ಸದಸ್ಯ:2230174harshithas

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾಷೆ ವಿಳಂಬತೆ[ಬದಲಾಯಿಸಿ]

ಭಾಷಾ ವಿಳಂಬತೆಯನ್ನು ಮಗು ತನ್ನ ಬೆಳವಣಿಗೆಯ ವೇಳಾಪಟ್ಟಿಯಲ್ಲಿ ಸೂಕ್ತ ವಯಸ್ಸಿನ ಅವಧಿಯಲ್ಲಿ ಭಾಷಾ ಸಾಮರ್ಥ್ಯಗಳನ್ನು ಅಭಿವೃದ್ಧಿಗೊಳಿಸುವುದರಲ್ಲಿ ವಿಫಲಗೊಂಡಾಗ ಕಾಣಬಹುದು. ಇದು ಒಂದು ತರಹದ ಭಾಷ ಅಸ್ವಸ್ಥೆಯಾಗಿದೆ. ಇದನ್ನು ಸಾಮಾನ್ಯವಾಗಿ ಎರಡರಿಂದ ಏಳು ವರ್ಷಗಳ ವಯಸ್ಸಿನ ಮಕ್ಕಳಲ್ಲಿ ಗಮನಿಸಬಹುದು. ಇದು ಅವರ ಪ್ರೌಡಾವಸ್ಥಿಯಲ್ಲಿ ಕೂಡ ಮುಂದುವರಿಯಬಹುದು. ಭಾಷಾ ವಿಳಂಬತೆಯ ಹರಡುವಿಕೆಯ ವರದಿಯು ೨.೩ ರಿಂದ ೧೯ ಪ್ರತಿಶತದವರೆಗೆ ಇರುತ್ತದೆ.

ಭಾಷೆಯು ಮಾನವ ಸಂಪರ್ಕದ ಒಂದು ವಿಶಿಷ್ಟವಾದ ರೂಪವಾಗಿದೆ. ಭಾಷೆಯು ಪ್ರಮಾಣಿತ ಮತ್ತೆ ರಚನಾತ್ಮಕ ರೀತಿಯಲ್ಲಿ ಪದಗಳ ಬಳಕೆಯನ್ನು ಒಳಗೊಂಡಿದೆ. ಭಾಷೆಯ ಸಂವಹನವು ಎರಡು ಹಂತದ ಪ್ರಕ್ರಿಯಯಾಗಿದೆ. ಮೊದಲ ಹಂತವು ಸಂದೇಶವನ್ನು ಪದಗಳ ಗುಂಪಿಗೆ (ಸಂಕೇತ ಭಾಷೆಯಲ್ಲಿ ಚಿಹ್ನೆಗಳು) ಮತ್ತು ಅಗತ್ಯವಾದ ಅರ್ಥವನ್ನು ತಿಳಿಸುವ ವಾಕ್ಯ ರಚನೆಗಳನ್ನು ಭಾಷೆಗೆ 'ಎನ್ಕೋಡ್' ಮಾಡುವ ಪ್ರಕ್ರಿಯೆಯಾಗಿದೆ. ಎರಡನೇ ಹಂತದಲ್ಲಿ, ಭಾಷೆಯನ್ನು 'ಆರ್ಟಿಕ್ಯುಲೇಟರ್‌’ಗಳನ್ನು (ಕೈಗಳು, ಮುಖ, ದೇಹ, ಶ್ವಾಸಕೋಶಗಳು, ಬಾಯಿ, ನಾಲಿಗೆ, ಹಲ್ಲುಗಳು, ಇತ್ಯಾದಿ) ನಿಯಂತ್ರಿಸುವ ‘ಮೋಟಾರ್’ ಆಜ್ಞೆಗಳಾಗಿ ಭಾಷಾಂತರಿಸಲಾಗುತ್ತದೆ. ಭಾಷಣವನ್ನು ಇದರಿಂದಾಗಿ ರಚಿಸಲಾಗುತ್ತದೆ.

