ಯಮಹ ಮೋಟಾರ್ ಕಂಪನಿ
ಸಂಸ್ಥೆಯ ಪ್ರಕಾರ | ಸಾರ್ವಜನಿಕ |
---|---|
ಸ್ಥಾಪನೆ | 1 ಮೇ 1955 |
ಮುಖ್ಯ ಕಾರ್ಯಾಲಯ | ಇವಾಟಾ, ಶಿಜುವೋಕಾ ಪ್ರಾಂತ್ಯ, ಜಪಾನ್ |
ವ್ಯಾಪ್ತಿ ಪ್ರದೇಶ | ಜಾಗತಿಕ |
ಪ್ರಮುಖ ವ್ಯಕ್ತಿ(ಗಳು) | ಹಿರೊಯುಕಿ ಯನಗಿ (Chairman & Representative Director) ಯುಶಿಹಿರೊ ಹಿಡಾಕ (President & Representative Director) |
ಉದ್ಯಮ | ವಾಹನೋದ್ಯಮ(ವಾಹನ ತಯಾರಿಕೆ) |
ಉತ್ಪನ್ನ | ಮೋಟಾರ್ಸೈಕಲ್, ಬ್ಯಾಟರಿ ಚಾಲಿತ ಬೈಕ್ ಮತ್ತು ಸೈಕಲ್, ಹಾಯಿದೋಣಿ, ಗಾಲ್ಫ್ ಬಂಡಿ, ನೀರೆತ್ತುವ ಪಂಪು, ಎಟಿವಿ(ಎಲ್ಲಾ ತರದ ಭೂಪ್ರದೇಶಗಳಲ್ಲಿ ಸಂಚರಿಸಬಲ್ಲ ನಾಲ್ಕು ಚಕ್ರದ ವಾಹನ)ಗಳು |
ಉದ್ಯೋಗಿಗಳು | 52,664 (as of December 31, 2014) |
ಉಪಸಂಸ್ಥೆಗಳು | Minarelli MBK |
ಜಾಲತಾಣ | global |
ಯಮಹಾ ಮೋಟಾರ್ ಕಂಪೆನಿ,ಜಪಾನ್ ಮೂಲದ ಮೋಟಾರು ಚಾಲಿತ ಯಂತ್ರಗಳ ತಯಾರಿಕಾ ಸಂಸ್ಥೆಯಾಗಿದೆ. ದ್ವಿಚಕ್ರ ವಾಹನಗಳಾದ ಬೈಕ್, ಮೋಟಾರ್ ಸೈಕಲ್, ಬ್ಯಾಟರಿ ಚಾಲಿತ ಬೈಕ್ ಮತ್ತು ಸೈಕಲ್ ಮಾತ್ರವಲ್ಲದೆ, ಹಾಯಿದೋಣಿಗಳು, ಗಾಲ್ಫ್ ಬಂಡಿಗಳು, ನೀರೆತ್ತುವ ಪಂಪುಗಳು, ಎಟಿವಿ(ಎಲ್ಲಾ ತರದ ಭೂಪ್ರದೇಶಗಳಲ್ಲಿ ಸಂಚರಿಸಬಲ್ಲ ನಾಲ್ಕು ಚಕ್ರದ ವಾಹನ)ಗಳು- ಇವೇ ಮುಂತಾದ ಯಂತ್ರಗಳನ್ನು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ತಯಾರಿಸಿಕೊಡುವ ಬಹುರಾಷ್ಟ್ರೀಯ ಸಂಸ್ಥೆ.
