ವಿಷಯಕ್ಕೆ ಹೋಗು

ಸದಸ್ಯ:ಭವ/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                     ದೇವರೆಲ್ಲಿರುವನು?
  
   ಕೇಳಿದೆ ನಾನು ದೇವರೆಲ್ಲಿ?
   ನುಡಿಯಿತು ಮನವು ದೇವರಿಲ್ಲಿ.
   ಸತ್ಯ ನುಡಿವ ಮನುಜನಿದ್ದಲ್ಲಿ,
   ಧರ್ಮದಿ ನಡೆವ ಜನರಿರುವಲ್ಲಿ,
   ಹೃದಯದಿ ಸ್ವಚ‍್ಛ ಪ್ರೀತಿಯಿದ್ದಲ್ಲಿ
   ದೇವರಿರುವನು ಇಲ್ಲಿ.
   ಹೆತ್ತ ತಾಯ ಮಡಿಲಿನಲ್ಲಿ
   ಜನ್ಮದಾತನ ಪಾದಗಳಲ್ಲಿ
   ಅನ್ನದಾತನ ಬೆವರಿನಲ್ಲಿ
   ದೇವರಿರುವನು ಇಲ್ಲಿ.
   ವಿದ್ಯೆ ಕ್ಲಲಿಸುವ ಗುರುವಿರುವಲ್ಲಿ
   ಬುದ್ಧಿ ಹೇಳುವ ಹಿರಿಯರಿದ್ದಲ್ಲಿ
   ತಿದ್ದಿ ನಡೆಸುವ ಜನರಿದ್ದಲ್ಲಿ
   ದೇವರಿರುವನು ಅಲ್ಲಿ.
   ಬಡವರ ಬಯಕೆಯಲ್ಲಿ 
   ಮಗುವಿನ ನಗುವಿನಲ್ಲಿ
   ಉಣ್ಣುವ ಊಟದಲ್ಲಿ
   ದೇವರಿರುವನು ನಿನ್ನಲ್ಲಿ.


ನ್ಯೂಕ್ಲೀಯ ಶಕ್ತಿ

[ಬದಲಾಯಿಸಿ]

ನಮ್ಮ ಈ ಆಧುನಿಕ ಯುಗದಲ್ಲಿ ನ್ಯೂಕ್ಲೀಯ ಶಕ್ತಿಯ ಬಳಕೆಯು ಪರ್ಯಾಯ ಶಕ್ತಿಯ ಮೂಲವಾಗಿ ಭರವಸೆ ಹುಟ್ಟಿಸಿದೆ. ನ್ಯೂಕ್ಲೀಯ ಕ್ರಿಯೆಗಳ ಪ್ರಮುಖ ಅನುಕೂಲವೆಂದರೆ ವಿಕಿರಣಪಟು ಮತ್ತು ವಿಕಿರಣಪಟುವಲ್ಲದ ಐಸೋಟೋಪುಗಳನ್ನು ತಯಾರಿಸುವುದು ನ್ಯೂಕ್ಲೀಯ ಕ್ರಿಯೆ ನಡೆಸಿ, ವಿಕಿರಣಪಟುವಾಗಿರುವ ಐಸೋಟೋಪುಗಳನ್ನು ಪಡೆಯುವ ಪ್ರಕ್ರಿಯೆಗೆ ಕೃತಕ ವಿಕಿರಣಪಟುಗಳೆಂದು ಹೆಸರು. ನ್ಯೂಕ್ಲೀಯ ಕ್ರಿಯೆಯು ಆಕಸ್ಮಿಕ ಸಂಭವನೀಯ ಕ್ರಿಯೆಯಾಗಿರುವುದರಿಂದ ,ಬಿಡುಗಡೆಯಾಗುವ ಉತ್ಪನ್ನಗಳು ಅತ್ಯಲ್ಪ. ನ್ಯೂಕ್ಲೀಯ ಕ್ರಿಯೆಯ ಅತೀ ದೊಡ್ಡ ಸವಾಲು ಎಂದರೆ ಅದರ ನಿರಂತರತೆಯನ್ನು ಕಾಯ್ದುಕೊಳ್ಳುವುದು. ಈ ಕ್ರಿಯೆಗಳು ಆಕಸ್ಮಿಕವಾಗಿ ನಡೆಯುವುದರಿಂದ ಅವು ನಿರಂತರವಾಗಿ ನಡೆಯವು. ಆದ್ದರಿಂದ ನ್ಯೂಕ್ಲೀಯ ಕ್ರಿಯೆಗಳು ಸೈದ್ಧಾಂತಿಕವಾಗಿ ಪ್ರಮುಖವಾಗಿಯೇ ಹೊರತು ವ್ಯಾವಹಾರಿಕವಾಗಿ ಸಾಧುವಲ್ಲ ಎಂದು ಭಾವಿಸಲಾಯಿತು. ಆದರೆ ಈ ಆಲೋಚನೆಗೆ ಇದ್ದಕ್ಕಿದ್ದಂತೆ ಹೊಸದೊಂದು ತಿರುವು ದೊರೆಯಿತು. ನ್ಯೂಕ್ಲೀಯವಿದಳನ ಕ್ರಿಯೆಯು ಸರಪಳಿ ಕ್ರಿಯೆಯಾಗಿದ್ದು ,ಅದನ್ನು ನಿರಂತರವಾಗಿ ನಡೆಸಬಹುದೆಂಬ ಅಂಶ ತಿಳಿಯಿತು. ನ್ಯೂಕ್ಲೀಯವಿದಳನ ಮತ್ತು ನ್ಯೂಕ್ಲೀಯ ಸಮ್ಮಿಳನ ಕ್ರಿಯೆಗಳನ್ನು ನಿರಂತರವಾಗಿ ನಡೆಸುವ ಆಲೋಚನೆ ಮೂಡಿತು. ಹೀಗೆ ನ್ಯೂಕ್ಲೀಯ ಕ್ರಿಯೆಗಳಿಂದ ಅಪಾರ ಪ್ರಮಾಣದ ಶಕ್ತಿಯು ಬಿಡುಗಡೆಯಾಗುತ್ತದೆಂದು ತಿಳಿದು ಬಂತು.

