ಸದಸ್ಯ:2230513BindushreeR/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅನನ್ಯ ವ್ಯಕ್ತಿಗಳಿಂದ ತುಂಬಿದ ಜಗತ್ತಿನಲ್ಲಿ, ನಾನು ವಿಭಿನ್ನ ಮತ್ತು ನಿರಂತರವಾಗಿ ವಿಕಸನಗೊಳ್ಳುವ ವ್ಯಕ್ತಿಯಾಗಿ ನಿಲ್ಲುತ್ತೇನೆ, ನಿರಂತರವಾಗಿ ನನ್ನ ಸ್ವಂತ ಅಸ್ತಿತ್ವದ ಆಳವನ್ನು ಬಹಿರಂಗಪಡಿಸಲು ಪ್ರಯತ್ನಿಸುತ್ತೇನೆ. ನನ್ನ ಸ್ವಯಂ ಅನ್ವೇಷಣೆಯ ಪ್ರಯಾಣವು ಆಳವಾದ ಕಲಿಕೆಯ ಅನುಭವವಾಗಿದೆ.ನನ್ನ ವ್ಯಕ್ತಿತ್ವದ ಹಲವು ಮುಖಗಳನ್ನು ಬಿಚ್ಚಿಡುವ ಮತ್ತು ನಾನು ಎಂಬ ವ್ಯಕ್ತಿಯ ಸಾರವನ್ನು ಬಹಿರಂಗಪಡಿಸುವ ಒಂದು ಪ್ರಯತ್ನ.ಬುಜ್ಜಿ ಎಂಬ ಹೆಸರಿನಿಂದಲೇ  ಕರೆಯಲ್ಪಡುವ ನಾನು , ಬಿಂದುಶ್ರೀ ಆರ್. ೨೦೦೪ ಸೆಪ್ಟೆಂಬರ್ ೨೨ ರಂದು ಬೆಂಗಳೂರಿನಲ್ಲಿ ಜನಿಸಿದೆ, ನನ್ನ ಕುಟುಂಬದ ಬೆಚ್ಚಗಿನ ಮತ್ತು ಪ್ರೀತಿಯ ತೋಳುಗಳಲ್ಲಿಅಪ್ಪಿಕೊಂಡು ಬೆಳೆದೆ.
ಬಾಲ್ಯದಲ್ಲಿ, ನನ್ನ ಪ್ರಪಂಚವು ಪ್ರೀತಿ ಮತ್ತು ನಗುವಿನ ರೋಮಾಂಚಕ ಬಣ್ಣಗಳಿಂದ ಚಿತ್ರಿಸಲ್ಪಟ್ಟಿದೆ ಮತ್ತು ನನ್ನ ಕುಟುಂಬದ ಪೋಷಣೆಯ ಅಪ್ಪುಗೆಯೊಳಗೆ ನಾನು ಸೇರಿರುವ ನನ್ನ ಮೊದಲ ಅರ್ಥವನ್ನು ಕಂಡುಕೊಂಡೆ. ನನ್ನ ತಂದೆ ರವಿಕುಮಾರ್ ಮೂಲತಃ ಶಿವಮೊಗ್ಗದವರು ಮತ್ತು ತಾಯಿ ಮಾಲಾ , ಚಿಕ್ಕಮಗಳೂರಿನವರು. ನನ್ನ ತಂದೆ ತಾಯಿಯೊಂದಿಗೆ ನನ್ನ ಅಣ್ಣ ನವೀನ ಮತ್ತು  ಅಕ್ಕ ರಶ್ಮಿ ನನ್ನಲ್ಲಿ ದಯೆ, ಪ್ರಾಮಾಣಿಕತೆ ಮತ್ತು ಸಹಾನುಭೂತಿಯ ಮೌಲ್ಯಗಳನ್ನು ನನ್ನಲ್ಲಿ ತುಂಬಿದರು.
