ಸದಸ್ಯ:2130988Balkiza Banu. M/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಾಚೀನ ಭಾರತ: ಭಾರತವು ದಕ್ಷಿಣ ಏಷ್ಯಾದ ಒಂದು ದೇಶವಾಗಿದ್ದು, ಅದರ ಹೆಸರು ಸಿಂಧೂ ನದಿಯಿಂದ ಬಂದಿದೆ. ಪ್ರಾಚೀನ ಪೌರಾಣಿಕ ಚಕ್ರವರ್ತಿ ಭರತನನ್ನು ಉಲ್ಲೇಖಿಸುವ ಅವರ ಸಂವಿಧಾನದಲ್ಲಿ 'ಭಾರತ' ಎಂಬ ಹೆಸರನ್ನು ದೇಶಕ್ಕೆ ಪದನಾಮವಾಗಿ ಬಳಸಲಾಗಿದೆ, ಅವರ ಕಥೆಯನ್ನು ಭಾಗಶಃ, ಭಾರತೀಯ ಮಹಾಕಾವ್ಯ ಮಹಾಭಾರತದಲ್ಲಿ ಹೇಳಲಾಗಿದೆ.

ಪುರಾಣಗಳ ಪ್ರಕಾರ ಭರತ ರಾಜನು ಇಡೀ ಭಾರತ ಉಪಖಂಡವನ್ನು ವಶಪಡಿಸಿಕೊಂಡು ಶಾಂತಿಯುತವಾಗಿ ಆಳಿದನು. ಅಂದಿನಿಂದ ಈ ಪ್ರದೇಶವು ಭರತವರ್ಶಯಂದು ಪ್ರಸಿದ್ಡವಾಯಿತು. ಈ ಉಪಖಂಡದಲ್ಲಿ ಸುಮಾರು ೨೫೦೦೦೦ ವರ್ಶಗಳಿಂದ ಜನವಸತಿ ಚಟುವಟಿ ನಡೆಯುತ್ತಿದ್ದಂತಹ ಪ್ರಪಂಚದ ಪ್ರಾಚೀನ ಪ್ರದೇಶವಾಗಿದೆ.

ಪುರತತ್ವದ ಉತ್ಖನನಗಳು ಕಂಡುಹಿಡಿದಿರುವ ಮೊದಲಿನ ಜನವಸತಿ ಉಪಯೊಗಿಸುತ್ತಿದ್ದಂತಹ ಕಲಾಕೃತಿಗಳು ಮತ್ತು ಶಿಲೊಪಕರಣಗಳು ಮೊದಲಿನ ಜನವಸತಿ ಮತ್ತು ಆಗಿನ ಕಾಲದ ತಂತ್ರಜ್ನಾನದ ಬಗ್ಗೆ ತಿಳಿಸುತ್ತದೆ.ಭಾರತದ ನಾಗರಿಕತೆ ಹೆಚ್ಚು ಶ್ರಿಮಂತವಾಗಿದ್ದರು ಸಹ ಈ ನಾಗರಿಕತೆಗೆ ಮೆಸೊಪೊಟಮಿಯ ಮತ್ತು ಇಜಿಪ್ಟ್ ನಾಗರಿಕತೆಯ ಗೌರವ ಮತ್ತು ಗುರುತು ಭಾರತದ ನಾಗರಿಕತೆಗೆ ಸಿಗಲಿಲ್ಲ. ಪ್ರಪಂಚದ ಪ್ರಾಚೀನ ನಾಗರಿಕತೆ ಆಗಿರುವ ಸಿಂಧೂ ನಾಗರಿಕತೆಯ (೭೦೦೦ಸಿ- ೬೦೦ಬಿಸಿಇ ) ವಿಸ್ತೀರಿಣ ಮತ್ತು ಸಂಸ್ಕೃತಿ ಮೆಸೊಪೊಟಮಿಯ ನಾಗರಿಕತೆಗಿಂತ ದೊಡ್ಡದು.

