ಸದಸ್ಯ:ಹಸಿವು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಹಸಿವು:- ಹಸಿವು:- ಮನುಷ್ಯನ ಹೊಟ್ಟೆ ಹಸಿವು. ಪ್ರಪಂಚದ ಎಲ್ಲಾ ತಾಯಂದಿರಿಗೆ ಜನನವಾಗುವ ಮಗು ಅಳುತ್ತದೆ ಭೂಮಿಗೆ ಬಂದ ಕಂದನ ಮೊದಲ ಅಳುವಿನಿಂದಲೇ ಶುರುವಾಗುವುದು ಹಸಿವು ಪ್ರಪಂಚದಲ್ಲಿ ೮೮ ಸಾವಿರಕೋಟಿ ಜೀವರಾಶಿಗಳು ಇವೆ ಎಲ್ಲಾ ಜೀವರಾಶಿಗಳಿಗೂ ಹಸಿವು ಸಾಮಾನ್ಯ ಬುದ್ದಿಜೀವಿ ಎನಿಸಿಕೊಂಡಿರುವ

ಮಾನವ ಮೊದಲನೆಯವನಾಗಿರುತ್ತಾನೆ ಮಾನವ ಹಸಿವಾಗುವುದನ್ನು ಹೇಳಿಕೊಳ್ಳುತ್ತಾನೆ ಪ್ರಾಣಿ, ಪಕ್ಷಿ ಹಾಗೂ ಜಲಚರ ಉಭಯವಾಸಿಗಳಿಗೂ ಹಸಿವು ಅನ್ನುವುದು ಇರುತ್ತದೆ ಅವುಗಳು ಹಸಿವನ್ನು ಹೇಳಿಕೊಳ್ಳಲಾರವು ಪ್ರಾಣಿಗಳು ಆಹಾರಕ್ಕಾಗಿ ಒಂದು ಪ್ರಾಣಿಯನ್ನು ಇನ್ನೊಂದು ಪ್ರಾಣಿ ಹಿಡಿದು ಭಕ್ಷಿಸುತ್ತದೆ ಇದನ್ನು ಜೀವನ ಚಕ್ರ ಎಂತಲೂ ಕರೆಯಬಹುದು ಮೊದಲು ಮನುಷ್ಯನು ಪ್ರಾಣಿಗಳನ್ನು ಭೇಟೆಯಾಡಿ ಹಸಿ ಮಾಂಸವನ್ನು ಭಕ್ಷಿಸುತ್ತಿದ್ದನು ಮಾನವ ಆಧುನಿಕವಾಗಿ ಬದಲಾಗುತ್ತಾ ಹೋಸ ಆಲೋಚನೆಗಳಿಂದ ಹೋಸ ಬದುಕನ್ನು ಕಂಡುಕೊಂಡನು ಮೊದಲು ಆದಿಮಾನವ ನಂತರ ಬುದ್ದಿವಂತ ಮಾನವ ಹೇಗಾಗುತ್ತಾನೆ ಇವೆಲ್ಲವೂ ನಮ್ಮ ಪೂರ್ವಜರು ಆದಿಮಾನವ ಕಂಡುಕೊಂಡ ಆಹಾರ ಪದ್ದತಿ .

ಆದಿ ಕಾಲದಿಂದಲೂ ಮಾನವ ಹಸಿವನ್ನು ನೀಗಿಸಿಕೊಳ್ಳಲು ಹಸಿ ಮಾಂಸ ಗಡ್ಡೆ ಗೆಣಸು ಸೊಪ್ಪು ತರಕಾರಿ ಇವುಗಳನ್ನು ತಿನ್ನಲು ಶುರುಮಾಡಿದ ಆದಿಮಾನವ ತನ್ನದೇ ಶೈಲಿಯಲ್ಲಿ ಉಡುಪುಗಳನ್ನು ಧರಿಸುತಿದ್ದ ಎಲೆ ತೊಗಟೆ ಚರ್ಮ ಇತ್ಯಾದಿಗಳನ್ನು ಬಳಸುತಿದ್ದ ತದನಂತರ ಕಾಡಿನ ಗುಹೆಗಳಲ್ಲಿ ವಾಸಿಸುತಿದ್ದ ಮಳೆ,ಗಾಳಿ ಬಿಸಿಲು ಇವುಗಳಿಂದ ತನ್ನ ರಕ್ಷಣೆಗಾಗಿ ಗುಹೆಯನ್ನು ಸೇರುತಿದ್ದ ಮನುಷ್ಯನು ಆಹಾರಕ್ಕಾಗಿ ಕಾಡುಗಳಲ್ಲಿ ಹುಡುಕಾಟ ನೆಡೆಸುತಿದ್ದ.ಹಸಿವನ್ನು ನೀಗಿಸಿಕೊಳ್ಳಲು ಅಲೆಯುತಿದ್ದ ಮನುಷ್ಯ ಆದುನಿಕವಾಗಿ ಬದಲಾಗುತ್ತಾ ಹೋಸ ಆಲೋಚನೆಗಳಿಂದ ಮಾನವ ಹೋಸ ಬದುಕನ್ನು ಕಂಡುಕೊಂಡನು ಮನುಷ್ಯ ಹಸಿ ಮಾಂಸ ಹಾಗೂ ಗಡ್ಡೆ ಗೆಣಸುಗಳನ್ನು ಹಸಿಯಾಗಿ ತಿನ್ನುತಿದ್ದ ಆನಂತರ ಬೇಯಿಸಿ ತಿನ್ನುವ ಕ್ರಮವನ್ನು ಕಾಡಿನಲ್ಲಿ ಇರುವ ಜನರು ಕಂಡುಕೊಂಡರು ಹೇಗೆಂದರೆ ಆ ಸಮಯದಲ್ಲಿ ಬೆಂಕಿ ಇರಲಿಲ್ಲ .