ಅಮೇರಿಕನ್ ಸೈನ್ ಲ್ಯಾಂಗ್ವೇಜ್ ASL

ಭಾಷಾ ವಿಳಂಬತೆಯು ಮಾತಿನ ವಿಳಂಬತೆಯಿಂದ ಭಿನ್ನವಾಗಿದೆ. ಭಾಷಾ ಇಲಂಬತೆಯಲ್ಲಿ ಭಾಷಣ ಉತ್ಪಾದನೆಯ ಯಾಂತ್ರಿಕ ಮತ್ತು ಮೋಟಾರ್ ಅಂಶಗಳ ಅಭಿವೃದ್ಧಿಯ ವಿಳಂಬತೆಯಾಗಿದೆ. ಅನೇಕರು ಭಾಷ ವಿಳಂಬತೆಯನ್ನು ಮಾತಿನ ವಿಳಂಬತೆಯೊಂದಿಗೆ ಅಥವಾ ತಡವಾಗಿ ಮಾತನಾಡುವವರೊಂದಿಗೆ ಅಪಾರ್ಥ ಮಾಡಿಕೊಳ್ಳುತ್ತಾರೆ. ಇವೆಲ್ಲವೂ ಅವುಗಳದ್ದೇಯಾದ ಸೂಚನೆ - ಲಕ್ಷಣೆಗಳನ್ನು ಹೊಂದಿವೆ. ಭಾಷೆಯ ವಿಳಂಬತೆಗಿಂತ ಮಾತಿನ ವಿಳಂಬತೆಯು ತಡವಾಗಿ ಮಾತನಾಡುವವರಿಗೆ ಹೆಚ್ಚು ಹೋಲಿಸಬಹುದು. ಮಾತು ಭಾಷೆಯ ಮೌಖಿಕ ಮೋಟಾರು ಉತ್ಪಾದನೆಯಾಗಿದ್ದು ಭಾಷೆ ಸಂವಹನ ಅಥವಾ ಸಂಪರ್ಕದ ಸಾಧನವಾಗಿದೆ. ಭಾಷೆ ಮತ್ತು ಮಾತು ಸ್ವತಂತ್ರವಾಗಿರುವುದರಿಂದ, ಅವು ಪ್ರತ್ಯೇಕವಾಗಿ ವಿಳಂಬವಾಗಬಹುದು. ಉದಾಹರಣೆಗೆ, ಮಗುವಿನ ಮಾತಿನಲ್ಲಿ ವಿಳಂಬತೆಯನ್ನು ಕಾಣಬಹುದು (ಎಂದರೆ, ಸಮಗ್ರವಾದ ಪದಗಳನ್ನು ಉತ್ಪಾದಿಸುವುದರಲ್ಲಿ ವಿಫಲತೆ), ಆದರೆ ಅವರ ಚಿಹ್ನೆಯ ಭಾಷೆಯಲ್ಲಿ ಯಾವುದೇ ದೋಷಗಳನ್ನು ಕಾಣಲಾಗುವುದಿಲ್ಲ. ಭಾಷೆಯ ವಿಳಂಬತೆಯು ಮಾತಿನ ಅಂಶಗಳಲ್ಲದೆ ಸಂಪೂರ್ಣ ಭಾಷೆಯ ಬೆಳವಣಿಗೆಯ ಪ್ರಗತಿಯನ್ನು ನಿಧಾನಗೊಳಿಸುತ್ತದೆ.

ಭಾಷೆಯ ವಿಲಂಬಿತೆಗಳನ್ನು ಮಕ್ಕಳ ಭಾಷೆಯ ಬೆಳವಣಿಗೆಯನ್ನು ಗುರುತಿಸಲಾಗುವ ಬೆಳವಣಿಗೆಯ ಮೈಲುಗಲ್ಲುಗಳಿಗೆ ಹೋಲಿಸಿ ಕಂಡುಹಿಡಿಯಬಹುದು. ಅವುಗಳನ್ನು ವಿವಿಧ ರೀತಿಯಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಪ್ರತುಯೊಂದು ಮಗುವು ತನ್ನದೇ ಆದ ವಿಶಿಷ್ಟವಾದ ಭಾಷಾ ಕೌಶಲ್ಯಗಳು ಹಾಗು ನ್ಯೂನತೆಗಳು ಹೊಂದಿರುತ್ತದೆ. ವಿವಿಧ ಸ್ಕ್ರೀನಿಂಗ್‌ಗಳು ಮತ್ತು ಸಾಧನಗಳ ಮೂಲಕ ಗುರುತಿಸಬಹುದಾಗಿದೆ ಇದನ್ನು ಗುರುತಿಸಬಹುದು. ಭಾಷೆಯ ವಿಳಂಬಿತಕ್ಕೆ ವಿವಿಧವಾದ ಕಾರಣಗಳಿವೆ; ಇದು ಸಾಮಾನ್ಯವಾಗಿ ಮತ್ತೊಂದು ಬೆಳವಣಿಗೆಯ ಅಸ್ವಸ್ಥತೆಯ ಪರಿಣಾಮವಾಗಿರುತ್ತದೆ. ಇದರ ಚಿಕಿತ್ಸೆಯು ವೈಯಕ್ತಿಕ ಅಂಶಗಳ ವಿಶಿಷ್ಟವಾದ ವಿಶ್ಲೇಷಣೆಯ ಅಗತ್ಯವಿರುತ್ತದೆ. ಅನೇಕವೇಳೆ ಈ ಸ್ಥಿತಿಯನ್ನು ತನ್ನ ಆರಂಭಿಕ ಹಂತದಲ್ಲಿ ಎರಡು ಮತ್ತು ಮೂರು ವರ್ಷದ ವಯಸ್ಸಿನ ಮಕ್ಕಳಲ್ಲಿ ಗಮನಿಸಬಹುದು. ಆರಂಭಿಕ ಭಾಷೆಯ ವಿಳಂಬತೆಗಳು ಹೆಚ್ಚು ತೀವ್ರವಾದ ಭಾಷಾ ಅಸ್ವಸ್ಥತೆಗಳಿಗೆ ಕಾರಣವಾಗುವ ಅಪಾಯಕಾರಿ ಅಂಶವೆಂದು ಪರಿಗಣಿಸಲಾಗಿದೆ.