ಭಾರತವು ನಾಲ್ಕು ಪ್ರಮುಕ ಧರ್ಮಗಳಾದಂತಹ ಹಿಂದು ಧರ್ಮ, ಜೈನ ಧರ್ಮ, ಬೌಧ್ದ ಧರ್ಮ ಮತ್ತು ಸಿಖ್ಖ್ ಧರ್ಮದ ಜನ್ಮ ಥಾಣವಾಗಿದೆ. ಇದಲ್ಲದೆ ಭಾರತವು ವಿಜ್ನಾನ ಮತ್ತು ತಂತ್ರಜ್ನಾನದ ಪ್ರಭಾವನ್ನು ಹೊಂದಿರುವ ತಾತ್ವಿಕ ಶಾಲೆ ಚರ್ವಕವನ್ನು ಯೆತ್ತಿಹಿಡಿದಿದೆ. ಭರತಖಂಡದಲ್ಲಿ ಆವಿಶ್ಕಾರವಾಗಿರುವಂತಹ ಬಹಳ್ಶ್ಟು ಆವಿಶ್ಕಾರಗಳನ್ನು ಇಂದಿನ ಕಾಲದಲ್ಲಿ ಅವುಗಳನ್ನು ಲಘುವಾಗಿ ತೆಗೆದುಕೊಳ್ಳಲಾಗಿದೆ. ಉದಾಹರಣೆಗಳೆಂದರೆ, ಪ್ಲಾಸ್ತಿಕ್ ಸುರ್ಜೆರಿ, ಯೊಗ, ಮೆಡೀಟೇಶನ್, ಗಣಿತ, ಫ಼್ಲುಶ್ ಶೌಚಾಲಯ, ಒಳಚರಂಡಿ ವ್ಯವಸ್ತೆ, ಮತ್ತು ಪಶುವೈದ್ಯಕೀಯ.

ಮೊಹೆಂಜೊದಾರೊ ಮತ್ತು ಹರಪ್ಪನ್ ನಾಗರಿಕತೆ:

ಸಿಂದೂ ನಾಗರಿಕತೆಯ ಜನ್ಮವು ಮತ್ತು ಬೆಳವಣಿಗೆಯು ಗಂಗಾ ಪ್ರದೇಶದ ದಕ್ಶೀಣ ಭಾಗದಿಂದ ಹಿಡಿದು ಮಾಳ್ವಾ ಪ್ರಾಂತ್ಯದ ಉತ್ತರ ಭಾಗದವರೆಗು ಹರಡಿತ್ತು. ಅಂದಿನ ಕಾಲದ ನಗರಗಳು ಇಂದಿನ ಕಾಲದ ಬಹಳ್ಶ್ಟು ದೇಶಗಳಿಂದ ವ್ಯವಸ್ತಿತವಾಗಿ, ಕಾರ್ಡಿನಲ್ ಗುರುತುಗಳನ್ನು ಹೊಂದಿದ್ದು, ಮಣ್ಣಿನ ಇಟ್ಟಿಗೆಯಿಂದ, ಮತ್ತು ಸುಣ್ಣದಿಂದ ಕಟ್ಟಲಾಗಿದೆ. ಈ ನಾಗರಿಕತೆಯಲ್ಲಿ ಮನೆಗಳ ವಿನ್ಯಾಸವು ಬಹಳ ಸುಂದರವಾಗಿದ್ದು, ಇದು ಒಂದು ದೊಡ್ಡದಾದ ಅಂಗಳ, ಅಡಿಗೆ ಮನೆ, ಮುಂಬಾಗಿಲು, ಮತ್ತು ಚಿಕ್ಕದಾದ ಮಲಗುವ ಕೋಣೆಗಳನ್ನು ಹೊಂದಿತ್ತು.

ಸಿಂಧೂ ನಾಗರಿಕತೆಯಲ್ಲಿ ಕುಟುಂಬದ ಎಲ್ಲಾ ಚಟುವಟಿಕೆಯು ರೊಮ್, ಇಜಿಪ್ಟ್, ಮತ್ತು ಮೆಸೊಪೊಟಮಿಯ ನಾಗರಿಕತೆಯ ತರಹ ಮನೆಯ ಮುಂಭಾಗದಲ್ಲಿ ನಡೆಯುತಿತ್ತು. ಸಿಂಧೂ ನಾಗರಿಕತೆಯಲ್ಲಿರುವ ಮನೆಗಳು ಮುಂದುವರಿದ ತಂತ್ರಜ್ನಾನವನ್ನು ಹೊಂದಿದ್ದು, ಇದರಲ್ಲಿ ಫ಼್ಲುಶ್ ಶೌಚಾಲಯ ಮತ್ತು ಮನೆಯ ಛಾವಣಿಯ ಮೇಲೆ ಹವಾನಿಯಂತ್ರಣಕ್ಕೆ ವೆಂಟಿಲೇಟರಗಳ ವ್ಯವಸ್ತೆಯನ್ನು ಸಹ ಮಾಡಲಾಗಿದೆ.