ಇತಿಹಾಸ
[ಬದಲಾಯಿಸಿ]ನಿಪ್ಪಾನ್ ಗಕ್ಕಿ ಕಂಪೆನಿ ಲಿಮಿಟೆಡ್ ಈಗಿನ ಯಮಹಾ ಕಾರ್ಪೋರೇಶನ್ನಿನ ಮಾತೃಸಂಸ್ಥೆಯಾಗಿದೆ. ಇದನ್ನು ೧೮೮೭ರಲ್ಲಿ ಟೋರಾಕುಸು ಯಮಹಾ ಎಂಬವರು ಶಿಜುವೋಕಾ ಪ್ರಾಂತ್ಯದ ಹಮಾಮಾತ್ಸು ಎಂಬಲ್ಲಿ ಸ್ಥಾಪಿಸಿದರು. ಪ್ರಾರಂಭದಲ್ಲಿ ಈ ಸಂಸ್ಥೆಯು ಸಂಗೀತೋಪಕರಣಗಳನ್ನು ತಯಾರಿಸುತ್ತಿತ್ತು. (ಈಗಲೂ ತಯಾರಿಸುತ್ತಿದೆ. ವಿವಿಧ ಬಗೆಯ ಕೀಬೋರ್ಡುಗಳು, ಸಿಂತಸೈಝರ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ). ಅಕ್ಟೋಬರ್ ೧೨, ೧೮೯೭ರಂದು ಈ ಕಂಪೆನಿಗೆ ಕಾನೂನುಬದ್ಧ ಮಾನ್ಯತೆ ದೊರೆಯಿತು[೧]. ಎರಡನೆಯ ಮಹಾಯುದ್ಧ ಮುಗಿದ ನಂತರ, ಕಂಪೆನಿಯ ಅಧ್ಯಕ್ಷರಾಗಿದ್ದ ಜೆನಿಚಿ ಕವಾಕಾಮಿ ಅವರು, ಕಂಪೆನಿಯಲ್ಲಿದ್ದ ಯುದ್ಧ ಸಮಯದ ಉತ್ಪಾದನಾ ಯಂತ್ರೋಪಕರಣಗಳನ್ನು ಮತ್ತು ಲೋಹಶಾಸ್ತ್ರದಲ್ಲಿ ಕಂಪನಿಯು ಹೊಂದಿದ್ದ ಪರಿಣತಿಯನ್ನು ಮೋಟಾರ್ ಸೈಕಲ್‌ಗಳ ತಯಾರಿಕೆಗೆ ಬಳಸಲು ಚಿಂತಿಸಿದರು. ನವೆಂಬರ್ ೭, ೧೯೫೩ರಂದು, ತನ್ನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಒಂದು ನಿರ್ದೇಶನವನ್ನು ನೀಡಿ, ಒಂದು ಮೋಟಾರ್‌ಸೈಕಲ್ ಎಂಜಿನ್ನಿನ ಮೂಲ ಮಾದರಿಯನ್ನು ತಯಾರಿಸಲು ಸೂಚಿಸಿದರು. ಮೋಟಾರ್‌ಸೈಕಲ್ ಎಂಜಿನ್ನಿನ ಮೂಲ ಮಾದರಿಯ ಮೇಲೆ ಹಲವು ಬಗೆಯ ಸಂಶೋಧನೆಗಳನ್ನು ನಡೆಸಲಾಯಿತು ಮತ್ತು ಒಂದು ವರ್ಷದಲ್ಲಿ ಪೂರ್ಣ ಪ್ರಮಾಣದ ಮೋಟಾರ್‌ಸೈಕಲ್ ಉತ್ಪಾದನೆಯನ್ನು ಪ್ರಾರಂಭಿಸುವ ಗುರಿ ಹೊಂದಲಾಗಿತ್ತು[೨].
ವಿಶ್ವಯುದ್ಧಗಳೆಲ್ಲ ಮುಗಿದು, ಜಪಾನ್ ಚೇತರಿಕೆಯ ಹಾದಿಯಲ್ಲಿ ಸಾಗುತ್ತಿದ್ದ ಹೊತ್ತಿಗೆ ಅಸಂಖ್ಯಾತ ಕಂಪನಿಗಳು ಮೋಟಾರ್‌ಸೈಕಲ್ ಉದ್ಯಮವನ್ನು ಪ್ರವೇಶಿಸಿ, ಮಾರುಕಟ್ಟೆಯಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಾ ಯಶಸ್ವಿಯಾಗುವ ಹಂತದಲ್ಲಿ ಇದ್ದವು. ಆ ಹೊತ್ತಿಗಾಗಲೇ, ಮೋಟಾರ್‌ಸೈಕಲ್ ತಯಾರಿಕಾ ಕಂಪನಿಗಳ ಸಂಖ್ಯೆ ೨೦೪ಕ್ಕೆ ಏರಿತ್ತು! ಹೀಗಾಗಿ, ಈಗಾಗಲೇ ಕಾಲಿಟ್ಟಿರುವ ಕಂಪೆನಿಗಳ ನಡುವೆ, ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ನೆಲೆ ಊರಲು ಸಾಧ್ಯ ಇದೆಯೇ ಎಂಬ ಬಗ್ಗೆ ಅಧ್ಯಕ್ಷ ಕವಾಕಾಮಿ ಮತ್ತವರ ಅವರ ತಂಡದೊಳಗೆ ಅನುಮಾನಗಳು ಎದ್ದವು[೨].