ಕಾಡ್ಗಿಚ್ಚು ಎಂದರೆ ಕಾಡಿನಲ್ಲಿ ಬೆಂಕಿ ಉದ್ಬವವಾಗಿರುವ ಸಮಯದಲ್ಲಿ ಮನುಷ್ಯ ಆಹಾರ ಹುಡುಕಿಕೊಂಡು ಅಲೆಯುತ್ತಿರುವಾಗ ಗಡ್ಡೆ ಗೆಣಸುಗಳು ಬೆಂಕಿಯಲ್ಲಿ ಸುಟ್ಟು ಬೆಂದು ಹೋಗಿದ್ದವು ಹಸುವಿನಿಂದ ಮಾನವ ಅದನ್ನೆ ತಿನ್ನಲು ಶುರುಮಾಡಿದ ಅದು ರುಚಿಯಾಗಿ ಕಂಡಿತು ಅಂದಿನಿಂದ ಬೇಯಿಸಿ ತಿನ್ನಲು ಹುಡುಕಾಟ ಶುರುಮಾಡಿದ ಬೆಂಕಿಯನ್ನು ತಯಾರಿಸಲು ನಾನ ಪ್ರಯತ್ನಗಳನ್ನು ಮಾಡಿದ ಆ ಸಮಯದಲ್ಲಿ ಬಿರುಗಾಳಿ ಕಾಣಿಸಿಕೊಂಡಿತು ಮನುಷ್ಯ ನೋಡನೋಡುತ್ತಲೇ ಮರ ಗಿಡ ಬೆಟ್ಟ ಗುಡ್ಡ ಇವುಗಳೆಲ್ಲವೂ ಉರುಳತೊಡಗಿದವು ಬಂಡೆಗಳು ಸಹ ಒಂದು ಬಂಡೆಯು ಇನ್ನೊಂದು ಬಂಡೆಗೆ ಬಡಿದಾಗ ಅದರ ರಭಸಕ್ಕೆ ಬೆಂಕಿಯ ಕಿಡಿಯೊಂದು ಕಾಣಿಸಿಕೊಂಡಿತು ಆ ಬೆಂಕಿಯ ಕಿಡಿಯು ಪಕ್ಕದಲ್ಲೆ ಇರುವ ಒಣಗಿದ ಮರದ ರಂಬೆ ಹಾಗೂ ಎಲೆಗಳ ಮೇಲೆ ಬಿದ್ದಾಕ್ಷಣ ಬೆಂಕಿಯು ಕಾಣಿಸಿಕೊಂಡಿತು ಆ ಬೆಂಕಿಯನ್ನೇ ಕಾಡ್ಗಿಚ್ಚು ಎನ್ನುತ್ತಾರೆ ಇದರಿಂದ ಭಯಗೊಂಡ ಮಾನವ ಗುಹೆ ಸೇರಿಕೊಳ್ಳುತ್ತಾನೆ ನಂತರ ಮಳೆ ಬರುತ್ತದೆ ಮಾನವನಿಗೆ ಮತ್ತೆ ಹಸಿವು ಶುರುವಾಗುತ್ತದೆ ಹೊರಗಡೆ ನೋಡುವಾಗ ಮಳೆಯು ಮಾಯವಾಗಿತ್ತು ಬೆಂಕಿಯು ಮಾಯವಾಗಿತ್ತು ಇದನ್ನರಿತ ಮಾನವ ಬೆಂಕಿಯನ್ನು ತಯಾರಿಸಲು ನಾನ ಪ್ರಯತ್ನಗಳನ್ನು ಮಾಡಿದ ರೀತಿ ಕಲ್ಲಿನಿಂದ ಕಲ್ಲಿಗೆ ಹೊಡೆದರೆ ಬೆಂಕಿ ಉತ್ಪತ್ತಿಯಾಗುತ್ತದೆ ಎಂಬುದನ್ನು ತಿಳಿದುಕೊಂಡನು.

ನಂತರ ಬೆಂಕಿಯನ್ನು ಆರಿಸಲು ನೀರನ್ನು ಬಳಸಬೇಕು ಏಂಬುವುದನ್ನು ತಿಳಿದುಕೊಂಡನು ಹಸಿವನ್ನು ನೀವಾರಿಸಿಕೊಳ್ಳಲು ನೀರು,ಗಾಳಿ ಬೆಳಕು ಆಹಾರ ಇವುಗಳೆಲ್ಲವೂ ಅಗತ್ಯವಾದುದು ಹಸಿವೆಂಬುವುದು ಜನ್ಮದಿಂದ ಹಿಡಿದು ಮರಣದವರೆಗೂ ಹಸಿವಿರುತ್ತದೆ ಹೊಟ್ಟೆ ಇರುವವರೆಗೂ ಹಸಿವು ನಿಲ್ಲದು ಕ್ರಮೇಣ ಮಾನವ ಬುದ್ದಿವಂತನಾಗಿ ಎಲ್ಲವನ್ನೂ ತಿಳಿದುಕೊಂಡನು.ದೇಹವನ್ನು ಮುಚ್ಚಲು ಬಟ್ಟೆ ಬೇಕು ಹಸಿವನ್ನು ನೀವಾರಿಸಿಲು ಆಹಾರ ಬೇಕು ಬಾಯಾರಿಕೆಗೆ ನೀರು ಬೇಕು ಉಸಿರಾಡಲು ಗಾಳಿ ಬೇಕು ಕತ್ತಲೆಯನ್ನು ಹೋಗಲಾಡಿಸಲು ಬೆಳಕು ಬೇಕು ಇವೆಲ್ಲವನ್ನೂ ವೈಜನಿಕವಾಗಿ ತಿಳಿಸಬೇಕಾದರೆ ಮೊದಲು ಆಹಾರ ತೆರಳುವ ಜಾಗವೇ ಬಾಯಿ