ನ್ಯೂಕ್ಲೀಯ ವಿದಳನ ಸರಪಳಿ ಕ್ರಿಯೆ:

ಒಂದು ಭಾರವಾದ ಪರಮಾಣುವಿನ ನ್ಯೂಕ್ಲಿಯಸ್ ಒಡೆದು ಎರಡು ಮಧ್ಯಮ ಪ್ರಮಾಣದ ಬೀಜಗಳನ್ನು ಉಂಟುಮಾಡಿ ಅಗಾಧ ಪ್ರಮಾಣದ ಶಕ್ತಿಯನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ನ್ಯೂಕ್ಲೀಯ ವಿದಳನ ಎನ್ನುತ್ತಾರೆ. ಈ ಪ್ರಕ್ರಿಯೆಯಲ್ಲಿ ಬಿಡುಗಡೆಯಾದ ನ್ಯೂಟ್ರೋನ್ ಗಳು ಮಧ್ಯಮ ಪ್ರಮಾಣದ ಬೀಜಗಳಲ್ಲಿ ವಿದಳನ ಕ್ರಿಯೆಯನ್ನು ಉಂಟುಮಾಡಿ ಸರಪಳಿ ಕ್ರಿಯೆ ಸಾಧ್ಯವಾಗುತ್ತದೆ.ವಿದಳನ ಕ್ರಿಯೆಯಲ್ಲಿ ಬಿಡುಗಡೆಯಾದ ನ್ಯೂಟ್ರೋನ್ ಗಳು ಪ್ರತೀ ವಿದಳನದ ನಂತರ ಗುಣಕದೋಪಾದಿಯಲ್ಲಿ ಗುಣೋತ್ತರ ಶ್ರೇಢಿಯಂತೆ ಮುಂದುವರೆದು ವಿದಳನ ಹೊಂದುವ ವಸ್ತುವು ಸಂಪೂರ್ಣವಾಗಿ ಕ್ಷಯಿಸುವ ತನಕ ನಡೆಯುವ ವಿದಳನ ಕ್ರಿಯೆಯನ್ನು ಸರಪಳಿ ಕ್ರಿಯೆ ಎನ್ನುತ್ತೇವೆ. ಒಂದು ಸರಪಳಿ ಕ್ರಿಯೆಯಲ್ಲಿ ಬಿಡುಗಡೆಯಾದ ನ್ಯೂಟ್ರೋನ್ ಗಳ ಸಂಖ್ಯೆಯನ್ನು ಸ್ಥಿರವಾಗಿರುವಂತೆ ಮಾಡಿದಾಗ ಅದು ನಿಯಂತ್ರಿತ ಸರಪಳಿ ಕ್ರಿಯೆಯಾಗುತ್ತದೆ. ಸರಪಳಿ ಕ್ರಿಯೆಯನ್ನು ನಿಯಂತ್ರಿಸದಿದ್ದರೆ ,ಅದು ನ್ಯೂಟೋನ್ ಗಳ ಸಂಖ್ಯೆ ಹೆಚ್ಚಿ ಸ್ಫೋಟಕ್ಕೆ ಕಾರಣವಾಗುತ್ತದೆ. ನ್ಯೂಕ್ಲೀಯ ಕ್ರಿಯಾಕಾರಿಗಳಲ್ಲಿ ಸರಪಳಿ ಕ್ರಿಯೆಯನ್ನು ನಿಯಂತ್ರಿಸಲಾಗುತ್ತದೆ. ಆದರೆ ನ್ಯೂಕ್ಲೀಯ ಬಾಂಬ್ ಅಥವಾ ಪರಮಾಣು ಬಾಂಬ್ ನಲ್ಲಿ ಈ ಕ್ರಿಯೆ ಅನಿಯಂತ್ರಿತವಾಗಿದೆ.

ನಿಯಂತ್ರಿತ ನ್ಯೂಕ್ಲೀಯ ಕ್ರಿಯೆಗಳು:

ನ್ಯೂಕ್ಲೀಯ ವಿದಳನ ಕ್ರಿಯೆಯು ಎರಡಕ್ಕಿಂತ ಹೆಚ್ಚು ನ್ಯೂಟೋನ್ ಗಳನ್ನು ಬಿಡುಗಡೆ ಮಾಡುತ್ತದೆ. ಪ್ರತೀ ವಿದಳನ ಕ್ರಿಯೆಯಲ್ಲಿ ಬಿಡುಗಡೆಯಾದ ನ್ಯೂಟ್ರೋನ್ ಗಳನ್ನು ಹೀರಿಕೊಳ್ಳುವಂತೆ ಮಾಡಿ ಪ್ರತೀ ವಿದಳನಕ್ಕೆ ಒಂದು ನ್ಯೂಟ್ರೋನ್ ಇರುವಂತೆ ನಿಯಂತ್ರಿಸಲಾಗುತ್ತದೆ. ಇದೇ ನಿಯಂತ್ರಿತ ಸರಪಳಿ ಕ್ರಿಯೆ.

