ಸದಸ್ಯ:ರಾಶಿದಾ/sandbox
== =ಅಂಗಾಶಗಳು= == ಒಂದೇ ಮೊಲದಲ್ಲಿ ಹುಟ್ಟಿದ ಒಂದೇ ರೀತಿ ರಚನೆಯುಳ್ಳ ಹಾಗೊ ಒಂದೇ ರೀತಿಯ ಕಾರ್ಯವನ್ನು ಮಾಡುವ ಜೀವಕೋಶಗಳ ಸಮೊಹಕ್ಕೆ ಅಂಗಾಶ ಎನ್ನುವರು. ಅಂಗಾಂಶಗಳು ತಮ್ಮ ರಚನೆ, ಅವುಗಳಲ್ಲಿನ ಜೀವಕೊಶಗಳ ಆಕಾರ , ಕೋಶಭಿಯತ್ತಿಯ ದಪ್ಪ, ಮುಂತಾದ ಲಕ್ಷ್ಣಗಳಲ್ಲಿ ಭಿನ್ನತೆಯನ್ನು ಪ್ರರ್ದಶಿಸುತ್ತದೆ. ಹಲವು ಬಗೆಯ ಕಾರ್ಯವನ್ನು ಒಟ್ಟಾಗಿ ನಿರ್ವಹಿಸುವ ರಚನೆಗೆ ಅಂಗ ಎನ್ನುವರು. ಜೀವವಿಕಾಸದ ಏಣಿಯಲ್ಲಿ ಉನ್ನತ ಮಟ್ಟದ ಸಸ್ಯಗಳು ಮತ್ತು ಪ್ರಾಣಿಗಳು ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸಳು ಹಲವು ಬಗೆಯ ಅಂಗಾಂಶಗಳನ್ನು ಹೊಂದಿರುತ್ತದೆ. ಹೀಗೆ ವಿವಿಧ ಅಂಗಾಶಗಳು ವಿಭಿನ್ನ ಕಾರ್ಯಗಳನ್ನು ಹಂಚಿಕೊಂಡಿರುದರಿಂದ ಜೀವಿಗಳಲ್ಲಿ ಜೈವಿಕ ಕ್ರಿಯೆಗಳು ಸಮರ್ಪಕವಾಗಿ ನಡೆಯಳು ಸಾದ್ಯಾವಾಗಿದೆ.ಒಂದೇ ರೀತಿಯ ಕಾರ್ಯವನ್ನು ನಿರ್ವಹಿಸುವ ಸಮೊಹಕ್ಕೆ ಅಂಗವ್ಯವಸ್ಥೆ ಎಂದು ಹೆಸರು . ವಿವಿಧ ಅಂಗಾಂಶಗಳು ಮತ್ತು ಅವುಗಳ ಕಾರ್ಯಗಳನ್ನು ಅಧ್ಯಾಯನ ಮಾಡುವ ಜೀವಶಾಸ್ತ್ರದ ವಿಭಾಗಕ್ಕೆ ಅಂಗಾಶ ಶಾಸ್ತ್ರ ಎಂದು ಹೆಸರು. ಅಂಗಾಂಶಗಳಲ್ಲಿ ೨ ವಿಧ . ಸಸ್ಯ ಅಂಗಾಂಶ ಮತ್ತು ಪ್ರಾಣಿ ಅಂಗಾಶ.
ಸಸ್ಯ ಅಂಗಾಂಶ
[ಬದಲಾಯಿಸಿ]ಆವ್ರತಬೀಜ ಸಸ್ಯದ ದೇಹದಲ್ಲಿ ಬೆಳವಣಿಗೆ ,ರಕ್ಷಣೆ ,ಹೀರಿಕೆ ,ದ್ಯುತಿಸಂಶ್ಲೇಷಣೆ, ನೀರು ಮತ್ತು ಲವಣಗಳ ಸಾಗಣಿಕೆ ಮುಂತಾದ ವಿಭಿನ್ನ ಕಾರ್ಯಗಳಿಗೆ ನಿರ್ದಿಷ್ಟವಾದ ಅಂಗಾಂಶಗಳು ಕಂಡುಬರುತ್ತದೆ .ಸಸ್ಯ ಅಂಗಾಶಗಳಲ್ಲಿ ೨ ವಿಧ. ೧-ವರ್ಧನ ಅಂಗಾಂಶ. ೨-ಶಾಶ್ವತ ಅಂಗಾಂಶ. ಶಾಶ್ವತ ಅಂಗಾಂಶದಲ್ಲಿ ಮತ್ತೆ ೨ ವಿಧವಿದೆ ಅವು ಸರಳ ಶಾಶ್ವತ ಅಂಗಾಂಶ ಹಾಗು ಸಂಕೀರ್ಣ ಶಾಶ್ವತ ಅಂಗಾಂಶ. ಮತ್ತೆ ಸರಳ ಶಾಶ್ವತ ಅಂಗಾಂಶದಲ್ಲಿ ೪ ವಿಧ ಅವುಗಳೆಂದರೆ ಪೇರಂಕೈಮ ,ಕೋಲೆಂಕೈಮ, ಸ್ಕ್ಲೀರಂಕೈಮ ಮತ್ತು ಹೊರದರ್ಮ. ಮತ್ತು ಸಂಕೀರ್ಣ ಶಾಶ್ವತ ಅಂಗಾಂಶದಲ್ಲಿ ೨ ವಿಧ. ೧ ಕ್ಸೈಲಮ್ ೨ ಪ್ಲೊಯಮ್ .
ಪ್ರಾಣಿ ಅಂಗಾಂಶ
[ಬದಲಾಯಿಸಿ]ಈ ಅಂಗಾಂಶಗಳು ಸಸ್ಯ ಅಂಗಾಂಶಗಳಿಂತ ಹೆಚ್ಚು ಸಂಕೀರ್ಣ ರಚನೆಯುಳ್ಳದ್ದಾಗಿದೆ. ಪ್ರಾಣಿ ಅಂಗಾಂಶಗಳನ್ನು ಅವುಗಳ ರಚನೆ ಮತ್ತು ಕಾರ್ಯದ ಆಧಾರದ ಮೇಲೆ ವಿವಿಧ ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರಾಣಿ ಅಂಗಾಂಶದಲ್ಲಿ ೪ ವಿಧ ಅವು ಅನುಲೇಪಕ ಅಂಗಾಂಶ ,ಸ್ನಾಯು ಅಂಗಾಂಶ, ಸಂಯೋಜಕ ಅಂಗಾಂಶ, ನರ ಅಂಗಾಂಶ.