ವಿಷಯಕ್ಕೆ ಹೋಗು

ಸದಸ್ಯ:ಮುಂಗೋಪ/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                == ಅಂಕ ವಿದ್ಯುನ್ಮಾನ ಹಾಗೂ ಸಾದೃಶ ವಿದ್ಯುನ್ಮಾನ. ==
     ವಿದ್ಯುನ್ಮಾನ, ಕಳೆದ ಶತಮಾನದ ಅವಧಿಯಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಬೆಳವಣಿಗೆಯನ್ನು ಕಂಡ ಕ್ಷೇತ್ರ. ಯಂತ್ರವಿಜ್ಞಾನದ ಕ್ಷೇತ್ರದಿಂದ ಆಯ್ದ  ಒಂದು ಹೋಲಿಕೆಯನ್ನು ಕೊಡ ಬಹುದಾದರೆ, ವಿದ್ಯುನ್ಮಾನ ಕ್ಷೇತ್ರದಲ್ಲಿ ನಡೆದ ಪ್ರಮಾಣದಲ್ಲಿ  ಗಾತ್ರ ಹಾಗೂ ಬೆಲೆಯಲ್ಲಿ ಇಳಿಕೆ  ಕಾರುಗಳ ಕ್ಷೇತ್ರದಲ್ಲಿ ನಡೆದಿದ್ದರೆ ಕಾರುಗಳ ಗಾತ್ರ ಬೆಂಕಿ ಪೊಟ್ಟಣದ ಗಾತ್ರಕ್ಕೂ ಬೆಲೆ ೩೫ ಪೈಸೆಗೂ ಇಳಿಯಬಹುದಿತ್ತೆಂದು ಹೇಳುತ್ತಾರೆ. ಗಣಕಯಂತ್ರಗಳಲ್ಲಿ ಬಳಸಲಾಗುವ  ಪ್ರೊಸೆಸರ್ ನ  ಕಾರ್ಯಕ್ಷಮತೆ(ವೇಗ) ಪ್ರತಿ ಆರು ತಿಂಗಳಿಗೆ  ದುಪ್ಪಟ್ಟಾದರೆ ಅದರೆ ಬೆಲೆ ಆರ್ಧದಷ್ಟು ಕಡಿಮೆಯಾಗುತ್ತದೆಂಬುದು ಒಂದು ಆಂದಾಜು.  ಹೀಗಾಗಿ  ಮನೆಯಲ್ಲಿ ನಾವು ಇತ್ತೀಚೆಗೆ  ಉರಿಸಲು ಪ್ರಾರಂಭಿಸಿರುವ  LED ಬಲ್ಬು ಗಳಿಂದ ಹಿಡಿದು ಮೊಬೈಲ್ ಫೋನುಗಳವರಗೆ, ಮೆಡಿಕಲ್ ಸ್ಕ್ಯಾನರ್ ಗಳಿಂದ , ಉಪಗ್ರಹಗಳ ಹಾಗೂ ಆವುಗಳನ್ನು ಉಡಾಯಿಸುವ ರಾಕೆಟ್ ವ್ಯವಸ್ಥೆಗಳ ನಿಯಂತ್ರಣದವರಗೆ  ಎಲ್ಲಾ ಕ್ಷೇತ್ರಗಳಲ್ಲಿ ನಾವು  ವಿದ್ಯುನ್ಮಾನದ ಉಪಲಬ್ಧಗಳ ಬಳಕೆಯನ್ನು ಕಾಣಬಹುದು. 