ಅಂದಿನ ಸುಪ್ರಸಿಧ್ದ ನಗರಗಳಾದ ಹರಪ್ಪ ಮತ್ತು ಮೊಹೆಂಜೊದಾರೊ ಇಂದಿನ ಕಾಲದ ಪಾಕಿಸ್ತಾನದಲ್ಲಿ ಉಪಸ್ತಿತವಿದೆ. ಪಾಕಿಸ್ತಾನವು ಮುಂಚೆಗೆ ಭಾರತದ ಭಾಗವಾಗಿತ್ತು. ಆದರೆ ೧೯೪೭ ಭಾರತ ಪಾಕಿಸ್ತಾನ ವಿಭಜನೆಯಲ್ಲಿ ಹರಪ್ಪ ಮತ್ತು ಮೊಹೆಂಜೊದಾರೊನ ದೊಡ್ಡ ಭಾಗವು ಪಾಕಿಸ್ತಾನಕ್ಕೆ ಸೆರಿತು. ಸಿಂಧೂ ನಾಗರಿಕತೆಯ ಮತ್ತೊಂದು ಹೆಸರೆ ಹರಪ್ಪ ನಾಗರೈಕತೆ, ಇದನ್ನು ೩ಭಾಗಗಳಲ್ಲಿ ವಿಭಜಿಸಲಾಗಿದೆ ಅವುಗಳೆಂದರೆ, ಆಧಿ [ ೫೦೦೦-೪೦೦೦ ಬಿಸಿಇ], ಮಧ್ಯಮ [೪೦೦೦-೨೯೦೦ ಬಿಸಿಇ], ಮತ್ತು ಪ್ರಬುದ್ದ [೨೯೦೦-೧೯೦೦ಬಿಸಿಇ]. ಇದರಲ್ಲಿ ಹರಪ್ಪ ನಾಗರಿಕತೆ ಮಧ್ಯಕಾಲದಲ್ಲಿ ಕಟ್ಟಿದ್ದರೆ, ಮೊಹೆಂಜೊದಾರೊ ನಾಗರಿಕತೆ ಪ್ರಬುದ್ದ ಕಾಲದಲ್ಲಿ ಕಟ್ಟಲಾಯಿತು.