ನ್ಯೂಕ್ಲೀಯ ಸಮ್ಮಿಳನ :

ಕೆಲವು ನಿರ್ದಿಷ್ಟ ಸಂಧರ್ಭಗಳಲ್ಲಿ ಹಗುರವಾದ ಎರಡು ಧಾತುಗಳ ನ್ಯೂಕ್ಲಿಯಸ್ ಗಳು ಸಮ್ಮಿಳನ ಹೊಂದಿ ಒಂದು ಭಾರವಾದ ಹೆಚ್ಚಿನ ಪರಮಾಣು ಸಂಖ್ಯೆಯನ್ನು ಹೊಂದಿರುವ ಧಾತುವಿನ ಬೀಜವಾಗಿ ಪರಿವರ್ತಿತವಾಗಬಲ್ಲವು. ಎರಡು ಹಗುರ ನ್ಯೂಕ್ಲಿಯಸ್ ಗಳು ಸಮ್ಮಿಳನ ಹೊಂದಿ ಒಂದು ಭಾರವಾದ ಬೀಜವಾಗಿ ,ಬೃಹತ್ ಪ್ರಮಾಣದ ಶಕ್ತಿ ಬಿಡುಗಡೆಯಾಗುವ ನ್ಯೂಕ್ಲೀಯ ಕ್ರಿಯೆಯೇ ನ್ಯೂಕ್ಲೀಯ ಸಮ್ಮಿಳನ .ಹಗುರವಾದ ನ್ಯೂಕ್ಲಿಯಸ್ ಗಳು ಸೇರಿ ಭಾರವಾದ ಬೀಜಗಳಾಗುವುದರಿಂದ ಶಕ್ತಿ ಉತ್ಪಾದನೆಯಾಗುತ್ತದೆ. ಇಂತಹ ಕ್ರಿಯೆಗಳನ್ನು ಉಷ್ಣ ನ್ಯೂಕ್ಲೀಯ ಸಮ್ಮಿಳನ ಕ್ರಿಯೆಗಳು ಎನ್ನುತ್ತೇವೆ.

ನ್ಯೂಕ್ಲೀಯ ಆಯುಧಗಳು:

ನ್ಯೂಕ್ಲೀಯ ವಿದಳನ ಮತ್ತು ನ್ಯೂಕ್ಲೀಯ ಸಮ್ಮಿಳನ ಕ್ರಿಯೆಗಳ ತತ್ವದ ಆಧಾರದ ಮೇಲೆ ಪರಮಾಣು ಬಾಂಬ್[ವಿದಳನ ಬಾಂಬ್] ಮತ್ತು ಹೈಡ್ರೋಜನ್ ಬಾಂಬ್[ಸಮ್ಮಿಳನ ಬಾಂಬ್]ಗಳನ್ನು ತಯಾರಿಸಲಾಗುತ್ತದೆ. ಇಡೀ ಜನ ಸಮುದಾಯವನ್ನು ನಾಶ ಮಾಡುವ ಸಾಮರ್ಥ್ಯವಿರುವ ಈ ಬಾಂಬ್ ಗಳ ತಯಾರಿಕೆಯನ್ನು ನಿಯಂತ್ರಿಸುವುದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸವಾಲಾಗಿದೆ.

ನ್ಯೂಕ್ಲೀಯ ವಸ್ತು ಗಳ ಬಳಕೆ ಮತ್ತು ವಿಲೇವಾರಿ:

ನ್ಯೂಕ್ಲೀಯ ಕ್ರಿಯಾಕಾರಿಗಳಲ್ಲಿ ಉಳಿಯುವ ತ್ಯಾಜ್ಯವಸ್ತುಗಳೂ ಸಹ ವಿಕಿರಣಪಟು ವಸ್ತುಗಳಾಗುತ್ತವೆ.ಕಡಿಮೆ ಅರ್ಧಾಯುಷ್ಯವನ್ನು ಹೊಂದಿರುವ ವಿಕಿರಣಪಟು ಧಾತುಗಳು ವಿಲೇವಾರಿಗೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು.ಆದರೆ,ದೀರ್ಘ ಅರ್ಧಾಯುಷ್ಯವನ್ನು ಹೊಂದಿರುವ ವಿಕಿರಣಪಟು ಧಾತುಗಳು ಭವಿಷ್ಯದಲ್ಲಿ ಹೆಚ್ಚು ಮಾರಕವಾಗಬಲ್ಲುದು.ಇವುಗಳ ನಿರ್ವಹಣೆಯೇ ಬಹು ಮುಖ್ಯ ಅಂಶವಾಗಿರುತ್ತದೆ.

ಸ್ವ ಪರಿಚಯ

[ಬದಲಾಯಿಸಿ]

