ಸದಸ್ಯ:117.235.114.55/sandbox
ಲೋಹಾಭಗಳು
[ಬದಲಾಯಿಸಿ]ಲೋಹಾಭಗಳೆಂದರೆ ಲೋಹ ಮತ್ತು ಅಲೋಹಗಳ ಮಧ್ಯದ ಸ್ಥಿತಿಯ ಅಥವಾ ಅವೆರಡರ ಗುಣಲಕ್ಷಣಗಳನ್ನು ಹೊಂದಿರುವ ಮೂಲವಸ್ತುಗಳು. ಇವುಗಳ ವಿಭಿನ್ನವಾದ ಮತ್ತು ವಿಚಿತ್ರವಾದ ಗುಣದಿಂದಾಗಿ ಖಚಿತವಾದ ವ್ಯಾಖ್ಯೆಯನ್ನು ನೀಡುವುದು ಕಷ್ಟ. ಆದರೂ ಸಹ ಮೂಲಭೂತವಸ್ತುಗಳ ಕೊಷ್ಠಕದಲ್ಲಿ ತಮ್ಮದೇ ಆದ ಸ್ಥಾನವನ್ನು ಪಡೆದಿವೆ.
ಉದಾಹರಣೆಗಳು
[ಬದಲಾಯಿಸಿ]ಮುಖ್ಯವಾಗಿ ಗುರಿತಿಸಲ್ಪಡುವ ಲೋಹಾಭಗಳು
[ಬದಲಾಯಿಸಿ]ಸಾಮಾನ್ಯವಾಗಿ ಗುರುತಿಸಲ್ಪಡುವ ಆರು ಮುಕ್ಯವಾದ ಲೋಹಾಭಗಳೆಂದರೆ
- ಬೋರಾನ್
- ಸಿಲಿಕಾನ್
- ಜರ್ಮೇನಿಯಂ
- ಆರ್ಸೆನಿಕ್
- ಆಂಟಿಮೊನಿ
- ಟೆಲ್ಲರಿಯಂ
ಲೊಹಾಭಗಳ ಗುಣಗಳನ್ನು ತೋರುವ ಇತರ ಮೂಲವಸ್ತುಗಳು
[ಬದಲಾಯಿಸಿ]- ಇಂಗಾಲ
- ಅಲ್ಯೂಮಿನಿಯಂ
- ಸೆಲೆನಿಯಂ
- ಪೊಲೊನಿಯಂ
- ಆಸ್ಟಾಟಿನ್
ಆವರ್ತಕ ಕೋಷ್ಠದಲ್ಲಿ ಲೋಹಾಭಗಳ ಸ್ಥಾನ
[ಬದಲಾಯಿಸಿ]ನಿಖರವಾದ ಆವರ್ತಕ ಕೋಷ್ಟಕದಲ್ಲಿ ಲೋಹಾಭಗಳು 'ಪಿ' ಬ್ಲಾಕ್ ನ ಕರ್ಣದುದ್ದಕ್ಕೂ ಕಂಡು ಬರುತ್ತವೆ. ಈ ಗುಂಪು ಬೋರಾನ್ ನಿಂದ ಆರಂಭವಾಗಿ ಆರಂಭವಾಗಿ ಆಸ್ಟಾಟಿನ್ ನೊಂದಿಗೆ ಮುಕ್ತಾಯಗೊಳ್ಳುತ್ತದೆ. ಆದರೆ ಕೆಲವೊಂದು ಆವರ್ತಕ ಕೋಷ್ಠಕಗಳು ಲೋಹಗಳು ಮತ್ತು ಅಲೋಹಗಳ ಮಧ್ಯೆ ಇವುಗಳನ್ನು ಪ್ರತ್ಯೇಕಿಸುವ ಗೆರೆಯನ್ನು ಹೊಂದಿರುತ್ತವೆ. ಲೋಹಾಭಗಳು ಈ ಗೆರೆಯ ಪಕ್ಕದಲ್ಲಿ ಇರತ್ತವೆ.
ಲೋಹಾಭಗಳ ಗುಣಲಕ್ಷಣಗಳು
[ಬದಲಾಯಿಸಿ]ಲೋಹಾಭಗಳು ಸಾಮಾನ್ಯವಾಗಿ ನೋಡಲು ಲೋಹಗಳಂತೆ ಕಾಣುತ್ತವೆ. ಆದರೆ ಅವು ಕಠಿಣವಾಗಿದ್ದು ಉತ್ತಮ ವಿದ್ಯುತ್ ವಾಹಕಗಳಾಗಿರುತ್ತವೆ. ಆದರೆ ರಾಸಾಯನಿಕವಾಗಿ ಅವು ಸಾಮಾನ್ಯವಾಗಿ ಅಲೋಹಗಳಂತೆ ವರ್ತಿಸುತ್ತವೆ. ಅವು ಲೋಹಗಳೊಂದಿಗೆ ಸೇರಿ ಮಿಶ್ರ ಲೋಹಗಳನ್ನು ಉಂಟುಮಾಡುತ್ತವೆ. ಇವುಗಳ ಹೆಚ್ಚಿನ ಗುಣಲಕ್ಷಣಗಳು ಲೋಹ ಮತ್ತು ಅಲೋಹಗಳ ಮಧ್ಯದ ಸ್ಥಿತಿಯನ್ನು ಅಥವಾ ಎರಡನ್ನೂ ಹೋಲುತ್ತವೆ. ಅವುಗಳು ಕಠಿಣವಾದವುಗಳಾದ್ದರಿಂದ ಅವುಗಗಳನ್ನು ಲೋಹಗಳಾಗಿ ಮತ್ತು ಅಲೋಹಗಳಾಗಿ ಬಳಸಲು ಸಾಧ್ಯವಿಲ್ಲ. ಆದರೆ ಅವುಗಳನ್ನು ಮಿಶ್ರಲೋಹಗಳ ತಯಾರಿಕೆಯಲ್ಲಿ, ರಾಸಾಯನಿಕ ಕ್ರಿಯೆಯಲ್ಲಿ ವೇಗವರ್ಧಕಗಳಾಗಿ, ಗಾಜಿನ ತಯಾರಿಕೆಯಲ್ಲಿ, ಸೆಮಿ ಕಂಡಕ್ಟರ್ ಗಳು ಇತ್ಯಾದಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.