ಸುಮಾರು ೧೯ನೇ ದಶಕದಲ್ಲಿ ಹರಪ್ಪ ನಗರದಲ್ಲಿ ರೈಲು ಹಳಿಯನ್ನು ನಿರ್ಮಿಸಲು ಹರಪ್ಪ ನಗರ ವನ್ನು ಬ್ರಿಟೀಷರಿಂದ ಧ್ವಂಸ ಮಾಡಲಾಯಿತು. ಆದರೆ ಇದಕ್ಕಿಂತ ಮೊದಲು ಅಲ್ಲಿ ಉಪಸ್ತಿತವಿದ್ದ ಊರಿನ ಜನರೇ ಅವರ ವೈಯಕ್ತಿಕ ಉಪಯೋಗಗಳಿಗೆ ಅಲ್ಲಿದ್ದ ಹಳೇಯ ಮನೆಗಳನ್ನು ಧ್ವಂಸ ಮಾಡಿದರು. ಆದ್ದರಿಂದ ಅಲ್ಲಿ ವಾಸವಾಗಿದ್ದ ೩೦೦೦೦ ಜನರ ಸಮುದಾಯದ ಕಂಚಿನ ಯುಗದ ಬಗ್ಗೆ ಹೆಚ್ಚು ಮಾಹಿತಿಯನ್ನು ಕಂಡುಹಿಡಿಯಲು ಕಷ್ಟವಾಗುತ್ತದೆ. ಒಂದೆಡೆ ಹರಪ್ಪ ನಗರದ ಬಗ್ಗೆ ಹೆಚ್ಚು ಮಾಹಿತಿ ಮತ್ತು ಉತ್ಖನನಗಲು ಇಲ್ಲದಿದ್ದರೆ ಮತ್ತೊಂಡೇ ಮೊಹೆಂಜೊದಾರೊ ನಗರದಿಂದ ೧೯೨೨ರಲ್ಲಿ ಬಹಳಷ್ಟು ಉತ್ಖನನಗಳು ಕ್ರಮಭದ್ದವಾಗಿ ಲಭ್ಯವಾಗಿದೆ. ಸಿಂಧಿ ಭಾಷೆಯಲ್ಲಿ ಮೊಹೆಂಜೊದಾರೊಯಂದರೆ ಸತ್ತವರ ದಿಬ್ಬಯಂದರ್ಥ. ಈ ಹೆಅಸರಿಗೆ ಕಾರಣವೆನೆಂದರೆ ಅಲ್ಲಿ ವಾಸವಾಗಿರುವ ಸ್ಥಳೀಯ ಜನರಿಗೆ ಸತ್ತ ಜನರ ಮತ್ತು ಪ್ರಾಣಿಗಳ ಮೂಳೆ, ಕಲಾಕೃತಿಗಳು, ಮತ್ತು ಪ್ರಾಚೀನ ಸೆರಾಮಿಕ್ಸ್ ವಸ್ತುಗಳು ನಿಯತಕಾಲಿಕವಾಗಿ ಮಣ್ಣಿನಿಂದ ದೊರೆಯುತ್ತಿತ್ತು. ಮೊಹೆಂಜೊದಾರೊನ ಮೂಲ ಹೆಸರಿನ ಬಗ್ಗೆ ಹೆಚ್ಚು ಗೊತ್ತಿಲ್ಲದಿದ್ದರು ಬಹಳಷ್ಟು ಜನರು ಇದಕ್ಕೆ ವಿವಿಧ ಹೆಸರನ್ನು ನೀಡಲು ಪ್ರಯತ್ನಿಸಿದ್ದಾರೆ. ಅದರಲ್ಲಿ ಒಂದು ಹೆಸರೆಂದರೆ ದ್ರಾವಿಡ ಮೂಲದ ಹೆಸರು 'ಕುಕ್ಕುತರ್ಮ' ಎಂದರೆ ಹುಂಜದ ನಗರ ಈ ಹೆಸರಿಗೆ ಕಾರಣವೆನೆಂದರೆ ಈ ನಗರದಲ್ಲಿ ಹುಂಜ ಜಗಳ ಸ್ಪರ್ದೆ ಮತ್ತು ಅವುಗಳ ಪಾಲ್ನೆ ಪೊಶಣೆ ನಡೆಯುತ್ತಿತ್ತುಯೆನ್ನುವ ಊಹೆ.

ಹರಪ್ಪ ನಾಗರಿಕತೆಯ ಪತನ:

ಹರಪ್ಪ ನಾಗರೀಕತೆಯ ಜನರು ಅನೇಕ ದೇವರುಗಳನ್ನು ಪೂಜಿಸುತ್ತಿದ್ದರು ಮತ್ತು ಧಾರ್ಮಿಕ ಆರಾಧನೆಯಲ್ಲಿ ತೊಡಗಿದ್ದರು. ವಿವಿಧ ದೇವತೆಗಳ ಪ್ರತಿಮೆಗಳು (ಇಂದ್ರ, ಚಂಡಮಾರುತ ಮತ್ತು ಯುದ್ಧದ ದೇವರು) ಅನೇಕ ಸ್ಥಳಗಳಲ್ಲಿ ಕಂಡುಬಂದಿವೆ ಮತ್ತು ಅವುಗಳಲ್ಲಿ ಪ್ರಮುಖವಾದವು, ಶಕ್ತಿ (ಮಾತೃ ದೇವತೆ) ಯನ್ನು ಚಿತ್ರಿಸುವ ಟೆರಾಕೋಟಾ ತುಣುಕುಗಳು ಸ್ತ್ರೀಲಿಂಗ ತತ್ವದ ಜನಪ್ರಿಯ, ಸಾಮಾನ್ಯ ಪೂಜೆಯನ್ನು ಸೂಚಿಸುತ್ತವೆ. ಸಿ. 2000 - c.1500 BCE ಇದು ಆರ್ಯನ್ನರು ಎಂದು ಕರೆಯಲ್ಪಡುವ ಮತ್ತೊಂದು ಜನಾಂಗವು ಖೈಬರ್ ಪಾಸ್ ಮೂಲಕ ಭಾರತಕ್ಕೆ ವಲಸೆ ಬಂದಿತು ಮತ್ತು ಅಸ್ತಿತ್ವದಲ್ಲಿರುವ ಸಂಸ್ಕೃತಿಯಲ್ಲಿ ಸಮ್ಮಿಲನಗೊಂಡಿತು, ಅವರ ದೇವರುಗಳು ಮತ್ತು ಸಂಸ್ಕೃತದ ಭಾಷೆಯನ್ನು ಅವರೊಂದಿಗೆ ತಂದರು, ನಂತರ ಅವರು ಪ್ರದೇಶದ ಅಸ್ತಿತ್ವದಲ್ಲಿರುವ ನಂಬಿಕೆಗೆ ಪರಿಚಯಿಸಿದರು. ವ್ಯವಸ್ಥೆ. ಆರ್ಯರು ಯಾರು ಮತ್ತು ಅವರು ಸ್ಥಳೀಯ ಜನರ ಮೇಲೆ ಯಾವ ಪರಿಣಾಮ ಬೀರಿದರು ಎಂಬುದು ಚರ್ಚೆಯಾಗುತ್ತಲೇ ಇದೆ ಆದರೆ ಅವರ ಆಗಮನದ ಅದೇ ಸಮಯದಲ್ಲಿ ಹರಪ್ಪನ್ ಸಂಸ್ಕೃತಿಯು ಅವನತಿ ಹೊಂದಲು ಪ್ರಾರಂಭಿಸಿತು ಎಂದು ಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿದೆ.