ಮೋಟಾರ್‌ಸೈಕಲ್ ಉದ್ಯಮಕ್ಕೆ ಪ್ರವೇಶಿಸಲು ನಿರ್ಧಾರವೇನೋ ಆಯಿತು, ಆದರೆ ಆರಂಭದಲ್ಲಿ ಮೋಟಾರ್‌ಸೈಕಲ್ ಮಾಡೆಲ್‍ಗಳ ಅಭಿವೃದ್ಧಿಗೆ ಯಾವ ಮಾದರಿಯನ್ನು ಆಧಾರವಾಗಿ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಗೊಂದಲಗಳು ಕಾಡಿದವು. ಮೂಲ ಮಾದರಿಯ ಮೇಲೆ ಹಲವು ಬಗೆಯ ಸಂಶೋಧನೆಗಳು ನಡೆಯುತ್ತಿರುವಂತೆಯೇ, ಯುರೋಪಿಯನ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದ ವಿವಿಧ ಮೋಟಾರ್‌ಸೈಕಲ್‍ಗಳನ್ನು ಅವುಗಳ ವಿನ್ಯಾಸ, ಇಂಧನ ದಕ್ಷತೆ, ಮೈಲೇಜುಗಳ ಬಗೆಗೆ ಚರ್ಚೆ ಮಾಹಿತಿ ವಿನಿಮಯಗಳು ನಡೆಯುತ್ತಿದ್ದವು. ತೀವ್ರ ಚರ್ಚೆಗಳಾದ ನಂತರ ಕೊನೆಗೆ, ಜರ್ಮನ್ ಕಂಪನಿ ಡಿಕೆಡಬ್ಲ್ಯೂ ನಿರ್ಮಿಸಿದ ೧೨೫ ಸಿಸಿ ಸಾಮರ್ಥ್ಯದ, ಆರ್‌ಟಿ೧೨೫ ಹೆಸರಿನ ಮೋಟಾರ್‌ಸೈಕಲನ್ನು ಆಧರಿಸಿ ಉತ್ಪಾದನೆಯನ್ನು ಪ್ರಾರಂಭಿಸಲು ತೀರ್ಮಾನಿಸಲಾಯಿತು[೨].
ಆ ಸಮಯದಲ್ಲಿ ವಿಶ್ವದ ಹೆಚ್ಚಿನ ಮೋಟರ್‌ಸೈಕಲ್‌ಗಳು ಕಪ್ಪು ಬಣ್ಣದ್ದಾಗಿದ್ದವು, ಆದರೆ ಯಮಹಾ ಕಂಪೆನಿಯು ನಿರ್ಮಿಸಿದ ಹೊಸ ಮೋಟರ್‌ಸೈಕಲ್, ಕೆನೆ ಬಣ್ಣದೊಂದಿಗೆ ಕೆಂಪು-ಕಂದು ಬಣ್ಣದ ಅವಳಿ ವಿನ್ಯಾಸವನ್ನು ಹೊಂದಿತ್ತು. ರಾಷ್ಟ್ರೀಯ ಲಲಿತಕಲೆ ಮತ್ತು ಸಂಗೀತ ವಿಶ್ವವಿದ್ಯಾಲಯ ಟೋಕಿಯೋದ ಸಹಾಯಕ ಪ್ರಾಧ್ಯಾಪಕರಾಗಿದ್ದ ಇವಾಟಾರೊ ಕೊಯಿಕೆ ಅವರ ನೇತೃತ್ವದ ವಿದ್ಯಾರ್ಥಿಗಳು ಈ ಬಣ್ಣದ ಸಂಯೋಜನೆಯನ್ನು ಅಭಿವೃದ್ಧಿಪಡಿಸಿದ್ದರು. ಇದಲ್ಲದೆ, ಇದರ ಎಂಜಿನ್ ವಿನ್ಯಾಸ, ಲಘುವಾದ ಹೊಡೆತದಲ್ಲಿಯೇ ಚಾಲೂ ಆಗುವ ಕ್ರಮ, ಕಡಿಮೆ ಸಮಯದಲ್ಲಿ ವೇಗವರ್ಧನೆ ಮತ್ತು ಆರಾಮದಾಯಕ ನಿರ್ವಹಣೆ- ಈ ಎಲ್ಲಾ ಅಂಶಗಳಿಂದ ಜನರ ಗಮನ ಸೆಳೆಯಿತು. ಮತ್ತು ಈ ಮೋಟರ್‌ಸೈಕಲ್ ಅಕಾಟೊಂಬೊ(ಜಪಾನೀ ಶಬ್ಧ) ಅಥವಾ ರೆಡ್ ಡ್ರಾಗನ್‌ಫ್ಲೈ ಎಂಬ ಅಡ್ಡಹೆಸರನ್ನು ಗಳಿಸಿತು[೨].
