ವಿಷಯಕ್ಕೆ ಹೋಗು

ಸದಸ್ಯ:ಸುಶ್ಮಿತ.ಎ/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಿಳಿಯೊಂದೇ ಅಲ್ಲ, ಅದರಂತೆ ಸುಮಧುರವಾಗಿ ಕೂಗುವ, ಹಾಡುವ ಅನೇಕ ಪಕ್ಷಿಗಳು ಜೀವಸಂಕುಲದಲ್ಲಿವೆ. ಮನುಷ್ಯನ ಧ್ವನಿಯಿಂದ ಹಿಡಿದು ತಾನು ಜೀವಿಸುವ ಪರಿಸರದಲ್ಲಿನ ಎಲ್ಲಾ ಪ್ರಾಣಿಪಕ್ಷಿಗಳ ಧ್ವನಿಯನ್ನೂ ಅನುಕರಿಸುವ ಹಕ್ಕಿಯೊಂದು ನಮ್ಮ ನಡುವೆ ಇದೆ. ಅದರ ಹೆಸರು ಲೈರ್. ಲೈರ್ ಹಕ್ಕಿ ಆಸ್ಟ್ರೇಲಿಯ ಮೂಲದ್ದು, ಮಿಮಿಕ್ರಿ ಮಾಡುವುದರಿಂದಲೇ ಪ್ರಸಿದ್ಧಗೊಂಡಿರುವ ಈ ಪಕ್ಷಿ ತಾನು ವಾಸಿಸುವ ಪ್ರದೇಶದಲ್ಲಿ ಕಂಡುಬರುವ ಇತರ ಪ್ರಾಣಿ-ಪಕ್ಷಿಗಳ ಶಬ್ದವನ್ನು ಸಲೀಸಾಗಿ ಅನುಕರಣೆ ಮಾಡುತ್ತದೆ. ಆ ಅನುಕರಣೆ ಎಷ್ಟು ಸ್ಪಷ್ಟವಾಗಿರುತ್ತದೆಂದರೆ, ಖುದ್ದು ಆ ಪ್ರಾಣಿ-ಪಕ್ಷಿಗಳೇ ಕೂಗಿದಂತಿರುತ್ತದೆ. ಲೈರ್ ಹಕ್ಕಿಯ ಮಿಮಿಕ್ರಿ ಸಾಮರ್ಥ್ಯ ಎಷ್ಟಿದೆಯೆಂದರೆ, ಇದು ತಾನು ಆಲಿಸುವ ಪ್ರತೀ ಶಬ್ದವನ್ನೂ ತಕ್ಷಣವೇ ಅನುಕರಣೆ ಮಾಡತೊಡಗುತ್ತದೆ. ಉದಾಹರಣೆಗೆ, ಬಟ್ಟೆ ಗಿರಣ ಹೊಮ್ಮಿಸುವ ಶಬ್ದ, ಕಾರಿನ ಹಾರ್ನ್, ಪಿಸ್ತೂಲಿನಿಂದ ಗುಂಡು ಹೊಡೆದಾಗ ಬರುವ ಶಬ್ದ, ನಾಯಿ ಬೊಗಳುವದು, ಚಿಕ್ಕ ಮಕ್ಕಳ ಅಳು ಅಷ್ಟೇ ಅಲ್ಲದೆ ನಾವು ಮಾತನಾಡುವಂತೆ ಯಥಾವತ್ತಾಗಿ ಮಾತನಾಡುತ್ತದೆ. ಈ ಹಕ್ಕಿಯು ಕೊಳಲಿನ ಧ್ವನಿಯನ್ನೂ ಹೊರಡಿಸಬಹುದೆಂದು ಪಕ್ಷಿತಜ್ಞರು ೧೯೩೦ರಲ್ಲಿಯೇ ಗುರುತಿಸಿದ್ದರು. ಗಂಡು ಹಾಗೂ ಹೆಣ್ಣು ಲೈರ್ ಹಕ್ಕಿಗಳೆರಡರಲ್ಲಿಯೂ ಧ್ವನಿಯನ್ನು ಅನುಕರಿಸಿ ಕೂಗುವ ಸಾಮರ್ಥ್ಯವಿದೆಯಾದರೂ ಹೆಚ್ಚಾಗಿ ಕೇಳಿ ಬರುವ ಧ್ವನಿ ಗಂಡು ಲೈರ್ ಹಕ್ಕಿಯದು ಮಾತ್ರ. ಆಕರ್ಷಕವಾದ ಕಂದು ಮೈಬಣ್ಣ ಹೊಂದಿರುವ ಮತ್ತು ಒಂಟಿಯಾಗಿ ಇಲ್ಲವೇ ಜೋಡಿಯಾಗಿ ಅಥವಾ ಗುಂಪಾಗಿ ಇರುವ ಲೈರ್ ಹಕ್ಕಿಯು ಹೆಚ್ಚಾಗಿ ಮರದ ಟೊಂಗೆ, ಗಿಡಗಳ ಬುಡದಲ್ಲಿ ಕುಳಿತು ಮಿಮಿಕ್ರಿ ಮಾಡುತ್ತಿರುತ್ತದೆ. ಉಳಿದ ಹಕ್ಕಿಗಳಿಗೆ ಸಾಧ್ಯವಿಲ್ಲದ ಈ ವಿಷಿಷ್ಟ ಸಾಮರ್ಥ್ಯವನ್ನು ಲೈರ್ ಹಕ್ಕಿಗಳು ಪಡೆದದ್ದಾದರೂ ಹೇಗೆ? ಈ ಪ್ರಶ್ನೆಗೆ ಪಕ್ಷಿತಜ್ಞರು ಉತ್ತರ ಕಂಡುಕೊಳ್ಳಲು ನಿರಂತರ ಪ್ರಯತ್ನ ನಡೆಸಿ ಕೊನೆಗೆ ಯಶಸ್ವಿಯೂ ಆದರು. ನಮಗೆ ಧ್ವನಿ ಪೆಟ್ಟಿಗೆ ಇರುವಂತೆ ಪಕ್ಷಿಗಳಲ್ಲಿಯೂ 'ಸಿರಿಂಕ್ಸ್' ಎಮಬ ತಂತುಗಳಿಂದ ರಚನೆಯಾದ ಭಾಗವಿರುತ್ತದೆ. ಸಿರಿಂಕ್ಸ್ ರಚನೆ ಹಾಗೂ ಅದು ಪಕ್ಷಿಗಳಲ್ಲಿ ಇರುವ ಸ್ಥಾನದಿಂದಾಗಿ ಪಕ್ಷಿಗಳು ಸುಮಧುರವಾದ ಧ್ವನಿಗಳನ್ನು ಹೊರಡಿಸಲು ಸಾಧ್ಯವಾಗುತ್ತದೆ. ಆದರೆ ಲೈರ್ ಹಕ್ಕಿಗಳಲ್ಲಿ ಇರುವ ಸಿರಿಂಕ್ಸ್ ಅತೀ ಸಂಕೀರ್ಣವಾದ ಸ್ನಾಯುಗಳಿಂದ ಕೂಡಿರುತ್ತದೆ. ಇದರಲ್ಲಿನ ಸಿರಿಂಕ್ಸ್ ಇತರೆ ಪಕ್ಷಿಗಳಿಗಿಂತ ಭಿನ್ನವಾಗಿರುವುದರಿಂದ ಲೈರ್ ಹಕ್ಕಿ ಇತರೆಲ್ಲಾ ಪ್ರಾಣಿ-ಪಕ್ಷಿಗಳ ಧ್ವನಿಯನ್ನೂ ಲೀಲಾಜಾಲವಾಗಿ ಅನುಕರಿಸಲು ಸಾಧ್ಯವಾಗಿದೆ. ನಾವು ಮಕ್ಕಳಿಗೆ ಮಿಮಿಕ್ರಿ ಏರ್ಪಡಿಸಿ ಖುಷಿ ಪಡುತ್ತೇವೆ, ಇದು ನಮಗೆ ರಂಜನೆಯ ಸಂಗತಿ. ಆದರೆ ಪ್ರಾನಿ-ಪಕ್ಷಿಗಳು ತೋರುವ ಈ ವಿಶೇಷ ಗುಣಗಳು ಅವುಗಳ ಬದುಕಿನ ಸಂಗತಿಯಾಗಿದೆ. ಕೆಲವೊಮ್ಮೆ ಲೈರ್ ಹಕ್ಕಿಯು ಈ ರೀತಿ ಅನುಕರಿಸುವ ಮೂಲಕ ಶತ್ರುಗಳ ಕಣ್ತಪ್ಪಿಸಿ ಸುಲಭವಾಗಿ ಪಾರಾಗುತ್ತದೆ. ಅಂದಹಾಗೆ, ಲೈರ್ ಹಕ್ಕಿಗಳಲ್ಲಿ ಮತ್ತೊಂದು ವಿಶೇಷ ಲಕ್ಷಣವಿದೆ. ಗಂಡು ಹಕ್ಕಿಯು ತನ್ನ ಸಂಗಾತಿಯನ್ನು ಸೆಳೆಯಲು ನವಿಲಿನಂತೆಯೇ ತನ್ನ ಉದ್ದವಾದ ಬಾಲದ ಗರಿಗಳನ್ನು ಬಿಚ್ಚಿ ಪ್ರದರ್ಶನಕ್ಕೆ ನಿಂತಾಗ ಲೈರ್ ಹಕ್ಕಿಯು, ನೋಡಲು ನವಿಲಿನಂತೆಯೇ ಸೊಗಸಾಗಿ ಕಂಡುಬರುತ್ತದೆ. ಹೀಗಾಗಿ ಅನೇಕ ಚಿತ್ರ ಕಲಾವಿದರಿಗೂ ಈ ಹಕ್ಕಿ ಬಹು ಪ್ರಿಯವಾದುದೂ ಹಾಗೂ ಆಕರ್ಷಣೀಯವಾದುದೂ ಆಗಿದೆ.