ವಿದ್ವಾಂಸರು ಹವಾಮಾನ ಬದಲಾವಣೆಯನ್ನು ಒಂದು ಸಂಭವನೀಯ ಕಾರಣವೆಂದು ಉಲ್ಲೇಖಿಸುತ್ತಾರೆ, ಈ ಪ್ರದೇಶದಲ್ಲಿ ಬರ ಮತ್ತು ಪ್ರವಾಹ ಎರಡಕ್ಕೂ ಸಾಕ್ಷಿಯಾಗಿದೆ. ಸಿಂಧೂ ನದಿಯು ಈ ಪ್ರದೇಶದಲ್ಲಿ ಹೆಚ್ಚು ನಿಯಮಿತವಾಗಿ ಪ್ರವಾಹವನ್ನು ಪ್ರಾರಂಭಿಸಿದೆ ಎಂದು ಭಾವಿಸಲಾಗಿದೆ (ಮೊಹೆಂಜೊ-ದಾರೋದಲ್ಲಿ ಸರಿಸುಮಾರು 30 ಅಡಿ ಅಥವಾ 9 ಮೀಟರ್‌ಗಳಷ್ಟು ಹೂಳು ಸಾಕ್ಷಿಯಾಗಿದೆ) ಮತ್ತು ಇದು ಬೆಳೆಗಳನ್ನು ನಾಶಪಡಿಸಿತು ಮತ್ತು ಕ್ಷಾಮವನ್ನು ಉತ್ತೇಜಿಸಿತು. ಬೆಳೆಗಳಿಗೆ ನೀರುಣಿಸಲು ಅವಲಂಬಿಸಿರುವ ಮಾನ್ಸೂನ್ ಮಾರ್ಗವು ಬದಲಾಗಬಹುದೆಂದು ಭಾವಿಸಲಾಗಿದೆ ಮತ್ತು ಜನರು ಉತ್ತರದ ನಗರಗಳನ್ನು ಬಿಟ್ಟು ದಕ್ಷಿಣದ ಭೂಮಿಗೆ ಹೋಗುತ್ತಾರೆ. ಮತ್ತೊಂದು ಸಾಧ್ಯತೆಯೆಂದರೆ ಮೆಸೊಪಟ್ಯಾಮಿಯಾ ಮತ್ತು ಈಜಿಪ್ಟ್‌ನೊಂದಿಗಿನ ವ್ಯಾಪಾರ ಸಂಬಂಧಗಳ ನಷ್ಟ, ವಾಣಿಜ್ಯದಲ್ಲಿ ಅವರ ಎರಡು ಪ್ರಮುಖ ಪಾಲುದಾರರು, ಏಕೆಂದರೆ ಆ ಎರಡೂ ಪ್ರದೇಶಗಳು ಅದೇ ಸಮಯದಲ್ಲಿ ದೇಶೀಯ ಸಂಘರ್ಷಗಳಿಗೆ ಒಳಗಾಗಿದ್ದವು.