ನಾನು ೧೯೯೮ ಜನವರಿ ೨೭ರಂದು ಪಾವಂಜೆಯ ಸಿರಿ ಮನೆಯಲ್ಲಿ ಜನಿಸಿದೆ. ನನ್ನೊಂದಿಗೆ ಜೊತೆಯಾಗಿ ಹುಟ್ಟಿದವಳು ನನ್ನ ಅಕ್ಕ ಅನು. ನನ್ನ ತಂದೆ ಡಾ.ಗಣೇಶ್ ಅಮೀನ್ ಹಾಗು ತಾಯಿ ಜಯಂತಿ. ತಂದೆ ಕನ್ನಡ ಉಪನ್ಯಾಸಕರು,ತಾಯಿ ಆಂಗ್ಲ ಭಾಷಾ ಉಪನ್ಯಾಸಕಿ. ತಂದೆಯವರದು ಕೃಷಿಕ ಕುಟುಂಬ.ಗದ್ದೆ,ತೋಟ ಎಲ್ಲಾ ಇರುವ ಕಾರಣ ಆ ಕೆಲಸಗಳ ಮಧ್ಯೆಯೇ ನಾನು ಬೆಳೆದೆ. ನಮ್ಮ ಮನೆಯಲ್ಲಿ ಯಾವಾಗಲು ಸಾಹಿತ್ಯದ ಕಾರ್ಯಕ್ರಮಗಳು ನಡೆಯುತ್ತಾ ಇದ್ದವು.ಹಾಗಾಗಿ ನನಗೂ ಸಾಹಿತ್ಯದ, ಸಂಗೀತದ, ಭರತನಾಟ್ಯದ, ಯಕ್ಷಗಾನದ ಹವ್ಯಾಸ ಬೆಳೆಯಿತು. ನನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಕ್ಕದ ಹೋಲಿ ಸ್ಪರಿಟ್ ಶಾಲೆಯಲ್ಲಿ ಮುಗಿಸಿ ಸುರತ್ಕಲ್ ನ ವಿದ್ಯಾದಾಯಿನಿಯಲ್ಲಿ ಪ್ರೌಢಶಾಲೆಗೆ ಸೇರಿದೆ. ಎರಡೂ ಕಡೆಯಲ್ಲಿಯೂ ಉತ್ತಮ ವಿದ್ಯಾಭ್ಯಾಸ ದೊರಕಿತು.ಪ್ರಾಥಮಿಕ ಶಾಲೆಯಲ್ಲಿ ಇರುವಾಗಲೇ ಭರತನಾಟ್ಯ ಜೂನಿಯರ್ ಪರೀಕ್ಷೆ ಹಾಗು ಪ್ರೌಢಶಾಲೆಯಲ್ಲಿ ಇರುವಾಗಲೇ ಭರತನಾಟ್ಯ ಸೀನಿಯರ್ ಪರೀಕ್ಷೆ ಬರೆದು ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದೆ.ಸಾಹಿತ್ಯ ಸಮ್ಮೇಳನಗಳ ಸಂದರ್ಭಗಳಲ್ಲಿ ವಿಚಾರಗೋಷ್ಠಿ, ಕವಿಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದೆ. ಹಾಗಾಗಿ ಪ್ರಾಥಮಿಕ ಹಂತದಲ್ಲಿಯೇ 'ಅನುಭವ' ಎಂಬ ಕವನ ಸಂಕಲನವನ್ನು ನಾವಿಬ್ಬರು ಜೊತೆಯಾಗಿ ಬರೆದು ಪ್ರಕಟಿಸಿದ್ದೆವು.

ನನ್ನ ಕಾಲೇಜು ಜೀವನ ಆರಂಭವಾದದು ಸುರತ್ಕಲ್ನ ಗೋವಿಂದದಾಸ ಕಾಲೇಜಿನಲ್ಲಿ.ಅಲ್ಲಿ ಎರಡು ಎರಡು ವರ್ಷದ ಪಿ.ಯು.ಸಿ ಸಂದರ್ಭದಲ್ಲಿ ಚೆನ್ನಾಗಿ ಓದುವ ಅವಕಾಶ ದೊರೆಯಿತು.ಅದೇ ಹೊತ್ತಿಗೆ ನಾನು ಭರತನಾಟ್ಯ ಸೀನಿಯರ್ ಹಾಗು ವಿದ್ವತ್ ಪೂರ್ವ ಪರೀಕ್ಷೆಗಳನ್ನು ಮುಗಿಸಿದ್ದೆ.ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇಕಡ ೯೬.೬ ಫಲಿತಾಂಶ ಬಂದಿರುತ್ತದೆ.ನಮಗಿಬ್ಬರಿಗೂ ಕಲೆಯಲ್ಲಿ,ಸಾಹಿತ್ಯದಲ್ಲಿ ಆಸಕ್ತಿ ಇದ್ದ ಕಾರಣ ತಂದೆ ತಾಯಿ ನಮ್ಮನ್ನು ವ ಶಿಕ್ಷಣಕ್ಕೆ ಒತ್ತಾಯ ಮಾಡದೆ ಪದವಿ ಕಾಲೇಜಿಗೆ ಸೇರಿಸಿದರು.ನನಗೂ ಅದೇ ಇಷ್ಟವಾಯಿತು.

ಈಗ ನಾನು ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯ ಫಲಿತಾಂಶದ ನಿರೀಕ್ಷೆಯಲ್ಲಿದ್ದೇನೆ.ನನಗೆ ಅಲೋಶಿಯಸ್ ಪದವಿ ತರಗತಿಗಳು ತುಂಬಾನೆ ಇಷ್ಟವಾಗುತ್ತಿದೆ.ಮುಂದೆ ಚೆನ್ನಾಗಿ ಓದಿ ಉತ್ತಮ ಅಂಕ ಗಳಿಸಿ ಬಿ.ಎಸ್ಸಿ ಮುಗಿಸಿ ಸ್ನಾತಕೋತ್ತರ ಪದವಿ ಗಳಿಸಿ ಉಪನ್ಯಾಸಕಿ ಆಗಬೇಕೆಂದಿದ್ದೇನೆ.ಅದರೊಂದಿಗೆ ಈಗಿನ ಹವ್ಯಾಸಗಳನ್ನು ಮುಂದುವರಿಸಬೇಕೆಂದಿದ್ದೇನೆ.

