಂಫಾಲ್ ಕಣಿವೆಯಲ್ಲಿ ವಾಸಿಸುವ ಬಹುಸಂಖ್ಯಾತ ಮೈತೇಯಿ ಜನರು ಮತ್ತು ಸುತ್ತಮುತ್ತಲಿನ ಬೆಟ್ಟಗಳ ಕುಕಿ-ಜೋ ಬುಡಕಟ್ಟು ಸಮುದಾಯದ ನಡುವೆ ಜನಾಂಗೀಯ ಹಿಂಸಾಚಾರ ಸ್ಫೋಟಗೊಂಡಿತು. ಹಿಂಸಾಚಾರದಲ್ಲಿ ನೂರಾರು ಜನರು ಸಾವನ್ನಪ್ಪಿದ್ದಾರೆ, ಹಲವರು ಗಾಯಗೊಂಡಿದ್ದಾರೆ ಮತ್ತು ಕೆಲವರು ನಾಪತ್ತೆಯಾಗಿದ್ದಾರೆ. ಮನೆಗಳನ್ನು ಸುಟ್ಟುಹಾಕಲಾಯಿತು, ದೇವಾಲಯಗಳು ಮತ್ತು ಚರ್ಚ್‌ಗಳು ಸೇರಿದಂತೆ ಧಾರ್ಮಿಕ ರಚನೆಗಳನ್ನು ಧ್ವಂಸಗೊಳಿಸಲಾಯಿತು. ಹಿಂಸಾಚಾರದಿಂದ 70,000 ಕ್ಕೂ ಹೆಚ್ಚು ಜನರು ತಮ್ಮ ಮನೆಗಳಿಂದ ಸ್ಥಳಾಂತರಗೊಂಡರು. ಮಣಿಪುರದ ಬಹುಸಂಖ್ಯಾತ ಜನಸಂಖ್ಯೆಯಾಗಿರುವ ಮೈಟಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನವನ್ನು ಪರಿಗಣಿಸುವಂತೆ ಮಣಿಪುರ ಹೈಕೋರ್ಟ್ ರಾಜ್ಯ ಸರ್ಕಾರವನ್ನು ಕೇಳಿತು. ಇದರ ನಂತರ ಇತ್ತೀಚಿನ ಹಿಂಸಾಚಾರ ಪ್ರಾರಂಭವಾಯಿತು. ಮಣಿಪುರದ ಮೈತೇಯಿ ಸಮುದಾಯವು ಈ ಸ್ಥಾನಮಾನಕ್ಕಾಗಿ ಬಹಳ ಹಿಂದೆಯೇ ವಿನಂತಿಸಿತ್ತು. ಆದರೆ, ಇಂತಹ ಕ್ರಮವು ಕುಕಿ ಮತ್ತು ನಾಗಾ ಸ್ಥಳೀಯ ಸಮುದಾಯಗಳೊಂದಿಗೆ ಜನಾಂಗೀಯ ವಿಭಜನೆಗಳನ್ನು ಹೆಚ್ಚಿಸುತ್ತದೆ, ಎಂಬ ಬಲವಾದ ಕಾಳಜಿ ಇತ್ತು. ವಾಸ್ತವವಾಗಿ, ನ್ಯಾಯಾಲಯದ ಘೋಷಣೆಯ ನಂತರ, ಮಣಿಪುರದ ಎಲ್ಲಾ ಬುಡಕಟ್ಟು ವಿದ್ಯಾರ್ಥಿಗಳ ಒಕ್ಕೂಟದಿಂದ (All Manipur Student’s Union) ಪಾಲ್ಗೊಂಡರು. ಈ ಪ್ರತಿಭಟನೆಯಲ್ಲಿ, ಚುರಾಚಂದ್‌ಪುರ ಜಿಲ್ಲೆ ಮತ್ತು ಬಿಷ್ಣುಪುರ್ ಜಿಲ್ಲೆಯ ನಡುವಿನ ಗಡಿಯ ಸಮೀಪದಲ್ಲಿ ಕುಕಿ ಮತ್ತು ಮೈಟೆಯಿ ಗುಂಪುಗಳ ನಡುವೆ ಘರ್ಷಣೆಗಳು ಪ್ರಾರಂಭವಾದವು. ನಂತರ ಮನೆಗಳನ್ನು ಸುಡಲಾಯಿತು. ಹಿಂಸಾಚಾರವು ಕುಕಿ ಪ್ರಾಬಲ್ಯವಿರುವ ಚುರಾಚಂದ್‌ಪುರ ಪಟ್ಟಣ ಮತ್ತು ಮೈತೇಯಿ ಪ್ರಾಬಲ್ಯದ ಇಂಫಾಲ್ ಕಣಿವೆಗೆ ತ್ವರಿತವಾಗಿ ಹರಡಿತು. ಪ್ರತಿ ಪ್ರದೇಶದಲ್ಲಿನ ಅಲ್ಪಸಂಖ್ಯಾತ ಸಮುದಾದವರು ಗುರಿಯಾದರು. ಪರಿಶಿಷ್ಟ ಪಂಗಡ ಜೊತೆಗೆ ಇತರ ವಿಷಯಗಳು ಮಣಿಪುರದ ಸಮುದಾಯಗಳನ್ನು ಕಾಡುತ್ತಿವೆ. ರಾಜ್ಯ ಸರ್ಕಾರವು ಬೆಟ್ಟ ಗುಡ್ಡದಲ್ಲಿನ ಕುಕಿ ಜನರಿಗೆ ಭೂಮಿ ಹಕ್ಕುಗಳನ್ನು ನೀಡಿಲ್ಲ. ಅರಣ್ಯಗಳನ್ನು ಸಮೀಕ್ಷೆ ಮಾಡುವ ಪ್ರಯತ್ನಗಳ ಪರಿಣಾಮವಾಗಿ ಕುಕಿ ಸಮುದಾಯಗಳನ್ನು ಹೊರಹಾಕಲಾಗಿದೆ. [೪]


ಉಲ್ಲೇಖಗಳು

  1. https://www.bbc.com/news/world-asia-india-66260730
  2. https://www.aljazeera.com/economy/2024/1/9/ethnic-conflict-in-indias-manipur-has-completely-ruined-businesses
  3. https://dcmsme.gov.in/old/dips/state_wise_dips/state%20profile%20of%20manipur.pdf
  4. https://www.thehindu.com/news/national/manipur-violence-situation-calm-but-tense-in-imphal/article67352025.ece