ಫೆಬ್ರವರಿ ೧೧, ೧೯೫೫ ರಂದು, ಯಮಹಾ ಮೋಟಾರ್ ಕಂಪೆನಿಯ ಮೊತ್ತಮೊದಲ ಮೋಟರ್‌ಸೈಕಲ್ ವೈಎ೧(YA1) ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ೨ ಸ್ಟ್ರೋಕ್ ಜೊತೆಗೆ ೧೨೫ ಸಿಸಿ ಶಕ್ತಿಯ ಇಂಜಿನ್‍ಅನ್ನು ಈ ಮೋಟರ್‌ಸೈಕಲ್ ಹೊಂದಿತ್ತು. ೧೨೫ ಸಿಸಿ ಶಕ್ತಿಯ ತರಗತಿಯಲ್ಲಿ ಇತರ ಮೋಟಾರ್‌ಸೈಕಲ್‌ಗಳ ಸರಾಸರಿ ಬೆಲೆ ೧೧೦,೦೦೦–೧೨೦,೦೦೦ ಯೆನ್‍ನಷ್ಟು ಇತ್ತು. ವೈಎ೧ ಬೆಲೆಯನ್ನು ೧೩೮,೦೦೦ ಯೆನ್‍ಗಳಿಗೆ ನಿಗದಿಪಡಿಸಲಾಗಿತ್ತು. ಕಂಪನಿಯು ಮೋಟರ್‌ಸೈಕಲ್ ಗುಣಮಟ್ಟದ ಬಗ್ಗೆ ಸಂಪೂರ್ಣ ವಿಶ್ವಾಸ ಹೊಂದಿದ್ದರೂ, ಬಿಡುಗಡೆಯಾದ ಆರಂಭಿಕ ಅವಧಿಯಲ್ಲಿ ಮಾರಾಟದಲ್ಲಿ ಹೇಳಿಕೊಳ್ಳುವಂಥ ಸಾಧನೆಗಳು ಕಾಣಲಿಲ್ಲ. ಆದರೆ ಮಾರಾಟ ಮಳಿಗೆಗಳ ಸಂಖ್ಯೆ ಕ್ರಮೇಣ ಹೆಚ್ಚಾಯಿತು ಮತ್ತು ಅಂತಿಮವಾಗಿ ಉತ್ಪಾದನೆಯು ಹೆಚ್ಚಾಗಲು ಪ್ರಾರಂಭಿಸಿತು, ಏಕೆಂದರೆ ಬೈಕ್‌ನ ಹೊಸ ವಿನ್ಯಾಸದ ಬಣ್ಣ ಸಂಯೋಜನೆ ಮತ್ತು ವಿನ್ಯಾಸ, ಕಡಿಮೆ ತೂಕ ಮತ್ತು ಸುಲಭವಾದ ನಿರ್ವಹಣೆ ಮತ್ತು ಅದರ ಉತ್ತಮ ಪ್ರಾರಂಭದ ಕಾರ್ಯಕ್ಷಮತೆ , ಇವೆಲ್ಲ ಆ ಸಮಯದಲ್ಲಿ ಆಕರ್ಷಣೀಯ ಅಂಶಗಳಾಗಿದ್ದವು[೨].