ಭೌತಶಾಸ್ತ್ರ ತಜ್ಞ ರಾಮನ್

[ಬದಲಾಯಿಸಿ]

ರಾಮನ್ ರವರು ತಮಿಳುನಾಡಿನ ತಿರುಚಿರಪಳ್ಳಿ ಎಂಬ ಹಳ್ಳಿಯಲ್ಲಿ ಜನಿಸಿದರು.ಅವರ ತಂದೆಯ ಹಾಗು ತಾಯಿಯ ಹೆಸರು ಚಂದ್ರಶೇಖರ್ ಅಯ್ಯರ್ ಹಾಗು ಪಾರ್ವತಿಯಮ್ಮಾಳ್.ಇವರ ನಿಜ ಹೆಸರು ವೆಂಕಟರಾಮನ್.ರಾಮನ್ ರವರಿಗೆ ಪುಸ್ತಕಗಳನ್ನು ಓದುವ ಹವ್ಯಾಸ ಅವರ ತಂದೆಯವರಿಂದ ಬಂತು.ಅದರ ಜೊತೆಗೆ ವೀಣೆಯನ್ನು ಸಹ ನುಡಿಸುತ್ತಿದ್ದರು.ರಾಮನ್ ರವರು ತಮ್ಮ ವಿದ್ಯಾಭ್ಯಾಸವನ್ನು ತಿರುಚಿನಪಳ್ಳಿಯ ಶಾಲೆಯಲ್ಲಿ ಆರಂಭಿಸಿದರು.ಪ್ರತಿಯೊಂದು ವಿಷಯದಲ್ಲೂ ಕೂಡಾ ಅವರಿಗೆ ಅತಿ ಹೆಚ್ಚಿನ ಅಂಕಗಳು ಬರುತ್ತಿದ್ದವು.ರಾಮನ್ ರ ಚತುರತೆ,ಅವರ ಚುರುಕುತನ ಉಳಿದ ಹುಡುಗರಲ್ಲಿ ಅವರ ಬಗ್ಗೆ ವಿಶೇಷ ಗೌರವವನ್ನು ಮೂಡಿಸಿತ್ತು.ಬಾಲ್ಯದಿಂದಲೇ ಪ್ರಕೃತಿ ವೀಕ್ಷಣೆ ಅವರ ಅಭ್ಯಾಸವಾಗಿ ಬೆಳೆದಿತ್ತು.ಗಿಡ,ಮರ,ಬಳ್ಳಿ,ಹೂವು,ಸೂರ್ಯ ಕಿರಣದ ಪ್ರಭೆ ಇವೆಲ್ಲಾ ಇವರಿಗೆ ಆಸಕ್ತಿಯ ವಿಷಯಗಳಾಗಿತ್ತು.ಹೀಗಾಗಿ ರಾಮನ್ ಮತ್ತೆ ಮತ್ತೆ ಪ್ರಕೃತಿಯನ್ನು ನೋಡಿ ಆನಂದಿಸುವುದರೊಂದಿಗೆ ಅದರ ಬಗ್ಗೆ ಚಿಂತನೆ ಕೂಡಾ ನಡೆಸುತ್ತಿದ್ದರು.ಬಾಲ್ಯದಿಂದ ಬೆಳೆದು ಬಂದ ಈ ಅಭ್ಯಾಸ ಅವರ ಜೀವನದುದ್ದಕ್ಕೂ ಕಂಡು ಬಂತು.ಈ ಅಭ್ಯಾಸ ಮುಂದೊಂದು ದಿನ ಅವರು ವಿಜ್ಞಾನ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡುವ ನಿಟ್ಟಿನಲ್ಲಿ ಸಹಾಯಕವಾಯಿತು.

ರಾಮನ್ ರವರ ಕಾಲೇಜು ವಿದ್ಯಾಭ್ಯಾಸವು ಮಿಸೆಸ್.ಎ.ವಿ.ಎನ್ ಕಾಲೇಜಿನಲ್ಲಿ ನಡೆಯಿತು.ಚಿಕ್ಕಂದಿನಿಂದಲೂ ವಿಜ್ಞಾನ ಮತ್ತು ಅದರ ಪ್ರಯೋಗಗಳಲ್ಲಿ ಆಸಕ್ತಿ ಹೊಂದದ್ದರು.ರಾಮನ್ ರವರು ತಮ್ಮ ಹನ್ನೆರಡನೇ ವಯಸ್ಸಿನಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾದರು.ಹದಿನಾಲ್ಕನೆಯ ವರ್ಷದಲ್ಲಿ 'ಫಸ್ಟ್ ಇಯರ್ ಇನ್ ಆರ್ಟ್ಸ್ನಲ್ಲಿ ಉತ್ತೀರ್ಣರಾದರು.ರಾಮನ್ ಆಂಧ್ರಪ್ರದೇಶದಿಂದ ಮದ್ರಾಸಿಗೆ ಬಂದು ಬಿ.ಎಸ್ಸಿ ಪರೀಕ್ಷೆಗೆ ಅಧ್ಯಯನ ಮಾಡಲು ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿದರು.೧೯೦೪ರಲ್ಲಿ ಬಿ.ಎಸ್ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.ಎಂ.ಎಸ್ಸಿ ಪದವಿಗಾಗಿ ಭೌತಶಾಸ್ತ್ರ ವಿಷಯವನ್ನು ಆಯ್ಕೆ ಮಾಡಿದರು.