ಬಾಯಿ : ಮೂಗು, ಆಹಾರದ ವಾಸನೆಯನ್ನು ಗ್ರಹಿಸುತ್ತದೆ. ಕಣ್ಣು ಬಣ್ಣವನ್ನು ನೋಡುತ್ತದೆ. ಆಗ ನನ್ನಲ್ಲಿ ನೀರು ದ್ರವಿಸಲು ಪ್ರಾರಂಭವಾಗುತ್ತದೆ. ಅದು ಬರಿಯ ನೀರಲ್ಲ, ಅದನ್ನು ಜೊಲ್ಲು ಎಂದು ಕರೆಯುತ್ತಾರೆ. ದಿನಕ್ಕೆ ಸುಮಾರು ಎರಡು ಲೀಟರಿನಷ್ಟು ಜೊಲ್ಲು ತಯಾರಾಗುತ್ತದೆ. ಜೀರ್ಣಕ್ರಿಯೆ ಹೊಟ್ಟೆಯಲ್ಲಿ ಪ್ರಾರಂಭವಾಗುವುದೆಂದು ಬಹಳ ಜನರ ನಂಬಿಕೆ. ಇಲ್ಲ, ಅದು ಪ್ರಾರಂಭವಾಗುವುದು ನನ್ನಿಂದ. ಜೀರ್ಣಕ್ರಿಯೆಯಲ್ಲಿ ಎರಡು ವಿಧ. ೧) ಯಾಂತ್ರಿಕ ಕ್ರಿಯೆ ೨) ರಾಸಾಯಿನಿಕ ಕ್ರಿಯೆ

ಯಾಂತ್ರಿಕ ಕ್ರಿಯೆಯು ಆಹಾರವನ್ನು ನುರಿಸಿ ನುಣ್ಣಗೆ ಮಾಡುವುದು. ಇದು ಜೀರ್ಣಕ್ರಿಯೆಯ ಮೊದಲ ಹಂತ. ಇದನ್ನು ನನ್ನಲ್ಲಿರುವ ಹಲ್ಲುಗಳು ಮಾಡುವುವು.

ಜೀರ್ಣಕ್ರೀಯೆ -ಯಾವುದೆ ಮನುಷ್ಯನಲ್ಲಿ ಅಥವಾ ಪ್ರಾಣಿಗಳಲ್ಲಿ ಜೀರ್ಣಕ್ರೀಯೆ ಮುಖ್ಯವಾದ ಅಂಶ ಜೀರ್ಣಕ್ರೀಯೆ ಆದರೆ ಮಾತ್ರ ಹಸಿವಾಗುತ್ತದೆ ಇಲ್ಲವಾದಲ್ಲಿ ಹಸಿವಾಗುವುದಿಲ್ಲ ಇವುಗಳಿಗೆ ಹಲವಾರು ಕಾರಣಗಳಿರುತ್ತವೆ ಹಸಿವಾದಗ ತಿನ್ನಲು ಮತ್ತು ಅಗಿಯಲು ಹಲ್ಲುಗಳು ಬೇಕಾಗುತ್ತದೆ ಹಲ್ಲುಗಳಲ್ಲಿ ಬಾಚಿ ಹಲ್ಲುಗಳು, ಕೋರೆಹಲ್ಲು, ದವಡೆಹಲ್ಲುಗಳು ಕೊರೆ ಹಲ್ಲುಗಳು- ಸಾಮಾನ್ಯವಾಗಿ ಪ್ರಾಣಿಗಳಲ್ಲಿ ಕೋರೆ ಹಲ್ಲುಗಳು ಇರುತ್ತದೆ ಕೋರೆ ಹಲ್ಲುಗಳು ಇರುವ ಪ್ರಾಣಿಗಳು ಅಂದರೆ ಸಿಂಹ ಹುಲಿ ಚಿರತೆ ನರಿ ತೋಳ ಇತ್ಯಾದಿ ಇವುಗಳು ಮಾಂಸಹಾರಿಗಳಾಗಿರುತ್ತವೆ ಬಾಚಿ ಹಲ್ಲುಗಳು ದವಡೆ ಹಲ್ಲುಗಳು:- ಬಾಚಿ ಹಲ್ಲುಗಳು ದವಡೆ ಹಲ್ಲುಗಳು ಇರುವ ಪ್ರಾಣಿಗಳು ಅಂದರೆ ಹಸು ಮೇಕೆ ಕುರಿ ಜಿಂಕೆ ಇತ್ಯಾದಿಗಳು ಇವುಗಳು ಸಸ್ಯಹಾರಿಗಳಾಗಿರುತ್ತವೆ ಮನುಷ್ಯ ಬುದ್ದಿ ಇರುವ ಪ್ರಾಣಿ ಮನುಷ್ಯನಿಗೆ ಈ ಎಲ್ಲಾ ತರಹದ ಹಲ್ಲುಗಳು ದೇಹ ರಚನೆಗೆ ತಕ್ಕಂತೆ ದೇಹ ರಚನೆಯಾಗಿದೆ ಅದುದರಿಂದ ಮನುಷ್ಯನು ಮಾಂಸಹಾರಿ ಹಾಗು ಸಸ್ಯಹಾರಿಯಾಗಿರುತ್ತಾನೆ