ಜೆರ್ಮನ್ ಭಾಷಾಶಾಸ್ತ್ರಜ್ಞ ಮಾರ್ಕ್ಸ್ ಮುಲ್ಲೆರ್ [೧೮೨೩-೧೯೦೦] ನ ನಂತರ ಹಲವು ೨೦ನೆ ಶತಮಾನದ ಜಾತಿವಾದಿ ಬರಹಗಾರರು ಮತ್ತು ರಾಜಕೀಯ ತತ್ವಜ್ಞಾನಿಗಳು ತಮ್ಮ ಸಿಧ್ದಾಂತಗಳಿಂದ ಸಾಧಿದುವುದೆನೆಂದರೆ ಸಿಂಧೂ ನಾಗರಿಕತೆಯ ಆರ್ಯನರ ದಾಳಿಯಿಂದ ಪತನಗೊಂಡಿತುಯಂದು ಆದರೆ ಈ ಸಿಧ್ದಾಂತವನ್ನು ಬಹಳಷ್ಟು ವಿಧ್ವಂಸರು ನಿರಕರಿಸಿದ್ದಾರೆ. ಇವೆಲ್ಲದರಲ್ಲಿ ಬಹಳ ಆಶ್ಚರ್ಯಕರವಾದ ಸಂಗತಿಯೆಂದರೆ ಮೊಹೆಂಜೊದಾರೊ ನಗರದ ಕೆಲವು ಸೈಟುಗಳಲ್ಲಿ ವಿಟ್ರಿಫ಼ಿಕಿಶನ್ನಿಂದ ಇಟ್ಟಿಗೆ ಮತ್ತು ಕಬ್ಬಿಣ ಕರಗಿರುವ ಪುರಾವೆ ಸಿಕ್ಕಿವೆ. ಇದೆ ರೀತಿಯ ವಿದ್ಯಮಾನವು ಸ್ಕೊಟ್ಲಂಡನಲ್ಲಿರುವ ಟ್ರೇಪಿಯನ್ ಲಾ ಪರ್ವತದಲ್ಲಿಯು ಸಹ ಯುಧ್ಧದಿಂದ ನಡೆದಿದೆಯಂದು ಗಮನಿಸಲಾಗಿದೆ. ಉಹಾಪೋಹಗಳ ಪ್ರಕಾರ ಮೊಹೆಂಜೊದಾರೊ ನಗರದ ಪತನವು ಪ್ರಾಚಿನ ಅಟೋಮಿಕ್ ಬ್ಲಾಸ್ಟ್ ನಿಂದ ಸಂಭವಿಸಿಧೆಯಂದು ಕೆಲವರು ನಮ್ಬುತ್ತಾರೆ ಮತ್ತು ಕೆಲವರು ಇದನ್ನು ನಿರಾಕರಿಸುತ್ತಾರೆ.

ಪ್ರಾಚೀನ ಭಾರತದ ಶ್ರೇಷ್ಟ ಸಾಮ್ರಜ್ಯವು:

ಪೆರ್ಶಿಯನ್ ಪ್ರಾಬಲ್ಯಯು ಭಾರತದಲ್ಲಿ ೩೩೦ ಬಿಸಿ ಇಯ ತನಕ ಇತ್ತು. ತದನಂತರ ಅಲೆಕ್ಸಾಂಡರ್ ನ ಶ್ರೆಷ್ಟನ ದಾಳಿಯಿಂದ ಪೆರ್ಶಿಯನ ರ ಪ್ರಾಬಲ್ಯವು ಕೊನೆಗೊಂಡಿತು. ತದನಂತರ ಮತ್ತೆ ವಿದೇಶೀಯರ ಪ್ರಭಾವು ಮತ್ತೊಮ್ಮೆ ಗ್ರೀಕೊ- ಬುಧ್ಧಿಸ್ಟರ ಸಂಸ್ಕೃತಿಯನ್ನು ಉತ್ತರ ಭಾರತದಲ್ಲಿ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ, ಕಲಾಕೃತಿಯಲ್ಲಿ, ಮತ್ತು ಧರಿಸುವ ಉಡುಪಿನಲ್ಲಿ ಬದಲಾಯಿಸಿತು. ಅಲೆಕ್ಸಾಂಡರ್ ನ ನಂತರ ಚಂದ್ರಗುಪ್ತ ಮೌರ್ಯ ನ ಅಧಿನದಲ್ಲಿ ಮೌರ್ಯನ್ ಸಾಮ್ರಜ್ಯದ ಉದಯವಾಯಿತು [ ರ್. ಸಿ ೩೨೧- ೨೯೭ ಬಿಸಿ ಇ]. ಈ ಮೌರ್ಯನ್ ಸಾಮ್ರಜ್ಯವು ೩ನೇ ಶತಮಾನದ ತನಕ ಭಾರತವನ್ನು ಆಳಿತು.