ಒಂದು ಸಲ ಸ್ಪೆಕ್ಟ್ರೋಮೀಟರ್ನಲ್ಲಿ ಪ್ರಯೋಗ ಮಾಡುತ್ತಿದ್ದಾಗ ಅವರಿಗೆ ಕೆಲವು ವಿಚಿತ್ರ ವಿಷಯಗಳು ಹೊಳೆದವು.ಅಷ್ಟಕ್ಕೆ ಸುಮ್ಮನಿರದೆ ಆ ವಿಷಯಗಳ ಬಗ್ಗೆ ಆಳವಾದ ಪರಿಶೀಲನೆ ನಡೆಸಿ ಅದರ ಕಾರಣವನ್ನು ಕಂಡುಹಿಡಿದರು.ಹೀಗೆ ವೈಜ್ಞಾನಿಕ ಸಂಶೋಧನೆಗೆ ಮುನ್ನುಡಿ ಬರೆದರು.ಈ ಬಗ್ಗೆ ಅವರ ಲೇಖನ ಫಿಲಾಸಫಿಕಲ್ ಮ್ಯಾಗಜಿನ್ನಲ್ಲಿ ಪ್ರಕಟವಾಯಿತು.ಮುಂದೊಂದು ದಿನ ಅವರ ಸಹಪಾಠಿಯೊಬ್ಬರು ಯಾವುದೋ ಪ್ರಯೋಗದ ಕಠಿಣ ವಿಷಯವೊಂದನ್ನು ಅಲ್ಲಿಯ ಪ್ರೊಫೆಸರ್ ಮುಂದೆ ಇಟ್ಟಾಗ,ಅವರಿಗೆ ಅದನ್ನು ಬಿಡಿಸಲು ಸಾಧ್ಯವಾಗಲಿಲ್ಲ.ಆಗ ರಾಮನ್ನರು ಅದನ್ನು ಅಮೂಲಾಗ್ರವಾಗಿ ಅರ್ಥಮಾಡಿಕೊಂಡರಲ್ಲದೆ,ಅದನ್ನು ತಾವೇ ಸ್ವಂತವಾಗಿ ಪ್ರಯೋಗಮಾಡಿ ಅನೇಕ ಹೊಸ ಫಲಿತಾಂಶಗಳನ್ನು ಪಡೆದರು.ಅದನ್ನು ಪ್ರಕಟಿಸಿದರು.ಈ ವಿಷಯದ ಮೇಲೆ ಅವರು ಬರೆದ ಸಂಶೋಧನಾಯುಕ್ತವಾದ ಲೇಖನವೊಂದು ವಿದೇಶದ ವೈಜ್ಞಾನಿಕ ಮಾಸಪತ್ರಿಕೆಯಲ್ಲಿ ಪ್ರಕಟವಾಯಿತು.ಇದು ಅತ್ಯಂತ ಮಹತ್ವಪೂರ್ಣ ಆಗಿದ್ದು ಸುಪ್ರಸಿದ್ಧ ಲಾರ್ಡ್ ರೇಲೇರವರು ತಾವೇ ಒಂದು ಪತ್ರವನ್ನು ರಾಮನ್ನರಿಗೆ ಬರೆದರು.ಅನಂತರ ರಾಮನ್ ಅದರ ಮೇಲೆ ಮತ್ತೊಂದು ಮೂಲ ಲೇಖನ ಬರೆದರು.ಇಲ್ಲಿಂದ ಅವರ ವೈಜ್ಞಾನಿಕ ಜೀವನ ಪ್ರಾರಂಭವಾಗತೊಡಗಿತು.

೧೯೦೭ನೇ ಇಸವಿಯಲ್ಲಿ ಅವರು ಎಂ.ಎ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ ಹೊಂದಿದರು.ಇದೇ ವರ್ಷದಲ್ಲಿ ಅವರಿಗೆ ಲೋಕ ಸುಂದರಿ ಅಮ್ಮಾಳ್ ರೊಂದಿಗೆ ಮದುವೆಯಾಯಿತು.ಭಾರತ ಸರಕಾರ ಅವರಿಗೆ ಕಲ್ಕತ್ತೆಯಲ್ಲಿ ಅಸಿಸ್ಟೆಂಟ್ ಅಕೌಂಟೆಂಟ್ ಜನರಲ್ ಹುದ್ದೆ ನೀಡಿತು.ಆಗ ಅವರಿಗೆ ಕೇವಲ ೧೮ ವರ್ಷಗಳಾಗಿತ್ತು.ಒಂದು ದಿನ ಅವರ ದೃಷ್ಟಿ 'ಇಂಡಿಯನ್ ಅಸೋಸಿಯೇಶನ್ ಫಾರ್ ದಿ ಕಲ್ಟಿಮೇಶನ್ ಆಫ್ ಸೈನ್ಸ್'ಎಂಬ ಸಂಸ್ಥೆಯ ಮೇಲೆ ಬಿತ್ತು.ಅಲ್ಲಿ ಕೆಲಸಕ್ಕೆ ಸೇರಿದರು.ಅಲ್ಲಿ ಅವರಿಗೆ ಬಿಡುವಲ್ಲದಷ್ಟು ಕೆಲಸ ಇತ್ತು.ನಂತರ ರಾಮನ್ ಅವರಿಗೆ ಬರ್ಮಾದ ರಂಗೂನ್ ಗೆ ವರ್ಗಾವಣೆ ಆಯಿತು.ತದನಂತರ ನಾಗಪುರದಲ್ಲೂ ಕೆಲಕಾಲ ಇರಬೇಕಾಯಿತು.ತದನಂತರ ಅಂಚೆ ಮತ್ತು ತಂತಿ ಇಲಾಖೆಯ ಡೆಪ್ಯುಟಿ ಅಕೌಂಟೆಂಟ್ ಜನರಲ್ ರಾಗಿ ಪುನಃ ಕಲ್ಕತ್ತೆಗೆ ಮರಳಿದರು.