ಜಠರ- ಅ ದೊಡ್ಡ ಜಠರದಿಂದ ಸಣ್ಣಕರುಳಿನ ಮಧ್ಯಭಾಗದಲ್ಲಿ ಸಿಕ್ಕಿ ನಜ್ಜುಗುಜ್ಜಾಗುತ್ತಿರುವ ಹತ್ತು ಅಂಗುಲ ಉದ್ದದ ಸಣ್ಣ ಅಂಗವೇ ಜಠರ. ಜಠರದಲ್ಲಿ ದ್ರವರೂಪಕ್ಕೆ ಬಂದ ಆಹಾರ, ಅದಕ್ಕೆ ಚೈಮ್ ಎನ್ನುತ್ತಾರೆ, ಇದು ಪೈಲೋರಿಕ್ ಸ್ಪಿಂಕ್ ಸ್ಟರ್ ಮೂಲಕ ನನ್ನಲ್ಲಿಗೆ ಬರುತ್ತದೆ. ಅದಿಲ್ಲದಿದ್ದರೆ ಆ ದ್ರವದ ಜತೆಯಲ್ಲಿ ಆಮ್ಲವೂ ಸಹ ನುಗ್ಗಿಬಿಡುತ್ತಿತ್ತು. ಹಾಗಾಗಿದ್ದರೆ ನಾನು ಜಠರ ಸತ್ತೇಹೋಗುತ್ತಿದ್ದೆ. ಆದ್ದರಿಂದ ನಿಧಾನವಾಗಿ ಆಹಾರವು ಮಾತ್ರ ಜಠರದಲ್ಲಿಗೆ ತಳ್ಳಲ್ಪಡುತ್ತದೆ. ಜಠರದಲ್ಲಿ ಮೇದೋಜೀರಕಗ್ರ್ಅಂಥಿಯಿಂದ ಬಂದ ಮೇದೋಜೀರಕ ರಸ, ಪಿತ್ತಕೋಶದಿಂದ ಬಂದ ಪಿತ್ತ ರಸ, ಇವೆಲ್ಲವೂ ಸೇರುತ್ತವೆ. ಬಾಯಿಯಲ್ಲಿ, ಜಠರದಲ್ಲಿ ಜೀರ್ಣವಾಗದೇ ಉಳಿದಿದ್ದ ಆಹಾರ ಜಠರದಲ್ಲಿ ಜೀರ್ಣವಾಗಲು ಪ್ರಾರಂಭವಾಗುವುದು.

ಜಠರದಲ್ಲಿ ಪಚನಕ್ರಿಯೆ ಕ್ಷಾರಮಾಧ್ಯಮದಲ್ಲಿ ಮುಖ್ಯವಾಗಿ ಮೇದಸ್ಸಿನ ಜೀರ್ಣಕ್ರಿಯೆಯ ಪ್ರಾರಂಭ. ಮನುಷ್ಯ ಜಠರಕ್ಕೆ ಕೊಟ್ಟಷ್ಟು ಪ್ರಾಮುಖ್ಯತೆಯನ್ನು ಬಹುಶಃ ಶರೀರದ ಯಾವ ಅಂಗಕ್ಕೂ ಕೊಟ್ಟಿಲ್ಲ. ಅದಕ್ಕೇ ಅನೇಕ ಗಾದೆಗಳು. "ಎಲ್ಲಾ ಮಾಡುವುದು ಹೊಟ್ಟೆಗಾಗಿ" "ಜಠರ-ದೇಹದ ಕಮ್ಮಟ". "ಜಠರ-ಹೋಟೆಲಿದ್ದಂತೆ-ಬರುವವರೂ ಹೋಗುವವರೂ ಸದಾ ಇರುತ್ತಾರೆ." ಜಠರವನ್ನು ಮೊದಲು ಸಾಮಾನ್ಯವಾಗಿ ಹೊಗಳುವವರೇ ಹೆಚ್ಚು. ಕಡೆಗೆ ಹೇಳುತ್ತಾರೆ, "ಅಯ್ಯೋ! ಹೊಟ್ಟೆ! ನಿನ್ನನ್ನು ನಂಬಿ ನಾ ಕೆಟ್ಟೆ." ಇವರನ್ನು ಕೆಡಿಸುವುದು ನನ್ನ ಉದ್ದೇಶ್ಯವಲ್ಲ. ನಿಜವಾಗಿ ಅವರೇ ಜಠರವನ್ನು ಕೆಡಿಸುತ್ತಾರೆ. ಹೊರಗೆ ಕಾಣುವ ಹೊಟ್ಟೆ ಜಠರವನ್ನಲ್ಲ, ಜಠರ ಅದರೊಳಗಿನ ಬೆಲೂನಿನಂತಹ ಒಂದು ಅಂಗ ಜಠರದ ಶಕ್ತಿ ಸಾಮಾನ್ಯವಾಗಿ ೨ ಲೀಟರ್ ವಸ್ತು ಹಿಡಿಸುವಷ್ಟು. ನೀವು ಅದಕ್ಕಿಂತ ಜಾಸ್ತಿ ತುರುಕುತ್ತೀರಿ ಅನ್ನುವ ವಿಷಯ ಬೇರೆ. ಜಠರವು ಸ್ಥಿತಿಸ್ಥಾಪಕತೆಯಿರುವ ಮಾಂಸದ ಚೀಲ.ಜಠರಕ್ಕೆ ಹಲ್ಲುಗಳಿಲ್ಲ. ಹಲ್ಲುಗಳನ್ನು ಉಪಯೋಗಿಸಿ ಆಹಾರವನ್ನು ನುರಿಸಿದ್ದರೆ .ಜಠರಕ್ಕೆ ನೀವು ಉಪಕಾರ ಮಾಡಿದಂತಾಗುತ್ತದೆ.