ಭಾಷೆಯ ಬೆಳವಣಿಗೆ[ಬದಲಾಯಿಸಿ]

ಬ್ರೋಕಾ ಮತ್ತು ವರ್ನಿಕ್ ಪ್ರದೇಶ

ಬ್ರೋಕಾ ಮತ್ತು ವೆರ್ನಿಕ್'ಸ್ ಪ್ರದೇಶಗಳು ಮೆದುಳಿನಲ್ಲಿ ಅಂಗರಚನಾಶಾಸ್ತ್ರದ ಭಾಷಾ ಕೇಂದ್ರಗಳಾಗಿವೆ. ಈ ಎರಡು ಕ್ಷೇತ್ರಗಳು ಭಾಷೆಯ ಬೆಳವಣಿಗೆಯ ಎಲ್ಲಾ ಅಂಶಗಳನ್ನು ಒಳಗೊಂಡಿವೆ. ಬ್ರೋಕಾ ಪ್ರದೇಶವು ಎಡ-ಹಿಂಭಾಗದ, ಕೆಳಗಿನ- ಮುಂಭಾಗದ ಗೈರಸ್ನಲ್ಲಿ ಭಾಷೆಯ ಮೋಟಾರು ಭಾಗವಾಗಿದೆ. ಇದು ಭಾಷಣೆಯ ಉತ್ಪಾದನೆಯಲ್ಲಿ ಸಹಾಯ ಮಾಡುತ್ತದೆ. ವೆರ್ನಿಕ್‌ ಪ್ರದೇಶವು ಎಡ-ಮೇಲ್ಭಾಗದ ತಾತ್ಕಾಲಿಕ ಗೈರಸ್‌ನ ಹಿಂಭಾಗದಲ್ಲಿ ಭಾಷೆಯ ಸಂವೇದನಾ ಭಾಗವಾಗಿದೆ. ಇದು ಮೌಖಿಕ-ಶ್ರವಣೇಂದ್ರಿಯ ಗ್ರಹಿಕೆಯಲ್ಲಿ ಸಹಾಯ ಮಾಡುತ್ತದೆ.

ಮಕ್ಕಳಲ್ಲಿ ಗುರಿರುತಿಸಬಹುದಾದ ಮಾತಿನ ಮತ್ತು ಭಾಷೆ ಬೆಳವಣಿಗೆಯ ಮೈಲುಗಲ್ಲುಗಳಿವೆ. ಭಾಷೆ ವಿಳಂಬಿತ ಮಕಳ್ಳಲಿ ಭಾಷೆಯ ಬೆಳವಣಿಗೆಯಲ್ಲಿನ ಮೈಲುಗಲ್ಲುಗಳು ಇತರ ಮಕ್ಕಳಿಗಿಂತ ವಿಭಿನ್ನ ಅಥವಾ ನಿಧಾನವಾಗಿರಬಹುದು. ಇತತೀಚಿನ ಅಧ್ಯಯನಗಳು ಸಾಮಾನ್ಯ ಬೆಳವಣಿಗೆ ಹೊಂದಿರುವ ಮಕ್ಕಳಿಗೆ ಹೋಲಿಸಿದರೆ ಭಾಷೆ ವಿಳಂಬಿತ ಮಕ್ಕಳಲ್ಲಿ ವಿಭಿನ್ನ ಮೈಲಿಗಲ್ಲುಗಳನ್ನು ತೋರಿಸಿವೆ. ಮಕ್ಕಳು ನಿರೀಕ್ಷಿತ ಟೈಮ್‌ಲೈನ್‌ನ ಮಿತಿಯಿಂದ ಸ್ವಲ್ಪ ದಾರಿತಪ್ಪಬಹುದು; ಆದರೆ, ಮಗುವು ನಿರೀಕ್ಷಿತ ಸಮಯಕ್ಕಿಂತ ಹೆಚ್ಚಾಗಿ ದಾರಿ ತಪ್ಪುತ್ತಿರುವುದನ್ನು ಗಮನಿಸಿದರೆ, ಮಗುವಿನ ಆರೈಕೆ ಮಾಡುವವರು ವೈದ್ಯಕೀಯ ತಜ್ಞರನ್ನು ಸಂಪರ್ಕಿಸಬೇಕು.

