ಸದಸ್ಯ:ಶಮೀನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಕಲೇಶಪುರ


ಶ್ರೀ ಗುಡ್ಡೇ ಬಸವಣ್ಣ ದೇವಸ್ಥಾನ , ಬೈಕೆರೆ

ಈ ದೇವಸ್ಥಾನವು ಸಕಲೇಶಪುರದಿಂದ ಸಮಾರು ೭ ಕಿಲೋ ಮೀಟರ್ ದೂರದ ಬೈಕೆರೆ ಗ್ರಾಮದಲ್ಲಿದೆ . ಶ್ರೀ ಗುಡ್ಡೇ ಬಸವಣ್ಣ ದೇವಸ್ಥಾನವು ೧೭೫೦ ರಲ್ಲಿ ಸ್ಥಾಪಿಸಲಾಗಿದೆ. ತದನಂತರ ಶ್ರೀ ಬೈಕೆರೆ ನಾಗೇಶ್, ನವದೆಹಲಿ ಮತ್ತು ಬೈಕೆರೆ ಗ್ರಾಮಸ್ಥರು ಸೇರಿ ಈ ದೇವಸ್ಥಾನವನ್ನು ಮತ್ತಷ್ಟು ಸುಂದರವಾಗಿ ಪುನರ್ ನಿರ್ಮಾಣಿಸಿದ್ದಾರೆ. ಈ ದೇವಸ್ಥಾನ ದಲ್ಲಿ‌ ಪ್ರತಿದಿನ ಬೆಳಿಗ್ಗೆ ಮತ್ತು‌ ಸಂಜೆ ಶ್ರೀ ಗುಡ್ಡೆ ಬಸವಣ್ಣನ ಪೂಜೆ ನಡೆಯುತ್ತದೆ. ಪೂಜೆ ನಡೆಯುವ ಸಮಯ: ಬೆಳಿಗ್ಗೆ ೭ ರಿಂದ ೧೧ ರ ವರೆಗೆ ಮತ್ತು ಸಂಜೆ ೫ ರಿಂದ ೭ ರವರೆಗೆ .

ಈ ದೇವಸ್ಥಾನದ ವಾತಾವರಣವು ಹೆಚ್ಚು ಶಾಂತಿಯುತವಾಗಿದ್ದು ಮತ್ತು ಹಾಗೆಯೇ ಸುತ್ತಮುತ್ತಲಿನ ಪ್ರಕೃತಿಯ ಸೌಂದರ್ಯ ವು ಅಷ್ಟೇ ಕಣ್ಮನ ಸೆಳೆಯುವಂತಿದೆ. ಬೆಳಗ್ಗಿನ ಸಮಯದಲ್ಲಿ ಅಕ್ಕ‌ಪಕ್ಕದ ಗ್ರಾಮಸ್ಥರು ವ್ಯಾಯಾಮ, ಧ್ಯಾನವನ್ನು ಮಾಡುವುದರ ಮೂಲಕ ಈ ಸ್ಥಳದ ನೈಸರ್ಗಿಕ ಸೌಂದರ್ಯ ವನ್ನು ಆಸ್ವಾದಿಸುತ್ತಾರೆ.

ಈ ದೇವಸ್ಥಾನದ ಪ್ರದೇಶವು ಅತ್ಯಂತ ಶಾಂತಿಯಿಂದ ಕೂಡಿದ್ದು, ಯಾವುದೇ ವಾಹನಗಳ ಶಬ್ಧ ,ಜಂಜಾಟವಿಲ್ಲದ ಸ್ಥಳವಾಗಿರುವುದರಿಂದ ಜನರ ಮನಸ್ಸಿಗೆ ನೆಮ್ಮದಿ ಯನ್ನು ತರುವ ಸ್ಥಳವಾಗಿದೆ.