ಆಹಾರವನ್ನು .ಜಠರ ಕಡೆಯುತ್ತೇನೆ. ಅದರಿಂದ ಕೊಂಚ ನುರಿಸಿ ಆಹಾರವನ್ನು ದ್ರವರೂಪಕ್ಕೆ ತರಬಲ್ಲೆ. .ಜಠರದ ಪದರದಲ್ಲಿರುವ ಅನೇಕ ಗ್ರಂಥಿಗಳು ಸುಮಾರು ೩ ಲೀಟರ್ ನಷ್ಟು ಹೈಡ್ರೋಕ್ಲೋರಿಕ್ ಆಮ್ಲವನ್ನು ಸುರಿಸುತ್ತವೆ. .ಜಠರದಲ್ಲಿ ತಯಾರಾಗುವ ಕಿಣ್ವ ಪೆಪ್ಸಿನ್. ಇದು ಪ್ರೊಟೀನನ್ನು ಪಾಲಿಪೆಪ್ ಟೈಡ್ ಎಂಬ ರೂಪಕ್ಕೆ ಒಡೆಯುತ್ತದೆ. ಬಾಯಿಯಲ್ಲಿ ಪ್ರಾರಂಭವಾಗದಿದ್ದ ಸಸಾರಜನಕದ ಜೀರ್ಣಕ್ರಿಯೆ ಇಲ್ಲಿ ಪ್ರಾರಂಭವಾಗುವ ರೀತಿ ಇದು. .ಜಠರಕ್ಕೆ ಮಾಂಸಖಂಡಗಳ ತರಂಗದಂತಹ ಕ್ರಿಯೆಯಿಂದ ಆಹಾರವು ನುಣ್ಣಗೆ ದೋಸೆಯ ಹಿಟ್ಟಿನಂತಾಗುತ್ತದೆ. ಆಹಾರ ೩-೪ ಗಂಟೆಗಳ ಕಾಲ .ಜಠರದಲ್ಲಿ ಉಳಿಯುತ್ತದೆ. ಎಣ್ಣೆಯಲ್ಲಿ ಕರಿದ, ರುಚಿರುಚಿಯಾದ ಬೆಳಗಿನ ತಿಂಡಿ ಪೂರಿಯನ್ನು ಊಟದ ಹೊತ್ತಾದರೂ .ಜಠರದಿಂದ ಅರಗಿಸಲು ಸಾಧ್ಯವಿಲ್ಲ. .ಜಠರಕ್ಕೆ ತೊಂದರೆ ಕೊಡುವ ಮತ್ತೊಂದು ವಸ್ತು ಐಸ್ ಕ್ರೀಂ. ಅದು ನನ್ನ ಶಾಖವನ್ನು ಒಮ್ಮೆಗೆ ೯೯ಡಿಗ್ರಿ 'ಎಫ್' ನಿಂದ ೨೦ಡಿಗ್ರಿ 'ಎಫ್' ಗೆ ಇಳಿಸಿಬಿಡುತ್ತದೆ. ಇದರಿಂದ .ಜಠರದ ಕೆಲಸ ತಣ್ಣಗಾಗುತ್ತದೆ, ಅಂದರೆ ನಿಂತು ಹೋಗುತ್ತದೆ. ಮಕ್ಕಳೇ, ಐಸ್ ಕ್ರೀಂ ತಿನ್ನುವ ಮುಂಚೆ ಕೊಂಚ ಯೋಚಿಸಿ!

ಸಣ್ಣ ಕರುಳು : ನಾನು ನಿನ್ನ ಸಣ್ಣ ಕರುಳು. ಜಠರದಿಂದ ಕೆಳಗೆ ಹಾವಿನಂತೆ ಸುತ್ತಿಕೊಂಡು ಇಪ್ಪತ್ತನಾಲ್ಕು ಅಡಿ ಇದ್ದೇನೆ. ನೀನು ನನಗೆ ಆಹಾರ ಕೊಡುತ್ತೇನೆಂದು ಬೀಗುತ್ತೀಯೆ. ನಿಜವಾಗಿ ನಾನು ನಿನಗೆ ಆಹಾರ ಕೊಡುತ್ತಿದ್ದೇನೆ! ನೀನು ತಿಂದ ಆಹಾರ ಹಾಗೆಯೇ ರಕ್ತ ಸೇರಿದರೆ ನಿಮಿಷಾರ್ಧದಲ್ಲಿ ನಂಜಾಗಿ ಸಾಯುತ್ತೀಯೆ. ಆ ಆಹಾರವನ್ನು ರಕ್ತವಾಗುವಂತೆ ಮಾಡುವವ ನಾನು. ಆಹಾರ ರಕ್ತಕ್ಕೆ ಸೇರಿದ ನಂತರ ಶರೀರದ ಕೋಟ್ಯಾಂತರ ಜೀವಕೋಶಗಳಿಗೆ ಶಕ್ತಿ. ಬಾಯಿಯಿಂದ ಜೀರ್ಣಕ್ರಿಯೆ ಪ್ರಾರಂಭವಾದರೂ ಅದನ್ನು ಅಂತ್ಯಗೊಳಿಸುವವನು ನಾನು. ಆಹಾರದಲ್ಲಿನ ಕೊಬ್ಬನ್ನು ಫ್ಯಾಟಿ ಆಮ್ಲ ಮತ್ತು ಗ್ಲಿಸರಾಲ್ ಗಳಾಗಿ ಒಡೆಯುತ್ತೇನೆ.