ಜುಲೈ ೧, ೧೯೫೫ರಲ್ಲಿ ಯಮಹಾ ಕಾರ್ಪೋರೇಶನ್ನಿನ ಒಂದು ಭಾಗವನ್ನು ಬೇರ್ಪಡಿಸಿ, ಯಮಹಾ ಮೋಟಾರ್ ಕಂಪೆನಿ ಎಂಬ ಹೆಸರಿನಲ್ಲಿ ಸ್ಥಾಪಿಸಲಾಯಿತು. ಹೊಸ ಕಂಪೆನಿಯ ಪ್ರಧಾನ ಕಛೇರಿ ಶಿಜುವಾಕಾ ಪ್ರಾಂತ್ಯದ ಹಮಾಕಿತಾದಲ್ಲಿ ಇತ್ತು ಮತ್ತು ೩೦ ಮಿಲಿಯನ್ ಯೆನ್‌ಗಳಷ್ಟು ಪ್ರಾರಂಭಿಕ ಬಂಡವಾಳವನ್ನು ಹೊಂದಿತ್ತು. ಜೆನಿಚಿ ಕವಾಕಾಮಿ ಅವರೇ ಅದರ ಸ್ಥಾಪಕಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು[೨].
ಯಮಹಾ ಪ್ರಸ್ತುತ ಮಾದರಿಗಳು
[ಬದಲಾಯಿಸಿ]ಯಮಹಾ ಮೋಟರ್ ಇಂಡಿಯಾ ವ್ಯಾಪಕ ಶ್ರೇಣಿಯ ಮೋಟಾರು ಬೈಕುಗಳು ಮತ್ತು ದ್ವಿಚಕ್ರ ವಾಹನ ಸ್ಕೂಟರ್‌ಗಳಲ್ಲಿ ವ್ಯವಹರಿಸುತ್ತದೆ. ಪ್ರಸ್ತುತ ಮಾದರಿಗಳು ಮತ್ತು ಅವುಗಳ ಆರಂಭಿಕ ಬೆಲೆಗಳು ಇಲ್ಲಿವೆ:
YZF-R15 ಆವೃತ್ತಿ 2.0 (149.8 ಸಿಸಿ) - ರೂ. 1,17,373ಫೇಜರ್ (153 ಸಿಸಿ) - ರೂ. 80,910ಫೇಜರ್ ಆವೃತ್ತಿ 2.0 (149 ಸಿಸಿ) - ರೂ. 86,805ಎಫ್ Z ಡ್-ಎಸ್ (153 ಸಿಸಿ) - ರೂ .78,250ಎಫ್ Z ಡ್-ಎಸ್ ಎಫ್‌ಐ ಆವೃತ್ತಿ 2.0 (149 ಸಿಸಿ) - 73,250 ರೂಎಫ್ Z ಡ್ (153 ಸಿಸಿ) - ರೂ. 72,385 ರೂಎಫ್ Z ಡ್ ಎಫ್‌ಐ ಆವೃತ್ತಿ 2.0 (149 ಸಿಸಿ) - ರೂ. 79,596SZ-S & SZ-RR (153 ಸಿಸಿ) - ರೂ. 72,532 ರೂಎಸ್ Z ಡ್ - ಆರ್‌ಆರ್ ಆವೃತ್ತಿ 2.0 (149 ಸಿಸಿ) - ರೂ. 65,300 ರೂಸಲೂಟೊ (125 ಸಿಸಿ) - ರೂ. 52,000ಎಸ್‌ಎಸ್125 (123 ಸಿಸಿ) - ರೂ. 59,243ವೈಬಿಆರ್ 125 (123 ಸಿಸಿ) - ರೂ. 54,593ವೈಬಿಆರ್ 110 (106 ಸಿಸಿ) - ರೂ. 48,218 ರೂಕ್ರಕ್ಸ್ (106 ಸಿಸಿ) - ರೂ .41,086.
ಪ್ರಶಸ್ತಿಗಳು ಮತ್ತು ಮಾನ್ಯತೆಗಳು
[ಬದಲಾಯಿಸಿ]- 2009 ರ ಅಪೊಲೊ ಟೈರ್ಸ್ ಮತ್ತು ಆಟೋ ಇಂಡಿಯಾ ಅತ್ಯುತ್ತಮ ಬ್ರಾಂಡ್ ಪ್ರಶಸ್ತಿ.
- ಯಮಹಾ ವಿಎಂಎಕ್ಸ್ 2010 ರ ಜಿಗ್ವೀಲ್ಸ್ ಸಿಬಿಯು ಸೂಪರ್ಬೈಕ್ ಅನ್ನು ಗೆದ್ದಿದೆ.