ಚಂದ್ರಗುಪ್ತನ ಮಗ ಬಿಂದುಸಾರ ತಮ್ಮ ಸಾಮ್ರಜ್ಯವನ್ನು ಇಡೀ ಭಾರತದಲ್ಲಿ ವಿಸ್ತರಿಸಿದನು. ತದನಂತರ ಬಿಂದುಸಾರನ ಮಗ ಅಶೋಕ ಶ್ರೇಷ್ಟ ತಮ್ಮ ತಂದೆಯ ಸಾಮ್ರಜ್ಯವನ್ನು ಎತ್ತರದ ಅಂಚಿನಲ್ಲಿ ಅರಳಿಸಿದನು. ಅಶೋಕನು ತನ್ನ ಎಂಟು ವರ್ಶದ ಆಳ್ವೀಕೇಯ ನಂತರ ಪೂರ್ವ ಭಾರತದಲ್ಲಿರು ಚಿಕ್ಕ ಪ್ರದೇಶವಾದ್ ಕಳಿಂಗವನ್ನು ಆಕ್ರಮಿಸಿಕೊಂಡನ್ನು. ಈ ಯುಧ್ದದ ಫಲಿತಾಂಶವು ಭಿಕರವಾಗಿತ್ತು. ಇದರಲ್ಲಿ ಸುಮಾರು ೧೦೦೦೦೦ ಸಾವನ್ನಪ್ಪಿದ್ದರು. ಈ ಅನಾಹುತದಿಂದ ಅಶೋಕನು ತೀವ್ರ ದುಃಖ್ಖಕ್ಕೆ ಒಳಗಾಗಿ ಬುಧ್ಧನ ಭೋಧನೆಗಳನ್ನು ಸ್ವೀಕರಿಸಿ ಅದನ್ನು ಬುಧ್ದನ ಬಸದಿಗಳ ರೂಪದಲ್ಲಿ, ೮೪೦೦೦ ಸ್ತೂಪಗಳ ರೂಪದಲ್ಲಿ ಬುಧ್ದನಿಗೆ ಕೊಡುಗೆಯ ಪ್ರಕಾರ ತನ್ನ ಇಡೀ ಸಾಮ್ರಜ್ಯದಲ್ಲಿ ವಿಸ್ತರಿಸಿದನು.

೨೯೩ ಬಿಸಿ ಇ ಅಲ್ಲಿ ಬುಧ್ಧ ನ ಜೀವನ ವನ್ನು, ಅವನ ಭೋಧನೆಗಳನ್ನು ಮತ್ತು ವಿಚಾರಗಳನ್ನು ಜನರಿಗೆ ತಿಳಿಸಲು ಬುಧ್ಧನ ಜನ್ಮಸ್ತಳವಾದ ಲುಂಬಿನಿ ಗ್ರಾಮವನ್ನು ತಿರ್ಥಯಾತ್ರೆಯ ಸ್ತಳದ ರೂಪದಲ್ಲಿ ಸ್ತಾಪಿಸಿದನು. ಅಶೋಕ ಸಾಮ್ರಟನ ಮೊದಲು ಭೌಧ್ದ ಧರ್ಮದ ಪ್ರಭಾವವು ಕಡಿಮೆಯಿತ್ತು. ಇವನಿಂದಾಗಿ ಭೌಧ್ಧ ಧರ್ಮವು ಇಡೀ ಪ್ರಪಂಚದಲ್ಲೆ ಹರಡಿತು. ಆಶೋಕನು ಭೌಧ್ಧ ಧರ್ಮವನ್ನು ಹರಡಲು ತಮ್ಮ ಸಾಮ್ರಜ್ಯದಿಂದ ಧೂತರನ್ನು ಬೇರೆ ದೇಶಗಳಿಗೆ ಕಳುಹಿಸುತ್ತಿದ್ದನು ಇದ್ದರಿಂದಾಗಿ ಇವತ್ತು ಭೌಧ್ಧ ಧರ್ಮವು ಒಂದು ಚಿಕ್ಕ ಪಂಥದಿಂದ ಒಂದು ಪ್ರಮುಖವಾದ ಧರ್ಮವಾಗಿ ಬದಲಾವಣೆಗೊಂಡಿತು.