ವಿಶಿಷ್ಟವಾದ ಮಾತು ಮತ್ತು ಭಾಷೆಯ ಬೆಳವಣಿಗೆಯ ಮೈಲಿಗಲ್ಲುಗಳ ಟೈಮ್‌ಲೈನ್[ಬದಲಾಯಿಸಿ]

ಈ ಟೈಮ್‌ಲೈನ್ ಹುಟ್ಟಿನಿಂದ ಐದು ವರ್ಷದವರೆಗಿನ ನಿರೀಕ್ಷಿತ ಬೆಳವಣಿಗೆಗಳ ಅತ್ಯಂತ ಸಾಮಾನ್ಯ ಮತ್ತು ಸಂಕ್ಷಿಪ್ತ ರೂಪರೇಖೆಯನ್ನು ಮಾತ್ರ ಒದಗಿಸುತ್ತದೆ. ಈ ಟೈಮ್‌ಲೈನ್ ಸಾಮಾನ್ಯ ಮಾರ್ಗಸೂಚಿಯಾಗಿ ಮಾತ್ರ ಕಾರ್ಯನಿರ್ವಹಿಸುವುದರಿಂದ ವೈಯಕ್ತಿಕ ಮಕ್ಕಳು ಇನ್ನೂ ವಿಭಿನ್ನ ಅಭಿವೃದ್ಧಿ ಮಾದರಿಗಳನ್ನು ಪ್ರದರ್ಶಿಸಬಹುದು. ಈ ಟೈಮ್‌ಲೈನ್ ಕೇವಲ ಒಂದು ಮಾದರಿಯಾಗಿದೆ, ಭಾಷೆಯ ಬೆಳವಣಿಗೆಗೆ ಸಂಬಂಧಿಸಿದಂತೆ ಇತರ ಮಾದರಿಗಳು ಅಸ್ತಿತ್ವದಲ್ಲಿವೆ. ಭಾಷೆಯ ಬೆಳವಣಿಗೆಯು ಸೈದ್ಧಾಂತಿಕ ರಹಸ್ಯವಾಗಿ ಉಳಿದಿದೆ.

  • ಸುಮಾರು ೨ ತಿಂಗಳುಗಳಲ್ಲಿ, ಶಿಶುಗಳು "ಕೂಯಿಂಗ್" ಶಬ್ದಗಳನ್ನು ಮಾಡಬಹುದು. ೧೨
  • ಸುಮಾರು ೪ ತಿಂಗಳುಗಳಲ್ಲಿ, ಮಕ್ಕಳು ಧ್ವನಿಗಳಿಗೆ ಪ್ರತಿಕ್ರಿಯಿಸಬಹುದು.
  • ಸುಮಾರು ೬ ತಿಂಗಳುಗಳಲ್ಲಿ, ಮಕ್ಕಳು ಬಡಬಡಿಸಲು ಪ್ರಾರಂಭಿಸುತ್ತಾರೆ ಮತ್ತು ಹೆಸರುಗಳಿಗೆ ಪ್ರತಿಕ್ರಿಯಿಸುತ್ತಾರೆ.
  • ಸುಮಾರು ೯ ತಿಂಗಳುಗಳಲ್ಲಿ, ಶಿಶುಗಳು ಅಮ್ಮ/ಅಪ್ಪ - ಸೂಕ್ತವಾದ ಪದಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತಾರೆ. ಒಂದು ಸಮಯದಲ್ಲಿ ಒಂದು ಪದವನ್ನು ಅನುಕರಿಸಲು ಅವರಿಗೆ ಸಾಧ್ಯವಾಗುತ್ತದೆ.
  • ಸುಮಾರು ೧೨ ತಿಂಗಳುಗಳಲ್ಲಿ, ದಟ್ಟಗಾಲಿಡುವವರು ಸಾಮಾನ್ಯವಾಗಿ ಒಂದು ಅಥವಾ ಹೆಚ್ಚಿನ ಪದಗಳನ್ನು ಮಾತನಾಡುತ್ತಾರೆ. ಅವರು ಎರಡು ಅರ್ಥಪೂರ್ಣಕವಾದ ಪದಗಳನ್ನು ಉತ್ಪಾದಿಸಬಹುದು.
  • ಸುಮಾರು ೧೫ ತಿಂಗಳುಗಳಲ್ಲಿ, ದಟ್ಟಗಾಲಿಡುವವರು ಪರಿಭಾಷೆಯನ್ನು ಉತ್ಪಾದಿಸಲು ಪ್ರಾರಂಭಿಸುತ್ತಾರೆ. ಇದನ್ನು "ಪೂರ್ವ-ಭಾಷಾ ಗಾಯನ" ಎಂದು ವ್ಯಾಖ್ಯಾನಿಸಲಾಗಿದೆ. ಇದರಲ್ಲಿ ಶಿಶುಗಳು ಪ್ರಾಯಸ್ಥ ತರಹದ ಒತ್ತಡ ಮತ್ತು ಧ್ವನಿಯನ್ನು ಬಳಸುತ್ತಾರೆ.
  • ಸುಮಾರು ೧೮ ತಿಂಗಳುಗಳಲ್ಲಿ, ದಟ್ಟಗಾಲಿಡುವವರು ೧೦ ಪದಗಳನ್ನು ಉತ್ಪಾದಿಸಬಹುದು ಮತ್ತು ಸರಳ ಆಜ್ಞೆಗಳನ್ನು ಅನುಸರಿಸಬಹುದು.
  • ಸುಮಾರು ೨೪ ತಿಂಗಳುಗಳಲ್ಲಿ, ದಟ್ಟಗಾಲಿಡುವವರು "ನಾನು", ಮತ್ತು "ನೀವು" ಎಂಬ ಪದಗಳನ್ನು ಬಳಸುವ ೨-೩ ಪದಗಳ ವಾಕ್ಯಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತಾರೆ. ಈ ಪದಗಳು ಸ್ವಾಧೀನತೆಯನ್ನು ಸೂಚಿಸುತ್ತವೆ.
  • ಸುಮಾರು 3 ವರ್ಷಗಳಲ್ಲಿ, ದಟ್ಟಗಾಲಿಡುವವರು ಭಾಷೆಯನ್ನು ಸಂಖ್ಯಾತ್ಮಕವಾಗಿ ಬಳಸಲು ಪ್ರಾರಂಭಿಸುತ್ತಾರೆ.


