ಸದಸ್ಯ:ಪ್ರತಿಕ್ಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಪ್ರತಿಕ್ಷ. ನಾನು ೧೯೯೬ ಅಕ್ತೋಬರ್ ೧೭ ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನಲ್ಲಿ ಜನಿಸಿದೆನು. ನಾನು ಮಂಗಳೂರಿನ ಬಗಂಬಿಲ ಎಂಬ ಊರಿನಲ್ಲಿ ವಾಸಿಸುತ್ತಿದ್ದೇನೆ.ನನ್ನ ಮಾತೃಭಾಷೆ ತುಳು. ನನ್ನ ತಂದೆಯ ಹೆಸರು ಪ್ರಕಾಶ‍ ಬಂಗೇರ ಹಾಗು ನನ್ನ ತಾಯಿಯ ಹೆಸರು ಗೀತಾ, ನನ್ನ ತಮ್ಮನ ಹೆಸರು ಪ್ರಣಾಮ್ . ನಾನು ನನ್ನ ಪ್ರಾರ್ಥಮಿಕ ಶಿಕ್ಷಣವನ್ನು ಸಂತ ಜೆರೋಸ ಶಾಲೆಯಲ್ಲಿ ಪಡೆದೆ. ನನ್ನ ಪ್ರೌಢ ಶಾಲೆಯನ್ನು ಸಂತ ಆಗ್ನಿಸ್ ಶಾಲೆಯಲ್ಲಿ ಉತ್ತೀರ್ಣ ಗೊಳಿಸಿದೆ. ನಾನು ನನ್ನ ಪದವಿ ಪೂರ್ವ ಶಿಕ್ಷಣವನ್ನು ಸಂತ ಆಗ್ನಿಸ್ ಪದವಿ ಪೂರ್ವ ಕಾಲೇಜಿನಲ್ಲಿ ಪಡೆದೆ. ಪ್ರಸ್ತುತ ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ದ್ವಿತಿಯ ಬಿ.ಎಸ್.ಸಿ ವ್ಯಾಸಾಂಗವನ್ನು ಮಾಡುತ್ತಿದ್ದೇನೆ. ಕಥೆ, ಕಾದಂಬರಿ, ಕವನ ಓದುವುದು ನನ್ನ ಹವ್ಯಾಸಗಳು.ನಾನು ಸ್ನಾತಕೋತ್ತರ ಪದವಿಯನ್ನು ರಸಾಯನ ಶಾಸ್ತ್ರದಲ್ಲಿ ಮಾಡಬೇಕಂದು ಇಚ್ಛಿಸುತ್ತೇನೆ.ನಾನು ಹೆರಿಟೇಜ್ ಸಂಘದ ಸದಸ್ಯಳಾಗಿದ್ದೇನೆ.ಅಳಿದು ಹೋಗುತ್ತಿರುವ ನಮ್ಮ ಸಂಸ್ಕೃತಿ , ಪರಂಪರೆಯನ್ನು ಉಳಿಸಲು ಜಾಗೃ‍ತಿಯನ್ನು ಮಾಡಿಸುವ ಕಾರ್ಯವನ್ನು ಈ ಸಂಘದ ಮುಖಾಂತರ ಜನರಿಗೆ ತಿಳಿಸುತ್ತೇವೆ.ನನಗೆ ಪ್ರವಾಸಕ್ಕೆ ಹೋಗುವುದೆಂದರೆ ತಂಬಾ ಇಷ್ಟ.ನಮ್ಮ ಸಂಘದಿಂದ ನಾವು ಕಳೆದ ಬಾರಿ ಕಾರ್ಕಳಕ್ಕೆ ಹೋಗಿದ್ದೆವು .ನನಗೆ ಹಾಡು ಕೇಳುವ ಹವ್ಯಾಸವೂ ಇದೆ. ಮನಸ್ಸಿಗೆ ತುಂಬಾ ಬೇಜಾರಾದಾಗ ಅಥವಾ ಖುಷಿಯ ಸಂದರ್ಭದಲ್ಲಿ ಹಾಡು ಕೇಳುವಾಗ ಮನಸ್ಸಿಗೆ ಸಮಾಧಾನವಾಗುತ್ತದೆ.