ಮೌರ್ಯ ಸಾಮ್ರಜ್ಯದ ಪತನವು ಅಶೋಕ ಸಾಮ್ರಟನ ಮರಣದ ನಂತರ ಕೊನೆಗೊಂಡೀತು. ತದನಂತರ ಉತ್ತರ ಭಾರತದಲ್ಲಿ ಚಿಕ್ಕ- ಚಿಕ್ಕ ಸಾಮ್ರಜ್ಯದ ಉದಯವಯಿತು [ ಕುಶನ ಸಾಮ್ರಜ್ಯ]. ಈ ಯುಗದಲ್ಲಿ ರೋಮನ್ ನರ ಜೊತೆ ಭಾರತದ ವ್ಯಪಾರ ಹೆಚ್ಚಾಯಿತು. ಇದರ ಪ್ರಾಬಲ್ಯವು ಇಜಿಪ್ಟ್ ನ ರೋಮನ್ ನರ ಸಾಮ್ರಟ ಅಗಸ್ತಸ್ ಸೀಸರ್ ನಿಂದಾಗಿ ಭಾರತದಲ್ಲಿ ಗಟ್ಟಿಯಾಯಿತು. ಈ ಸಮಯದಲ್ಲಿ ಭಾರತದ ವಿವಿಧ ಸಾಮ್ರಾಜ್ಯವು ಸಾಂಸ್ಕೃತಿಕವಾಗಿ ಬೆಳೆಯಿತು. ಈ ಬೆಳೆವಣಿಗೆಯು ಗುಪ್ತ ಸಾಮ್ರಾಜ್ಯದ ಅಧಿನದಲ್ಲಿ ಬೆಳೆಯಿತು ಮತ್ತು ಇದನ್ನು ಭಾರತದ ಸುವರ್ಣ ಯುಗಯೆಂದು ಕರೆಯಲಾಗುತ್ತದೆ.

ಗುಪ್ತರ ಸಾಮ್ರಜ್ಯವು ಶ್ರೀ ಗುಪ್ತನ ಅಧಿನದಲ್ಲಿ ಸ್ತಪಿತವಯಿತು. ಇವನು ೨೪೦-೨೮೦ ಸಿ ಇ ನಲ್ಲಿ ತನ್ನ ಆಳ್ವೀಕೆಯನ್ನು ನಡೆಸಿದನು. ಶ್ರೀ ಗುಪ್ತನು ಗುಪ್ತರ ಕಾಲದಲ್ಲಿ ತನ್ನದೆಯಾದ ಸರ್ಕಾರವನ್ನು ನಿರ್ಮಿಸಿ ಅದರಲ್ಲಿ ಯೆಲ್ಲ ರೀತಿ ಸಂಸ್ಕೃತಿಯನ್ನು ಯೆತ್ತಿ ಹಿಡಿದನು. ಈ ಕಾಲದಲ್ಲಿ ತತ್ವಶಾಸ್ತ್ರದಲ್ಲಿ, ಸಾಹಿತ್ಯದಲ್ಲಿ, ಗಣಿತದಲ್ಲಿ, ವಿಜ್ಞಾನ, ವಾಸ್ತುಶಿಲ್ಪದಲ್ಲಿ, ತಂತ್ರಗ್ಯಾನದಲ್ಲಿ, ಕಲೆಯಲ್ಲಿ, ಇಂಜಿನಿರಿಂಗ್ನಲ್ಲಿ, ಧರ್ಮದಲ್ಲಿ, ಮತ್ತು ಖಗೋಳಶಾಸ್ತ್ರದಲ್ಲಿ ಅರಳಿತು. ಇದರ ಫಲಿತಾಂಶ ಭಾರತವು ವಿವಿಧ ಮಾನವ ಸಾಧನೆಯನ್ನು ಕಂಡಿತು.