ಸಾಮಾನ್ಯ ಮಕ್ಕಳಿಗೆ ಬೆಳವಣಿಗೆಗೆ ಹೊಂದಿಸಲಾದ ಆಧಾರದ ಮೇಲೆ, ಮಗುವು ಸಾಕಷ್ಟು ವಿಳಂಬಗಳನ್ನು ಅಥವಾ ಬಹಳ ಹೆಚ್ಚು ಸಮಯದ ವಿಳಂಬಗಳನ್ನು ಹೊಂದಿದ್ದಲ್ಲಿ, ಅವರು ಭಾಷೆಯ ವಿಳಂಬತೆಯನ್ನು ಹೊಂದಿರುತ್ತಾರೆ ಎಂದು ಪರಿಗಣಿಸಬಹುದು. ಆದರೆ ಇದನ್ನು ಖಚಿತಪಡಿಸಲು ಮಾತಿನ 'ಥೆರಪಿಸ್ಟ್' ಅಥವಾ ವ್ಯದ್ಯಕೀಯ ದೃಢೀಕರಣದ ಅಗತ್ಯವಿರುತ್ತದೆ. ಈ ಮೈಲಿಗಲ್ಲುಗಳು ಮಗುವಿನ ಬೆಳವಣಿಗೆಯ ವಿಶಿಷ್ಟವಾದ ಮೈಲಿಗಲ್ಲುಗಳಾಗಿದ್ದರೂ, ಇವುಗಳು ಕೇವಲ ಮಾರ್ಗಸೂಚಿಗಳಾಗಿವೆ. ಆದ್ದರಿಂದ ಇವುಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬಾರದು.

ಭಾಷೆಯ ವಿಳಂಬತೆಯಲ್ಲಿ ಮಾತಿನ ಬೆಳವಣಿಗೆ[ಬದಲಾಯಿಸಿ]

ಶಾಲಾಪೂರ್ವ ಮಕ್ಕಳಲ್ಲಿ ಆರಂಭಿಕ ಬೆಳವಣಿಗೆಯ ಭಾಷಾ ವಿಳಂಬವು ನಿಧಾನವಾದ ಬೆಳವಣಿಗೆಯಿಂದ ನಿರೂಪಿಸಲ್ಪಟ್ಟಿದೆ. ಭಾಷಾ ವಿಳಂಬಿತರಾದ ಮಕ್ಕಳಲ್ಲಿ ಭಾಷೆಯ ಬೆಳವಣಿಗೆಯು ಮೇಲ್ಕೊಟ್ಟಿರುವ ಟೈಮ್ ಲೈನ್ ಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದು ಬಹಳ ರೀತಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ, ಭಾಷೆ ವಿಳಂಬಿತನಾಗಿರುವ ಮಗುವಿಗೆ ೨೪ ತಿಂಗಳ ವಯಸ್ಸಿನಲ್ಲಿ ಪದಗುಚ್ಛಗಳನ್ನು ಉತ್ಪಾದಿಸುವ ಸಾಮರ್ಥ್ಯವಿಲ್ಲದಿರಬಹುದು. ಅವರು ಬೆಳೆಯುತ್ತಿರುವ ಮಕ್ಕಳಲ್ಲಿ ಭಾಷಾ ರೂಢಿಗಳಿಗಿಂತ ಭಿನ್ನವಾದ ಭಾಷೆಯನ್ನು ಉತ್ಪಾದಿಸುವುದನ್ನು ಕಂಡುಕೊಳ್ಳಬಹುದು.

ವಿವಿಧಗಳು[ಬದಲಾಯಿಸಿ]

ಭಾಷಾ ವಿಳಂಬತೆಯನ್ನು ಸಾಮಾನ್ಯವಾಗಿ ಗ್ರಹಿಸುವ ಮತ್ತು ವ್ಯಕ್ತಪಡಿಸುವ ಭಾಷೆಗಳ ವರ್ಗಗಳಾಗಿ ವಿಂಗಡಿಸಲಾಗಿದೆ. ಪರಿಣಾಮಕಾರಿ ಸಂವಹನವನ್ನು ಅಭಿವೃದ್ಧಿಪಡಿಸುವಲ್ಲಿ ಎರಡೂ ವಿಭಾಗಗಳು ಅವಶ್ಯಕ.