- ಇಟಿ ಜಿಗ್ವೀಲ್ಸ್ ಯಮಹಾ ಎಸ್ Z ಡ್-ಎಕ್ಸ್ ಗೆ 2010 ರ ವರ್ಷದ ಬೈಕ್ ಅನ್ನು ನೀಡಿತು.
- ಇಟಿ ಜಿಗ್ವೀಲ್ಸ್ 2010 ರ ಅತ್ಯುತ್ತಮ ಕಾರ್ಯನಿರ್ವಾಹಕ 125 ಸಿಸಿ ಪ್ರಯಾಣಿಕರ ಮೋಟಾರ್ಸೈಕಲ್ ಅನ್ನು ಯಮಹಾ ವೈಬಿಆರ್ -125 ಗೆ ನೀಡಿತು.
- ಬೈಕ್ ಇಂಡಿಯಾ ಅವಾರ್ಡ್ಸ್ 2011 ರಲ್ಲಿ ಯಮಹಾ ಎಸ್ Z ಡ್-ಆರ್ 150 ಸಿಸಿಗಿಂತ ಹೆಚ್ಚಿನ ವರ್ಷದ ಮೋಟಾರ್‌ಸೈಕಲ್ ಗೆದ್ದಿದೆ.
- 2012 ರಲ್ಲಿ ನಡೆದ ಎನ್‌ಡಿಟಿವಿ ಕಾರ್ ಮತ್ತು ಬೈಕ್ ಪ್ರಶಸ್ತಿಗಳಲ್ಲಿ ಯಮಹಾ ಮೋಟಾರ್ ಇಂಡಿಯಾ ವರ್ಷದ ದ್ವಿಚಕ್ರ ವಾಹನ ತಯಾರಕ ಪ್ರಶಸ್ತಿ ಗೆದ್ದುಕೊಂಡಿತು.
- ಯಮಹಾ ಆರ್ 15 ಆವೃತ್ತಿ 2.0 ಬೈಕ್ ಇಂಡಿಯಾ ಪ್ರಶಸ್ತಿಗಳಲ್ಲಿ 2012 ರ ವರ್ಷದ ಬೈಕ್ ರೂಪಾಂತರವನ್ನು ಗೆದ್ದುಕೊಂಡಿತು.
- ಬೈಕ್ ಇಂಡಿಯಾ ಅವಾರ್ಡ್ಸ್ 2015 ರಲ್ಲಿ ಯಮಹಾ ಆಲ್ಫಾ ವರ್ಷದ ಸ್ಕೂಟರ್ ಪ್ರಶಸ್ತಿ ಪಡೆದರು.
ಭಾರತದಲ್ಲಿ ಯಮಹಾ ಮೋಟಾರ್ ತಯಾರಿಕಾ ಘಟಕಗಳು
[ಬದಲಾಯಿಸಿ]ಯಮಹಾ ಮೋಟಾರ್ ಕಂಪನಿ ೧೯೮೫ರಲ್ಲಿ ಭಾರತವನ್ನು ಪ್ರವೇಶಿಸಿತು. ಭಾರತ ಯಮಹಾ ಮೋಟಾರ್ ಪ್ರೈವೇಟ್ ಲಿಮಿಟೆಡ್ 2001 ರಲ್ಲಿ ಜಪಾನ್‌ನ ವೈಎಂಸಿಯ 100 ಶೇಕಡ ಸಬ್ಸಿಡರಿಯಾಗಿ ಮಾರ್ಪಟ್ಟಿತು. ಇದು ಕಾರ್ಪೊರೇಟ್ ಯೋಜನೆ ,ಕಾರ್ಯತಂತ್ರ, ವ್ಯವಹಾರ ಯೋಜನೆ ,ವಿಸ್ತರಣೆ, ಗುಣಮಟ್ಟದ ನಿಯಂತ್ರಣ ಮತ್ತು ಭಾರತದಲ್ಲಿನ ಜಪಾನಿನ ಉತ್ಪಾದಕರ ವ್ಯವಹಾರದ ನಿಯಂತ್ರಣವನ್ನು ನೋಡಿಕೊಳ್ಳುತ್ತದೆ. ಭಾರತದ 29 ರಾಜ್ಯಗಳಲ್ಲಿ ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿ 800 ಕ್ಕೂ ಹೆಚ್ಚು ಯಮಹಾ ಗ್ರಾಹಕ ಸೇವಾ ಕೇಂದ್ರಗಳಿವೆ. ಮೊದಲ ಯಮಹಾ ಮೋಟಾರ್ಸೈಕಲ್ YA -1.1955 ಜನವರಿಯಲ್ಲಿ ನಿಪ್ಪಾನ್ ಗಕ್ಕಿಯ ಹಮಾಕಿತಾ ಕಾರ್ಖಾನೆಯನ್ನು ನಿರ್ಮಿಸಿದರು.