ಸದಸ್ಯ:ಪ್ರಶಸ್ತಿ/usetemplate

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ತಿಂಗಳ ವಿಕಿಪೀಡಿಯ ಸಂಪಾದಕ
ಬಿ.ಎಸ್. ಚಂದ್ರಶೇಖರ

ಬಿ.ಎಸ್. ಚಂದ್ರಶೇಖರ ಇವರು ಸಾಗರದಲ್ಲಿ ವಾಸಿಸುತ್ತಿದ್ದಾರೆ. ಶಿಕ್ಷಕ ವೃತ್ತಿಯಲ್ಲಿ ಅನೇಕ ಕಡೆ ಕೆಲಸ ಮಾಡಿ ಕೊನೆಯ 20 ವರ್ಷ ಸಾಗರದಲ್ಲಿ ಸಾಮಾಜಿಕ ಕಾರ್ಯಗಳ ಹೊಣೆಗಳನ್ನು ಹೊತ್ತು ಸೇವೆ ಮಾಡುತ್ತಿದ್ದಾರೆ. ಕುತೂಹಲಕ್ಕಾಗಿ 2008 ರಲ್ಲಿ ಕಂಪ್ಯೂಟರ್ ಕೊಂಡ ಇವರು ತಮ್ಮ ಏಳು ವರ್ಷದ ಮೊಮ್ಮಗನಿಂದ ಅದನ್ನು ಚಾಲೂ ಮಾಡುವುದನ್ನು ಕಲಿತು, ಒಂದು ತಿಂಗಳು ಅದರಲ್ಲಿ ಪ್ರಾಥಮಿಕ ತರಬೇತಿ ಪಡೆದು (Learnt Typing also) ಇಂಟರ್‍ನೆಟ್ ಸೌಲಭ್ಯ ದೊರಕಿದ ನಂತರ ‘ಸಹಾಯ’ ವಿಭಾಗ ನೋಡಿ ವಿಕಿಪೀಡಿಯಾಕ್ಕೆ ಸದಸ್ಯರಾಗಿ, ಅದಕ್ಕೆ ವೈವಿಧ್ಯಮಯ ಲೇಖನಗಳನ್ನು ತುಂಬುವ ಕೆಲಸ ಮಾಡಿದ್ದಾರೆ. ೧೦ ಆಗಸ್ಟ್ ೨೦೧೦ ರಲ್ಲಿ ಕನ್ನಡ ವಿಕಿಪೀಡಿಯದ ಸದಸ್ಯರಾದ ಇವರು ಈ ವರೆಗೆ ಒಟ್ಟು ೨೦,೪೭೯ ಸಂಪಾದನೆಗಳನ್ನು ಮಾಡಿರುತ್ತಾರೆ.

ಈ ವರೆಗೆ ಬಿ.ಎಸ್. ಚಂದ್ರಶೇಖರ ಅವರು ಅನೇಕ ಲೇಖನಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳು ಸೃಷ್ಟಿ ಸೆಮೆಟಿಕ್ ಪುರಾಣ, ಸೃಷ್ಟಿ ಮತ್ತು ಗ್ರೀಕ್ ಪುರಾಣ, ಕಾಡು ಪಾಪ, ರುದ್ರಾಕ್ಷಿ, ಸೂರ್ಯ ವಂಶ, ಕುರು ವಂಶ, ಪೋಲಾರ್ ಉಪಗ್ರಹ ಉಡಾವಣಾ ವಾಹನ ಸಿ 34 (ಪಿಎಸ್ಎಲ್ವಿ), ನಾಡಕಲಸಿ, ಸಾಗರ, ದ್ವಾದಶ ಜ್ಯೋತಿರ್ಲಿಂಗಗಳು, ಏಕಲವ್ಯ ಪ್ರಶಸ್ತಿ, ಕೂಡಗಿ ಉಷ್ಣ ವಿದ್ಯುತ್ ಸ್ಥಾವರ, ಕರ್ನಾಟಕದ ನದಿಗಳು, ಕರ್ನಾಟಕದ ನದಿಗಳು ಇತ್ಯಾದಿ.

ಇವರು ತಮ್ಮದೇ ಆದ ಬ್ಲಾಗ್ ಪುಟವನ್ನು ಹೊಂದಿದ್ದಾರೆ. ಬಿ.ಎಸ್. ಚಂದ್ರಶೇಖರ ಅವರು ಫೇಸ್‌ಬುಕ್‌ನಲ್ಲಿಯೂ ಸಕ್ರಿಯರಾಗಿದ್ದಾರೆ. ಇವರು ಲೇಖನಗಳ ಸಂಪಾದನೆ ಬಗ್ಗೆ ಹೆಚ್ಚಿನ ವಿವರಗಳಿಗಾಗಿ Bschandrasgrಗೆ ಭೇಟಿನೀಡಿ. ಇವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಬಿ.ಎಸ್.ಚಂದ್ರಶೇಖರ-ಸಾಗರ ಪುಟಕ್ಕೆ ಭೇಟಿನೀಡಿರಿ.