೧೯೧೭ರಲ್ಲಿ ಪ್ರೊಫೆಸರ್ ಹುದ್ದೆ ಅಲಂಕರಿಸಿದರು.ಕೆಲ ದಿನಗಳಲ್ಲಿ ಅವರು ಲಂಡನ್ನಿನ ರಾಯಲ್ ಸೊಸೈಟಿಗೆ ಸದಸ್ಯರಾಗಿ ಚುನಾಯಿತರಾದರು.೧೯೨೧ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ಸಮ್ಮೇಳನಕ್ಕೆ ರಾಮನ್ ರವನ್ನು ಆಹ್ವಾನಿಸಲಾಗಿತ್ತು.ರಾಮನ್ನರ ಈ ಪ್ರವಾಸ ಅವರಿಗೆ,ಭಾರತಕ್ಕೆ,ವಿಜ್ಞಾನ ಪ್ರಪಂಚಕ್ಕೆ ಒಂದು ಹೊಸ ವಿಷಯದೊರೆಯುವಂತೆ ಮಾಡಿತು.

ಅಸ್ಸಾಂ ರಾಜ್ಯದ ಜಾನಪದ ನೃತ್ಯಗಳು

[ಬದಲಾಯಿಸಿ]

ಬಾಗುರಂಬಾ ನೃತ್ಯ

[ಬದಲಾಯಿಸಿ]

ಸಾಮಾನ್ಯವಾಗಿ ಬೋಡೋ ಕನ್ಯೆಯರ ವಿಹಾರ ಕೇಂದ್ರಗಳಲ್ಲಿ ನಡೆಸಲಾಗುವ ಈ ಲಾಲಿತ್ಯಪೂರ್ಣವಾದ ಬಾಗುರಂಬಾ ನೃತ್ಯವು ದಿನದ ದುಡಿಮೆಯ ನಂತರ ಸಂಜೆಯ ವೇಳೆಗಳಲ್ಲಿ ನರ್ತಿಸಲಾಗುತ್ತದೆ.ನೃತ್ಯದ ತತ್ವ ಚಮತ್ಕಾರಿಕವಾಗಿರುತ್ತದೆ.ಸಾಲಾಗಿಯೂ,ಅರ್ಧವರ್ತುಲಾಕಾರವಾಗಿಯೂ ನಿಂತು ಸಂತೋಷದಿಂದ ನಲಿದು ತೂಗಿ ನರ್ತಿಸುವ ಈ ನೃತ್ಯ ಲಾಸ್ಯಪೂರ್ಣವಾಗಿದೆ.ಜೊತೆಗೆ ಬೋಡೋ ಪಂಗಡದ ದೇಶೀಯ ಸಂಗೀತ ವಾದ್ಯಗಳ ನಾದವೂ ಸೇರಿ ಅದಕ್ಕೆ ಮೆರಗು ನೀಡುತ್ತದೆ.

ಬಿಹು ನೃತ್ಯ

[ಬದಲಾಯಿಸಿ]

ಅಸ್ಸಾಂಮಿನ ಋತುಪ್ರಮಾಣ ನೃತ್ಯಗಳಲ್ಲಿ ಅತಿ ಮುಖ್ಯವಾದವುಗಳ ಪೈಕಿ ಬಿಹು ನೃತ್ಯವೂ ಸೇರಿದೆ.ಚೈತ್ರದ ಕಡೆಯ ದಿನವೂ,ವೈಶಾಖದ ಮೊದಲ ದಿನವೂ ಸೇರಿಬರುವ ದಿನಗಳಲ್ಲಿ ಈ ನೃತ್ಯವನ್ನು ನಡೆಸಲಾಗುತ್ತದೆ.ಪ್ರಕೃತಿಯು ಚೆಲುವಿನಿಂದ ತುಂಬಿರುವ ಸಮಯದಲ್ಲಿ ಎಪ್ರಿಲ್ ತಿಂಗಳ ಮಧ್ಯಭಾಗದಲ್ಲಿ ಒಂದು ವಾರದ ಕಾಲ ಅತಿ ವೈಭವದಿ೦ದ ಆಚರಿಸಲಾಗುವ 'ಬೋಹಾಗ್ ಬಿಹು'ಸಮಾರ೦ಭದ ಅತಿಮುಖ್ಯ ಅ೦‍ಶಗಳಲ್ಲಿ ಬಿಹು ನೃತ್ಯವು ಸೇರಿದೆ.ಭಾವಪೂರಿತ ,ಪ್ರೇಮರಸ ತು೦ಬಿದ ಹಾಡುಗಳೊ೦ದಿಗೆ, ಹಿನ್ನಲೆ ಸ೦ಗೀತ ಸೇರಿ ಸಮಯೋಚಿತ ಸ೦ದರ್ಭಾನುಚಿತವಾಗಿ ಅಭಿನಯಿಸುವುದು ಈ ನೃತ್ಯದ ಪ್ರಧಾನಾ೦ಶ .ಇದು ಮಿಶ್ರ ನೃತ್ಯ. ಇದರಲ್ಲಿ ಢೋಲಾ,ಎಮ್ಮೆಯ ಕೊ೦ಬಿನಿ೦ದ ತಯಾರಿಸಲಾದ ಪೆಪಾ ಎ೦ಬ ಕೊಳಲು ಮತ್ತು ಲಕಾ ಎ೦ಬ ಬಿದಿರುವಾದ್ಯ ಮು೦ತಾದವು ಬಳಸಲ್ಪಡುತ್ತದೆ.