ಜೆನಿಚಿ ಯಮಹಾ ಮೋಟಾರ್ ಕಂ ಲಿಮಿಟೆಡ್ ಅನ್ನು ಜುಲೈ 1, 1955 ರಂದು ಸ್ಥಾಪಿಸಿದರು.ಆರಂಭದಲ್ಲಿ ಸುಮಾರು 274 ಉದ್ಯೋಗಿಗಳಿದ್ದರು. ನೇಮಕಗೊಂಡ ಉದ್ಯೋಗಿಗಳು ತಿಂಗಳಿಗೆ ಸುಮಾರು 200 ಮೋಟಾರ್ ಸೈಕಲ್ ಗಳನ್ನು ನಿರ್ಮಿಸುತ್ತಿದ್ದರು.ಅದೇ ವರ್ಷ ಜಪಾನ್‌ನಲ್ಲಿ ನಡೆದ ಎರಡು ದೊಡ್ಡ ಓಟದ ಸ್ಪರ್ಧೆಗಳಲ್ಲಿ ಯಮಹಾ ತನ್ನ ಹೊಸದಾದ YA-1 ಅನ್ನು ಪ್ರವೇಶಿಸಿತು. ಅವರು 3 ನೇ ಮೌಂಟ್ಫ್ಯೂಜಿ ಆರೋಹಣ ರೇಸ್ ನಲ್ಲಿ ಮತ್ತು 1 ನೇ ಅಸಮಾ ಹೈಲ್ಯಾಂಡ್ಸ್ ರೇಸ್ ನಲ್ಲಿ ಜಯವನ್ನುಗಳಿಸಿದ್ದರು. ಈ ಚೊಚ್ಚಲ ರೇಸ್‌ಗಳಲ್ಲಿ ಯಮಹಾ 125 ಸಿಸಿ ತರಗತಿಯನ್ನು ಗೆದ್ದರು ಹಾಗೂ ಮುಂದಿನ ವರ್ಷ ಅಸಮಾ ಹೈಲ್ಯಾಂಡ್ಸ್ ರೇಸ್‌ನ ಲೈಟ್ ಮತ್ತು ಅಲ್ಟ್ರಾ-ಲೈಟ್ ತರಗತಿಗಳಲ್ಲಿ YA -1 ಮತ್ತೆ ಗೆದ್ದರು.
ಭಾರತದಲ್ಲಿ ದ್ವಿಚಕ್ರ ವಾಹನಗಳ ತಯಾರಿಕೆಗಾಗಿ ಯಮಹಾ ಮೂರು ಸ್ಥಾನವನ್ನು ಹೊಂದಿರುತ್ತದೆ. ಹರಿಯಾಣದ ಫರಿದಾಬಾದ್‌ನಲ್ಲಿ,ಉತ್ತರ ಪ್ರದೇಶದ ಸೂರಜ್‌ಪುರದಲ್ಲಿ ಮತ್ತು ತಮಿಳುನಾಡಿನ ಚೆನ್ನೈನಲ್ಲಿ , ಈ ಮೂರು ಸ್ಥಾವರಗಳಿಂದಲೇ ಯಮಹಾ ದೇಶೀಯ ಮತ್ತು ವಿದೇಶಿಯ ಮಾರುಕಟ್ಟೆಗಳಿಗೆ ಮೋಟರ್ ಸೈಕಲ್‌ಗಳು ಮತ್ತು ಅವುಗಳ ಭಾಗಗಳನ್ನು ಮಾರಾಟ ಮಾಡುತ್ತಿದ್ದರು.ಫರಿದಾಬಾದ್ ಸ್ಥಾವರಗಳನ್ನು 1965 ರಲ್ಲಿ , ಸೂರಜ್‌ಪುರ ಸ್ಥಾವರಗಳು 1984 ರಲ್ಲಿ ಮತ್ತು ಚೆನ್ನೈ ಸ್ಥಾವರಗಳನ್ನು 2014 ರಲ್ಲಿ ಪ್ರಾರಂಭಿಸಿದರು. ಭಾರತದಲ್ಲಿ ಯಮಹಾ ತಯಾರಿಸಿದ ಸ್ಕೂಟರ್‌ಗಳು ಯಮಹಾ ರೇ ಮತ್ತು ಅದರ ನವೀಕರಣ ಯಮಹಾ ರೇ Z , ಆಲ್ಫಾ, ಫ್ಯಾಸಿನೊ. ಟೊಯೋಟಾ 2000 ಜಿಟಿ (1967) ನ ಅಭಿವೃದ್ಧಿ ಮತ್ತು ಉತ್ಪಾದನೆಯಿಂದ ಪ್ರಾರಂಭವಾಗಿದ್ದ ಯಮಹಾ ಈಗ ಇತರ ತಯಾರಕರ ವಾಹನಗಳಿಗೆ ಎಂಜಿನ್‌ಗಳನ್ನು ನಿರ್ಮಿಸಿ ಕೊಡುತ್ತಿದ್ದಾರೆ.