ಸಸಾರಜನಕ ವಸ್ತುಗಳನ್ನು ಅಮೈನೋ ಆಮ್ಲಗಳಾಗಿ ಬೇರ್ಪಡಿಸುತ್ತೇನೆ. ಪಿಷ್ಠವನ್ನು ಗ್ಲೂಕೋಸ್ ಆಗಿ ಪರಿವರ್ತಿಸುತ್ತೇನೆ. ನಾರು-ಬೇರುಗಳನ್ನು ಬಿಟ್ಟು ಉಳಿದ ಎಲ್ಲಾ ಆಹಾರಾಂಶಗಳನ್ನು ರಕ್ತಕ್ಕೆ ಸೇರಿಸುತ್ತೇನೆ. ನಾನು ಹೊರಕ್ಕೆ ನೂಕುವ ವಸ್ತುಗಳಲ್ಲಿ ಅರ್ಧದಷ್ಟು ಸತ್ತ ಬ್ಯಾಕ್ಟೀರಿಯಾಗಳೂ, ಮತ್ತರ್ಧ, ದಾರಿಯುದ್ದಕ್ಕೂ ಸಣ್ಣ ಕರುಳು ಸ್ರವಿಸಿದ ಆಮ ಜತೆಗೆ ನಾನು ಅರಗಿಸಿಕೊಳ್ಳಲಾರದ ವಸ್ತುಗಳು.ಡಿಯೋಡಿನಂ ಬಿಟ್ಟನಂತರ ನನ್ನ ರಾಜ್ಯಭಾರ. ಡಿಯೋದಿನಂ ಮುಂದೆ ೮ ಅಡಿ ಉದ್ದದ ಜೆಜುನಂ. ಅದು ನಾಲ್ಕು ಸೆಂ.ಮಿ. ವ್ಯಾಸದಿಂದ ಕೂಡಿದೆ. ಅಲ್ಲಿಂದ ಮುಂದೆ ಹನ್ನೆರಡಡಿ, ಅದಕ್ಕಿಂತಲೂ ಕಿರಿದಾದ ಇಲಿಯಮ್, ನನ್ನಲ್ಲಿ ಮಿಣಿ ಜೀವಿಗಳು(ಬ್ಯಾಕ್ಟೀರಿಯಾ) ವೃದ್ಧಿಯಾಗಲಾರವು. ಕಾರಣ, ಜಠರದ ಆಮ್ಲ ಅವುಗಳನ್ನು ಕೊಂದಿರುತ್ತವೆ. ನೀನು ತೆಗೆದುಕೊಂಡ ಒಂದು ಲೋಟ ನೀರು ಹತ್ತು ನಿಮಿಷಗಳಲ್ಲಿ ನನ್ನಲ್ಲಿಗೆ ಬಂದಿರುತ್ತದೆ. ಆದರೆ ಘನಾಹಾರ ನಾಲ್ಕು ಘಂಟೆ ತೆಗೆದುಕೊಳ್ಳುತ್ತದೆ. ಮೇದೋಜೀರಕ ಗ್ರಂಥಿ ಪ್ರತ್ಯಾಮ್ಲೀಯ ರಸಗಳನ್ನು ಉತ್ಪತ್ತಿಮಾಡಿ ನನ್ನ ಮುಂಭಾಗಕ್ಕೆ ರವಾನಿಸುತ್ತದೆ. ಇದು ಸುಮಾರು ೧ ಲೀಟರಿನಷ್ಟಿರುತ್ತದೆ. ಆದ್ದರಿಂದ ಆಮ್ಲೀಯ ಗುಣದ ರಸ ತನ್ನ ಆಮ್ಲೀಯತೆಯನ್ನು ಕಡಿಮೆ ಮಾಡಿಕೊಂಡು ಪ್ರತ್ಯಾಮ್ಲೀಯ ಗುಣವನ್ನು ಹೊಂದಿರುತ್ತದೆ.