ಗ್ರಹಿಸುವ ಭಾಷೆ[ಬದಲಾಯಿಸಿ]

ಗ್ರಹಿಸುವ ಭಾಷೆಯು ಮೌಖಿಕ (ಮಾತನಾಡುವ) ಮತ್ತು ಅಮೌಖಿಕ (ಲಿಖಿತ, ಸನ್ನೆ) ಎರಡನ್ನೂ ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯನ್ನು ಸೂಚಿಸುತ್ತದೆ. ಇದು ಶಬ್ದಗಳಿಂದ ಮತ್ತು ಪದಗಳಿಂದ ಮಾಹಿತಿಯನ್ನು ಪಡೆಯುವುದಾಗಲಿ, ಸುತ್ತಮುತ್ತಲಿನ ಪರಿಸರದಿಂದ ದೃಶ್ಯ ಮಾಹಿತಿ, ಲಿಖಿತ ಮಾಹಿತಿ, ಅಥವಾ ವ್ಯಾಕರಣವನ್ನು ಗ್ರಹಿಸುವ ಸಾಮರ್ಥ್ಯವನ್ನು ಕುರಿತು ಒಳಗೊಂಡಿರುತ್ತದ್ದೆ.

ವ್ಯಕ್ತಪಡಿಸುವ ಭಾಷೆ[ಬದಲಾಯಿಸಿ]

ವ್ಯಕ್ತಪಡಿಸುವ ಭಾಷೆಯು ಇತರರಿಗೆ ಸಂದೇಶಗಳನ್ನು ಸಂಪರ್ಕಿಸಲು ವಾಕ್ಯಗಳ ಬಳಕೆಯನ್ನು (ಪದಗಳು ಅಥವಾ ಚಿಹ್ನೆಗಳಿಂದ ಮಾಡಲ್ಪಟ್ಟಿದೆ) ಬಳಸುತ್ತದೆ. ಇದು, ಮಕ್ಕಳು ತಮ್ಮ ಸುತ್ತಮುತ್ತಲಿನ ಜನರೊಂದಿಗೆ ತಮ್ಮ ಅಗತ್ಯಗಳನ್ನು ಮತ್ತು ಬಯಕೆಗಳನ್ನು ವ್ಯಕ್ತಪಡಿಸಲು, ಇತರರೊಂದಿಗೆ ಸಂವಹನ ನಡೆಸಲು ಮತ್ತು ಭಾಷಣ ಹಾಗು ಬರವಣಿಗೆಯಲ್ಲಿ ಅವರ ಭಾಷೆಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಕೆಲವು ವ್ಯಕ್ತಪಡಿಸುವ ಭಾಷೆಯ ಕೌಶಲ್ಯಗಳು ಹೀಗಿವೆ: ಪದಗಳನ್ನು ಒಟ್ಟಿಗೆ ವಾಕ್ಯಗಳಲ್ಲಿ ಸೇರಿಸುವುದು, ಪರಿಸರದಲ್ಲಿ ವಸ್ತುಗಳನ್ನು ಗುರುತಿಸುವುದು, ಮತ್ತು ಘಟನೆಗಳನ್ನು ಹಾಗು ಕ್ರಿಯೆಗಳನ್ನು ವಿವರಿಸುವಲ್ಲಿ ಸಹಾಯ ಮಾಡುತ್ತದೆ.

ಭಾಷೆ ವಿಳಂಬತೆಯ ಪ್ರಸ್ತುತಿ ಮತ್ತು ರೋಗನಿರ್ಣಯ[ಬದಲಾಯಿಸಿ]

ಭಾಷೆಯ ವಿಳಂಬವನ್ನು ಸಾಮಾನ್ಯವಾಗಿ ೧೮ ತಿಂಗಳ ವಯಸ್ಸಿನಲ್ಲಿ ಗುರುತಿಸಲಾಗುತ್ತದೆ. ಇದು ಮಕ್ಕಳಲ್ಲಿ ಅನೇಕ ರೂಪಗಳಲ್ಲಿ ಪ್ರಸ್ತುತಪಡಿಸುತ್ತದೆ. ಇದು ಬೇರೆ ರೋಗಗಳ ಜೊತೆ ಸಹವರ್ತಿಯಾಗಿ ಕಂಡುಬರಬಹುದು. ಆದರೆ, ಭಾಷೆ ವಿಳಂಬತೆಯ ಲಕ್ಷಣಗಳು ಒಂದೊಂದು ಮಗುವಿನಲ್ಲೂ ಬೇರೆ ಬೇರೆ ರೂಪದಲ್ಲಿ ಉದ್ಭವಿಸಬಹುದೆಂದು ನೆನಪಿಟ್ಟುಕೊಳ್ಳುವದು ಮುಖ್ಯ.

