ಸದಸ್ಯ:ರವಿರಾಜ್ ಸಾಗರ್/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕ ಹಸೆ ಚಿತ್ತಾರ ಪರಿಷತ್ತು

ಉಲ್ಲೇಖ

ಕರ್ನಾಟಕದ ಜನಪದರ ಆದಿಮ ರೇಖಾ ಶೈಲಿಯ ಸಾಂಪ್ರದಾಯಿಕ ಚಿತ್ರಕಲೆಗಳಲ್ಲಿ ಹಸೆ ಚಿತ್ತಾರ ಪ್ರಮುಖವಾದದ್ದು. ಇತ್ತೀಚಿನ ಕಾಂಕ್ರೀಟ್ ಮನೆಗಳ ಅಬ್ಬರದಲ್ಲಿ ಹಳ್ಳಿಗಳಲ್ಲಿಯೂ ಸಹ ಈ ಬಗೆಯ ಚಿತ್ತಾರಗಳನ್ನ ಬಿಡಿಸುವವರು ಅಪರೂಪವಾಗಿದ್ದು ಅಳಿವಿನ ಅಂಚಿನಲ್ಲಿದೆ.

ಭೌತಿಕವಾಗಿ ವರ್ಲಿ ಕಲೆಯಂತೆ ಕಾಣುವ ಹಸೆ ಚಿತ್ತಾರವು ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಸಾಗರ ಸೊರಬದಲ್ಲಿ ಹೆಚ್ಚಾಗಿ ಈಗಲೂ ಕಡ್ಡಾಯವಾಗಿ ದೀವರು ಸಮುದಾಯದ, ಲಕ್ಷಾಂತರ ಕುಟುಂಬಗಳಲ್ಲಿ ಮದುವೆಗಳಲ್ಲಿ, ಭೂಮಿ ಹುಣ್ಣಿಮೆ ಹಬ್ಬಗಳಲ್ಲಿ ಕಡ್ಡಾಯ ಸಂಪ್ರದಾಯದಂತೆ ಆಚರಿಸಿಕೊಂಡು ಬಂದಿರುವುದರಿಂದ ಅಲ್ಲಿ ಹೆಚ್ಚಾಗಿ ಕಾಣಬಹುದು. ಮಲೆನಾಡಿನ ಶಿವಮೊಗ್ಗದ ಕೆಲವು ತಾಲೂಕುಗಳಲ್ಲಿ ಇನ್ನಿತರ ಸಮುದಾಯದ ಕೆಲವು ಕುಟುಂಬಗಳಲ್ಲಿ ಸಹ ಹಸೆ ಚಿತ್ತಾರ ಸಂಪ್ರದಾಯ ಅಲ್ಲಲ್ಲಿ ವಿರಳವಾಗಿ ಕಂಡುಬರುತ್ತದೆ. ಕಡ್ಡಾಯವಾಗಿ ವಿಧಿ ವಿಧಾನಗಳ ಮೂಲಕ ತಲೆತಲಾಂತರಗಳಿಂದ ಸಂಪ್ರದಾಯವಾಗಿ ರೂಡಿಸಿಕೊಂಡು ಬಂದಿರುವ ದೀವರು ಸಮುದಾಯದ ಜೊತೆಗೆ ಹೊಸನಗರ, ತೀರ್ಥಹಳ್ಳಿಯಲ್ಲಿ ಒಂದಷ್ಟು ಭಾಗದಲ್ಲಿ ಕಂಡುಬರುತ್ತದೆ. ಆದರೆ ಅಲ್ಲಿ ಕಡ್ಡಾಯ ಸಂಪ್ರದಾಯವಿಲ್ಲ. ಸಿದ್ದಾಪುರ ,ಶಿರಸಿಯಲ್ಲಿ ಸಹ ಅಲ್ಲಲ್ಲಿ ಹಸೆ ಚಿತ್ತಾರವನ್ನು ಮದುವೆಗೆ ಸಾಂಪ್ರದಾಯಿಕವಾಗಿ ರೂಡಿಸಿಕೊಂಡು ಬಂದಿರುವುದು ಕಂಡುಬರುತ್ತದೆ. ಆದಿಮ ರೇಖಾ ಶೈಲಿಯ ಅತಿ ವಿಶಿಷ್ಟ ಮತ್ತು ಸಂಕೀರ್ಣ ರಚನಾಶೈಲಿ ಇರುವ ಹಸೆ ಚಿತ್ತಾರ ಕಲಾವಿದರು ಇಂದು ಕಡಿಮೆ. ಹೆಚ್ಚಾಗಿ ಮಹಿಳೆಯರು ಹಸೆ ಚಿತ್ತಾರ ಹಿಂದಿನಿಂದ ಬಿಡಿಸಿಕೊಂಡು ಬಂದಿದ್ದಾರೆ. ಅಂತಹ ಹಳ್ಳಿಯ ಜನಪದ ಕಲಾವಿದರನ್ನು ಪ್ರೋತ್ಸಾಹಿಸಲು ಹುಟ್ಟಿಕೊಂಡಿರುವುದು ಕರ್ನಾಟಕ ಹಸೆ ಚಿತ್ತಾರ ಪರಿಷತ್ತು.

ಹಸೆ ಚಿತ್ತಾರ ಕಲಾವಿದೆಯರಿಂದಲೇ ಹುಟ್ಟಿಕೊಂಡಿರುವ ಈ ಪರಿಷತ್ತು ಇತ್ತೀಚಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹಲವು ಪ್ರದರ್ಶನ ಉಪನ್ಯಾಸ ಕಾರ್ಯಕ್ರಮಗಳನ್ನು ಮಾರಾಟ ವ್ಯವಸ್ಥೆಯನ್ನು ಮಾಡುತ್ತಿದೆ. ಇತ್ತೀಚೆಗೆ ಜಿ20 ಶೃಂಗಸಭೆ ಬೆಂಗಳೂರಿನಲ್ಲಿ ಪರಿಷತ್ತಿಗೆ ಹಸೆಚಿತ್ತಾರ ಪ್ರದರ್ಶನಕ್ಕೆ ಅವಕಾಶ ನೀಡಲಾಗಿತ್ತು. ದೆಹಲಿ ಸೇರಿದಂತೆ ರಾಜ್ಯದಾದ್ಯಂತ ವಿವಿಧ ಭಾಗದಲ್ಲಿ ನಿರಂತರ ಚಟುವಟಿಕೆಗಳನು ಆಯೋಜಿಸುತ್ತಾ ಹಸೆ ಚಿತ್ತಾರಕ್ಕೆ ಪ್ರೋತ್ಸಾಹ ನೀಡುತ್ತಿದೆ. ರಾಜ್ಯದ ಜನಪದ ಕಲಾ ಆರಾಧಕರು ಪರಿಷತ್ತಿಗೆ ಜೊತೆಯಾಗಿದ್ದಾರೆ. ಜನಪದ ಕಲಾವಿದರ ಈ ಪ್ರಯತ್ನ ಹಸೆ ಚಿತ್ತಾರ ಪುನರುಜ್ಜೀವನಕ್ಕೆ ಸಹಾಯಕವಾಗಲಿದೆ.