ಆ ಕೆಲಸ ನಿಂತರೆ ಹುಣ್ಣು ಪ್ರಾರಂಭವಾಗುತ್ತದೆ. ಮುಕ್ಕಾಲು ಭಾಗ, ಹುಣ್ಣಿಗೆ ಡಿಯೋಡಿನಂ ಒಳ್ಳೆಯ ಫಲವತ್ತಾದ ಜಾಗ. ನನ್ನಲ್ಲಿ ತಯಾರಾಗುವ ಕಿಣ್ವಗಳು ಹಲವು. ಟ್ರಿಪ್ಸಿನ್, ಚೈಮೋಟ್ರಿಪ್ಸಿನ್, ಕಾರ್ಬಾಕ್ಸಿಪೆಪ್ ಟೈಡ್ಸ್, ಪ್ಯಾಂಕ್ರಿಯಾಟಿಕ್ ಲಿಪೇಸ್, ಪ್ಯಾಂಕ್ರಿಯಾಟಿಕ್ ಅಮೈಲೇಸ್.ನನ್ನಲ್ಲಿ ೨ ಲೀ.ನಷ್ಟು ಲಾಲಾರಸ, ೩ ಲೀ.ನಷ್ಟು ಗ್ಯಾಸ್ಟ್ರಿಕ್ ರಸ, ಪಿತ್ತಜನಕಾಂಗದಿಂದ ೧ ಲೀ.ನಷ್ಟು ಪಿತ್ತರಸ, ಮತ್ತು ೨ ಲೀ.ನಷ್ಟು ನನ್ನ ಸ್ವಂತ ರಸಗಳು ಹೀಗೆ ಒಟ್ಟು ೮ ಲೀ.ನಷ್ಟು ರಸಗಳು ಸಂಗ್ರಹವಾಗುತ್ತವೆ.ನನ್ನಲ್ಲಿ ೨ ಲೀ.ನಷ್ಟು ಲಾಲಾರಸ, ೩ ಲೀ.ನಷ್ಟು ಗ್ಯಾಸ್ಟ್ರಿಕ್ ರಸ, ಪಿತ್ತಜನಕಾಂಗದಿಂದ ೧ ಲೀ.ನಷ್ಟು ಪಿತ್ತರಸ, ಮತ್ತು ೨ ಲೀ.ನಷ್ಟು ನನ್ನ ಸ್ವಂತ ರಸಗಳು ಹೀಗೆ ಒಟ್ಟು ೮ ಲೀ.ನಷ್ಟು ರಸಗಳು ಸಂಗಮವಾಗುತ್ತವೆ.ನನ್ನ ಒಳಭಾಗ ರೇಷ್ಮೆಯಂತೆ ನುಣುಪಾಗಿರುವಂತೆ ತೋರುತ್ತದೆ. ಆದರೆ ವಸ್ತುಸ್ಥಿತಿ ಹಾಗಿಲ್ಲ. ಕೈ ಬೆರಳಿನಂತಹ ವಿಲ್ಲೈ ಎಂಬ ಸೂಕ್ಷ್ಮ ಅಂಗಗಳಿಂದ ನನ್ನ ಒಳಭಾಗ ಆವೃತವಾಗಿದೆ. ಈ ವಿಲ್ಲೈಗಳು ಆಹಾರದಲ್ಲಿನ ಪಿಷ್ಠ, ಸಾರಜನಕ, ಕೊಬ್ಬು, ಜೀವಸತ್ವಗಳು, ಲವಣಗಳು ಮುಂತಾದವುಗಳನ್ನು ಹೀರಿ ರಕ್ತಕ್ಕೆ ಸೇರಿಸುವ ಕಾರ್ಯಮಾಡುತ್ತವೆ.ನಾನು ಹೊಟ್ಟೆಯ ಗೋಡೆಗೆ ಬಲವಾಗಿ ಬಿಗಿಯಲ್ಪಟ್ಟಿಲ್ಲ. ಆದ್ದರಿಂದ ಎರಡು ರೀತಿಯ ಚಲನೆ ಸಾಧ್ಯ. ನನ್ನಲ್ಲಿಯ ಮಾಂಸಖಂಡಗಳು ಅಲೆಯ ರೂಪದ ಚಲನೆಯನ್ನು ಉಂಟುಮಾಡುತ್ತವೆ. ಮತ್ತೊಂದು ರೀತಿಯ ಮಾಂಸಖಂಡಗಳು ಜಿಗಿತವನ್ನು ಉಂಟುಮಾಡುತ್ತವೆ. ಇವೆರಡು ರೀತಿಯ ಚಲನೆಯಿಂದ ದ್ರವರೂಪದ ಆಹಾರ ಸ್ವಲ್ಪ ಸ್ವಲ್ಪವೇ ನಿಧಾನವಾಗಿ ಮುಂದಕ್ಕೆ ತಳ್ಳಲ್ಪಡುತ್ತದೆ. ಆಹಾರ, ನನ್ನಲ್ಲಿ ೩ ರಿಂದ ೮ ಗಂಟೆಗಳ ಕಾಲ ಉಳಿದು, ರಕ್ತಕ್ಕೆ ಸೇರಲು ಯೋಗ್ಯವಾದ ಅಂಶ ರಕ್ತಕ್ಕೆ ಸೇರಿ ಉಳಿದದ್ದು ಮುಂದಕ್ಕೆ ದೂಡಲ್ಪಡುತ್ತದೆ.ನನ್ನ ಹೆಸರು ಸಣ್ಣಕರುಳೆಂದಿರಬಹುದು. ಆದರೆ ನಾನು ಮಡುವ ಕೆಲಸ ಸಣ್ಣದಲ್ಲ!

ದೊಡ್ಡ ಕರುಳು : ದೊಡ್ಡ ಕರುಳು. ಅಡ್ಡಕರುಳು, ಉದ್ದಕರುಳು, ನೆಟ್ಟಕರುಳು ಎಂದು ಮೂರು ಭಾಗವಾಗಿ ಒಟ್ಟು ಆರಡಿ ಇದೆ..ದೊಡ್ಡ ಕರುಳಿನ ತಮ್ಮ ಸಣ್ಣ ಕರುಳು ಆಹಾರಾಂಶವನ್ನು ಹೀರಿ ಉಳಿದ ದ್ರವದ ರೂಪವನ್ನು ತಳ್ಳುತ್ತಾನೆ. .ದೊಡ್ಡ ಕರುಳು ಅಡ್ಡಕರುಳು ಮತ್ತು ಉದ್ದಕರುಳಿನಲ್ಲಿ ನೀರನ್ನು ಹೀರಿ ರಕ್ತಕ್ಕೆ ಕಳುಹಿಸುತ್ತದೆ ನೀರನ್ನು ಹೀರಿ ರಕ್ತಕ್ಕೆ ಏಕೆ ಕಳುಹಿಸಬೇಕು? ಅದು ಬರೀ ನೀರಲ್ಲ, ಬಾಯಿಯಿಂದ ಪ್ರಾರಂಭವಾಗಿ ದಾರಿಯುದ್ದಕ್ಕೂ ಸೇರಿಸಿಕೊಂಡು ಬಂದ ಅತ್ಯಮೂಲ್ಯ ಜೀವರಸಗಳು ಅದರಲ್ಲಿದೆ. ಲವಣಗಳ ಅಗರವೇ ಅದಾಗಿದೆ. ಅದನ್ನು ರಕ್ತಕ್ಕೆ ಕಳುಹಿಸದಿದ್ದರೆ ಕೆಲವೇ ಗಂಟೆಗಳಲ್ಲಿ ಸಾವು ಬರಬಹುದು. ಈ ನೀರನ್ನು ಹೀರುವ ಕ್ರಿಯೆಗೆ ನನಗೇನೂ ಅವಸರವಿಲ್ಲ. ಹನ್ನೆರಡರಿಂದ ಇಪ್ಪತ್ತುನಾಲ್ಕು ಗಂಟೆಗಳನ್ನು ತೆಗೆದುಕೊಳ್ಳುತ್ತೇನೆ, ನಾನು ನೀರನ್ನು ಹೀರದೆ ಹಾಗೆಯೇ ಹೊರಕ್ಕೆ ನೂಕಿದ್ದರೆ ಏನಾಗುತ್ತಿತ್ತು ಎಂದು ಕೇಳಿದೆಯಲ್ಲವೇ? ಹಾಗೂ ಒಮ್ಮೊಮ್ಮೆ ಮಾಡುತ್ತೇನೆ.