ನನ್ನ ಆರಂಭಿಕ ಶಿಕ್ಷಣ ಸೆಂಟ್ ಮೇರಿಸ್ ಶಾಲೆಯಲ್ಲಿ ಪ್ರಾರಂಭವಾಯಿತು . ನ್ಯೂರ್ಸರಿಯಿಂದ ಐದನೇ ತರಗತಿಯ ವರೆಗೂ ಸೆಂಟ್ ಮೇರಿಸ್ ಶಾಲೆಯಲ್ಲೇ ಆಯಿತು . ಮೊದಲನೆಯ ತರಗತಿಯಿಂದಲೂ ನಾನೆ ನನ್ನ ಎಲ್ಲ ತರಗತಿಗಳಲ್ಲೂ ವರ್ಗ ಪ್ರತಿನಿಧಿಯಾಗಿದ್ದೇನು . ನಾನು ತುಂಬಾ ಉತ್ಸಾಹಿ ವಿದ್ಯಾರ್ಥಿನಿಯಾಗಿದ್ಧೇ . ನಾನು ಯಾವಾಗಲೂ ನನ್ನ ತರಗತಿಗಳಲ್ಲಿ ಟಾಪರ್ ಆಗಿದ್ದೆ. ನನ್ನ ಶಾಲೆಯಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸಿದರು ನಾನು ಎಲ್ಲದರಲ್ಲೂ ಭಾಗವಹಿಸುತ್ತಿದೆ . ನಾನು ಎರಡೆನೆಯ ತರಗತಿಯಲ್ಲಿ ಓಟದ ಸ್ಪರ್ಧೆಯಲ್ಲಿ ತಾಲೂಕು ಮಟ್ಟದ ಕ್ರೀಡಾಪಟು ಆಗಿದ್ದೆ ಹ್ಹಗೂ ಅದರಲ್ಲಿ ಮೂರನೇ ಪ್ರಶಸ್ತಿಯನ್ನು ಪಡೆದ್ದಿದೆ. ಈ ಶಾಲೆಯಲ್ಲಿ ನಾನು ಐದನೇ ತರಗತಿಯಾ ವರೆಗೂ ಮಾತ್ರ ಶಿಕ್ಷಣ ಪಡೆಯಲು ಸಾಧ್ಯವಾಯಿತು.ಐದನೇ ತರಗತಿಯ ವರೆಗೂ ಇದ್ದ ನನ್ನ ಸ್ನೇಹಿತರನ್ನು ಮತ್ತು ನನ್ನ ಶಾಲೆಯನ್ನು ಬಿಟ್ಟು ನಾನು ಬೇರೆ ಶಾಲೆಯನ್ನು ಸೇರಬೇಕಾಗಿತ್ತು . ಇಲ್ಲಿಗೆ ನನ್ನ ಶೈಕ್ಷಣಿಕ ಹಾಗು ವೈಯಕ್ತಿಕ ಜೀವನದ ಮುಖ್ಯವಾದ ಪರಿವರ್ತನೆಯಾಯಿತು. 
    ಈ ಪರಿವರ್ತನಾ ಹಂತದಲ್ಲಿ ನಾನು ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ನನ್ನ ಆರನೇ ತರಗತಿಯ ಶಿಕ್ಷಣ ಪ್ರಾರಂಭಿಸಿದೇ . ಈ ಶಾಲೆಯಲ್ಲಿ   ನಾನು ನನ್ನ ಬಗ್ಗೆ ಅನ್ವೇಷಿಸಲು ಸಾಧ್ಯವಾಯಿತು. ಈ ಶಾಲೆಗೇ ಸೇರಿಕೊಂಡ ಮೊದಲೆನೆ ವರ್ಷವೇ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಲಾಗಿತ್ತು . ನಾನು ಈ ಪ್ರವಾಸದಲ್ಲಿ ಭಾಗವಹಿಸಿಧೆ. ಹಾಗೆ ಕ್ರೀಡಾ ಸ್ಪರ್ಧೆಗಳಾದ ಗುಂಡು ಎಸೆತ, ಥ್ರೋಬಾಲ್ ಇತ್ಯಾದಿಗಳಲ್ಲಿ ಭಾಗವಹಿಸಿ ತಾಲೂಕು , ಜಿಲ್ಲಾಮಟ್ಟದ್ದಾ ಸ್ಪರ್ಧೆಗೆ ನಾನು ಆಯ್ಕೆಯಾದೆ . ಹೀಗೆ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನನ್ನ ಬಗ್ಗೆ ನಾನೇ ಅನ್ವೇಷಿಸಿಕೊಂಡೆ.