ಸ್ಕ್ರೀನಿಂಗ್ ಪ್ರಕ್ರಿಯೆ[ಬದಲಾಯಿಸಿ]

ಶಿಶುತ್ವದಲ್ಲಿ ಶಿಶುವೈದ್ಯರೊಂದಿಗೆ ನಿಯಮಿತ ನೇಮಕಾತಿಗಳಿಂದ ಭಾಷೆ ವಿಳಂಬತೆಯ ಸೂಚನೆಗಳನ್ನು ಬೇಗ ಕಂಡುಹಿಡಿಯಬಹುದು. ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ನ (ಎ.ಎ.ಪಿ ) ಪ್ರಕಾರ,  ಭಾಷೆ ವಿಳಂಬತೆಗಾಗಿ ಔಪಚಾರಿಕ ಸ್ಕ್ರೀನಿಂಗ್ ಅನ್ನು ಮಗುವು ೯, ೧೮, ಮತ್ತು ೨೪-೩೦ ತಿಂಗಳುಗಳ ಮೂರು ವಿವಿಧ ವರ್ಷಗಳ ವಯಸ್ಸಿನಲ್ಲಿ ಶಿಫಾರಿಸು ಮಾಡಲಾಗಿದೆ. ಈ ಸ್ಕ್ರೀನಿಂಗ್ ಪ್ರಕ್ಯಿಯೇ ಎರಡು ಭಾಗಗಳ ಪ್ರಕ್ರಿಯೆಯಾಗಿದೆ: ಮೊದಲನೆಯದಾಗಿ, ಬೆಳವಣಿಗೆಯ ಸ್ಥಿತಿಯನ್ನು 'ಪೋಷಕರ ಅಭಿವೃದ್ಧಿಯ ಸ್ಥಿತಿ ಅಥವಾ ವಯಸ್ಸಿನ ಮೌಲ್ಯಮಾಪನ'ದ ಪ್ರಶ್ನಾವಳಿ (ಎ ಎಸ್ ಕ್ಯೂ- ೩೦) ನಂತಹ ಸಾಧನೆಗಳನ್ನು ಬಳಸಿಕೊಂಡು ಮಕ್ಕಳ ಸಾಮಾನ್ಯ ಅಭಿವೃದ್ಧಿ ಸ್ಕ್ರೀನಿಂಗ್ ಮಾಡಲಾಗುತ್ತದೆ; ಎರಡನೆಯದಾಗಿ, ಆಟಿಸಂ ಸ್ಪೆಕ್ಟ್ರಮ್ ಡಿಸ್ಆರ್ಡರ್ಗಾಗಿ ನಿರ್ಧಿಷ್ಟ ಸ್ಕ್ರೀನಿಂಗ್ ಅನ್ನು ನಡೆಸಲಾಗುತ್ತದೆ. ಭಾಷೆ ವಿಳಂಬಿತರಾಗಿರುವ ಎಲ್ಲ ಮಕಳಲ್ಲೂ ಆಟಿಸಂ ಸ್ಪೆಕ್ಟ್ರಮ್ ಡಿಸ್ಆರ್ಡರ್ ಇರುವುದಿಲ್ಲ, ಆಯಾದ್ದರಿಂದ ಎ.ಎ.ಪಿ ಯು ಎರಡೂ ಸ್ಕ್ರೀನಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸಲಹಿಸುತ್ತದೆ.

ಆರಂಭಿಕ ಸೂಚನೆ-ಲಕ್ಷಣಗಳು[ಬದಲಾಯಿಸಿ]

ಆರಂಭಿಕ ಶಿಶುತ್ವ ಹಾಗು ಬಾಲ್ಯದಲ್ಲಿ ಭಾಷೆ ವಿಳಂಬತೆಯ ಹಲವಾರು ಸೂಚನೆಗಳು ಕಂಡುಬರುತ್ತವೆ. ಉದಾಹರಣೆಗೆ,  ಭಾಷೆ ವಿಳಂಬತೆಯು ಮಗುವಿನಲ್ಲಿ ಸಂಪರ್ಕದ ಸನ್ನೆಗಳ ಅಥವಾ ಶಬ್ದಗಳ ಕೊರತೆಯ ರೂಪದಲ್ಲಿ ಪ್ರಸ್ತುತವಾಗಬಹುದು. ಮಕಳಲ್ಲಿ ಭಾಷೆ ವಿಳಂಬತೆಯು ಓದುವಿಕೆ, ಬರವಣಿಗೆ, ಗಮನ ಮತ್ತು ಸಾಮಾಜೀಕರಣದ ಹೆಚ್ಚಿನ ತೊಂದರೆಗಳೊಂದಿಗೆ ಸಂಬಂಧಿಸಲಾಗಿದೆ. ಜೊತೆಗೆ, ತಮ್ಮನ್ನು ತಾವು ಸಾಮಾಜಿಕ ಪರಿಸರದಲ್ಲಿ ತೊಡಗಿಸಿಕೊಳ್ಳಲಾಗದಿರುವ ಸಂಕೇತವಾಗಿದೆ.