ದೊಡ್ಡ ಕರುಳಿಗೆ ಕಿರಿಕಿರಿಯಾದರೆ ಮಾತ್ರ.ದೊಡ್ಡ ಕರುಳು ಹಾಗೆ ಮಾಡಿದರೆ ತಕ್ಷಣ ದಾಕ್ಟರಲ್ಲಿಗೆ ಓಡುತ್ತೀಯೆ. ಅದೇ ಅತಿಸಾರ. ಮನುಷ್ಯ ಬದುಕಲು ಆಹಾರ ನೀರು ಗಾಳಿ ಬೇಳಕು ಇವುಗಳು ಇದ್ದರೂ ಸಹ ಹಸಿವಾಗುತ್ತದೆ ಅದರ ಅರಿವಾಗುತ್ತದೆ ಮನುಷ್ಯನಲ್ಲಿ ಜೀರ್ಣಕ್ರಿಯೆ ಸರಿಯಾಗಿ ಅಗದಿದ್ದರೆ ಹಸಿವು ಕಮ್ಮಿಯಾಗಿ ತೊಂದರೆಗೊಳಗಾಗುತ್ತಾನೆ ಹಸಿವು ಅಪಾಯಕಾರಿ ಮತ್ತು ಅನಾರೋಗ್ಯಕಾರಿಯು ಅನಾರೋಗ್ಯಕಾರಿಯು ಅನಾರೋಗ್ಯಕಾರಿಯು ಹೌದು ಎಕೆಂದರೆ ಎಂಥಹ: ಮನುಷ್ಯನನ್ನು ಕೂಡ ಪೀಡಿಸುತ್ತದೆ ಹಳೆಯ ಗಾದೆಯ ಮಾತಿನಂತೆ ಹಸಿದವನಿಗೆ ಹಳಸಿದ ಅನ್ನವು ಕೂಡ ಮೃಷ್ಟಾನ್ನವಂತೆ ಹಸಿವು ಜೀವಕ್ಕೆ ಹಾಗು ಜೀವಕ್ಕೆ ಬೇಕಾಗುವ ಆಹಾರ

ಪ್ರಪಂಚದ ಎಲ್ಲಾ ಜೀವರಾಶಿಗಳಿಗೂ ದೇವರು ಆಹಾರ ಸೃಷ್ಷ್ಟೀಕರಿಸಿರುತ್ತಾನೆ ಅಯಾ ವರ್ಗಕ್ಕೆ ವಿಧ ವಿಧವಾದ ಆಹಾರ ಅವನಿಂದಲೇ ಯಾವುದೇ ಜೀವಿ ಆಹಾರವಿಲ್ಲದೆ ಬದುಕಲಾರ ಆಕಾಶ ಭೂಮಿ ಸೂರ್ಯ ಚಂದ್ರ ನೀರು ಗಾಳಿ ಬೇಳಕು ಆಹಾರ ಇರುವವರೆಗೂ ಮನುಷ್ಯ ಬದುಕಬಲ್ಲ ಇದ್ಯಾವುದು ಸಿಗದಿದ್ದಾಗ ಭೂಮಿಯಲ್ಲಿ ಮನುಷ್ಯನಿರುವುದಿಲ್ಲ ಒಮ್ಮೆ ಕಾಡಿನಲ್ಲಿ ವಿಶ್ವಾಮಿತ್ರ ಮಹರ್ಷಿಗಳು ಘೋರ ತಪಸ್ಸನ್ನು ಆಚರಿಸಿ ಎಚ್ಚರವಾದಾಗ ವಿಶ್ವಾಮಿತ್ರ ಮಹರ್ಷಿಗಳಿಗೆ ಹಸಿವಾಗುತ್ತದೆ ಆಹಾರ ಹುಡುಕಿದಾಗ ಎನೂ ಸಿಗದಿದ್ದಾಗ ಒಂದು ನಾಯಿಯು ಕಾಣಿಸಿಕೊಂಡಿತಂತೆ ಆಗ ಹಸಿವಿನಿಂದ ನಾಯಿಯ ಮಾಂಸವನ್ನೇ ಭಕ್ಷಿಸಿದರಂತೆ ಹಾಗೆಯೆ ಹಸಿವು ಯಾರನ್ನು ಬಿಟ್ಟಿಲ್ಲ ಎನ್ನುವುದು


ಬರಹ-: ಪ್ರಭಾಕರ್ ಶೇರಿಗಾರ್ ಕನ್ಯಾಣ ಕೋಡಿ