ಕ್ರೀಡೆ ಮಾತ್ರವಲ್ಲದೆ ನಮ್ಮ ಶಾಲೆಯಾ ವಾರ್ಷಿಕೋತ್ಸವದಲ್ಲಿ ನನ್ನ ತರಗತಿಯವರೆಲ್ಲ ಸೇರಿನೃತ್ಯ ಮಡ್ಡಿದೆವು, ಹೀಗೆ ನನ್ನ ಶಾಲಾದಿನಗಳು ಅತ್ಯಂತ  ಸ್ವಾರಸ್ಯವಾಗಿ ನಡೆಯುತ್ತಿತ್ತು . ಎಸ್ಎಸ್ಎಲ್ ಸಿ ಯಲ್ಲಿ ಶಾಲೆಯ ಕೊನೆಯ ವರ್ಷವಾದ ಹಾಗು ಜೀವನದ ಅತಿ ಮುಖ್ಯ ಘಟ್ಟವಾದ ಕಾರಣ ಅದು ಅತ್ಯಂತ  ಸುಂದರ ಮತ್ತು ಚೆಂದದ ನೆನಪುಗಳಿಂದ ತುಂಬಿತ್ತು. ಶಾಲೆಯಲ್ಲಿ ಸಂತೋಷದಾಯಕ ಪ್ರವಾಸವನ್ನು ಆಯೋಜಿಸಿದರು . ಅದು ಮಡಿಕೇರಿ, ಮೈಸೂರು ಇತ್ಯಾದಿ ಸ್ಥಳಗಳಿಗೆ ಕರೆದೊಯ್ದರು . ಇದು ನನ್ನ ಈ ವರೆಗಿನ ಜೀವನದ ಅತ್ಯಂತ ಸುಂದರವಾದ ಕ್ಷಣಗಳು ಮತ್ತು ನೆನಪುಗಳು ತುಂಬಿರುವ ಪ್ರವಾಸ. ಪ್ರವಾಸವೆಲ್ಲ ಮುಗಿದ ನಂತರ ಎಸ್ಎಸ್ಎಲ್ ಸಿ  ಪರೀಕ್ಷೆಗೆ ಸಿದ್ಧವಾಗುತಿರುವಾಗಲೇ ಕಾವಿಡ್-೧೯ ಹರಡಿತು.ಲಾಕ್‌ಡೌನ್ನಿನಲ್ಲೇ  ಪರೀಕ್ಷೆಗೆ ಸಿದ್ದವಾಗಿ ಪರೀಕ್ಷೆ ಬರೆದ್ದು ೯೫%  ಗಳಿಸಿದೆ. ಎಸ್ಎಸ್ಎಲ್ ಸಿಯ ಬಳಿಕ ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಪಿ ಯು ಶಿಕ್ಷಣ ಪಡೆದ್ದು. ಪಿ ಯು ಮುಗಿಧ ಬಳಿಕ ಜೀವನದ ಇನ್ನೊಂದು ಮುಖ್ಯಭಾಗ ಪ್ರಾರಂಭವಾಯಿತು .ಪದವಿಪೂರ್ವ   ಶಿಕ್ಷಣಕ್ಕಾಗಿ  ಕ್ರಿಸ್ಟ್ (ಡೀಮ್ಡ್ ಟು ಬಿ ಯೂನಿವರ್ಸಿಟಿ ) ಗೆ ಸೇರಿದ್ದೇನೆ .  
ವರ್ಷಗಳು ಕಳೆದಂತೆ ನಾನು ನನ್ನ ಎಲ್ಲ ಆಸಕ್ತಿಗಳನ್ನು ಕಂಡುಹಿಡಿದುಕೊಂಡಿದೇನೆ. ಅದರಲ್ಲಿ ಪ್ರವಾಸವು ಒಂದಾಗಿದೆ. ನನಗೆ ಪ್ರವಾಸದಲ್ಲಿ ಅತಿ ಹೆಚ್ಚು ಆಸಕ್ತಿ ಇರುವುದರಿಂದ ನನ್ನ ಕುಟುಂಬದವರು ಪ್ರತಿವರ್ಷವೂ ಎಲ್ಲಾದರೂ ಪ್ರವಾಸಕ್ಕೆ ಹೋಗುತ್ತಲೇ  ಇರುತೇವೆ. ಈ ವರೆಗೆ ನಾನು ಕರ್ನಾಟಕ,ಆಂಧ್ರ ಪ್ರದೇಶ,ಪಂಜಾಬಿನ ವಾಗಾಹ್ ಬಾರ್ಡರ್,ಅಮ್ರಿತ್ಸರ್ನ ಗೋಲ್ಡನ್ ಟೆಂಪಲ್ ಇತ್ಯಾದಿ ಸ್ಥಳಗಳಿಗೆ ಪ್ರವಾಸ ಮಾಡಿದ್ದೇನೆ.