ಬೋಡೋ ನೃತ್ಯ

[ಬದಲಾಯಿಸಿ]

ಬ್ರಹ್ಮಪುತ್ರ ಕಣಿವೆ ಪ್ರದೇಶದಲ್ಲಿ ಕಚ್ಚಾರಿಗಳೆಂಬ ಪ್ರಾಚೀನ ಪಂಗಡವೊಂದಿದೆ.ಇವರನ್ನು ಅಸ್ಸಾಂ ಮತ್ತು ಸುತ್ತ ಮುತ್ತಲಿನ ಪ್ರದೇಶಗಳ ಹಲವು ಕಡೆಗಳಲ್ಲಿ ಹಲವು ಹೆಸರುಗಳಿಂದ ಕರೆಯುತ್ತಾರೆ.ಇದರಲ್ಲಿ ಉತ್ತರ ಕಚ್ಚಾರ್ ಗುಡ್ದಗಳಲ್ಲಿ ವಾಸಿಸುವವರನ್ನು ಬೋಡೋ ಪಂಗಡವೆಂದು ಕರೆಯುತ್ತಾರೆ.ಇವರು ಮೂಲತಃ ಇಂಡೋ-ಚೀನಾದ ಜನಾಂಗಗಳಿಗೆ ಸೇರಿದವರು.ಅಸ್ಸಾಮಿನ ಮಿಶ್ರ ಸಂಸ್ಕೃತಿಗೆ ಇವರು ಸಲ್ಲಿಸಿದ ಕಾಣಿಕೆಯು ಹಿರಿದಾದುದು.ಬೋಡೋ ಜನಪದ ನೃತ್ಯಗಳು ಮೂಲಕ್ಕೆ ಲೋಪ ತಂದುಕೊಳ್ಳದೆ ಅಚ್ಚಳಿಯದೆ ನಡೆದುಬಂದಿರುವ ಸಂಪ್ರದಾಯಕ್ಕೆ ಸೇರಿದವುಗಳು.ಶತಮಾನಗಳಿಂದ ತಮ್ಮ ಪ್ರಾಚೀನ ಗುಣವನ್ನು ಕಾಪಾಡಿಕೊಂಡು ಬಂದಿವೆ.ಕ್ಷಾತ್ರೀಯ ಅಥವಾ ಸಮರ ನೃತ್ಯಗಳಿಂದ ಪ್ರೇಮ ನೃತ್ಯಗಳಿಂದ ಪ್ರೇಮ ನೃತ್ಯಗಳವರೆಗೆ ಬೋಡೋ ನೃತ್ಯಗಳವರೆಗೆ ಬೋಡೋ ನೃತ್ಯಗಳಲ್ಲಿ ವೈವಿಧ್ಯತೆಯು ಕಂಡುಬರುತ್ತದೆ.

ನಾಗ ನೃತ್ಯಗಳು

[ಬದಲಾಯಿಸಿ]

ಭಾರತೀಯ ನೃತ್ಯಗಳಲ್ಲಿ ಅತ್ಯಂತ ಸುಂದರ ಹಾಗೂ ಲಾಸ್ಯಪೂರ್ಣವಾದವುಗಳಲ್ಲಿ ಕೆಲವು ಅಸ್ಸಾಂ ಮತ್ತು ಉತ್ತರ ಬರ್ಮಾ ಪ್ರಾಂತ್ಯದ ನಡುವಿನ ಗಡಿಭಾಗದಲ್ಲಿ ವಾಸಿಸುವ ನಾಗಾ ಜನರಲ್ಲಿ ಕಂಡುಬರುತ್ತದೆ.ನಾಗಾ ಜನತೆ ಹಲವು ಪಂಗಡಗಳಾಗಿ ವಿಭಜನೆಗೊಂಡಿದೆ.ಒಂದೊಂದು ಪಂಗಡಕ್ಕೂ ಅದರದೇ ವೈಶಿಷ್ಟ್ಯಪೂರ್ಣವಾದ ನೃತ್ಯಗಳಿರುತ್ತವೆ.ಇವುಗಳಲ್ಲಿ ಹೆಚ್ಚು ಪ್ರಸಿದ‍್ಧಿ ಪಡೆದಿರುವ ನೃತ್ಯಗಳೆಂದರೆ ನಾಗಾ ಜನರ ಸಮರ ನೃತ್ಯಗಳು.ಇವು ಅಸ್ಸಾಂ ಮತ್ತು ಮಣಿಪುರಗಳಲ್ಲಿ ಅತ್ಯಂತ ಪ್ರಾಮಾಣಿಕ ರೀತಿಯಲ್ಲಿ ಉಳಿಸಿಕೊಂಡು ಬರಲಾಗಿವೆ.ಸಮರ ವಾತಾವರಣವನ್ನು ಸೂಚಿಸುವ ಬಣ್ಣಗಳನ್ನು ಬಳಿದುಕೊಂಡು ತಲೆಗೆ ಕೊಂಬು ಹಾಗು ರೆಕ್ಕೆಗಳನ್ನು ಕಟ್ಟಿಕೊಂಡು,ವಿವಿಧ ಮಣಿಗಳ,ಕೊಂಬುಗಳ,ಕೆಲವು ವೇಳೆಗಳಲ್ಲಿ ಎಲುಬುಗಳಿಂದಲೂ ಆದ ಆಭರಣಗಳನ್ನು ತೊಟ್ಟು ನಾಗರು ಈ ನೃತ್ಯವನ್ನು ಅಭಿನಯಿಸುತ್ತಾರೆ.