ಸಂಪರ್ಕದ ಕೊರತೆಯು ನಿರ್ಧಿಷ್ಟ ವಯಸ್ಸಿನಲ್ಲಿ ಭಾಷೆ ವಿಳಂಬತೆಯನ್ನು ಸೂಚಿಸಬಹುದು. ಅವು ಹೇಗೆಂದರೆ:

  • ೩ ತಿಂಗಳಲ್ಲಿ ನಗಲಾಗದಿರುವುದು
  • ೪ ತಿಂಗಳಲ್ಲಿ ಶಬ್ದಗಳ ಕಡೆ ತಲೆ ತಿರುಗಿಸಲಾಗುವುದು
  • ೬ ತಿಂಗಳಲ್ಲಿ ಶಬ್ದಗಳಿಗೆ ಅಥವಾ ನಗುವಿಗೆ ಪ್ರತಿಕ್ರಿಯಿಸಲಾಗದಿರುವುದು
  • ೯ ತಿಂಗಳುಗಳಲ್ಲಿ ಮಾತು ಬಡಬಡಿಸಲಾಗದಿರುವುದು
  • ೧೨ ತಿಂಗಳುಗಳಲ್ಲಿ ಸೂಚನೆ-ಸನ್ನೆಗಳನ್ನು ಬಳಸದಿರಲಾಗುವುದು
  • ೧೮ ತಿಂಗಳುಗಳಲ್ಲಿ ೫ ಪದಗಳಿಗಿಂತ ಹೆಚ್ಚು ಪದಗಳು ಉತ್ಪದಿಸಲಾಗದಿರುವುದು
  • ೨೪ ತಿಂಗಳುಗಳಲ್ಲಿ ೫೦ ಪದಗಳಿಗಿಂತ ಹೆಚ್ಚು ಪದಗಳನ್ನು ಉತ್ಪದಿಸಲಾಗದಿರುವುದು
  • ೩೬ ತಿಂಗಳುಗಳಲ್ಲಿ ಭಾಷಣೆ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಕಳೆದುಕೊಳ್ಳುವುದು


ನಂತರ ಜೀವನದಲ್ಲಿ ಕಂಡುಬರುವ ಸೂಚನೆಗಳು:

  • ಭಾಷಣದ/ಮಾತಿನ ಕೊರತೆ
  • ಮಗುವಿಗೆ ಪ್ರಸ್ತುತಪಡಿಸಿದ ಭಾಷೆಯನ್ನು ಗ್ರಹಿಸಲು, ಪ್ರಕ್ರಿಯೆಗೊಳಿಸಲು ಅಥವಾ ಅರ್ಥಮಾಡಿಕೊಳ್ಳುವಲ್ಲಿ ಅಸಮರ್ಥತೆ

ಭಾಷೆ ವಿಳಂಬತೆಯ ಪರಿಣಾಮಗಳು[ಬದಲಾಯಿಸಿ]

ಭಾಷೆ ವಿಳಂಬತೆಯು ಸಾಮಾಜಿಕ, ಭಾವನಾತ್ಮಕ ಮತ್ತು ಅರಿವಿನ ಮುಂದೂಡುವಿಕೆ ಸೇರಿದಂತೆ ಇತರ ರೀತಿಯ ಬೆಳವಣಿಗೆಯ ಮುಂದೂಡುವಿಕೆಗೆ ಕಾರಣವಾಗಿದೆ. ಭಾಷೆ ವಿಳಂಬತೆಯು ನಡವಳಿಕೆ, ಓದುವಿಕೆ, ಮತ್ತು ಕಾಗುಣಿತದ ಸಾಮರ್ಥ್ಯದ ಮೇಲೆ ಕೂಡ ಪರಿಣಾಮ ಬೀರಬಹುದು. ಕೆಲವು ಮಕ್ಕಳಲ್ಲಿ ಓಡುವಲ್ಲಿ ಹಾಗು ಬರೆಯುವಲ್ಲಿ ಯಾವುದೇ ಕೊರತೆಗಳು ಕಾಣಿಸುವುದಿಲ್ಲ. ಭಾಷೆ ವಿಳಂಬತೆಗೆ ಸಂಬಂಧಿಸಿದೆ ಇತರ ಡಿಸಾರ್ಡರ್ ಗಳು, ಅತ್ತೆಂಷನ್-ಡೆಫಿಸಿಟ್/ಹೈಪೆರಾಕ್ಟಿವಿಟಿ ಡಿಸಾರ್ಡರ್, ಆಟಿಸಂ ಸೊಎಕ್ಟ್ರಮ್ ಡಿಸಾರ್ಡರ್, ಮತ್ತು ಸೋಶಿಯಲ್ ಕಮ್ಯೂನಿಚ್ಐತೋನ್ ಡಿಸಾರ್ಡರ್.

ಉಲ್ಲೇಖಗಳು[ಬದಲಾಯಿಸಿ]