೨೦೧೫ ರಲ್ಲಿ ಥೈಲ್ಯಾಂಡ್ ಗೆ  ಕುಟುಂಬ ಸಮೇತರಾಗಿ ಐದು ದಿನಗಳ ಪ್ರವಾಸಕ್ಕೆ ಹೊಗ್ಗಿದೆವು ಅಲ್ಲಿನ  ಇತಿಹಾಸ, ಸಂಸ್ಕೃತಿ ಮತ್ತು ಆಚರಣೆಗಳನ್ನು ತಿಳಿದುಕೊಂಡೆ.೨೦೧೯ರಲ್ಲಿ ದುಬೈಗೆ ಏಳು ದಿನಗಳ ಪ್ರವಾಸಕ್ಕೆ ಹೋಗಿದೆವು .ದುಬೈ ತನ್ನ ಪ್ರಭಾವಶಾಲಿ ಮತ್ತು ಭವಿಷ್ಯದ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ.ದುಬೈ ಐಷಾರಾಮಿ ಮತ್ತು ಐಷಾರಾಮಿ ಅನುಭವವನ್ನು ನೀಡುತ್ತದೆ.ಪ್ರವಾಸವು ಬೇರೆ ಪ್ರದೇಶದ ಜೀವನಶೈಲಿ , ಸಾಂಸ್ಕೃತಿಕ ವೈವಿಧ್ಯತೆ, ಆಚರಣೆಗಳನ್ನು ತಿಳಿಸಿಕೊಡುತ್ತದೆ.
ನನ್ನ ಪ್ರಯಾಣದ ಉದ್ದಕ್ಕೂ, ನನ್ನ ಕುಟುಂಬ ಮತ್ತು ಸ್ನೇಹಿತರ ಪ್ರೀತಿ ಮತ್ತು ಬೆಂಬಲವು ಶಕ್ತಿಯ ಅಚಲವಾದ ಮೂಲವಾಗಿದೆ. ಅವರು ನನ್ನ ವಿಜಯಗಳನ್ನು ಆಚರಿಸಿದ್ದಾರೆ, ಪ್ರತಿಕೂಲ ಕ್ಷಣಗಳಲ್ಲಿ ನನ್ನ ಜೊತೆಯೇ ಇದ್ದಾರೆ . ಅವರ ಉಪಸ್ಥಿತಿಯು ನನ್ನ ಜೀವನವನ್ನು ಅಗಾಧವಾಗಿ ಶ್ರೀಮಂತಗೊಳಿಸಿದೆ. ನನ್ನ ಸ್ವಯಂ ಅನ್ವೇಷಣೆಯ ಪ್ರಯಾಣವು ಒಂದು ಸಂಕೀರ್ಣವಾಗಿದೆ. ಜ್ಞಾನದ ಅನ್ವೇಷಣೆ, ಕಲೆಗಳ ಮೇಲಿನ ಉತ್ಸಾಹ, ಪರಾನುಭೂತಿ, ಸ್ಥಿತಿಸ್ಥಾಪಕತ್ವ ಮತ್ತು ಸಾಹಸದ ಬಾಯಾರಿಕೆ ನನ್ನನ್ನು ವ್ಯಾಖ್ಯಾನಿಸುತ್ತದೆ. ನಾನು ಹೊಸ ಅನುಭವಗಳನ್ನು ಸ್ವೀಕರಿಸಲು, ನನ್ನ ಭಾವೋದ್ರೇಕಗಳನ್ನು ಪೋಷಿಸಲು ಮತ್ತು ಪ್ರಪಂಚ ಮತ್ತು ನನ್ನ ಸುತ್ತಲಿನ ಜನರೊಂದಿಗೆ ಆಳವಾದ ಸಂಪರ್ಕವನ್ನು ಮಾಡಲು ಉತ್ಸಾಹನಲಾಗಿದ್ದೇನೆ . ನನ್ನ ಅಸ್ತಿತ್ವವನ್ನು ಸಾರವು ಅನುಭವಗಳು, ನಂಬಿಕೆಗಳು ಮತ್ತು ಆಕಾಂಕ್ಷೆಗಳಲ್ಲಿದೆ ಮತ್ತು ಜೀವನ ಎಂಬ ಈ ಪ್ರಯಾಣದಲ್ಲಿ ಮುಂದೆ ಇರುವ ಸಾಹಸಗಳನ್ನುಕಾಣಲು  ನಾನು ಕುತೂಹಲದಿಂದ ಕಾಯುತ್ತಿದ್ದೇನೆ.