    	ಸಾಮಾನ್ಯವಾಗಿ ವಿದ್ಯುನ್ಮಾನವನ್ನು  ಸಾದೃಶ ವಿದ್ಯುನ್ಮಾನ(Analog Electronics)  ಹಾಗೂ ಅಂಕ  ಅಥವಾ ಸಾಂಖಿಕ ವಿದ್ಯುನ್ಮಾನ(Digital Electronics) ಎಂಬ ಎರಡು ಪ್ರಾಕಾರಗಳನ್ನಾಗಿ ವಿಭಜಿಸುತ್ತಾರೆ. ಸಾದೃಶ ವಿದ್ಯುನ್ಮಾನದಲ್ಲಿ ಯಾವುದೇ ದತ್ತಾಂಶದ ಬೆಲೆಯಲ್ಲಿನ  ಏರುಪೇರು  ಮತ್ತೊಂದು ದತ್ತಾಂಶ ಬದಲಾಗುವ ರೀತಿಯಲ್ಲೇ ಆದರೆ ಒಂದು ನಿರ್ದಿಷ್ಟ ಅನುಪಾತದಲ್ಲಿ ಬದಲಾಗುತ್ತಿರುತ್ತದೆ.ಆದರೆ ಸಾಂಖಿಕ ವಿದ್ಯುನ್ಮಾನದಲ್ಲಿ ದತ್ತಾಂಶವೊಂದರ ಬೆಲೆಯ ಏರಿಳಿತವನ್ನು  ಅಂಕಿಗಳ ಸಹಾಯದಿಂದ(digits  or numbers)  ಬಿಂಬಿಸಲು ಸಾಧ್ಯ.
      	ಉದಾಹರಣೆಗೆ ಸಾಧಾರಣ ಉಷ್ಣತಾಮಾಪಕ(thermometer) ನಲ್ಲಿ ಮೆರ್ಕ್ಯುರಿ ಕಾಲಮ್ಮಿನ  ಉದ್ದ ಅಳೆಯಲ್ಪಡುತ್ತಿರುವ  ಉಷ್ಣತೆಗೆ  ಅನುಗುಣವಾಗಿ ಹೆಚ್ಚುತ್ತಿರುತ್ತದೆ.ಈ ಹೆಚ್ಚುವಿಕೆಯನ್ನು ಉಷ್ಣತೆಯಹೆಚ್ಚುವಿಕೆಗೆ ಸರಿಹೊಂದಿಸಲಾಗಿರುತ್ತದೆ(calibrated)ಆದರೆ ಡಿಜಿಟಲ್ ಥರ್ಮೋಮೀಟರ್ ನಲ್ಲಿ ಅಳೆಯಲ್ಪಡುತ್ತಿರುವ ಉಷ್ಣತೆಯನ್ನು ೧೦, ೩೦ ಇತ್ಯಾದಿಯಾಗಿ ಅಂಕಿಗಳ ಸಹಾಯದಿಂದಲೇ ಗ್ರಹಿಸಲು ಸಾಧ್ಯ.ಮತ್ತೊಂದು ವಿಶೇಷವೆಂದರೆ ಸಾಂಖಿಕ ವಿದ್ಯುನ್ಮಾನವು ದ್ವಿಸಂಕೇತ  ವಿದ್ಯುನ್ಮಾನ (based on binary logic or two state logic)ವಾಗಿರುವುದರಿಂದ ಈ ರೀತಿಯ ಮಂಡಲಗಳು ಹೆಚ್ಚು ವೇಗವಾಗಿ ತಮ್ಮ ತಾರ್ಕಿಕ ಸ್ಥಿತಿಯನ್ನು (logical state)ಬದಲಾಯಿಸಿಕೊಳ್ಳಬಲ್ಲವು ಹಾಗೂ ಈ ಬಗೆಯ  ವಿದ್ಯುನ್ಮಂಡಲಗಳು ಅನಪೇಕ್ಷಿತ ಸಂಕೇತಗಳಿಗೆ (noise)  ಹೆಚ್ಚಿನ ನಿರೋಧಕತೆ (immunity)  ಯನ್ನು ಹೊಂದಿರುತ್ತವೆ.ಮತ್ತು ಈ ಬಗೆಯ  ಮಂಡಲಗಳು ಈ ಮಧ್ಯೆ ಸಮಾಕಲಿತ ಮಂಡಲಗಳಿಂದ(integrated circuits)  ನಿರ್ಮಿತವಾಗುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಿದಾಗ ಇವು ಬಹಳ ಸುಲಭ ಬೆಲೆಗೂ ದೊರಕುವಂತಾಗುತ್ತದೆ.ಈ ಬಗೆಯ  ಮಂಡಲಗಳ ರಚನೆ ಕೂಡ ಸರಳವಾಗಿರುತ್ತದೆ.

. .