ಯಮಹಾ ಟೊಯೋಟಾ 4 ಎ-ಜಿಇ ಎಂಜಿನ್‌ನಿಂದ ಸಿಲಿಂಡರ್ ಹೆಡ್ ಅನ್ನು ತಯಾರಿಸಿದ್ದರು. ಇಂಡಿಯಾ ಯಮಹಾ ಮೋಟಾರ್ ಪ್ರೈವೇಟ್ ಲಿಮಿಟೆಡ್ (ಐವೈಎಂ) ಭಾರತದ ಚೆನ್ನೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಯಮಹಾ ಮೋಟಾರ್ ಕಂಪನಿಯು ಸಂಪೂರ್ಣ ಭಾರತೀಯ ಅಂಗಸಂಸ್ಥೆಯಾಗಿದೆ. 1985ರಲ್ಲಿ ಯಮಹಾ ಮೋಟಾರ್ ಕಂಪನಿ ಜಪಾನ್ನಲ್ಲಿ ಎಸ್ಕೋರ್ಟ್ಸ್ ಗ್ರೂಪ್‌ನ ಜಂಟಿ ಉದ್ಯಮವಾಗಿ ಭಾರತಕ್ಕೆ ತನ್ನ ಆರಂಭಿಕ ಪ್ರಯತ್ನವನ್ನು ಮಾಡಿತು. ಆಗಸ್ಟ್ 2001 ರಲ್ಲಿ ಇದು ಯಮಹಾ ಮೋಟಾರ್ ಕ೦ ಲಿಮಿಟೆಡ್ ಜಪಾನ್ (ವೈಎಂಸಿ) ಯ 100 ಶೇಕಡ ಅಂಗಸಂಸ್ಥೆಯಾಯಿತು. 2008 ರಲ್ಲಿ, ಮಿಟ್ಸುಯಿ & ಕಂ, ಲಿಮಿಟೆಡ್ ಭಾರತದಲ್ಲಿ ಜಂಟಿ-ಹೂಡಿಕೆದಾರರಾಗಲು ವೈಎಂಸಿಯೊಂದಿಗೆ ಒಪ್ಪಂದ ಮಾಡಿಕೊಂಡರು. ಇದು FZ, SZ, Saluto, Fazer, ಮತ್ತು YZF ಸೇರಿದಂತೆ ದೇಶೀಯ ಬಳಕ ಹಾಗೂ ರಫ್ತುಗಾಗಿ ಹಲವಾರು ಮೋಟಾರ್‌ಸೈಕಲ್‌ಗಳನ್ನು ಉತ್ಪಾದಿಸಿತ್ತು.
ಉಲ್ಲೇಖಗಳು
[ಬದಲಾಯಿಸಿ]- ↑ "Brand and History". yamaha.com. Yamaha. Retrieved 27 December 2020.
- ↑ ೨.೦ ೨.೧ ೨.೨ ೨.೩ ೨.೪ ೨.೫ "Our Stories". global.yamaha-motor.com. Yamaha Motor. Retrieved 27 December 2020.
<r>https://www.yamaha-motor-india.com/about-foundinghistory.html</r>
<r>https://global.yamaha-motor.com/about/history/</r[ಶಾಶ್ವತವಾಗಿ ಮಡಿದ ಕೊಂಡಿ]>